ಚರ್ಚೆಪುಟ:ಜ್ಯೋತ್ಸ್ನಾ ಕಾಮತ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚರ್ಚೆಪುಟ:ಜ್ಯೋತ್ಸ್ನ ಕಾಮತ್ ಇಂದ ಪುನರ್ನಿರ್ದೇಶಿತ)

ವಿಕಿಪೀಡೀಯದಲ್ಲಿ ಒಂದೆರಡು ಕಡೆ ಇವರ ಹೆಸರನ್ನು ಜ್ಯೋತ್ಸ್ನಾ ಎಂದು ಬರೆಯಲ್ಪಟ್ಟಿದೆ. ಕೆಲವು ಕಡೆ ಜೋತ್ಸ್ನ ಎಂದು ಬರೆಯಲ್ಪಟ್ಟಿದೆ. ಸರಿಯಾದ ಬಳಕೆ ಯಾವುದು ಎಂದು ತಿಳಿದು ಎಲ್ಲೆಡೆ ಅದನ್ನೇ ಬಳಸುವುದು ಉತ್ತಮ. consistency ಇರತ್ತೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೬:೨೯, ೩ July ೨೦೦೬ (UTC)

ಸರಿಯಾದ ಹೆಸರು ಜ್ಯೋತ್ಸ್ನಾ. ಇದು ಸಂಸ್ಕೃತ ಪದ ज्यॊत्स्ना ದ ಕನ್ನಡ ರೂಪ. ಇದರ ಅರ್ಥ ಬೆಳದಿಂಗಳು. ಇದನ್ನು ಬೇಕಾದರೆ ಜ್ಯೋತ್ಸ್ನ ಎಂದೂ ಬರೆಯಬಹುದು. ಆದರೆ ಜೋತ್ಸ್ನ ಎನ್ನುವದು spelling mistake ಆಗುತ್ತೆ. ಜ್ಯೋತ್ಸ್ನಾ ಕಾಮತ ಅವರು ಪತ್ರ ಪರಾಚಿ ಎನ್ನುವ ಪುಸ್ತಕದ ಹಿನ್ನೆಲೆಯಾಗಿ (ಪುಟ IX) ಪುಟದಲ್ಲಿ ತಮ್ಮ ಹೆಸರನ್ನು ಜ್ಯೋತ್ಸ್ನಾ ಕಾಮತ್ ಎಂದು ಬರೆದಿದ್ದಾರೆ. ಈ ಪುಸ್ತಕವು ಮನೋಹರ ಗ್ರಂಥಮಾಲೆಯಿಂದ ಅಗಸ್ಟ ೨೦೦೪ರಲ್ಲಿ ಪ್ರಕಟವಾಗಿದೆ.--Sunaath ೧೭:೧೧, ೩ July ೨೦೦೬ (UTC)ಸುನಾಥ
ಮಾಹಿತಿಗೆ ಧನ್ಯವಾದಗಳು, ಸುನಾಥ್. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೦೧, ೪ July ೨೦೦೬ (UTC)
ಕನ್ನಡದಲ್ಲಿ , ಅಷ್ಟೇ ಏಕೆ ನನಗೆ ಗೊತ್ತಿರುವಂತೆ ಕೆಲವು ಸಂಸ್ಕೃತಜನ್ಯ ಭಾರತೀಯ ಭಾಷೆಗಳಲ್ಲಿ , ಸ್ತ್ರೀಲಿಂಗ ನಾಮಪದಗಳು ಕಾರಾಂತವಾಗಿರುವುದು ಅಪರೂಪ. ಕಾರಾಂತವಾಗಿ ತಪ್ಪು ಬಳಕೆಯಾಗುವ ಸ್ತ್ರೀ ನಾಮಗಳ ಸರಿಯಾದ ಪ್ರಯೋಗ ಕಾರಾಂತವಾಗಿರುವುದು (ದೀರ್ಘ) . ಉದಾಹರಣೆಗೆ, ಗಂಗ, ಸರಳ, ಯಮುನ, ಕವಿತ ಇವೆಲ್ಲಾ, ನನಗೆ ತಿಳಿದ ಮಟ್ಟಿಗೆ, ತಪ್ಪು ಪ್ರಯೋಗಗಳು. ಇವು ಕ್ರಮವಾಗಿ ಗಂಗಾ, ಸರಳಾ, ಯಮುನಾ ಮತ್ತು ಕವಿತಾ ಎಂದಿರಬೇಕು. ಇವುಗಳ ಹೃಸ್ವರೂಪದ ಬಳಕೆಗಳು ಕಾರದಿಂದ ಅಂತ್ಯಗೊಳ್ಳುತ್ತವೆ. ಉದಾ: ಗಂಗೆ,ಸರಳೆ,ಯಮುನೆ ,ಕವಿತೆ ಇತ್ಯಾದಿ.
