ಗ್ಲೋರಿಯಾ ವಾಂಡರ್ಬಿಲ್ಟ್
Gloria Laura Vanderbilt | |
---|---|
Born | |
Other names | Gloria Vanderbilt-DiCicco-Stokowski-Lumet-Cooper, named by Truman Capote in Answered Prayers |
Occupation(s) | American artist, actress, fashion designer, socialite |
Known for | Member of the Vanderbilt dynasty, custody battle, fashion design, mother of CNN anchor Anderson Cooper |
ಗ್ಲೋರಿಯಾ ಲಾರಾ ಮಾರ್ಗನ್ ವಾಂಡರ್ಬಿಲ್ಟ್ (ಜನನ ಫೆಬ್ರವರಿ ೨೦, ೧೯೨೪) ಒಬ್ಬ ಅಮೆರಿಕದ ಕಲಾವಿದೆ, ಲೇಖಕಿ, ಅಭಿನೇತ್ರಿ, ಆಸ್ತಿವಂತನ ಮಗಳು, ಸಮಾಜಮುಖಿ ಮಹಿಳೆಯಾಗಿದ್ದಾರೆ. ಡಿಸೈನರ್ ನೀಲಿ ಜೀನ್ಸ್ ಅನ್ನು ಅಭಿವೃದ್ಧಿಗೊಳಿಸುವರಲ್ಲಿ ಇವರು ಅಗ್ರಗಣ್ಯರೆಂದು ಖ್ಯಾತಿ ಹೊಂದಿದ್ದಾರೆ. ಅವರು ನ್ಯೂಯಾರ್ಕ್ ವಾಂಡರ್ಬಿಲ್ಡ್ ಕುಟುಂಬ ಎಂಬ ಪ್ರತಿಷ್ಠಿತ ಕುಟುಂಬದ ಸದಸ್ಯೆ ಹಾಗೂ CNNನ ಆಂಡರ್ಸನ್ ಕೂಪರ್ ರ ತಾಯಿ.
ಆರಂಭಿಕ ಜೀವನ
[ಬದಲಾಯಿಸಿ]ವಾಂಡರ್ಬಿಲ್ಟ್ ರೆಜಿನಾಲ್ಡ್ ಕ್ಲೇಪೂಲ್ ವಾಂಡರ್ಬಿಲ್ಟ್ (೧೮೮೦–೧೯೨೫)[೧][೨] ಎಂಬ ರೈಲ್ ರೋಡ್ ಸಿರಿವಂತ ವಾರಸುದಾರ ಹಾಗು ಆತನ ಎರಡನೆಯ ಹೆಂಡತಿ, ಗ್ಲೋರಿಯಾ ಮಾರ್ಗನ್ (೧೯೦೪–೧೯೬೫).[೩][೪] ರ ಏಕೈಕ ಪುತ್ರಿಯಾಗಿ ನ್ಯೂ ಯಾರ್ಕ್ ನಲ್ಲಿ ಜನಿಸಿದರು. ಅವರಿಗೆ ಎಪಿಸ್ಕೋಪಲ್ ಚರ್ಚ್ ನಲ್ಲಿ ಗ್ಲೋರಿಯಾ ಲಾರಾ ವಾಂಡರ್ಬಿಲ್ಟ್ ಎಂದು ನಾಮಕರಣ ಮಾಡಲಾಯಿತು (ಹಾಗೂ ತಂದೆಯ ಮರಣದ ನಂತರ, ತನ್ನ ತಾಯಿ ಸೇರಿದ್ದ ಕ್ಯಾಥೋಲಿಕ್ ಚರ್ಚ್ ನಲ್ಲಿ ಅದರ ವಿಧಿಗಳನ್ವಯ ನಾಮಕರಣ ಮಾಡಲಾಯಿತು).[೫] ತನ್ನ ತಂದೆಯ ಮೊದಲನೆಯ ಹೆಂಡತಿಯಾದ ಕ್ಯಾಥ್ಲೀನ್ ನೆಲ್ಸನ್ ಳ ಪುತ್ರಿಯಾಗಿ ಜನಿಸಿದ ಕ್ಯಾಥ್ಲೀನ್ ವಾಂಡರ್ಬಿಲ್ಟ್ (೧೯೦೪–೧೯೪೪).[೬] ಎಂಬ ಮಲಸಹೋದರಿಯೊಬ್ಬರು ಇವರಿಗಿದ್ದರು.
