ಘುಗನಿ
ಘುಗನಿ ಭಾರತೀಯ ಉಪಖಂಡಕ್ಕೆ ಸ್ಥಳೀಯವಾದ ಒಂದು ಸಾಯಂಕಾಲದ ಲಘು ಆಹಾರವಾಗಿದೆ, ಮತ್ತು ವಿಶೇಷವಾಗಿ ಪೂರ್ವ ಭಾರತದಲ್ಲಿ (ಭಾರತದ ರಾಜ್ಯಗಳಾದ ಬಿಹಾರ್, ಝಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ), ಈಶಾನ್ಯ ಭಾರತ (ಭಾರತದ ರಾಜ್ಯಗಳಾದ ಅಸ್ಸಾಂ ಮತ್ತು ತ್ರಿಪುರಾ) ಮತ್ತು ಬಾಂಗ್ಲಾದೇಶದ ಭಾಗಗಳಲ್ಲಿ ಜನಪ್ರಿಯವಾಗಿದೆ. ಉದ್ದಿನ ಬೇಳೆ, ಹಳದಿ ಒಣ ಬಟಾಣಿ, ಅಥವಾ ಬಿಳಿ ಒಣ ಬಟಾಣಿಯನ್ನು ಗ್ರೇವಿಯಲ್ಲಿ ಸಾಂಪ್ರದಾಯಿಕ ಪೂರ್ವ ಭಾರತೀಯ ಶೈಲಿಯಲ್ಲಿ ಬೇಯಿಸಲಾಗುತ್ತದೆ. ಇದನ್ನು ಮಂಡಕ್ಕಿ (ಕುರ್ಮುರಾ) ಮತ್ತು ಕೆಲವೊಮ್ಮೆ ಬಿಸಿ ಈರುಳ್ಳಿ ಪಕೋಡಾ ಅಥವಾ ಭಜಿಯಾದೊಂದಿಗೆ ಬಡಿಸಲಾಗುತ್ತದೆ. ಇದನ್ನು ಪೂರಿಯೊಂದಿಗೂ ಬಡಿಸಲಾಗುತ್ತದೆ. ಇದರ ಕೆಲವು ಬಗೆಗಳು ಮೇಕೆ ಅಥವಾ ಕುರುಮರಿ ಅಥವಾ ಕೋಳಿಯಂತಹ ಮಾಂಸವನ್ನು ಒಳಗೊಂಡಿರುತ್ತವೆ. ಬಹುತೇಕವಾಗಿ ರುಚಿಗೊಳಿಸುವುದಕ್ಕಾಗಿ ಮಾಂಸವನ್ನು ಸಾಮಾನ್ಯವಾಗಿ ಕೊಚ್ಚಲಾಗುತ್ತದೆ ಅಥವಾ ತುತ್ತಿನ ಗಾತ್ರದ ಚೂರುಗಳಾಗಿ ತುಂಡರಿಸಲಾಗುತ್ತದೆ. ಇದು ಕೊಲ್ಕತಾದಲ್ಲಿ ಸಾಮಾನ್ಯ ಮತ್ತು ಅಗ್ಗದ ಆಹಾರವಾಗಿದೆ. ಮಂಗ್ಷೇರ್ ಘುಗನಿಯನ್ನು "ಕೋಲ್ಕಟಾದ ಟ್ರೇಡ್‍ಮಾರ್ಕ್" ಎಂದು ವರ್ಣಿಸಲಾಗಿದೆ.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Ghugni recipe Archived 2019-12-30 ವೇಬ್ಯಾಕ್ ಮೆಷಿನ್ ನಲ್ಲಿ.
- Bangla Recipe