ಚಂದ್ರಕಲಾ ನಂದಾವರ
ಗೋಚರ
ಬರಹಗಾರ್ತಿ,ಕವಯತ್ರಿ,ಸ್ರೀವಾದೀ ಚಿಂತಕಿಯಾಗಿ ಚಂದ್ರಕಲಾನಂದಾವರ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು.
ಜನನ ಜೀವನ
[ಬದಲಾಯಿಸಿ]- ೧೯೫೦ ನವೆಂಬರ್ ೨೧ರಂದು ಮಂಗಳೂರು ತಾಲ್ಲೂಕಿನ ಕೊಂಡಾಣದಲ್ಲಿ ಇವರು ಜನಿಸಿದರು.ತಂದೆ ವಾಮನ ವಿದ್ವಾನ್. ತಾಯಿ ಸುಂದರಿ.
- ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿಪದವಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನು ಪಡೆದರು. [೧]
- ತಮ್ಮ ೨೭ನೇ ವಯಸ್ಸಿನಲ್ಲಿ ವಾಮನ ನಂದಾವರ ಇವರನ್ನು ಮದುವೆಯಾದರು. ಹೇಮಶ್ರೀ ಮತ್ತು ಸುಧಾಂಶು ಎನ್ನುವ ಇಬ್ಬರು ಮಕ್ಕಳಿದ್ದಾರೆ.
- ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷೆಯಾಗಿ ಅವರು ಕೆಲಸ ಮಾಡಿದ್ದಾರೆ.
- ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕರ ಕ್ರೆಡಿತ್ ಕೋಆಪರೇಟಿವ್ ಸೊಸೈಟಿಯ ನಿರ್ದೇಶಕಿಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದಕ್ಷಿಣ ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
- ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ, ದಕ್ಷಿಣ ಕನ್ನಡ ಜಿಲ್ಲಾ ನಗರ ಕೇಂದ್ರ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯತ್ವದ ಗೌರವ ಇವರಿಗೆ ಸಂದಿದೆ.
ಕೃತಿಗಳು
[ಬದಲಾಯಿಸಿ]ಸಾಹಿತ್ಯ ಕೃತಿ
[ಬದಲಾಯಿಸಿ]- ಪ್ರಾಧ್ಯಾಪಕ ಎಂ. ಮರಿಯಪ್ಪ ಭಟ್ಟರು
ಕವನ ಸಂಕಲನ
[ಬದಲಾಯಿಸಿ]- ನಾವು ಪ್ರಾಮಾಣಿಕರೇ
- ಮತ್ತೆ ಚಿತ್ತಾರ ಬರೆ ಗೆಳತಿ
ಕಥಾ ಸಂಕಲನ
[ಬದಲಾಯಿಸಿ]- ಮುಖಾಮುಖಿ
- ಭೂಮಿ ದುಂಡಗಿದೆ
- ಮನೆಲೆಕ್ಕ
ಕಾದಾಂಬರಿ
[ಬದಲಾಯಿಸಿ]- ಯಾರಿಗೆ ಯಾರುಂಟು?
ಪ್ರಬಂಧ ಸಂಕಲನ
[ಬದಲಾಯಿಸಿ]- ಹೊಸ್ತಿಲಿಂದೀಚೆಗೆ
ವಿಮರ್ಶಾ ಕೃತಿ
[ಬದಲಾಯಿಸಿ]- ಕಯ್ಯಾರರ ಕಾವ್ಯ
ಪ್ರಶಸ್ತಿಗಳು
[ಬದಲಾಯಿಸಿ]- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ [೨]
- ರಾಜ್ಯ ಮಟ್ಟದ ಪ್ರಶಸ್ತಿ [೩]
- ಕೌದೆಆಂಡಾಲ್ ಪ್ರಶಸ್ತಿ [೪]
- ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ [೫]
- ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ[೬]
ಉಲ್ಲೇಖ
[ಬದಲಾಯಿಸಿ]- ↑ ಚಂದ್ರಗಿರಿ ನಾಡೋಜ ಡಾ.ಸಾ.ರಾ.ಅಬೂಬಕ್ಕರ್ ಅಭಿಂಧನಾ ಗ್ರಂಥ,ಸಂಪಾದಕರು ಡಾ. ಸಬೀಹಾ, ಪ್ರಕಾಶಾಕರು ಸಿರಿವರ ಪ್ರಕಾಶನ ಬೆಂಗಳೂರು,ಪ್ರಥಮ ಮುದ್ರಣ ೨೦೦೯, ಪುಟ ಸಂಖ್ಯೆ ೩೭೧
- ↑ ಚಂದ್ರಗಿರಿ ನಾಡೋಜ ಡಾ.ಸಾ.ರಾ.ಅಬೂಬಕ್ಕರ್ ಅಭಿಂಧನಾ ಗ್ರಂಥ,ಸಂಪಾದಕರು ಡಾ. ಸಬೀಹಾ, ಪ್ರಕಾಶಾಕರು ಸಿರಿವರ ಪ್ರಕಾಶನ ಬೆಂಗಳೂರು,ಪ್ರಥಮ ಮುದ್ರಣ ೨೦೦೯, ಪುಟ ಸಂಖ್ಯೆ ೩೭೧

- ↑ ಚಂದ್ರಗಿರಿ ನಾಡೋಜ ಡಾ.ಸಾ.ರಾ.ಅಬೂಬಕ್ಕರ್ ಅಭಿಂಧನಾ ಗ್ರಂಥ, ಸಂಪಾದಕರು ಡಾ. ಸಬೀಹಾ, ಪ್ರಕಾಶಾಕರು ಸಿರಿವರ ಪ್ರಕಾಶನ ಬೆಂಗಳೂರು,ಪ್ರಥಮ ಮುದ್ರಣ ೨೦೦೯, ಪುಟ ಸಂಖ್ಯೆ ೩೭೧