ಗ್ಲೋರಿಯಾ ಇನ್ನೂ ಹದಿನೈದು ತಿಂಗಳ ಮಗುವಾಗಿದ್ದಾಗಲೇ ಅವರ ತಂದೆ ಸಿರಾಸಿಸ್ ಖಾಯಿಲೆಯಿಂದ ಮರಣ ಹೊಂದಿದರು ಮತ್ತು ಅವರು ಬಿಟ್ಟುಹೋದ ಾಸ್ತಿಯಾದ ಐದು ಮಿಲಿಯನ್ ನ ಅರ್ಧಭಾಗಕ್ಕೆ ಅವರು ವಾರಸುದಾರರಾದರು.[೭] ಅವರು ಪ್ರಾಪ್ತವಯಸ್ಕರಾಗುವವರೆಗೆ ಈ ಟ್ರಸ್ಟ್ ಅನ್ನು ನಿಭಾಯಿಸುವ ಜವಾಬ್ದಾರಿ ಅವರ ತಾಯಿಯದಾಗಿದ್ದು, ಅವರು ಮಗಳನ್ನು ಕರೆದುಕೊಂಡು ಪ್ಯಾರಿಸ್ ಗೆ ಹಲವಾರು ವರ್ಷಗಳ ಕಾಲ ಹೋಗಿ ಬರುವ ಕಾಯಕವನ್ನು ನಿರ್ವಹಿಸಿದರು. ಈ ಅಮ್ಮ ಮಗಳ ಜೊತೆಗೆ ಗ್ಲೋರಿಯಾ ಪ್ರೀತಿಯಿಂದ 'ಡೋಡೋ' ಎಂದು ಕರೆಯುತ್ತಿದ್ದ ದಾದಿಯೂ ಪ್ರಯಾಣ ಮಾಡುವುದು ವಾಡಿಕೆಯಾಗಿತ್ತು; ಆ ದಾದಿ ಈ ಮಗುವಿನ ಜೀವನದಲ್ಲಿ ಬಹಳಕ್ಷೋಭೆ ಉಂಟಾಗುವಂತಹ ಪಾತ್ರ ವಹಿಸಿದರು.[೮] ದಾರಿಯಲ್ಲದೆ ಇವರ ಸಂಗಡ ಇರುತ್ತಿದ್ದ ಮತ್ತೊಬ್ಬ ವ್ಯಕ್ತಿಯೆಂದರೆ ಗ್ಲೋರಿಯಾಳ ತಾಯಿಯ ತದ್ರೂಪಿ ಅವಳಿ ಸಹೋದರಿಯಾದ ಥೆಲ್ಮಾ; ಅವರು ಆ ಕಾಲದಲ್ಲಿ ವೇಲ್ಸ್ ನ ರಾಜಕುಮಾರನ ಪ್ರೇಯಸಿಯಾಗಿದ್ದರು.[೯] ಪದೇ ಪದೇ ತನ್ನ ತಾಯಿಯಿಂದ ಆಗುತ್ತಿದ್ದ ಖರ್ಚುಗಳ ಮೇಲೆ ಮಗುವಿನ ತಂದೆಯ ತಂಗಿಯಾದ ಸೋದರತ್ತೆ ಗೆರ್ಟ್ರೂಡ್ ವಿಟ್ನೀ ನಿಗಾ ವಹಿಸಲಾರಂಭಿಸಿದರು. ಸ್ವತಃ ಶಿಲ್ಪಿ ಮತ್ತು ಸಮಾಜಸೇವಕಿಯಾಗಿದ್ದ ವಿಟ್ನೀ ಈ ಮಗುವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಬಯಸಿದರು ಮತ್ತು ತತ್ಕಾರಣ ಅನತಿ ಕಾಲದಲ್ಲೇ ಮಗುವಿನ ಸುಪರ್ದಿನ ಹಕ್ಕಿನ ಮೊಕದ್ದಮೆಯು ೧೯೩೪ರ ಪ್ರಮುಖ ವಿಷಯವಾಗಿ ಎಲ್ಲರ ಗಮನ ಸೆಳೆಯಿತು[೧೦][೧೧] ಈ ಮೊಕದ್ದಮೆಯು ಎಂತಹ ರೇಜಿಗೆಯನ್ನು