ಚಾಲಿಅಡಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾಲಿಅಡಿಕೆಯು ಭಾರತೀಯರು ತಾಂಬೂಲವನ್ನು ಮೆಲ್ಲಲು ಬಳಸುವ ಒಂದು ವಿಧವಾಗಿದೆ. ಅಡಿಕೆಯನ್ನು ಬೆಳೆಯುವ ಬೆಳೆಗಾರನು ಚಾಲಿ ಅಡಿಕೆ ತಯಾರಿಸಲೋಸುಗವಾಗಿ ಅಡಕೆಯನ್ನು ಅಡಿಕೆಮರಗಳಿಂದ ಕಾಯಾಗಿರುವ ಗೊನೆಯನ್ನು ಕೀಳುವ ಮೊದಲು ಗೊನೆಯನ್ನು ಚನ್ನಾಗಿ ಹಣ್ಣಾಗುವ ತನಕ ಕಾದು ಆನಂತರವೇ ಅಡಿಕೆ ಗೊನೆಗಳನ್ನು ಕೀಳುತ್ತಾರೆ. ಆ ನಂತರ ಮಾಗಿಸಿ ಅಂದರೆ ಗೋಟಾಗಿಸಿ ಬಿಸಿಲಿನಲ್ಲಿ ಒಣಗಿಸುತ್ತಾರೆ. ಪ್ರಖರವಾದ ಬಿಸಿಲಿನಲ್ಲಿ ಕನಿಷ್ಟವೆಂದರೂ ೪೦ ದಿನಗಳು ಕಾಲ ಚನ್ನಾಗಿ ಒಣಗಿಸುತ್ತಾರೆ. ಹೀಗೆ ಒಣಗಿಸಿದ ಅಡಕೆಗೆ ಸಿಪ್ಪೆಗೋಟು ಎನ್ನುತ್ತಾರೆ. ಈ ಸಿಪ್ಪೆಗೊಟಿನ ಸಿಪ್ಪೆಯನ್ನು ಕುಕ್ಕುಕತ್ತಿಯಿಂದ ಬಿಡಿಸಿದಾಗ ಚಾಲಿ ಸಿದ್ದವಾಗುವುದು. ಇದನ್ನು ಸಂಸ್ಕರಿಸುತ್ತಾರೆ. ಸಂಸ್ಕರಿಸುವಾಗ ಸಿದ್ದ ಚಾಲಿರಾಸಿ/ಗುಡ್ಡೆಯಿಂದ, ಕುಕ್ಕು ಕತ್ತಿಯಿಂದ ಸಿಪ್ಪೆ ಬಿಡಿಸುವಾಗ ಚನ್ನಾಗಿ ಸಿಪ್ಪೆಯ ಅಂಶವು ಚಾಲಿ ಅಡಿಕೆ ಯಿಂದ ಬಿಟ್ಟು ಹೋಗಿರದ ಬಿಳಿ ಗೋಟನ್ನು ತೆಗೆದಿರಿಸುತ್ತಾರೆ, ಹಾಗೆಯೇ ಚನ್ನಾಗಿ ಬಿಳಿ ಬಣ್ಣವಿರದ ಚಾಲಿಯನ್ನು ಸಹ ತೆಗೆದಿರುಸುತ್ತಾರೆ. ಚಾಲಿ ಅಡಿಕೆಯನ್ನು ಹೆಚ್ಚು ದಿನಗಳ ಕಾಲ ಕಾದಿರಿಸಲು ಅಮೋನಿಯಮ್ ನೈಟ್ರೆಟ್ ಹೊಗೆಯಲ್ಲಿ ತೋಯಿಸುವುದು ಅಗತ್ಯ. ಹೀಗೆ ಹೊಗೆ/ದುವಾ ಹಾಕುವದರಿಂದ ಚಾಲಿಯನ್ನು ಕೀಟಬಾದೆಯಿಂದ ರಕ್ಷಿಸಲು ಸಾಧ್ಯವಾಗುವುದು.

ಚಾಲಿಅಡೆಕೆಯನ್ನು ಪಾನು/ ವೀಳಯದೆಲೆ ಸುಣ್ಣ ಮುಂತಾದ ಇತರ ಹೆಚ್ಚಿನ ಮಸಾಲದೊಂದಿಗೆ ಮೆಲ್ಲುತ್ತಾರೆ. ಊಟದ ನಂತರ ಶುದ್ದ ಪಾನು ಮೆಲ್ಲುವುದು ಆರೋಗ್ಯಕ್ಕೆ ಉತ್ತಮ. ಮುಖ ಕಾಂತಿಯೂ ಹೆಚ್ಚಿ ಸೌಂದರ್ಯ ವೃ‍ದ್ದಿಸುವುದು. ಚಾಲಿ ಅಡಿಕೆಯನ್ನು ರೂಪಾಂತರಗೊಳಿಸಿ ಹಲವು ವಿಧದಲ್ಲಿ ವಯೋಮಾನದ ಅಂತರವಿಲ್ಲದೆ ಭಾರತದಾದ್ಯಂತ ಮತ್ತು ವಿದೇಶಗಳಲ್ಲೂ ಪುರಾತನ ಕಾಲದಿಂದಲೂ ಮತ್ತು ಈಗಲೂ ಬಳಸುವುದು ರೂಢಿಯಲ್ಲಿದೆ.


ಅಡಿಕೆಚಾಲಿ