ವಿಷಯಕ್ಕೆ ಹೋಗು

ಚಮಕಿ ಬಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆಂಪು ಚಮಕಿ ಬಿಲ್ಲೆಗಳು

ಚಮಕಿ ಬಿಲ್ಲೆಯು (ಮಿನುಗು ಬಟ್ಟು) ಅಲಂಕಾರಿಕ ಉದ್ದೇಶಗಳಿಗೆ ಬಳಸಲಾದ ಬಿಲ್ಲೆಯಾಕಾರದ ಮಣಿ. ಹಿಂದಿನ ಶತಮಾನಗಳಲ್ಲಿ, ಅವುಗಳನ್ನು ಹೊಳೆಯುವ ಲೋಹಗಳಿಂದ ತಯಾರಿಸಲಾಗುತ್ತಿತ್ತು. ಇಂದು, ಚಮಕಿ ಬಿಲ್ಲೆಗಳನ್ನು ಬಹುತೇಕ ವೇಳೆ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ.[] ಇವು ಅನೇಕ ಬಣ್ಣಗಳು ಹಾಗೂ ಜ್ಯಾಮಿತೀಯ ಆಕಾರಗಳಲ್ಲಿ ಲಭ್ಯವಿವೆ. ಚಮಕಿ ಬಿಲ್ಲೆಗಳನ್ನು ಸಾಮಾನ್ಯವಾಗಿ ಉಡುಗೆಗಳು, ಆಭರಣಗಳು, ಚೀಲಗಳು, ಶೂಗಳು ಹಾಗೂ ಅನೇಕ ಇತರ ಬಿಡಿಭಾಗಗಳ ಮೇಲೆ ಬಳಸಲಾಗುತ್ತದೆ.

ಚಮಕಿ ಬಿಲ್ಲೆಗಳನ್ನು ಕೆಲವೊಮ್ಮೆ ನಕ್ಕಿ ಎಂದೂ ಕರೆಯಲಾಗುತ್ತದೆ, ಆದರೆ ತಾಂತ್ರಿಕವಾಗಿ ಭಿನ್ನವಾಗಿವೆ. ವೇಷಭೂಷಣದಲ್ಲಿ, ಚಮಕಿ ಬಿಲ್ಲೆಗಳು ಮಧ್ಯದಲ್ಲಿ ರಂಧ್ರವನ್ನು ಹೊಂದಿರುತ್ತವೆ, ಆದರೆ ನಕ್ಕಿಗಳು ಮೇಲೆ ರಂಧ್ರವನ್ನು ಹೊಂದಿರುತ್ತವೆ. ಚಮಕಿ ಬಿಲ್ಲೆಗಳನ್ನು ಬಟ್ಟೆಗೆ ಚಪ್ಪಟೆಯಾಗಿ ಹೊಲಿಯಬಹುದು. ಇದರಿಂದ ಅವು ಸ್ಥಿರವಾಗಿ ನಿಲ್ಲುತ್ತವೆ ಮತ್ತು ಉದುರಿ ಹೋಗುವ ಸಾಧ್ಯತೆ ಕಡಿಮೆಯಾಗುತ್ತದೆ; ಅಥವಾ ಅವನ್ನು ಒಂದೇ ಒಂದು ಬಿಂದುವಿನಲ್ಲಿ ಹೊಲೆಯಬಹುದು. ಇದರಿಂದ ತೂಗಾಡಿ ಸುಲಭವಾಗಿ ಚಲಿಸುತ್ತವೆ ಮತ್ತು ಹೆಚ್ಚು ಬೆಳಕನ್ನು ಹಿಡಿದಿಡುತ್ತವೆ.

ಉಲ್ಲೇಖಗಳು

[ಬದಲಾಯಿಸಿ]