ಹುಟ್ಟಿಸುತ್ತಿತ್ತೆಂದರೆ ಕೆಲವೊಮ್ಮೆ ಆ ವ್ಯಾಯಾಧೀಶರು ಮಗುವು ಯಾರದೇ ಪ್ರಭಾವಕ್ಕೆ ಒಳಗಾಗದೆ ಹೇಳಬೇಕಾದ್ದನ್ನು ಹೇಳಲು ಅನುವು ಮಾಡಿಕೊಡುವ ಸಲುವಾಗಿ ಕೋರ್ಟಿನಲ್ಲದ್ದ ಮಿಕ್ಕೆಲ್ಲರನ್ನೂ ಹೊರಗೆ ಕಳುಹಿಸಿ ಮಗುವನ್ನು ಮಾತ್ರ ಒಳಗಿರಿಸಿಕೊಂಡು ಹೇಳಿಕೆ ಪಡೆಯುವ ಪ್ರಸಂಗಗಳು ಒದಗಿಬಂದವು. ಕೋರ್ಟ್ ರೂಂನಲ್ಲಿ ಅಳು ಮತ್ತು ಗೋಳಾಟಗಳು ಸಹ ಕೆಲವೊಮ್ಮೆ ಕೇಳಿಬರುತ್ತಿದ್ದುದನ್ನು ಕೆಲವರು ಕೇಳಿಸಿಕೊಂಡಿದ್ದರು. ಈ ಮೊಕದ್ದಮೆಯಲ್ಲಿ ಗ್ಲೋರಿಯಾಳ ತಾಯಿ ಮಗಳನ್ನು ನೋಡಿಕೊಳ್ಳಲು ಅನರ್ಹಳೆಂದು ವಾದಿಸಲಾಯಿತು, ವಾಂಡರ್ಬಿಲ್ಟ್ ಳ ತಾಯಿ ಈ ಕೇಸನ್ನು ಸೋತರು ಹಾಗೂ ವಾಂಡರ್ಬಿಲ್ಟ್ ಸೋದರತ್ತೆ ಗೆರ್ಟ್ರೂಡ್ ರ ಪಾಲನೆ ಪೋಷಣೆಯಲ್ಲಿ ಇರುವುದೆಂದು ತೀರ್ಪು ನೀಡಲಾಯಿತು.[೯]
ಆದರೆ ಕೇಸು ಮುಂದುವರೆಯಿತು. ವಾಂಡರ್ಬಿಲ್ಟ್ ಳ ತಾಯಿಯು ತನ್ನ ಮಗಳ ಟ್ರಸ್ಟ್ ನ ಹಣದಿಂದ ಮೊದಲು ಬರುತ್ತಿದ್ದ ಹಣಕ್ಕಿಂತಲೂ ಬಹಳ ಕನಿಷ್ಠ ಮೊತ್ತದಲ್ಲಿ ಜೀವನ ಸಾಗಿಸಬೇಕಾಯಿತು. ತಾಯಿ ಮಗಳನ್ನು ನೋಡಲು ಬಂದಾಗಲೂ ತನ್ನ ಒರಟಾದ ಜೀವನಶೈಲಿಯಿಂದ ಮಗಳ ಮೇಲೆ ಯಾವುದೇ ಪರಿಣಾಮ/ಪ್ರಭಾವ ಬೀರದಂತಾಗಲು ವಿಶೇಷ ನಿಗಾ ವಹಿಸಲಾಗುತ್ತಿತ್ತು. ಲಾಂಗ್ ಐಲ್ಯಾಂಡ್ ನ ಓಲ್ಡ್ ವೆಸ್ಟ್ ಬರಿ ಯಲ್ಲಿನ ಅತ್ತೆ ಗೆರ್ಟ್ರೂಡ್ ರ ಬಂಗಲೆಯಲ್ಲಿ, ಆ ವಿಶಾಲವಾದ ಎಸ್ಟೇಟ್ ನ ಸುತ್ತಲೂ ಹಾಗೂ ನ್ಯೂ ಯಾರ್ಕ್ ನಗರದಲ್ಲಿ ವಾಸಿಸುತ್ತಿದ್ದ ತನ್ನ ಓರಿಗೆಯ ಸೋದರ ಸಂಬಂಧಿಗಳ ಸಖ್ಯದೊಂದಿಗೆ, ವಾಂಡರ್ಬಿಲ್ಟ್ ರನ್ನು ಐಷಾರಾಮದ ನೆರಳಲ್ಲೇ, ಸುಖದ ಸುಪ್ಪತ್ತಿಗೆಯಲ್ಲೇ ಬೆಳೆಸಲಾಯಿತು.
