ಚರ್ಚೆಪುಟ:ಕನ್ನಡ ಕಾಗುಣಿತ
HPNadigರು ಪೂರೈಸಿದ ಕಾಗುಣಿತ ಕೋಷ್ಟಕವು ಈವತ್ತಿನ accepted ವ್ಯಾಕರಣಕ್ಕೆ ಅನುಗುಣವಾಗಿದೆ. ಆದರೆ ವಿಷಾದಪೂರ್ವಕವಾಗಿ ನಾನು ಹೇಳಬಯಸುವದು ಇಷ್ಟೆ: ಕೆಲವೆ ವರ್ಷಗಳ ಹಿಂದೆ ೠ ಎನ್ನುವ ಅಕ್ಷರ ಕೂಡ ಅಕ್ಷರಮಾಲೆಯಲ್ಲಿತ್ತು. ನಮ್ಮ ವೈಯಾಕರಣಿಗಳು ವ್ಯವಹಾರದ ಬಳಕೆಯ ಅಭಾವವನ್ನು ಒಂದು ಕಾರಣವಾಗಿ ನೀಡುತ್ತ ೠವನ್ನು ಅಕ್ಷರಮಾಲೆಯಿಂದ ಕಿತ್ತು ಹಾಕಿದರು.ವ್ಯವಹಾರಬಳಕೆಯೇ ವ್ಯಾಕರಣಕ್ಕೆ ಪ್ರಮಾಣವಾಗುವದಾದರೆ ಋ ಆದರೂ ಯಾಕೆ ಬೇಕು, ಗುರುವೆ? ಶ್ರೀ ಎಸ್.ಎಮ್.ಕೃಷ್ಣರವರು ಕರ್ನಾಟಕದ ಮುಖ್ಯ ಮಂತ್ರಿಗಳಿದ್ದಾಗ ಋವನ್ನು ಅಕ್ಷರಮಾಲೆಯಿಂದ ತೆಗೆದುಹಾಕಬೇಕೆನ್ನುವ ಒಂದು ಪ್ರಸ್ತಾವನೆಗೆ ತಮ್ಮ ಸಹಮತಿ ವ್ಯಕ್ತ ಪಡಿಸಿದ್ದರು. ಆ ಸಮಯದಲ್ಲಿ ಇದರ ವಿರೋಧಿಗಳು "ಕೃಷ್ಣ"ರನ್ನು "ಕ್ರಿಷ್ಣ" ಎಂದು ಲೇವಡಿ ಮಾಡಿದ್ದರು.
ಇರಲಿ,ಕಾಲಾಯ ತಸ್ಮೈ ನಮ:!---Sunaath ೧೫:೩೫, ೧೯ ಆಗಸ್ಟ್ ೨೦೦೬ (UTC)ಸುನಾಥ
Start a discussion about ಕನ್ನಡ ಕಾಗುಣಿತ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಕನ್ನಡ ಕಾಗುಣಿತ.