ಘಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಘಾರಿ ಅಥವಾ ಸೂರತಿ ಘಾರಿ ಸೂರತ್‍ನ ಒಂದು ಗುಜರಾತಿ ಸಿಹಿ ಖಾದ್ಯವಾಗಿದೆ. ಘಾರಿಯನ್ನು ಪೂರಿ ಹಿಟ್ಟು, ಹಾಲಿನ ಖೋವಾ, ತುಪ್ಪ ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ದುಂಡನೆಯ ಆಕಾರದ ತುಂಡುಗಳನ್ನು ಮಾಡಿಕೊಂಡು ಒಳಗೆ ಸಿಹಿ ಹೂರಣವನ್ನು ತುಂಬಿಸಲಾಗುತ್ತದೆ. ಇದನ್ನು ಮುಖ್ಯವಾಗಿ ಚಾಂದನಿ ಪಾಡ್ವಾ ಹಬ್ಬದಂದು ಸೇವಿಸಲಾಗುತ್ತದೆ.[೧] ಇದು ಅನೇಕ ಬಗೆಗಳು ಮತ್ತು ರುಚಿಗಳಲ್ಲಿ ಕೂಡ ಲಭ್ಯವಿದೆ, ಉದಾಹರಣೆಗೆ ಪಿಸ್ತಾ, ಬಾದಾಮಿ ಏಲಕ್ಕಿ ಮತ್ತು ಖೋವಾ.[೨]

ತಾತ್ಯಾ ಟೋಪೆಗಾಗಿ ದೇವ್‍ಶಂಕರ್ ಶುಕ್ಲಾ ಘಾರಿಯನ್ನು ತಯಾರಿಸಿದರು. ೧೮೫೭ರಲ್ಲಿ ಅವರಿಗೆ ಮತ್ತು ಆ ಸ್ವಾತಂತ್ರ್ಯ ಹೋರಾಟಗಾರನ ಸೈನಿಕರಿಗೆ ಹೆಚ್ಚಿನ ಶಕ್ತಿಯನ್ನು ನೀಡುವುದು. ಆದರೆ ಇದನ್ನು ಅಮಂಗಳಕರ ಸಂದರ್ಭಗಳಲ್ಲಿ ಕೂಡ ಸೇವಿಸಲ್ಪಡುವುದು ಆರಂಭವಾಯಿತು, ವಿಶೇಷವಾಗಿ ಕೆಲವು ಜಾತಿಗಳ ಜನರು ಸ್ಮಶಾನದಲ್ಲಿ ಮೃತರ ಆತ್ಮದ ಶಾಂತಿಗಾಗಿ ಸೇವಿಸುತ್ತಿದ್ದರು.[೩]

ಉಲ್ಲೇಖಗಳು[ಬದಲಾಯಿಸಿ]

  1. Surati Ghari Archived 2020-02-04 ವೇಬ್ಯಾಕ್ ಮೆಷಿನ್ ನಲ್ಲಿ.
  2. PTI (25 October 2010). "Surat celebrates Chandi Padvo festival". DailyBhaskar.com. Retrieved 31 August 2018.
  3. Bhatt, Himansshu (28 October 2012). "1,20,000 kg of ghari will be consumed on Chandani Padva". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 31 August 2018.
"https://kn.wikipedia.org/w/index.php?title=ಘಾರಿ&oldid=1178739" ಇಂದ ಪಡೆಯಲ್ಪಟ್ಟಿದೆ