ಚರ್ಚೆಪುಟ:ರಘುಪತಿ ಶೃಂಗೇರಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನಗತ್ಯ cleanup[ಬದಲಾಯಿಸಿ]

  • ಸದಸ್ಯ:Lokesha kunchadka ಅವರು ಅನಗತ್ಯ cleanup ಮಾಡಿ ಅಗತ್ಯ ಮಾಹಿತಿಗಳನ್ನು ತೆಗೆಯುವ ಹವ್ಯಾಸ ಹೊಂದಿದಂತೆ ತೋರುತ್ತದೆ. ಬೇರೆ ಪುಟಗಳಲ್ಲಿಯೂ ಆ ಬಗೆಯ ರದ್ದತಿ ನೆಡೆದಿದೆ. ಅವರಿಗೆ ಮಾತ್ರಾ ಅನಗತ್ಯ ವಾದರೆ ಬೇರೆಯವರಿಗೆ ಅಗತ್ಯವಿರುತ್ತದೆ. ಅಗತ್ಯ ಮಾಹಿತಿಗಳನ್ನು ಕೇವಲ ಹವ್ಯಾಸಕ್ಕಾಗಿ ತೆಗೆಯಬಾರದೆಂದು ಅವರಲ್ಲಿ ವಿನಂತಿ. ಒಮ್ಮ ಹಾಗೆ ಅನಗತ್ಯವೆನಿಸಿದರೆ ಚರ್ಚೆ ಪುಟದಲ್ಲಿ ಚರ್ಚಿಸಲು ಕೋರುತ್ತೇನೆ. ಯಾರೇ ಆದರೂ ತಮ್ಮ ಪ್ರತಿಷ್ಠೆ ತೋರಿಸಲು ಮಾಹಿತಿಗಳನ್ನು ತೆಗೆಯುವುದು ಸರಿಯಲ್ಲ.Bschandrasgr (ಚರ್ಚೆ) ೧೧:೪೯, ೨೭ ಮಾರ್ಚ್ ೨೦೨೦ (UTC)

@Bschandrasgr: ವ್ಯಕ್ತಿಯ ಖಾಸಗಿ ವಿಚಾರ. ವಿಕಿಪೀಡಿಯಕ್ಕೆ ಬೇಕಾ?. ವ್ಯಕ್ತಿಯ ಪರಿಚಯ ಪುಟವನ್ನು ಪ್ರಚಾರ ಪುಟವಾಗಿಸುವುದು ಬೇಡ. ಮಾಹಿತಿ ಪುಟವಾಗಿ ಇದ್ದರೆ ಒಳಿತು. ಸರಿಯಾಗಿ ಗಮನಿಸಿದರೆ ಈ ಪುಟ ವಿಕಿಪೀಡಿಯ ಮಾರ್ಗದರ್ಶಶಿ ಸೂತ್ರಕ್ಕೆ ಅನುಗುಣವಾಗಿಲ್ಲ.--Lokesha kunchadka (ಚರ್ಚೆ) ೧೪:೫೨, ೨೭ ಮಾರ್ಚ್ ೨೦೨೦ (UTC)

  • ಸಾಧನೆಯುಳ್ಳ ವ್ಯಕ್ತಿಯ ವಿಷಯ ಬರೆಯುವಾಗ, ಆ ವ್ಯಕ್ತಿಯ ವೈಯುಕ್ತಿಕ ವಿವರಗಳನ್ನು ತಿಳಿಯಲು ಅಪೇಕ್ಷಿಸುವುದು ಸಾಮಾನ್ಯ. ಲಭ್ಯವಿಲ್ಲದಿದ್ದರೆ ಅಥವಾ ಆ ವ್ಯಕ್ತಿಗೆ ಆ ವಿವರಗಳನ್ನು ಕೊಡಲು ಇಷ್ಟವಿಲ್ಲದಿದ್ದರೆ, ಆಗ ಅದನ್ನು ಬಿಡಬಹುದು. ಆದರೆ ಬಯೋಗ್ರಫಿ- ಯಾ ಜಿವನ ಚರಿತ್ರೆ ಬರೆಯುವಾಗ ಆ ವ್ಯಕ್ತಿಯ ವೈಯುಕ್ತಿಕ ವಿವರಗಳು ಇದ್ದೇ ಇರುತ್ತವೆ - ಇಲ್ಲದಿದ್ದರೆ ಅದು ಅಪೂರ್ಣ. ವ್ಯಕ್ತಿಯ ಪರಿಚಯದ ಪುಟಗಳು ಜೀವನ ಚರಿತ್ರೆಯ ಚಿಕ್ಕ ರೂಪ. ಆದ್ದರಿಂದ ಒಬ್ಬ ಸಾಧಕನ ವಿಷಯ ತಿಳಿಸುವವರು ಅಥವಾ ತಿಳಿಯಲು ಬಯಸುವವರು ವೈಯುಕ್ತಿಕ ವಿಚಾರವನ್ನೂ ತಿಳಿಯಲು ಬಯಸುತ್ತಾರೆ. ಮತ್ತು ಅದು ಅಗತ್ಯವೂ ಆಗುತ್ತದೆ. ಆ ವ್ಯಕ್ತಿಯ ವಿರೋಧವಿಲ್ಲದಿದ್ದಲ್ಲಿ ವೈಯುಕ್ತಿಕವಿವರ ಇದ್ದರೆ ಅನುಕೂಲವೆಂದು ನನ್ನ ಅಭಿಪ್ರಾಯ. ಹಾಗೆಯೇ ಇಂಗ್ಲಿಷ್ ವಿಭಾಗದಲ್ಲು ಲಭ್ಯವಿದ್ದರೆ ಅದನ್ನು ಹಾಕುವರು.
  • ರಾಜ್‌ಕುಮಾರ್ ಕಲ್ಯಾಣ್ ಕುಮಾರ್ ಆರ್. ಕೆ. ಶ್ರೀಕಂಠನ್-N. R. Narayana Murthy ಈ ಪುಟಗಳನ್ನು ನೋಡಬಹುದು.
ನಿಮ್ಮವ-Bschandrasgr (ಚರ್ಚೆ) ೧೭:೦೫, ೨೭ ಮಾರ್ಚ್ ೨೦೨೦ (UTC)