ಗ್ಲೋರಿಯಾರ ಮೊಕದ್ದಮೆಯನ್ನು ಎನ್ ಬಿಸಿ ೧೯೮೨ ರಲ್ಲಿ ಒಂದು ಚಿಕ್ಕ ಸರಣಿಯಾಗಿ ಬಿತ್ತರಿಸಿತು;ಲಿಟಲ್ ಗ್ಲೋರಿಯಾ... ಹ್ಯಾಪಿ ಎಟ್ ಲಾಸ್ಟ್ , ಎಂಬ ಈ ಸರಣಿಯು ಆರು ಎಮ್ಮಿ ಪ್ರಶಸ್ತಿಗಳು ಮತ್ತು ಒಂದು ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶಿತವಾಯಿತು.
ವಾಂಡರ್ಬಿಲ್ಟ್ ಲಾಂಗ್ ಐಲ್ಯಾಂಡ್ ನ ಗ್ರೀನ್ ವಿಲ್ಲೆ ಸ್ಕೂಲ್, ಕನೆಕ್ಟಿಕಟ್ ನ ಫಾರ್ಮಿಂಗ್ಟನ್ ನಲ್ಲಿನ ಮಿಸ್ ಪೋರ್ಟರ್ಸ್ ಸ್ಕೂಲ್ ಗಳಲ್ಲಿ ವ್ಯಾಸಂಗ ಆರಂಭಿಸಿ, ನಂತರ ರೋಡ್ ಐಲ್ಯಾಂಡ್ ನ ಪ್ರಾವಿಡೆನ್ಸ್ ನಲ್ಲಿರುವ ವೀಲರ್ ಸ್ಕೂಲ್[೧೨][೧೩] ನಲ್ಲಿ ತಮ್ಮ ಓದನ್ನು ಮುಂದುವರಿಸಿದರಲ್ಲದೆ, ತಮ್ಮ ಮುಂದಿನ ವೃತ್ತಿಜೀವನದಲ್ಲಿ ಅವರಿಗೆ ಹೆಸರನ್ನಿತ್ತ ಕಲಾನೈಪುಣ್ಯವನ್ನು ಪಡೆಯುವ ಸಲುವಾಗಿ ನ್ಯೂ ಯಾರ್ಕ್ ನಗರದ ಆರ್ಟ್ ಸ್ಟೂಡೆಂಟ್ಸ್ ಲೀಗ್ ಅನ್ನೂ ಸೇರಿದರು. ವಾಂಡರ್ಬಿಲ್ಟ್ ಪ್ರಾಪ್ತವಯಸ್ಕರಾದಾಗ ತಮ್ಮ ಟ್ರಸ್ಟ್ ನ ಹತೋಟಿಯನ್ನು ತಾವೇ ವಹಿಸಿಕೊಂಡು ತಮ್ಮ ತಾಯಿಯನ್ನು ಸಂಪೂರ್ಣವಾಗಿ ಹೊರಗಿಟ್ಟರು,[೧೪] ಆದರೆ ನಂತರದ ವರ್ಷಗಳಲ್ಲಿ ತಾಯಿಗೆ ಬೇಕಾದ ಬೆಂಬಲವನ್ನಂತೂ ಇತ್ತರು.[೧೫] ಅವರ ತಾಯಿಯು ತನ್ನ ಸಹೋದರಿಯೊಡನೆ ಬೆವೆರ್ಲಿ ಹಿಲ್ಸ್ ನಲ್ಲಿ ಬಹಳ ಕಾಲ ಜೀವಿಸಿದ್ದು, ನಂತರ ೧೯೬೫ ರಲ್ಲಿ ನಿಧನರಾದರು.
