ಚಪ್ಪರದವರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಪ್ಪರದವರೆ ಬಳ್ಳಿ

ಪೋಷಕಾಂಶಗಳು[ಬದಲಾಯಿಸಿ]

೧೦೦ ಗ್ರಾಂ ಚಪ್ಪರದವರೆ ಕಾಯಿಯಲ್ಲಿ ದೊರಕುವ ಪೋಷಕಾಂಶಗಳು

ಪಿಷ್ಟ ೮.೪೦ ಗ್ರಾಂ
ಸಸಾರಜನಕ ೫.೬೦ ಗ್ರಾಂ
ಕೊಬ್ಬು ೦.೪ ಗ್ರಾಂ
ಸುಣ್ಣ ೦.೪೯ ಮಿಲಿಗ್ರಾಂ
ರಂಜಕ ೦.೬೧ ಮಿಲಿಗ್ರಾಂ
ಕಬ್ಬಿಣ ೨.೦ ಮಿಲಿಗ್ರಾಂ
ಬಿ೧-ಜೀವಸತ್ವ ೮೦.೦ ಎಂ. ಸಿ. ಜಿ.
ಬಿ೨-ಜೀವಸತ್ವ ೧೦.೦ ಎಂ. ಸಿ. ಜಿ.
ಸಿ-ಜೀವಸತ್ವ ೨೫.೦ ಮಿಲಿಗ್ರಾಂ

Fabaceae
Temporal range: PalaeoceneRecent[೧]
Flowering kudzu.jpg
Kudzu (Pueraria lobata)
Egg fossil classification
Kingdom:
Plantae
(unranked):
(unranked):
Eudicots
(unranked):
Order:
Family:
Fabaceae

Type genus
Faba (now included in Vicia)
Mill.
Subfamilies[೪]
Biodiversity
Fabaceae#Genera
The biomes occupied by Fabaceae
Fabaceae distribution map. Legumes are found in four major biomes: rain forest, temperate, grass, and succulent.[೫]
Synonym (taxonomy)

ಸಸ್ಯ ಶಾಸ್ತ್ರೀಯ ವಿಂಗಡಣೆ[ಬದಲಾಯಿಸಿ]

ದಾಲಿಕಾಸ್ ಲ್ಯಾಬ್ ಲ್ಯಾಬ್ ತಳಿ ಲಿಗ್ನೋಸಸ್ (dholicos lablab varnosus lignosus)

ಕುಟುಂಬ[ಬದಲಾಯಿಸಿ]

ಫ್ಯಾಬೇಸಿ (fabaceae) ಚಪ್ಪರದವರೆಯು ನಮ್ಮ ದೇಶದಲ್ಲೇ ಹುಟ್ಟಿ ಬೆಳೆದ ಸ್ವದೇಶೀ ತರಕಾರಿ pendal beans.[೬]

ಸಸ್ಯಮೂಲ-ಪರಿಚಯ[ಬದಲಾಯಿಸಿ]

ಈ ಬೆಳೆಗೆ ಈ ಹೆಸರು ಬರಲು ಕಾರಣವೆಂದರೆ ಅದನ್ನು ಹಬ್ಬಿಸುವಂತಹ ಚಪ್ಪರದ ಆಸರೆ.ಇದರೆ ಎಳೇಕಾಯಿ ಹಾಗೂ ಬೀಜ ಉತ್ತಮ ತರಕಾರಿ ಎನ್ನಿಸಿವೆ.ಇದನ್ನು ನಮ್ಮ ದೇಶವಲ್ಲದೆ ಚೀನಾ,ತೈವಾನ್,ಜಾವಾ,ಮಲಯಾ,ಹಾಂಕಾಂಗ್ ಮುಂತಾದ ದೇಶಗಳಲ್ಲಿ ಬಳಸುತ್ತಾರೆ. ಕೋಲಾರದ ಕಡೆ ಇದನ್ನು ಚಕ್ಕರೆಕಾಯಿ ಎನ್ನುತ್ತಾರೆ.

