ವಿಷಯಕ್ಕೆ ಹೋಗು

ಚರಕ ಮಹರ್ಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚರಕ ಸ್ಮಾರಕ, ಪತಂಜಲಿ ಯೋಗ ಕ್ಯಾಂಪಸ್, ಹರಿದ್ವಾರ, ಭಾರತ

ಹಿಂದೂ ವೈದ್ಯ ಪದ್ದತಿಯ ಮತ್ತೊಂದು ಮಹತ್ವದ ಹೆಸರು ಚರಕ ಮಹರ್ಷಿಯವರದ್ದು. ಆ ಕಾಲದಲ್ಲಿ ಆಯುರ್ವೇದ ಪದ್ದತಿಯನ್ನ ಚಾಲ್ತಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು 'ಚರಕ ಸಂಹಿತೆ' ಎಂಬ ಆಯುರ್ವೇದ ಗ್ರಂಥವನ್ನ ರಚಿಸಿದ್ದಾರೆ . ಚರಕ ಮಹರ್ಷಿಗಳು, ಆತ್ರೇಯ ಮುನಿಯು ರಚಿಸಿದ ಅದ್ಭುತ ವೈದ್ಯ ಗ್ರಂಥವನ್ನು ಇವರು ದೀರ್ಘಕಾಲ ಅಭ್ಯಸಿಸಿದರು. ತದ ನಂತರ ಆ ಗ್ರಂಥದಲ್ಲಿನ ಮುಖ್ಯಾಂಶಗಳನ್ನ ಪರಿಷ್ಕರಿಸಿ, ಅದರಲ್ಲಿ ತಮ್ಮ ಹೊಸ ಆವಿಷ್ಕಾರ, ಚಿಂತನೆ, ಅನುಭವವನ್ನೆಲ್ಲಾ ಸೇರಿಸಿ ಚರಕ ಸಂಹಿತೆ ಎಂಬ ಗ್ರಂಥವನ್ನ ರಚಿಸಿದರು.

ಸಾಧನೆಗಳು

[ಬದಲಾಯಿಸಿ]

ಅಷ್ಟೇ ಅಲ್ಲದೇ ಆ ಕಾಲದಲ್ಲಿ ಲಭ್ಯವಿದ್ದ ವೈದ್ಯ ಪದ್ದತಿಗಳನ್ನೆಲ್ಲ ಎಂಟು ಭಾಗಗಳಲ್ಲಿ ವಿಂಗಡಿಸಿ, ಅದನ್ನ ಅಷ್ಟಾಂಗ ಆಯುರ್ವೇದ ಎಂದು ಹೆಸರಿಸಿದರು. ಈ ಅಷ್ಟಾಂಗ ಆಯುರ್ವೇದದಲ್ಲಿ ಖಾಯಿಲೆಗಳ ಗುಣಲಕ್ಷಣಗಳು, ಚಿಕಿತ್ಸಾ ವಿಧಾನಗಳು ಮತ್ತು ರೋಗಗಳ ಮುನ್ನೆಚ್ಚರಿಕೆಯ ಕುರಿತು ದೀರ್ಘ ವಿವರಣೆಗಳು ಸಹ ನಾವು ಕಾಣಬಹುದು. []

ವಿಶೇಷವಾಗಿ ಈ ಗ್ರಂಥದಲ್ಲಿ ಕಣ್ಣು, ಮೂಗು, ಕಿವಿ, ಗಂಟಲುಗಳಿಗೆ ತಗಲುವ ರೋಗಗಳ ಕುರಿತಾಗಿ ವಿವರಣೆಗಳಿವೆ. ಚರಕ ಮಹರ್ಷಿ, ತಮ್ಮ ಗ್ರಂಥದಲ್ಲಿ ನೂರಕ್ಕೂ ಹೆಚ್ಚು ಬಗೆಯ ಜ್ವರಗಳು, ಹೃದ್ರೋಗ, ಪಿತ್ತಕಾಮಾಲೆ, ಮಧುಮೇಹ, ಸಿಡುಬು, ಕುಷ್ಠ ರೋಗ, ಕ್ಷಯ, ಮಾನಸಿಕ ಖಾಯಿಲೆ, ಹೀಗೆ ಹತ್ತು ಹಲವಾರು ಖಾಯಿಲೆಗಳ ಬಗ್ಗೆ ವಿವರವಾಗಿ ಪ್ರಸ್ತಾಪಿಸಿದ್ದಾರೆ.[]

ಅಷ್ಟೇ ಅಲ್ಲದೇ, ೫೦೦ಕ್ಕೂ ಹೆಚ್ಚು ಗಿಡಮೂಲಿಕೆಗಳ ಬಗ್ಗೆ ಮಾಹಿತಿ ಮತ್ತು ಅವುಗಳ ಉಪಯೋಗಗಳ ಕುರಿತು ಚರಕ ಸಂಹಿತೆಯಲ್ಲಿ ಉಲ್ಲೇಖಿಸಿದ್ದಾರೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಚರಕ ಅನುಸರಿಸುತ್ತಿದ್ದ ವಿಧಾನಗಳು, ಇಂದಿಗೂ ಪ್ರಸ್ತುತವಾಗಿವೆ ಎನ್ನಲಾಗುತ್ತದೆ. ಹೀಗಾಗಿ ಚರಕ ಸಂಹಿತೆಯೂ ಇಂಗ್ಲೀಷ್, ಜರ್ಮನ್, ಚೀನಾ ಹಾಗೂ ಅರೇಬಿಕ್ ಭಾಷೆಗಳಿಗೆ ಅನುವಾದಗೊಂಡಿದೆ.

ಗ್ರಂಥ

[ಬದಲಾಯಿಸಿ]

ಚರಕ ಸಂಹಿತೆ

ಖಾಯಿಲೆಗಳ ಮಾಹಿತಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://www.myguru.in/The-Maharshi-Charak.htm
  2. "ಆರ್ಕೈವ್ ನಕಲು". Archived from the original on 2015-05-05. Retrieved 2013-07-18.