ವೃತ್ತಿಜೀವನ
[ಬದಲಾಯಿಸಿ]ವಾಂಡರ್ಬಿಲ್ಟ್ ಅಭಿನಯಕಲೆಯನ್ನು ತಮ್ಮ ಬಡಾವಣೆಯಲ್ಲೇ ಇದ್ದ ನಾಟಕಗೃಹದಲ್ಲಿ ಶಿಕ್ಷಕ ಸ್ಟಾನ್ ಫೋರ್ಡ್ ಮೇಯ್ಸ್ ನರ್ ರಲ್ಲಿ ಅಧ್ಯಯನ ಮಾಡಿದರು ಹಾಗೂ ಚಿತ್ರಕಲೆಯನ್ನು ಆರ್ಟ್ ಸ್ಟೂಡೆಂಟ್ಸ್ ಲೀಗ್ ಆಫ್ ನ್ಯೂಯಾರ್ಕ್ ನಲ್ಲಿ ಅಭ್ಯಾಸ ಮಾಡಿದರು. ಅವರು ತಮ್ಮ ಚಿತ್ರಕಲೆಗೆ ಹೆಸರುವಾಸಿಯಾಗಿ, ಏಕ-ವ್ಯಕ್ತಿ ತೈಲಚಿತ್ತ, ಜಲವರ್ಣಗಳು ಮತ್ತು ಪಾಸ್ಟೆಲ್ ಗಳ ಪ್ರದರ್ಶನಗಳನ್ನು ನೀಡಲಾರಂಭಿಸಿದರು. ಈ ಕಲಾಕೃತಿಗಳನ್ನು ೧೯೬೮ ರ ಆಸುಪಾಸಿನಲ್ಲಿ ಹಾಲ್ ಮಾರ್ಕ್ ಕಾರ್ಡ್ಸ್ (ಕಾಗದದ ಉತ್ಪನ್ನಗಳ ತಯಾರಕರು) ಮತ್ತು ಬ್ಲೂಮ್ ಕ್ರಾಫ್ಟ್ (ಕೈಮಗ್ಗದ ಉತ್ಪನ್ನಗಳ ತಯಾರಕರು) ತಮ್ಮದಾಗಿಸಿಕೊಂಡು, ಪರವಾನಗಿ ಪಡೆದು, ಬಳಸಲಾರಂಭಿಸಿದರು ಹಾಗೂ ವಾಂಡರ್ಬಿಲ್ಟ್ ವಿಶೇಷತಃ ಲಿನನ್, ಪಿಂಗಾಣಿ, ಗಾಜು ಮತ್ತು ಫ್ಲಾಟ್ ವೇರ್ ಗಳ ವಿನ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
೧೯೭೦ ರ ದಶಕದಲ್ಲಿ ಅವರು ಫ್ಯಾಷನ್ ವ್ಯವಹಾರಕ್ಕೆ ಪಾದಾರ್ಪಣೆ ಮಾಡಿ ಗ್ಲೆಂಟೆಕ್ಸ್ ತಯಾರಿಸಿದ ಸ್ಕಾರ್ಫ್ ಗಳ ಸರಣಿಗೆ ತಮ್ಮ ಹೆಸರನ್ನು ಇಡಲು ಪರವಾನಗಿ ಇತ್ತರು. ೧೯೭೬ ರಲ್ಲಿ, ವಾಂಡರ್ಬಿಲ್ಟ್ ರ ಹೆಸರನ್ನು ಹಿಂದಿನ ಜೇಬಿನ ಮೇಲೆ ಉಬ್ಬಿದ ಅಕ್ಷರಗಳಲ್ಲಿ ಎದ್ದುಕಾಣುವಂತೆ ತೋರಿಸುವ ಹಾಗೂ ಅವರ ಹಂಸದ ಚಿಹ್ನೆಯನ್ನು ಹೊಂದಿರುವ ಡಿಸೈನರ್ ಜೀನ್ಸ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಇರಾದೆಯನ್ನು ಭಾರತದ ವಿನ್ಯಾಸಕಾರ ಮೋಹನ್ ಮುಜ್ರಾನಿಯವರು ಮುಜ್ರಾನಿ ಕಾರ್ಪೊರೇಷನ್ ನ ಪರವಾಗಿ, ಮಂಡಿಸಿದರು. ವಾಂಡರ್ಬಿಲ್ಟ್ ರ ಜೀನ್ಸ್ ಆ ಕಾಲದ ಇತರ ಜೀನ್ಸ್ ಗಳಿಗಿಂತಲೂ ಬಿಗಿಯಾಗಿ ಕೂರುವಂತಹವಾಗಿದ್ದವು. ಅವರ ಹಂಸ ಚಿಹ್ನೆಯು ಕ್ರಮೇಣ ಉಡುಪುಗಳು ಮತ್ತು ಸುಗಂಧಗಳ ಮೇಲೂ ರಾರಾಜಿಸಲಾರಂಭಿಸಿತು. ಜೀನ್ಸ್ ನ ಜೊತೆಜೊತೆಗೇ ಬ್ಲೌಸ್ ಗಳು, ಷೀಟ್ ಗಳು, ಷೂಗಳು. ಚರ್ಮದ ಉತ್ಪನ್ನಗಳು, ಸುವಾಸನೆಯುಳ್ಳ ಮದ್ಯಗಳು, ಮತ್ತು ಉಪಕರಣಗಳನ್ನೂ ವಾಂಡರ್ಬಿಲ್ಟ್ ಹೊರತಂದರು. ೨೦೦೨ ರಲ್ಲಿ ಜೋನ್ಸ್ ಅಪ್ಪಾರೆಲ್ ಗ್ರೂಪ್ ನವರು ಗ್ಲೋರಿಯಾ ವಾಂಡರ್ಬಿಲ್ಟ್ ಜೀನ್ಸ್ ನ ಹಕ್ಕುಗಳನ್ನು ಪಡೆದರು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮೊದಮೊದಲು ಕಾಣಿಸಿಕೊಂಡ ವಿನ್ಯಾಸಕಾರರ ಪೈಕಿ ವಾಂಡರ್ಬಿಲ್ಟ್ ಸಹ ಒಬ್ಬರು; ಬಹಳ ನಾಚಿಕೆಯ ಸ್ವಭಾವದವರಾದ ಇವರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಬಹಳ ಮುಜುಗರದ ಸಂಗತಿಯಾಗಿತ್ತು. ಮುಜ್ರಾನಿಯ ನಂತರ, ವಾಂಡರ್ಬಿಲ್ಟ್ ತಮ್ಮದೇ ಆದ "GV Ltd." ಎಂಬ ಕಂಪನಿಯನ್ನು ನ್ಯೂ ಯಾರ್ಕ್ ನ ಏಳನೆಯ ಅವಿನ್ಯೂನಲ್ಲಿ ಆರಂಭಿಸಿದರು.