ಔಷಧೀಯ ಗುಣಗಳು[ಬದಲಾಯಿಸಿ]

  • ಇದರಿಂದ ತಯಾರಿಸಿದ 'ಸೂಪ್'ಅನ್ನು ಉಪ್ಪಿನೂಂದಿಗೆ ಸೇವಿಸಿದರೆ ಕೆಮ್ಮು ನಿವಾರಿಸುತ್ತದೆ ಮತ್ತು ಮೂತ್ರೋತ್ತೇಜಕವಾಗಿ ಸಹಾಯಕವಾಗುತ್ತದೆ.
  • ಬೀಜವನ್ನು ಅರೆದು ಮುಖಕ್ಕೆ ಹಚ್ಚಿದರೆ ಬೇಡವಾದ ಕಲೆ ತೆಗೆಯಬಹುದು.
  • ಇದರೊಂದಿಗೆ ನಿಂಬೆರಸ ಸೇರಿಸಿ ಅರೆದು ಉಪಯೋಗ ಮಾಡುದರಿಂದ ಚರ್ಮದ ಬಣ್ಣ ತಿಳಿಯಾಗುತ್ತದೆ.
  • ಎಲೆಗಳನ್ನು ಅರೆದು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆ ಹೊಟ್ಟು ನಿವಾರಣೆಯಗುತ್ತದೆ.

ತಿಂಡಿ ತಿನಿಸುಗಳು[ಬದಲಾಯಿಸಿ]

ಇದರ ಎಳೆಯ ಕಾಯಿಗಳಿಂದ ರುಚಿಯಾದ ಪಲ್ಯ,ಹುಳಿ,ಸಾಂಬಾರುಗಳನ್ನು ತಯಾರು ಮಾಡಿ ಉಪಯೋಗಿಸುತ್ತಾರೆ.

ಮಣ್ಣು ಮತ್ತು ಹವಾಗುಣ[ಬದಲಾಯಿಸಿ]

ಇದನ್ನು ಎಂತಹ ಭೂಮಿಯಲ್ಲಾದರರೂ ಬೆಳೆಯಬಹುದು.ಆದರೆ ನೀರು ನಿಲ್ಲಬಾರದು.ಒಳಪದರಗಳಲ್ಲಿ ಗೊರಜಿಲ್ಲದ ಮರಳು ಮಿಶ್ರಿತ ಕೆಂಪುಗೋಡು ಅತ್ಯುತ್ತಮ. ಹವಾಗುಣವು ಹೆಚ್ಚು ಬಿಸಿಲಿನಿಂದ ಕೂಡಿದ್ದರೆ ಒಳ್ಳೆಯದು.ಬಳ್ಳಿಯ ಬೆಳೆವಣಿಗೆ ಮಳೆಗಾಲದಲ್ಲಿ ಹೆಚ್ಚಿದ್ದರೆ ಚಳಿಗಾಲದಲ್ಲಿ ಕಡಿಮೆ ಇರುತ್ತದೆ.ಇದು ಉಷ್ಣವಲಯದ ಬೆಳೆ ಆಗಿದ್ದರೂ ಅಧಿಕ ಮಳೆಯನ್ನು ತಡೆದುಕೊಳ್ಳಲಾರದು.ಈ ಬೆಳೆಯನ್ನು ಬೆಳೆಯನ್ನು ಬಿತ್ತಲು ಜುಲೈ-ಆಗಸ್ಟ್ ಉತ್ತಮ.

ತಳಿಗಳು[ಬದಲಾಯಿಸಿ]

ಇದರಲ್ಲಿ ಅನೇಕ ಬಗೆಯ ವಿಧಗಳಿದ್ದರೂ ನಿರ್ದಿಷ್ಟವಾದ ತಳಿಗಳು ಬೇಸಾಯದಲ್ಲಿ ಇಲ್ಲ. ಕಾಯಿಗಳ ಬಣ್ಣ, ಆಕಾರದ ಮೇಲೆ ಇವುಗಳನ್ನು ಈ ರೀತಿ ವಿಂಗಡಿಸಲಾಗಿದೆ. ಬಣ್ಣಗಳಲ್ಲಿ ಹಸಿರು ಬಿಳಿ ಮಿಶ್ರಿತ ಹಸಿರು ಮತ್ತು ಬಿಳಿ ಹಳದಿ ವಿಧಗಳು ಕಂಡುಬಂದಿವೆ. ಕೆಲವು ನೀಳವಾದ ಮತ್ತು ಉದ್ದವಾದ ಕಾಯಿಗಳನ್ನು ಹೊಂದಿದರೆ ಮತ್ತೆ ಕೆಲವು ಕುಡುಗೋಲಿನಂತೆ ಬಾಗಿರುತ್ತವೆ.

