ವಿಷಯಕ್ಕೆ ಹೋಗು

ಚರ್ಚೆಪುಟ:ಪರಮಾಣು ಭೌತಶಾಸ್ತ್ರ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಣು ಭೌತಶಾಸ್ತ್ರ ಮತ್ತು ಪರಮಾಣು ಭೌತಶಾಸ್ತ್ರ

[ಬದಲಾಯಿಸಿ]

ಪರಮಾಣು ಭೌತಶಾಸ್ತ್ರ = Nuclear physics ಮತ್ತೆ ಅಣು ಭೌತಶಾಸ್ತ್ರ = Atomic physics ಎಂಬದು ಸರಿಯೇ? ಹೀಗಿದ್ದಲ್ಲಿ interwiki ಸಂಪರ್ಕಗಳು ತಪ್ಪಾಗಿವೆಯಲ್ಲವೆ? ಶುಶ್ರುತ \ಮಾತು \ಕತೆ ೦೩:೫೫, ೧೧ ಜುಲೈ ೨೦೦೯ (UTC)

ಪರಮಾಣು ಮತ್ತು ಅಣು ಶಬ್ದಗಳು ಇಂಗ್ಲಿಷ್‌ನ Atom ಪದವನ್ನು ನಿರ್ದೇಶಿಸುತ್ತವೆಂದು ನನ್ನ ಭಾವನೆ. ಹಾಗಾಗಿ ಇವೆರಡೂ ಪದಗಳನ್ನು ಅದಲು ಬದಲಾಗಿ ಬಳಸಬಹುದು. Nuclear ಅನ್ನಲು "ಬೈಜಿಕ" ಮತ್ತು Nucleus ಅನ್ನಲು ಕೇಂದ್ರಿಕ ಪದವನ್ನು ಬಳಸಬಹುದು. ಧನ್ಯವಾದಗಳು. -- 59.92.167.246 ೧೧:೨೨, ೧೧ ಜುಲೈ ೨೦೦೯ (UTC)

ಪರಮಾಣು ಭೌತಶಾಸ್ತ್ರ = Atomic physics ಸರಿ.ಅಣು ಎಂಬ ಶಬ್ದಕ್ಕೆ molecule ಎಂಬುದು ಸಮಾನಾರ್ಥಕ ಶಬ್ದ.(ಇಂಗ್ಲಿಷ್ ಕನ್ನಡ ವಿಜ್ಞಾನ ಶಬ್ದಕೋಶ) Nuclear physicsನ್ನು ಬೈಜಿಕ ಭೌತಶಾಸ್ತ್ರ ಎನ್ನಬಹುದು. Nucleus = ಬೈಜಿಕ ಕೇಂದ್ರ ಎನ್ನುವ ಅರ್ಥವಿದೆ.--VASANTH S.N. ೧೭:೪೧, ೧೧ ಜುಲೈ ೨೦೦೯ (UTC)

ಹಾಗಾದರೆ ನಮ್ಮ ವಿಶ್ವಕೋಶದಲ್ಲಿ ಭಾರಿ ತಪ್ಪುಗಳಿವೆ! ಪರಮಾಣು ಪುಟವು nucleus ಅನ್ನು ವರ್ಣಿಸುತ್ತದೆ. ಅಣು ಪುಟವು molecule ಅನ್ನು ವರ್ಣಿಸಿದರೂ, ಅಲ್ಲಿನ ಇಂಟರ್ವಿಕಿ ಸಂಪರ್ಕಗಳು atom ಪುಟಕ್ಕೆ ಒಯ್ಯುತ್ತವೆ! ಶುಶ್ರುತ \ಮಾತು \ಕತೆ ೦೧:೨೮, ೧೫ ಜುಲೈ ೨೦೦೯ (UTC)