೧೯೮೨ ರಿಂದ ೨೦೦೨ ರ ಅವಧಿಯಲ್ಲಿ ಲೋರಿಯಲ್ ಗ್ಲೋರಿಯಾ ವಾಂಡರ್ಬಿಲ್ಟ್ ಎಂಬ ಬ್ರ್ಯಾಂಡ್ ನ ಹೆಸರಿನಲ್ಲಿ ಎಂಟು ಸುಗಂಧದ್ರವ್ಯಗಳನ್ನು ಹೊರತಂದಿತು.[೧೬]
೧೯೮೦ ರ ದಶಕದಲ್ಲಿ ವಾಂಡರ್ಬಿಲ್ಟ್ "GV Ltd."ನ ಮುಂಚಿನ ಪಾಲುದಾರರು ಮತ್ತು ವಕೀಲರು ತನಗೆ ಮೋಸ ಮಾಡಿದ್ದಾರೆಂದು ಆರೋಪ ಹೂಡಿದರು. ದೀರ್ಘಕಾಲ ನಡೆದ ಈ ಮೊಕದ್ದಮೆ (ಮೊಕದ್ದಮೆ ನಡೆಯುತ್ತಿದ್ದ ಅವಧಿಯಲ್ಲೇ ವಕೀಲರು ನಿಧನ ಹೊಂದಿದರು) ಯಲ್ಲಿ ವಾಂಡರ್ಬಿಲ್ಟ್ ಜಯಗಳಿಸಿದರು ಹಾಗೂ ಅವರಿಗೆ ಸುಮಾರು $೧.೭ ಮಿಲಿಯನ್ ಅನ್ನು ಸೋತವರು ನೀಡಬೇಕೆಂದು ತೀರ್ಪು ನೀಡಲಾಯಿತು, ಆದರೆ ಆ ಹಣ ವಸೂಲಾಗಲೇ ಇಲ್ಲ; ವಂಚನೆಗೆ ಬಲಿಯಾದವರಿಗೆಂದು ನ್ಯೂಯಾರ್ಕ್ ಬಾರ್ ಅಸೋಸಿಯೇಷನ್ ಸಹ $೩೦೦,೦೦೦ ನೀಡುವುದೆಂದು ತೀರ್ಪು ಬಂದರೂ, ಹಣ ಮಾತ್ರ ಕೈ ಸೇರಲಿಲ್ಲ. ವಾಂಡರ್ಬಿಲ್ಟ್ ರ ಹಿಂದಿನ ತೆರಿಗೆ ಪಾವತಿ ಬಾಕಿ ಮಿಲಿಯನ್ ಗಟ್ಟಲೆ ಆಗಿದ್ದಿತು — ವಕೀಲರು IRS ಕಟ್ಟಿರಲೇ ಇಲ್ಲ — ತತ್ಕಾರಣವಾಗಿ ಅವರು ತಮ್ಮ ಸೌಥಾಂಪ್ಟನ್ ಮತ್ತು ನ್ಯೂ ಯಾರ್ಕ್ ಗಳಲ್ಲಿದ್ದ ಮನೆಗಳನ್ನು ಮಾರಬೇಕಾಯಿತು.
೧೯೭೮ ರಲ್ಲಿ ಗ್ಲೋರಿಯಾ ವಾಂಡರ್ಬಿಲ್ಟ್ ಮುಜ್ರಾನಿ ಗ್ರೂಪ್ ನಲ್ಲಿದ್ದ ತಮ್ಮ ಹೆಸರಿನಲ್ಲಿದ್ದ ಹಕ್ಕುಗಳನ್ನು ಮಾರಿಬಿಟ್ಟರು. ಇಂದು ವಾಂಡರ್ಬಿಲ್ಟ್ ಫ್ಯಾಷನ್ ಅಥವಾ ಗೃಹೋಪಕರಣಗಳ ವ್ಯವಹಾರಗಳಲ್ಲಿ ತೊಡಗಿಲ್ಲ ಹಾಗೂ ತಮ್ಮ ಹೆಸರನ್ನು ಬಳಸುತ್ತಿರುವ ಉಡುಪುಗಳ ಮತ್ತು ಸಾಧನಗಳ ಕಂಪನಿಗೂ ಇವರಿಗೂ ಯಾವುದೇ ವಿಧವಾದ ಸಂಬಂಧವಿಲ್ಲ.
