ಚರ್ಚೆಪುಟ:ಕರ್ನಾಟಕದ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳು 2016

ವಿಕಿಪೀಡಿಯ ಇಂದ
Jump to navigation Jump to search

೨೦೧೫ ರಲ್ಲಿ ನೆಡೆದ ಗ್ರಾಮ ಪಂಚಾಯತಿಗಳ ಚುನಾವಣೆ ವೇಳಾ ಪಟ್ಟಿ[ಬದಲಾಯಿಸಿ]

  • ಮೊದಲನೆ ಹಂತ : ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಪಟ್ಟಿ ಪ್ರಕಟಿಸಿದ್ದು, ರಾಜ್ಯದಲ್ಲಿ ೦೨ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ರಾಜ್ಯದ ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ, ಬೆಳಗಾವಿ, ವಿಜಯಪುರ, ಹಾವೇರಿ, ಬಾಗಲಕೋಟೆ, ಉತ್ತರಕನ್ನಡ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ. ೨೯ ರಂದು ಮತದಾನ ನಡೆಯಲಿದೆ. ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಮೇ. ೧೧ ರಂದು ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಮೇ. ೧೮ ಕೊನೆಯ ದಿನಾಂಕವಾಗಿರುತ್ತದೆ. ನಾಮಪತ್ರಗಳ ಪರಿಶೀಲನೆ ಮೇ. ೧೯ ರಂದು ಜರುಗಲಿದ್ದು, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ. ೨೧ ಕೊನೆಯ ದಿನವಾಗಿರುತ್ತದೆ. ಮತದಾನದ ಅವಶ್ಯವಿದ್ದರೆ ಮೇ. ೨೯ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯವಾದಲ್ಲಿ ಮೇ. ೩೧ ರಂದು ಮರು ಮತದಾನ ನಡೆಸಲಾಗುವುದು. ಮತಗಳ ಎಣಿಕೆ ಜೂ. ೦೫ ರಂದು ಬೆಳಿಗ್ಗೆ ೮ ಗಂಟೆಗೆ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಚುನಾವಣೆ ಪ್ರಕ್ರಿಯೆ ಜೂ. ೦೬ ಕ್ಕೆ ಪೂರ್ಣಗೊಳಿಸಬೇಕಿದೆ.
  • ಎರಡನೆ ಹಂತ : ಎರಡನೆ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೀದರ್, ಬಳ್ಳಾರಿ, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದ್ದು ಜೂ. ೦೨ ರಂದು ಮತದಾನ ನಡೆಯಲಿದೆ. ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಮೇ. ೧೫ ರಂದು ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಮೇ. ೨೨ ಕೊನೆಯ ದಿನಾಂಕವಾಗಿರುತ್ತದೆ. ನಾಮಪತ್ರಗಳ ಪರಿಶೀಲನೆ ಮೇ. ೨೩ ರಂದು ಜರುಗಲಿದ್ದು, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ. ೨೫ ಕೊನೆಯ ದಿನವಾಗಿರುತ್ತದೆ. ಮತದಾನದ ಅವಶ್ಯವಿದ್ದರೆ ಜೂ. ೦೨ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯವಾದಲ್ಲಿ ಜೂ. ೦೪ ರಂದು ಮರು ಮತದಾನ ನಡೆಸಲಾಗುವುದು. ಮತಗಳ ಎಣಿಕೆ 2015 ಜೂ. ೦೫ ರಂದು ಬೆಳಿಗ್ಗೆ ೮ ಗಂಟೆಗೆ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಚುನಾವಣೆ ಪ್ರಕ್ರಿಯೆ ಜೂ. ೦೬ ಕ್ಕೆ ಪೂರ್ಣಗೊಳಿಸಬೇಕಿದೆ.

