ಚಾರ್ಲ್ಸ್ - ಜೂಲಿಯನ್ ಬ್ರಿಯನ್‍ಖನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾರ್ಲ್ಸ್ ಜೂಲಿಯನ್ ಬ್ರಿಯನ್‍ಖನ್ (1783-1864) ಫ್ರಾನ್ಸಿನ ಒಬ್ಬ ಗಣಿತವಿದ. ಜನನ 19-12-1783. ಮರಣ 29-4-1964. ಜ್ಯಾಮಿತಿಯಲ್ಲಿ ಬರುವ ಒಂದು ಪ್ರಮೇಯದ ಶೋಧಕನಾಗಿ ಪ್ರಸಿದ್ಧನಾಗಿದ್ದಾನೆ.

ಪ್ಯಾಸ್ಕಲ್‍ನ ಪ್ರಮೇಯ[ಬದಲಾಯಿಸಿ]

ಬ್ಲೇಸ್ ಪಾಸ್ಕಲ್ (1623-61) ಎಂಬಾತ ಶೋಧಿಸಿದ್ದ ವಿಸ್ಮಯಕಾರಿ ಷಷ್ಠಭುಜದ ಪ್ರಮೇಯದ ನಿರೂಪಣೆ: ಷಷ್ಠಭುಜದ ಎಲ್ಲ ಶೃಂಗಗಳೂ ವೃತ್ತ ಪರಿಧಿಯ ಮೇಲಿದ್ದು ಎದುರು ಬದಿರು ಭುಜಗಳು ಸಂಧಿಸಿದರೆ ಈ ಸಂಧಿ ಬಿಂದುಗಳು ಏಕರೇಖಸ್ಥವಾಗಿವೆ.

ಬ್ರಿಯನ್‍ಖನ್‍ನ ಪ್ರಮೇಯ[ಬದಲಾಯಿಸಿ]

ಪ್ಯಾಸ್ಕಲ್‍ನ ಪ್ರಮೇಯದಿಂದ ಸ್ಫೂರ್ತಿ ಪಡೆದ ಬ್ರಿಯನ್‍ಖನ್ ಇದಕ್ಕೆ ದ್ವೈತ ತತ್ತ್ವ (ಪ್ರಿನ್ಸಿಪಲ್ ಆಫ್ ಡ್ಯೂಯಲ್‌ಟಿ) ಅನ್ವಯಿಸಿ ಹೊಸತೊಂದು ಪ್ರಮೇಯ ಪಡೆದ. ಇದೇ ಬ್ರಿಯನ್‌ಖನ್ನನ ಪ್ರಮೇಯ: ಶಂಕುಜವನ್ನು (ಕಾನಿಕ್) ಪರಿಗತಿಸುವ (ಸರ್ಕಮ್‍ಸ್ಕ್ರೈಬ್) ಷಷ್ಠಭುಜದ ಎದುರುಬದಿರು ಶೃಂಗಗಳನ್ನು ಜೋಡಿಸುವ ಸರಳರೇಖೆಗಳು ಏಕಬಿಂದುಸ್ಥವಾಗಿವೆ (ಕನ್‌ಕರೆಂಟ್). ಈ ತೆರನಾಗಿ ದ್ವೈತ ತತ್ತ್ವಕ್ಕೆ ಜ್ಯಾಮಿತಿಯಲ್ಲಿ ಒಂದು ಸ್ಥಾನ ದೊರಕಿಸಿಕೊಟ್ಟದ್ದರಿಂದ ಬ್ರಿಯನ್‌ಖನ್ನನ ಹೆಸರು ಶಾಶ್ವತವಾಗಿದೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]

  • Brianchon's Theorem
  • O'Connor, John J.; Robertson, Edmund F., "ಚಾರ್ಲ್ಸ್ - ಜೂಲಿಯನ್ ಬ್ರಿಯನ್‍ಖನ್", MacTutor History of Mathematics archive, University of St Andrews