ಚರ್ಚೆಪುಟ:ಉಚ್ಚ ಮತ್ತು ನೀಚ ಗ್ರಹಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಖಗೋಲಶಾಸ್ತ್ರದಲ್ಲಿ ಉಚ್ಚಗ್ರಹ ಮತ್ತು ನೀಚಗ್ರಹ ಈ ಪದಗಳನ್ನು ಈಗಾಗಲೇ ಬೇರೆ ಅರ್ಥದಲ್ಲಿ ಉಪಯೋಗಿಸಲಾಗುತ್ತಿದೆ. ಭೂಮಿ ಮತ್ತು ಸೂರ್ಯರನ್ನು ಜೋಡಿಸುವ ರೇಖೆಯ ಮೇಲ್ಗಡೆ ಇರುವ ಸ್ಥಾನ ಉಚ್ಚಸ್ಥಾನ; ಕೆಳಗಡೆಯ ಸ್ಥಾನ ನೀಚಸ್ಥಾನ.ಆದುದರಿಂದ ವಿವಿಧ ಗ್ರಹಗಳು ವಿವಿಧ ಕಾಲದಲ್ಲಿ ಉಚ್ಚ ಅಥವಾ ನೀಚ ಸ್ಥಾನಗಳನ್ನು ಹೊಂದುತ್ತವೆ. ಉದಾಹರಣೆಗೆ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ ಹಾಗು ಶನಿ ಈ ಗ್ರಹಗಳು ಅನುಕ್ರಮವಾಗಿ ಮೇಷ,ವೃಷಭ,ಮಕರ,ಕನ್ಯಾ,ಕರ್ಕ,ಮೀನ ಹಾಗು ತುಲಾ ರಾಶಿಗಳಲ್ಲಿ ಉಚ್ಚಸ್ಥಾನವನ್ನು ಪಡೆಯುತ್ತಾರೆ ಮತ್ತು ತುಲಾ,ವೃಶ್ಚಿಕ,ಕರ್ಕ,ಮೀನ,ಮಕರ,ಕನ್ಯಾ ಹಾಗು ಮೇಷ ರಾಶಿಗಳಲ್ಲಿ ನೀಚಸ್ಥಾನವನ್ನು ಹೊಂದುತ್ತಾರೆ.ಕೋಪರ್ನಿಕಸ್‍ನು superior planets ಹಾಗು inferior planets ಎನ್ನುವ ಪದಗಳನ್ನು ಉಪಯೋಗಿಸಿದಾಗ ಅವನು ಭೂಮಿಯ ಹೊರಬದಿಯ ಹಾಗು ಒಳಬದಿಯ ಗ್ರಹಗಳು ಎನ್ನುವ ಅರ್ಥದಲ್ಲಿ ಹೇಳಿರುವನು. ಆದುದರಿಂದ ನಾವು ಬಾಹ್ಯ ಗ್ರಹಗಳು ಮತ್ತು ಅಂತರ್ ಗ್ರಹಗಳು ಎನ್ನುವ ಪದಗಳನ್ನು ಉಪಯೋಗಿಸುವದು ಸರಿಯಾದ ಕ್ರಮವಾಗುತ್ತದೆ. ದಯವಿಟ್ಟು ಸರಿಪಡಿಸಲು ಕೋರುತ್ತೇನೆ. Sunaath ೧೬:೩೭, ೨೧ February ೨೦೦೭ (UTC)ಸುನಾಥ

ಸುನಾಥ ಅವರೆ,

ನಾನು ಈ ವಿಷಯದ ಬಗ್ಗೆ ಒಂದೆರಡು ಪುಸ್ತಕಗಳನ್ನು ನೋಡಿ ಪರಿಶೀಲಿಸಿದೆ. ನನಗೆ ತಿಳಿದುಬಂದ ಸಂಗತಿಗಳೆಂದರೆ:
  • ಹೊರ ಮತ್ತು ಒಳ ಗ್ರಹಗಳೆಂಬ ಪದಗಳನ್ನು ಕ್ಷುದ್ರ ಗ್ರಹ ಹೊನಲಿನ (asteroid belt) ಹೊರಗೆ ಮತ್ತು ಒಳಗಿರುವ ಗ್ರಹಗಳನ್ನು ಸೂಚಿಸಲು ಬಳಸಲಾಗುತ್ತದೆ. ಬಾಹ್ಯ ಮತ್ತು ಅಂತರ್ ಗ್ರಹಗಳೂ ಮುಖ್ಯತಃ ಇದೇ ಅರ್ಥವನ್ನು ಹೊಂದುತ್ತವೆ.
  • inferior/superior ಗ್ರಹಗಳಿಗೆ ಈಗಿರುವ ಉಚ್ಚ/ನೀಚ ಪದಗಳೇ ಸರಿಯೆನಿಸುತ್ತದೆ.

ಈ ಬಗ್ಗೆ ನಾನು ಹುಡುಕಿ ನೋಡಿದ ಪುಸ್ತಕಗಳು:

  • ವಿಜ್ಞಾನ ಪದವಿವರಣ ಕೋಶ - ನವಕರ್ನಾಟಕ ಪ್ರಕಾಶನ - ಜಿ.ಟಿ.ನಾರಾಯಣರಾವ್
  • ಜ್ಞಾನ-ವಿಜ್ಞಾನ ಕೋಶ (ಭಾಗ ೨) - ನವಕರ್ನಾಟಕ ಪ್ರಕಾಶನ - ಪ್ರೊ. ಎಂ.ಎ.ಸೇತುರಾವ್, ಶ್ರೀ ಕೆ.ಎಲ್.ಗೋಪಾಲಕೃಷ್ಣರಾವ್
ನನಗೆ ಎನಿಸುವುದೇನೆಂದರೆ, ಉಚ್ಚ/ನೀಚ ಸ್ಥಾನಗಳೆಂಬ ಪದಗಳು ನೀವು ಹೇಳಿದಂತೆಯೇ ಅರ್ಥ ಪಡೆದಿದ್ದರೂ, ಉಚ್ಚ/ನೀಚ ಗ್ರಹಗಳು ಬೇರೆಯೇ ಅರ್ಥ ಹೊಂದಿ ಅವುಗಳ ಜೊತೆಯೇ ಇರಬಹುದು ಎಂದು. ಇದು ನಿಮಗೆ ಸರಿ ಎನಿಸದಿದ್ದಲ್ಲಿ ಮತ್ತು/ಅಥವಾ ಇದರ ಬಗ್ಗೆ ನಿಮಗೆ ಬೇರೆ ಯಾವುದಾದರೂ ಅಧಿಕೃತ ಮೂಲಗಳು ತಿಳಿದಿದ್ದಲ್ಲಿ ದಯವಿಟ್ಟು ತಿಳಿಸಿ.

ಧನ್ಯವಾದಗಳು
-Dronemvp ೦೩:೫೫, ೨೨ February ೨೦೦೭ (UTC)