ಆಧಾರ:[[೧]]

2015 june 6 counting=ಗ್ರಾಮ ಪಂಚಾಯಿತಿ ಚುನಾವಣೆ¬ಯಲ್ಲಿ 38,742 ಕಾಂಗ್ರೆಸ್‌ ಬೆಂಬಲಿತ, 27 ಸಾವಿರ ಬಿಜೆಪಿ ಬೆಂಬಲಿತ ಹಾಗೂ 12 ಸಾವಿರ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ'

ಪಂಚಾಯತ್ ಚುನಾವಣೆ ಬಗ್ಗೆ ಗ್ರಾಮವಾಸಿ ಅಭಿಪ್ರಾಯ[ಬದಲಾಯಿಸಿ]

  • ೨೦೧೫ ಜೂನ್ ೬; ಕನ್ನಡ ಪ್ರಭ : ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಕಡ್ಡಾಯ ಮತದಾನ ಜಾರಿಯಾದ ನಂತರ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ನಾಳೆ ಹೊರಬೀಳಲಿದೆ. ಅಭ್ಯರ್ಥಿಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.
  • ರಾಜ್ಯದ 5735 ಗ್ರಾಮ ಪಂಚಾಯತಿಗಳ 84, 854 ಸ್ಥಾನಗಳಿಗೆ 2 ಹಂತಗಳಲ್ಲಿ ಚುನಾವಣೆ ನಡೆದಿತ್ತು. ಶೇ.50 ಕ್ಕೂ ಹೆಚ್ಚು ಮಹಿಳೆಯರಿಗೆ ಅವಕಾಶ ಕಲ್ಪಿಸಿರುವ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
  • 30 ಜಿಲ್ಲೆಗಳಲ್ಲಿ ತಲಾ 15 ಜಿಲ್ಲೆಗಳಂತೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮೊದಲ ಹಂತದ ಚುನಾವಣೆಯಲ್ಲಿ ಶೇ.82.54 ರಷ್ಟು ಮತದಾನವಾಗಿತ್ತು. 2 ನೇ ಹಂತದಲ್ಲಿ ಶೇ. 80.38 ರಷ್ಟು ಮತದಾನ ನಡೆದಿತ್ತು.
  • siribhuvalayadasudharthy- ಅವರ ಪತ್ರ:

ರಾಜಕೀಯ ಪಕ್ಷಗಳು ತಮ್ಮ ನೆಲೆಯನ್ನು ಬಲಪಡಿಸಿಕೊಳ್ಳಲು ಹಿಂಬಾಲಕರ ಪಡೆಯ ನಿರ್ಮಾಣಕ್ಕಾಗಿ ಸ್ಠಳೀಯ ಆಡಳಿತದ ನೆಪದಲ್ಲಿ ಈ ಮಂಡಲಪಂಚಾಯಿತಿಗಳನ್ನು ಹುಟ್ಟುಹಾಕಿದುವು. ಇದು ನಿಜಕ್ಕೂ ಒಂದು ವ್ಯವಸ್ಠೆಯಲ್ಲ; ಅವ್ಯಸ್ಠೆ!! ಗ್ರಾಮೀಣ ಜನತೆಯ ನೆಮ್ಮದಿಯ ಸರಳ ಜೀವನವನ್ನು ನಾಶಪಡಿಸಿ; ದ್ವೇಷ; ಅಸೂಯೆ; ಸೇಡು, ಹೊಡೆದಾಟ; ಬಡಿದಾಟ,ಕೊಲೆ; ಮುಂತಾದ ಅನುಚಿತ ಘಟನೆಗಳಿಗೆ ದಾರಿಯಾಗಿದೆ! ಪ್ರತಿಯೊಂದು ಗ್ರಾಮದ ಪ್ರತಿಯೊಂದು ವ್ಯಕ್ತಿಯಲ್ಲೂ ತಾನು ಚುನಾವಣೆಗೆ ನಿಂತು, ಜಯಶಾಲಿಯಾಗಿ ಅಧಿಕಾರದ ಗದ್ದುಗೆ ಏರಬೇಕೆಂಬ ಕನಸುಕಾಣುವಂತಾಗಿದೆ!! ಈ ಚುನವಣೆಗಾಗಿ ಪ್ರತಿಯೊಬ್ಬ ಅಭ್ಯರ್ಥಿಯೂ ಗಂಡಸರಿಗೆ ಹೆಂಡ ಹಾಗೂ ಹೆಂಗಸರಿಗೆ ತಂಪುಪಾನೀಯಗಳ ಹೊಳೆಯೊಂದಿಗೆ ಬಾಡೂಟದ ಸಂತರ್ಪಣೆ ಮಾಡುವುದಾಗಿದೆ!! ಈ ಭ್ರಮೆಯಲ್ಲಿ ದುರ್ಬಲರು ಪ್ರಾಣಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ! ಗ್ರಾಮಪಂಚಾಯಿತಿ ಮಟ್ಟದಲ್ಲಿ ದೊರೆಯುವ ಅಭಿವೃದ್ಧಿಕಾಮಗಾರಿಗಳ ಗುತ್ತಿಗೆ ಪಡೆದು; ಕಳಪೆಕಾಮಗಾರಿಗಳನ್ನು ಮಾಡಿ ಅಥವಾ ಮಾಡದೆಯೇ ಸರ್ಕಾರದ ಬೊಕ್ಕಸದಿಂದ ಹಣನುಂಗುವ ತಂತ್ರಜ್ಞಾನ ಗ್ರಾಮಮಟ್ಟದ ರಾಜಕೀಯ ಪುಡಾರಿಗಳಿಗೆ ಕರಗತವಾಗಿಬಿಟ್ಟಿದೆ!! ಹೊಟ್ಟೆಯತುಂಬ ಅನ್ನ; ಮೈಮುಚ್ಚಲು ಬಟ್ಟೆಗೂ ಗತಿಯಿಲ್ಲದಿದ್ದವರು ಇಂದು ರಾಜಕೀಯದ ಸುಳಿಗೆ ಸಿಕ್ಕಿ ಚುನಾವಣೆಗಾಗಿ ಲಕ್ಷಾಂತರ ರುಪಾಯಿ ಸಾಲಮಾಡಿ ದಿವಾಳಿಯಾಗುವ ಹಂತಕ್ಕೆ ಬಂದಿದ್ದಾರೆ. ಇದ್ದುದನ್ನೂ ಕಳೆದುಕೊಂಡು ನಿರ್ಗತಿಕರಾಗುವ ಇಂಥವರಿಗೆ ಉಳಿಯುವ ಮಾರ್ಗ ಒಂದೇ. ಅದು ಆತ್ಮಹತ್ಯೆ!!! ಇದನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಸರ್ಕಾರದಿಂದ ಇಂಥ ಆತ್ಮಹತ್ಯೆಗೆ ಸೂಕ್ತವಾದ ಪರಿಹಾರದ ನೆರವು!!! ಜೀವನಾವಶ್ಯಕವಾದ ಎಲ್ಲ ಅನುಕೂಲಗಳಿಗೂ ಸರಕಾರದ 'ಭಾಗ್ಯ' ಗಳ ಸರಮಾಲೆ! ಯಾರಿಗೂ ದುಡಿದೇ ತಿನ್ನಬೇಕೆಂಬ ಅನಿವಾರ್ಯತೆಯಿಲ್ಲ! ಈ ಹುಚ್ಚಾಟ ಎಷ್ಟುದಿನ ನಡೆಯಲು ಸಾಧ್ಯ!? ಅಧಿಕಾರದಾಹಿಗಳಾದ ಈ ರಾಜಕಾರಿಣಿಗಳು ದೇಶದ ಜನಸಾಮಾನ್ಯರ ಸಾಮಾಜಿಕಬದುಕಿನ ನೆಮ್ಮದಿಯನ್ನು ತಮ್ಮ ತೆವಲಿನ ಪೂರೈಕೆಗಾಗಿ ಸಂಪೂರ್ಣವಾಗಿ ನಾಶಗೊಳಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಇದು ದೇಶವಾಸಿಗಳ ಜನ್ಮಾಂತರದ ಕರ್ಮವಾಗಿದೆ!! ಇದನ್ನು ಅನುಭವಿಸದೇ ಬೇರೆದಾರಿಯೇ ಇಲ್ಲ!!! ಇದು 'ಮೇರಾಭಾರತ್ ಮಹಾನ್ ನ' ನಿಜವಾದ ರೂಪವಾಗಿದೆ!! [[೩]] Bschandrasgr (ಚರ್ಚೆ) ೧೩:೩೧, ೧೦ ಮಾರ್ಚ್ ೨೦೧೬ (UTC)