ಬೀಜ ಮತ್ತು ಬಿತ್ತನೆ[ಬದಲಾಯಿಸಿ]

ಸಾಮಾನ್ಯವಾಗಿ ಇದನ್ನು ಬೀಜವನ್ನು ಬಿತ್ತಿಯೇ ಬೆಳೆಸುತ್ತಾರೆ.ಪ್ರತಿ ಎಕರೆಗೆ ಬಿತ್ತಲು ಉತ್ತಮ ಗುಣಮಟ್ಟದ ೧.೫ ರಿಂದ ೨.೦ ಕೀ.ಗ್ರಾಂ. ಬೀಜ ಬೇಕಾಗುತ್ತದೆ. ಬಿತ್ತನೆಗೆ ಚನ್ನಾಗಿ ಬೆಳೆದು ಒಣಗಿದ ಕಾಯಿಗಳಿಂದ ಬೀಜವನ್ನು ಆರಿಸಿಕೊಳ್ಳಬೇಕು. ಭೂಮಿಯನ್ನು ಆಳವಾಗಿ ೨-೩ ಬಾರಿ ಉತ್ತು ಸಮ ಮಾಡಿ ೩ಮೀ(೧೦ ಅಡಿ)ಅಂತರದಲ್ಲಿ ೬೦ ಸೆಂ.ಮೀ(೨ ಅಡಿ) ಗಾತ್ರದ ಗುಂಡಿಗಳನ್ನು ತೆಗೆದು ಎಕರೆಗೆ ೪ ರಿಂದ ೫ ಟನ್ ಕೊಟ್ಟಿಗೆ ಗೊಬ್ಬರದ ಜೊತೆಗೆ ಮೇಲ್ಮಣ್ಣು ಸೇರಿಸಿ ಪಾತಿ ತುಂಬಿ ನೀರು ಹಾಯಿಸಬೇಕು. ಪ್ರತಿ ಗುಂಡಿಗೆ ೩ ರಿಂದ ೪ ಕಾಳು ಬಿತ್ತಬೇಕು. ಬಿತ್ತಿದ ಬೀಜಗಳು ೪-೫ ದಿನಗಳಲ್ಲಿ ಮೊಳೆಯುತ್ತವೆ.

ನೀರಾವರಿ ಮತ್ತು ಅಂತರಬೇಸಾಯ[ಬದಲಾಯಿಸಿ]

ಮಣ್ಣು ಮತ್ತು ಹವಾಗುಣವನ್ನು ಅನುಸರಿಸಿ ನೀರನ್ನು ಒದಗಿಸಬೇಕು.ಮಳೆ ಇಲ್ಲದ ಸಮಯದಲ್ಲಿ ಮತ್ತು ಬೇಸಿಗೆಯಲ್ಲಿ ಹೆಚ್ಚು ನೀರು ಕೊಟ್ಟರೆ ಮಳೆಗಾಲದಲ್ಲಿ ಕಡಿಮೆ ನೀರು ಸಾಕು.

ರೋಗಗಳು[ಬದಲಾಯಿಸಿ]

ರೋಗಕ್ಕೆ ಗುರಿಯಾದ ಗಿಡ ಇದ್ದಕ್ಕಿದ್ದಂತೆ ಒಣಗಿ ಸತ್ತುಹೋಗುತ್ತದೆ. ಅಂತಹ ಬಳ್ಳಿಗಳನ್ನು ಬೇರು ಸಹಿತ ಕಿತ್ತು ನಾಶಮಾಡಬೇಕು.

ಉಲ್ಲೇಖ[ಬದಲಾಯಿಸಿ]

  1. Wojciechowski, M. F.; Lavin, M.; Sanderson, M. J. (2004). "A phylogeny of legumes (Leguminosae) based on analysis of the plastid matK gene resolves many well-supported sub clades within the family". American Journal of Botany. 91 (11): 1846–62. doi:10.3732/ajb.91.11.1846. PMID 21652332.{{cite journal}}: CS1 maint: multiple names: authors list (link)
  2. Angiosperm Phylogeny Group (2009). "An update of the Angiosperm Phylogeny Group classification for the orders and families of flowering plants: APG III" (PDF). Botanical Journal of the Linnean Society. 161 (2): 105–121. doi:10.1111/j.1095-8339.2009.00996.x. Retrieved 4 ಫೆಬ್ರವರಿ 2014. {{cite journal}}: Unknown parameter |deadurl= ignored (help)
  3. Watson L.; Dallwitz, M. J. (1 ಜೂನ್ 2007). "The families of flowering plants: Leguminosae". Archived from the original on 8 ಅಕ್ಟೋಬರ್ 2017. Retrieved 9 ಫೆಬ್ರವರಿ 2008.
  4. "GRIN-CA". Archived from the original on 26 ಸೆಪ್ಟೆಂಬರ್ 2007. Retrieved 1 ಸೆಪ್ಟೆಂಬರ್ 2002.
  5. ಉಲ್ಲೇಖ ದೋಷ: Invalid <ref> tag; no text was provided for refs named Schrire2
  6. http://www.toxicologycentre.com/English/plants/English/amara.html

http://www.toxicologycentre.com/English/plants/English/amara.html