ಇದರ ಪ್ರಕಾರ ಜ್ಯೋತ್ಸ್ನಾ (ದೀರ್ಘ) ಎನ್ನುವುದು ಸರಿಯಾದ ಪ್ರಯೋಗ. ಅದರಲ್ಲೂ ಲೇಖಕಿಯೇ ತಮ್ಮನ್ನು ಜ್ಯೋತ್ಸ್ನಾ ಎಂದು ಕರೆದುಕೊಂಡಿರುವುದರಿಂದ ಅದನ್ನೇ ಬಳಸುವುದು ಸರಿಯಾದದ್ದು ಎಂದು ನನ್ನ ಅಭಿಪ್ರಾಯ. ಆದ್ದರಿಂದ ಈ ಲೇಖನದ ಶೀರ್ಷಿಕೆಯನ್ನೂ ಜ್ಯೋತ್ಸ್ನಾ ಕಾಮತ್ ಎಂದು ಬದಲಾಯಿಸಬೇಕು ಎಂದು ನನಗೆ ಅನ್ನಿಸುತ್ತದೆ. ಇನ್ನೂ ಅನೇಕ ಲೇಖನಗಳಲ್ಲೂ ಸ್ತ್ರೀಯರ ಹೆಸರಿನ ಉಲ್ಲೇಖದಲ್ಲಿ ಈ ತಪ್ಪು ನುಸುಳಿರಬಹುದಾದ ಸಾಧ್ಯತೆಗಳಿವೆ.Narayana ೧೨:೨೪, ೪ July ೨೦೦೬ (UTC)
ಉಪಯುಕ್ತ ಮಾಹಿತಿಗಾಗಿ ಸುನಾಥ್ ಮತ್ತು ನಾರಾಯಣ ಅವರಿಗೆ ಧನ್ಯವಾದಗಳು. ಇದೀಗ ಲೇಖನದ(ಹಾಗು ಚರ್ಚಾಪುಟ) ಹೆಸರು ಜ್ಯೋತ್ಸ್ನಾ ಕಾಮತ್ ಎಂದು ಮಾಡಲಾಗಿದೆ. ಹಾಗೆಯೇ, ಜೋತ್ಸ್ನ ಕಾಮತ್ ಮತ್ತು ಜ್ಯೋತ್ಸ್ನ ಕಾಮತ್ ಪುಟಗಳನ್ನು ಇಲ್ಲಿಗೆ ರೀಡೈರೆಕ್ಟ್ ಮಾಡಲಾಗಿದೆ. ವಿಕೀಪೀಡಿಯ ಬಳಕೆದಾರರು ಈಗ ಈ ಮೂರು ಹೆಸರಲ್ಲಿ ಯಾವದನ್ನು ಉಪಯೋಗಿಸಿ ಸರ್ಚ್ ಮಾಡಿದರೂ, ಅವರಿಗೆ ಈ ಲೇಖನ ಸಿಗುತ್ತದೆ. - ಮನ | Mana ೧೮:೩೨, ೪ July ೨೦೦೬ (UTC)