ಚರ್ಚೆಪುಟ:ಇನ್ಫ್ಲುಯೆನ್ಜ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಪೋಲಿಕಿಟ್ಟಿ' ನಾಟಕದ ಒಂದು ಸಂಭಾಷಣೆ[ಬದಲಾಯಿಸಿ]

1920 ರಲ್ಲಿ ಅಂದಿನ ಪ್ಲೂ ಸೋಂಕಿನ ಭಿಕರ ಪರಿಣಾಮವನ್ನು ಆ ಕಾಲದಲ್ಲಿ ತಾವು ಕಣ್ಣಾರೆ ಕಂಡದ್ದನ್ನು, ಕೈಲಾಸಂ ಆ ಸಮಯದಲ್ಲಿ ಬರೆದ ತಮ್ಮ ಪೋಲಿಕಿಟ್ಟಿ ನಾಟಕದಲ್ಲಿ, 16 ವರ್ಷದ ಪಾತ್ರ- ಕಿಟ್ಟಿಯ ಬಾಯಲ್ಲಿ ಹೇಳಿಸಿದ್ದಾರೆ.
  • 11 ವರ್ಷದ 'ಮಗೂ' ಎಂಬುವವನ ತಾಯಿ: (ಕಿಟ್ಟಿಯನ್ನು ಕೈ ಹಿಡಿದು ಕರೆದುಕೊಂಡು ಹೋಗಿ ಸೋಫಾವಿನಲ್ಲಿ ಮೆಲ್ಲಗೆ ಕೂಡಿಸಿ ಪಕ್ಕದಲ್ಲಿ ಕುಳಿತು ಅವನ ತಲೆಯನ್ನು ಸವರುತ್ತಾ) ತ್ಸು! ತ್ಸು! ತ್ಸು! ಎಷ್ಟ್ ದಿನ ಆಯ್ತು ಮಗು… ನಿಂ ತಾಯಿ ಹೋಗಿ? ಅದೂ ಅಲ್ದೆ ನಿಂ ಭಾವಾನೂ ಹೋಗ್ಬಿಟ್ಟಾಂತಾನಲ್ಲ ನಮ್ಮಗೂ? ಇದ್ಯಾವಾಗ?
  • ಕಿಟ್ಟಿ: ಯಾವಾಗೇನಮ್ಮಾ… ಅದೇ… ಆ ಇನ್‌ಫ್ಲುಯೆಂಜಾ ಗಲಾಟೇಲಿ! (ಮೆಲ್ಲಗೆದ್ದು ನಿಂತು ಕೊಂಡು ಮುಖವನ್ನು ತಿರುಗಿಸಿಕೊಂಡು) ಮೊದಲು ನಮ್ಮಮ್ಮನಿಗೇನೆ ಬಂದದ್ದು ಜ್ವರ… ಆಗ ನಂ ಮನೇಲಿ… ನಾನು, ನಮ್ಮಪ್ಪ, ನಮ್ಮಮ್ಮ…. ಮೂರ್ ಜನಾನೇ ಇದ್ದದ್ದು ಮನೇಲಿ… ನಮ್ಮಮ್ಮ…. “ಅಕ್ಕನಿಗೇನೂ ಬರೀಬೇಡಾ… ಬೆದರಿಗಿದರ್‍ಯಾಳು” ಅಂತಂದ್ಲು… ಅವ್ಳಮಾತು ಕೇಳದ ನಮ್ಮಪ್ಪ…. ಏನೋ! ಹ್ಯಾಗಿರುತ್ತೋಂತ ಹೆದರ್ಕೊಂಡು… ಬರ್ದೇ ಬಿಟ್ಟ… ನಮ್ಮಕ್ಕನಿಗೆ… ಬರದ ಮಾರ್ನೆ ದಿನ ಅವನೂ ಬಿದ್ಗೊಂಡ… ಆದ್ರೂನೂ. ಅಲ್ಲಿ, ಇಲ್ಲಿ, ಓಡಾಡಿ… ಔಷ್ದಿ ಗಿವ್‍ಷ್ದಿ… ಸಂಪಾದಿಸ್ಕೊಂಡು ನೋಡ್ಕೊಳ್ತಾ ಇದ್ದೆ… ತಕ್ಮಟ್ಟಿಗೆ… ಅಷ್ಟಲ್ಲೇ…. ನಮ್ಮಕ್ಕ… ಅವಳೊಬ್ಬ ಮಂಕು… ‘ಅಮ್ಮನಿಗ್ ಗುಣವಾದ್ದಕ್ಕೆ ಕಾಗ್ದ ಬರ್ಲಿಲ್ಲಾಂ’ತ ಬೆದರ್ಕೊಂಡು ಗೋಳಾಡೋದ್ ನೋಡ್ಲಾರ್ದೆ… ನಂ ಭಾವ ಕೋಲಾರ್ದಲ್ಲಿ ಲಾಯರಿ ಮಾಡ್ತಿದ್ದಾಮ್ಮಾ ಅಕ್ಕನ್ನೂ ಅವಳ ಕೂಸ್ನೂ ಕರ್ಕಕೊಂಡ್ ಬಂದ್ಬಿಟ್ಟಾಮ್ಮಾ ಇಲ್ಲಿಗೆ… (ದುಃಖವನ್ನು ತಡೆಯಲಾರದೆ) ಬಂದು ಮನೇಲಿ ಹೆಜ್ಜೆ ಇಟ್ಟುದಿನಾನೆ ಅವ್ನೂ ಬಿದ್ಕೊಂಡಾಮ್ಮ! ಏನ್‌ ಶನೀ ಜ್ವರವೋ ಕಾಣೆ? ಒಂದ್ವಾರ್‍ದಿಂದ ನರಳ್ತಿದ್ದ… ವಯಸ್ಸಾದೋರು… ಅಮ್ಮನೂ ಆಪ್ಪನೂ ಗಟ್ಟಿಯಾಗಿದ್ರೂ… ಆವನು ಜ್ವರಾಬಂದ ಮಾರ್ನೇ ದಿನಾನೆ ಪ್ರಾಣ ಬಿಟ್ಟ!… ಅಮ್ಮನ ಗೋಳೋ… ಹೇಳೋಕ್ಕಾಗ್ದು… ಅವಳೊಂದ್ಕಡೆ ನರಳ್ತಿದ್ದಾಗ… ಡಾಕ್ಟರು… ಪಾಪ!… ದುಡ್ಡು ಕೊಟ್ರೇನೆ ಔಷ್ದ ಅಂತಾನೆ… ಮನೆಲೋ, ಗಂಜಿ ಮಾಡೋಕ್‌ ಗತಿಯಿಲ್ಲ ಇನ್‌ ನಮ್ಮಣ್ಣನ್ ಮಾತೆತ್ತಿದ್ರೋ, ನಮ್ಮಪ್ಪನಿಗೆ ಬೆಂಕಿ… ಅವನಿಗ್ಮೊದ್ಲು, ಯಾವಾಗ್ಲೋ ಹೋಗಿದ್ದಾಗ, ನೋಡೋಕ್ ಪುರ್ಸೊತ್ತಿಲ್ಲಾಂತ ನಮ್ಮಣ್ಣ ಅಂದದ್ದು ಜ್ಞಾಪ್ಕ… ನನ್ಗೋ… “ಎಷ್ಟು ಪಾಪಿಯಾದ್ರೂನೂವೆ… ಮನೇಲಿ ಹುಟ್ಟಿ ಬೆಳ್ದದ್ದು ಮರ್ತ್‌ಬಿಟ್ಟು ಸಹಾಯ ಮಾಡ್ದೆ ಇದ್ದಾನೆ! ಗಂಜೀಗೂ, ಔಷಧಕ್ಕೂ ಗತೀ ಇಲ್ದೆ ಸಾಯ್ತಾ ಬಿದ್ದಿರೋ… ಹೆತ್ತೋರ್ಗೆ… ಧರ್ಮಕ್ಕಾದ್ರೂ!” ಅಂಬೋ ಹುಚ್ಚಿನ ಮೇಲೆ ನಮ್ಮಣ್ಣನ ಹತ್ರ ಹೋದೆ… ಅವನ್ನ ಬೈದು ಏನ್‌ ಪ್ರಯೋಜ್ನ? ಅವ್ನು ಮಕ್ಕಳುಮರಿಯೋನು! ಈ ಜ್ವರಾ ಅಂಟುರೋಗ ಅಂತ್ಲೋ ಯೇನೋ… ಗೇಟ್ ಒಳ್ಗೇ ನಿಂತ್ಕೊಂಡು… “ಅವನಿಗೆ ಬರೋ ಸಂಬ್ಳಾ… ಎಲ್ಲ… ಅವನಂತಸ್ತಿಗೆ ಸರಿಯಾಗಿ ಮಾಡೊ ಖರ್ಚಗೇ ಆಗುತ್ತೇಂದ್ಬಿಟ್ಟ! ಇನ್ನೇನು! ಭಾವ ಸತ್ತಾ!