ಚಾಮುಂಡರಾಯ
ಚಾವುಂಡರಾಯ[ಬದಲಾಯಿಸಿ]
ಚಾವುಂಡರಾಯ ೧೦ ನೇಶತಮಾನದ ವೀರಪರಂಪರೆಯನ್ನು ಅನುಸರಿಸಿ ಕವಿ ಹಾಗೂ ಕಲಿ ಎರಡೂ ಆಗಿದ್ದ ಸವ್ಯಸಾಚಿ. ತಾಯಿ ಕಾಳಲಾದೇವಿ. ಇವನಿಗೆ ನಾಗವರ್ಮನೆಂಬ ತಮ್ಮನಿದ್ದ. ಇವನ ಮಗ ಜಿನದೇವ.ಚಾಮುಂಡರಾಯನು ಪಶ್ಚಿಮ ಗಂಗರ ಆಧಿಪತ್ಯದ ಗಂಗವಾಡಿ ಸೀಮೆಯ ರಾಜ ೨ನೇ ಮಾರಸಿಂಹ (ಕ್ರಿ.ಶ ೯೬೧-೭೭) ಇವನ ಹಿರಿಯಮಗ ೪ ನೇ ರಾಚಮಲ್ಲ (ಕ್ರಿ.ಶ ೯೭೪-೭೭) ಮತ್ತು ಅವನ ತಮ್ಮ ರಕ್ಕಸಗಂಗ (ಕ್ರಿ.ಶ ೯೭೭-೮೪) ಇವರ ಸೇವೆಯಲ್ಲಿ ಸೇನಾಧಿಪತಿ, ಸಂಧಿವಿಗ್ರಹಿ, ಮಂತ್ರಿ ಪದವಿಗಳಲ್ಲಿ ಇದ್ದನೆಂದು ತಿಳಿದುಬರುತ್ತದೆ. ಕಾಳಲಾದೇವಿ ಆಸೆಯಂತೆ ಶ್ರವಣಬೆಳಗೊಳ ದಲ್ಲಿ ಗೊಮ್ಮಟ ಮೂರ್ತಿಯನ್ನು ನಿರ್ಮಿಸಿದ.ಎತ್ತರ ೫೭.೮ ಅಡಿ.
ಇತರ ಹೆಸರು[ಬದಲಾಯಿಸಿ]
- ಚಾವುಂಡರಾಯ
- ಚಾಮುಂಡರಾಜ
- ಚಾವುಂಡಯ್ಯ
- ಚಾಮುಂಡಯ್ಯ
- ಚಾವುಂಡ
- ಗೊಮ್ಮಟರಾಯ
ವಂಶ[ಬದಲಾಯಿಸಿ]
ಚಾಮುಂಡರಾಯನು ತನ್ನನ್ನು ಬ್ರಹ್ಮಕ್ಷತ್ರಿಯ ವಂಶಜನೆಂದು ಕರೆದು ಕೊಂಡಿದ್ದಾನೆ. ಬಾಹುಬಲಿಚರಿತೆಯಲ್ಲಿ ಹೇಳಿರುವ "ಬ್ರಹ್ಮ-ಕ್ಷತ್ರಿಯ-ವೈಶ್ಯ-ಶುಕ್ತಿ ನುಮಣಿಃ" ಎಂಬ ಮಾತಿನ ಆಧಾರದಿಂದ ಆತನ ಪೂರ್ವಜರು ಮೊದಲಿಗೆ ಬ್ರಾಹ್ಮಣ ಮತ್ತು ವೈಶ್ಯರಾಗಿದ್ದು ಆನಂತರ ಕ್ಷತ್ರಿಯ ವೃತ್ತಿಯನ್ನು ಧಾರಣೆ ಮಾಡಿದವರಾಗಿರಬೇಕೆಂದು
ಗುರುಗಳು[ಬದಲಾಯಿಸಿ]
ಚಾಮುಂಡರಾಯನಿಗೆ ಇಬ್ಬರು ಗುರುಗಳು.
1. ಅಜಿತಸೇನಾಚಾರ್ಯ
2. ನೇಮಿಚಂದ್ರ ಸಿದ್ದಾಂತರು
ಕೃತಿಗಳು[ಬದಲಾಯಿಸಿ]
- ಚಾರಿತ್ರಾಸಾರ
- ಚಾಮುಂಡರಾಯ ಪುರಾಣ (ಕ್ರಿ.ಶ ೯೭೮)
- ಗೊಮ್ಮಟಸಾರಕ್ಕೆ ವೀರಮಾರ್ತಾಂಡ-ಎಂಬ ವೃತ್ತಿ
ಕೊಡುಗೆ[ಬದಲಾಯಿಸಿ]
- ಚಾವುಂಡರಾಯ ಶ್ರವಣಬೆಳಗೊಳದಲ್ಲಿ ಗೊಮ್ಮಟನ ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.೯೭೩ರಲ್ಲಿ ಕೆತ್ತಿಸಿ ಪ್ರತಿಷ್ಥಾಪನೆ ಮಾಡಿಸಿದನು.
- ಅನೇಕ ಬಸದಿಗಳು
ಆಕರ ಗ್ರಂಥ[ಬದಲಾಯಿಸಿ]
- ಕನ್ನಡ ಆದಿತೀರ್ಥಂಕರ ಚರಿತೆಗಳು - ಡಾ|| ಸರಸ್ವತಿ ವಿಜಯಕುಮಾರ್
- ಬಾಹುಬಲಿಚರಿತೆ