ರಾಜ್ಯ ಚುನಾವಣಾ ಆಯೋಗದ ಪ್ರಕಟಣೆಯ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯ ವೇಳಾಪಟ್ಟಿಯಂತೆ. 2016,ಫೆಬ್ರವರಿ 13 ಮತ್ತು 20ರಂದು ಒಟ್ಟು ಎರಡು ಹಂತದಲ್ಲಿ ಚುನಾವಣೆಗಳು ನಡೆದಿದೆ. ಫೆಬ್ರವರಿ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ರಾಜ್ಯದ (26) ಜಿಲ್ಲಾ ಪಂಚಾಯಿತಿಗಳ ಒಟ್ಟು (922) ಕ್ಷೇತ್ರಗಳಿಗೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆಯೆಂದು ನಿರ್ಧರವಾಗಿತ್ತು. ನಂತರ ವಿಸ್ತರಿಸಿ 30 ಜಿಲ್ಲೆಗಳಿಗೂ, 175 ತಾಲೂಕು ಪಂಚಾಯಿತಿಗಳ 3884(3,870) ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿ ಚುನಾವಣೆ ನಡೆಯಿತು. ಮೊದಲ ಹಂತದಲ್ಲಿ 15 ಮತ್ತು ಎರಡನೇ ಹಂತದಲ್ಲಿ 15 ಜಿಲ್ಲೆಗಳಲ್ಲಿ ಮತದಾನವು ನಡೆಯಿತು. (ವಿಜಯಪುರ, ಬೀದರ್, ರಾಯಚೂರು ಮತ್ತು ಕಲಬುರಗಿ ಜಿಲ್ಲಾ ಪಂಚಾಯಿತಿಗಳ ಚುನಾವಣೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದ್ದರಿಂದ, ಈ 4 ಜಿಲ್ಲಾ ಪಂಚಾಯಿತಿ ಹೊರತುಪಡಿಸಿ ಉಳಿದ 26 ಜಿಲ್ಲಾ ಪಂಚಾಯಿತಿಗಳಿಗೆ ಮಾತ್ರಾ ಚುನಾವಣೆ ನಡೆಯಬೇಕಾಗಿತ್ತು.ಆದರೆ ಅದು ಕೊನೆ ಗಳಿಗೆಯಲ್ಲಿತೆರವು ಆಯಿತು) 30 ಜಿಲ್ಲೆಗಳ ಒಟ್ಟು 1,080 ಕ್ಷೇತ್ರಗಳ ಮತ್ತು 175 ತಾಲೂಕು ಪಂಚಾಯಿತಿಗಳ 3884 ಕ್ಷೇತ್ರಗಳಿಗೆ ಚುನಾವಣೆ ಚುನಾವಣೆಗ ಘೋಷಣೆ ಆಯಿತು.
ಮೊದಲ ಹಂತ
ಮೊದಲ ಹಂತದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಕಾರವಾರ, ಧಾರವಾಡ, ಬೆಳಗಾವಿ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.
ಎರಡನೇ ಹಂತ
ಎರಡನೇ ಹಂತದಲ್ಲಿ ಹಾಸನ, ಮಂಡ್ಯ, ಯಾದಗಿರಿ, ಚಾಮರಾಜನಗರ, ಬಳ್ಳಾರಿ, ಕೊಡಗು, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಬೀದರ್ ಜಿಲ್ಲೆಯ 4 ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಮತದಾನ ನಡೆಯಲಿದೆ.
175 ತಾಲೂಕು ಪಂಚಾಯಿತಿಗಳ 3902 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12,635 ಅಭ್ಯರ್ಥಿಗಳು ಕಣದಲ್ಲಿ.
30 ಜಿಲ್ಲೆಗಳಲ್ಲಿ 1,080 ಜಿಲ್ಲಾ ಪಂಚಾಯಿತಿ ಸ್ಥಾನಕ್ಕಾಗಿ ಒಟ್ಟು 4,426 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಎರಡು ಹಂತಗಳಲ್ಲಿ ನಡೆದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ ಈರೀತಿ ಇದೆ: ಜಿಲ್ಲಾ ಪಂಚಾಯಿತಿ ಚುನಾವಣೆಯಂತೆ ತಾಲೂಕು ಪಂಚಾಯಿತಿಯಲ್ಲೂ ಆಡಳಿತ ಪಕ್ಷ ಕಾಂಗ್ರೆಸ್ ಗಳಿಸಿದ ಸ್ಥಾನ ಈ ರೀತಿ ಇದೆ. ಫೆ.13 ಮತ್ತು 20ರಂದು ಎರಡು ಹಂತದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆದಿತ್ತು. 175 ತಾಲೂಕು ಪಂಚಾಯಿತಿಗಳ 3884 (prajavani-24-2-2016)(3902-ಒನ್ ಇಂಡಿಯಾ) ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12,635 ಅಭ್ಯರ್ಥಿಗಳು ಕಣದಲ್ಲಿದ್ದರು.13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 3884/3,889 ಕ್ಷೇತ್ರಗಳ ಫಲಿತಾಂಶ ಈರೀತಿ ಇದೆ.
ಫಲಿತಾಂಶ :175 ತಾಲೂಕು ಪಂಚಾಯಿತಿಗಳ ಪೈಕಿ ಬಿಜೆಪಿ 55 (54?), ಕಾಂಗ್ರೆಸ್ 55 (60?), ಜೆಡಿಎಸ್ 20 (26?) ಸ್ಥಾನಗಳಲ್ಲಿ ಜಯಗಳಿಸಿದೆ. 45 (35?) ಕಡೆ ಅತಂತ್ರ (ಯಾವ ಪಕ್ಷಕ್ಕೂ ಬಹುಮತವಿಲ್ಲ.) (ಆವರಣದಲ್ಲಿರುವುದು ಒನ್ ಇಂಡಿಯಾ ಸುದ್ದಿ)
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಪಂಚಾಯತಿ ಚುನಾವಣೆಯಲ್ಲಿ 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಭರ್ಜರಿ ಗೆಲುವು ದಾಖಲಿಸಿದೆ.
ಜೆಡಿಎಸ್ 11 ಸ್ಥಾನ ಗಳಿಸಿ ಅಧಿಕಾರ ವಹಿಸಿಕೊಂಡಿದ್ದರೆ ಬಿಜೆಪಿ-5 ಮತ್ತು ಕಾಂಗ್ರೆಸ್ -3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ[೭]