… ಅವನ ಸಾವ್ನೂ ನಮ್ಮಕ್ಕನ ಹಣೇ ಬರಹಾನ್ನೂ ಜ್ಞಾನ ತಪ್ಪಿರೋ ನಮ್ಮಪ್ತನ ಸ್ಥಿತಿನೂ ಇದೆಲ್ಲಾ ನೋಡ್ತಾ… ಬಡ್ಕೊಳ್‌ತಾ ಪ್ರಾಣ ಬಿಟ್ಲು ನಮ್ಮಮ್ಮನೂವೆ! (ಬಿಕ್ಕಿ ಬಿಕ್ಕಿ ಅಳುತ್ತಾ)… ನಮ್ಮಕ್ನೋ, ಗಂಡನ್ನೂ ಕಳ್ಕೊಂಡು… ತಾಯೀನೂ ಕಳ್ಕೊಂಡು ಕೂಸ್ನ ಒಂದ್ಕಡೇ ಕಿತ್ತ್ ಎಸೆದ್ಬಿಟ್ಟು… ತಲೆ ಚಚ್ಕೊಳ್ತಿದ್ಲು… ಒಂದು ಮೂಲೇಲಿ!… ಏನುಮಾಡೋದಮ್ಮಾ ನಾನೀ ಗಲಾಟೇಲಿ!? ನಂ ಭಾವನ್ನ ಸಾಗ್ಸಿ ಅವನಿಗ್ಬೇಕಾದ ಸೌದೆ ಸಂಪಾದ್ಸಿ… ಅವನ್ಸುಟ್ಟು… ತಿರುಗ್ಬಂದ ಮಾರ್ನೆದಿನಾನೆ… ನಮ್ಮಮ್ಮನೂ ಹೋದದ್ದು… ಏನ್ ಮಾಡೋದ್ ನಾನು!… ಅವಳನ್ನ್ ಸಾಗ್ಸೋದೆ? ಜ್ಞಾನ ಇಲ್ದೆ ಬಿದ್ದಿದ್ದ ನಮ್ಮಪ್ಪನ್ನ ನೋಡಿಕೊಳ್ಳೋದೆ? ನಮ್ಮಕ್ಕನ್ಗೆ ಧೈರ್ಯ ಹೇಳೋದೇ… ಇಲ್ಲ… ಆ ಕಿರ್ಲ್‌ತಿದ್ದ ಕೂಸನ್ನ ಸುದಾರ್ಸೋದೇ… ದಿಕ್ಕೇ ತೋಚದೆ ಹೋಯ್ತು (ಬಿಕ್ಕಿ ಬಿಕ್ಕಿ ಅಳುವನು. ಮಗುವಿನ ತಾಯಿಯು ಹತ್ತಿರ ನಿಂತು ಅವನ ತಲೆಯನ್ನು ಸವರಲು… ಅಲ್ಪ ರೋಷದಿಂದ) ನಂ ಮನೆ ಗೋಳ್ ನಿಮಗ್ಯಾಕಮ್ಮಾ… ನನಗ್ಯಾಕೆ ನೀವ್ ಹೇಳಿ ಕಳ್ಸಿದ್ದು?
  • ತಾಯಿ: (ಕಿಟ್ಟಿಯ ಕೈಯನ್ನು ಹಿಡಿದು) ಕೂತ್ಕೋ ಕಿಟ್ಟಿ ಹೇಳ್ತೇನೆ! ಕಿಟ್ಟೀಂತ ಕೂಗ್ಬಹುದೇ ನಿನ್ನ?

Bschandrasgr (ಚರ್ಚೆ) ೧೩:೩೩, ೨೯ ಮಾರ್ಚ್ ೨೦೨೦ (UTC)