೨೦೦೧ ರಲ್ಲಿ ಗ್ಲೋರಿಯಾ ಮ್ಯಾಂಚೆಸ್ಟರ್ ನ ವೆರ್ಮಂಟ್ ನ ಸದರನ್ ವೆರ್ಮಂಟ್ ನಲ್ಲಿ ತಮ್ಮ ಮೊದಲ ಪ್ರದರ್ಶನವಾದ "ಡ್ರೀಂ ಬಾಕ್ಸಸ್" ಅನ್ನು ಹಮ್ಮಿಕೊಂಡರು. ವಿಮರ್ಶಕರ ಮೆಚ್ಚುಗೆ ಗಳಿಸಿದ ಈ ಪ್ರದರ್ಶನದ ನಂತರ ೨೦೦೭ ರಲ್ಲಿ ಗ್ಲೋರಿಯಾ ಸದರನ್ ವೆರ್ಮಾಂಟ್ ಆರ್ಟ್ಸ್ ಸೆಂಟರ್ ನಲ್ಲಿ ತಮ್ಮ ೩೫ ಕಲಾಕೃತಿಗಳನ್ನು ಪ್ರದರ್ಶಿಸಿದರು. ಎರಡು ವರ್ಷಗಳ ನಂತರ ಅವರು ಆರ್ಟ್ಸ್ ಸೆಂಟರ್ ನ ಮಂಡಳಿಯ ಸದಸ್ಯರಾಗಿ ಮರಳಿ, ಶಿಶಿರದ ವಾರ್ಷಿಕ ಪ್ರದರ್ಶನದ ಸಂದರ್ಭದಲ್ಲಿ ತಮ್ಮ ನೂತನ ಕಾದಂಬರಿಯಾದ "ಒಬ್ಸೆಷನ್: ಎನ್ ಎರೋಟಿಕ್ ಟೇಲ್" ನ ಪ್ರತಿಗಳಿಗೆ ತಮ್ಮ ಹಸ್ತಾಕ್ಷರವನ್ನು ಹಾಕಿಕೊಟ್ಟರು.
ಇತ್ತೀಚೆಗೆ, ಗ್ಲೋರಿಯಾ ತಮ್ಮ ಜೀವನಚರಿತ್ತರೆಯ ಪುಸ್ತಕಕ್ಕೆ ವಸ್ತುವಾಗಿದ್ದಾರೆ; "ದ ವರ್ಲ್ಡ್ ಆಫ್ ಗ್ಲೋರಿಯಾ ವಾಂಡರ್ಬಿಲ್ಟ್" ಎಂಬ ಶೀರ್ಷಿಕೆ ಇರುವ ಈ ಪುಸ್ತಕದ ಲೇಖಕ ರು ವೆಂಡಿ ಗುಡ್ ಮನ್' ಇವರು ನ್ಯೂ ಯಾರ್ಕ್ ಮ್ಯಾಗಝೀನ್ ನ ವಿನ್ಯಾಸ ಸಂಪಾದಕರಾಗಿದ್ದಾರೆ. ಈ ಪುಸ್ತಕವು ೨೦೧೦ ರ ನವೆಂಬರ್ ನಲ್ಲಿ ಅಬ್ರಾಮ್ಸ್ ರಿಂದ ಬಿಡುಗಡೆಗೊಂಡಿತು; ಇದರಲ್ಲಿ ಇದಕ್ಕೆ ಮುನ್ನ ಕಾಣದಂತಹ ಹಲವಾರು ಛಾಯಾಚಿತ್ರಗಳಿವೆ. ವಾಂಡರ್ಬಿಲ್ಟ್ ತಮ್ಮ ಕಲಾಕೃತಿಗಳನ್ನು ತೋರಿಸಲೆಂದೇ ಹೊಂದಿರುವ ಒಂದು ಜಾಲತಾಣವಿದೆ; ಅದೇ www.gloriavanderbiltfineart.com
ವೈಯಕ್ತಿಕ ಜೀವನ
[ಬದಲಾಯಿಸಿ]ತಮ್ಮ ೧೭ ರ ಹರೆಯದಲ್ಲಿ ಹಾಲಿವುಡ್ ಗೆ ತೆರಳಿದ ವಾಂಡರ್ಬಿಲ್ಟ್ ಅಲ್ಲಿ ಏಜೆಂಟರಾಗಿ ಕೆಲಸ ಮಾಡುತ್ತಿದ್ದ ಪಾಸ್ಕ್ವೇಲ್ ("ಪ್ಯಾಟ್") ಡಿಸಿಕ್ಕೋರನ್ನು ೧೯೪೧ ರಲ್ಲಿ ಮದುವೆಯಾದರು;[೧೭] ೧೯೪೫ ರಲ್ಲಿ ಅವರ ವಿಚ್ಛೇದನವಾಯಿತು.[೧೮]
೧೯೪೫ ರ ಏಪ್ರಿಲ್ ನಲ್ಲಿ ಅವರು ನಿರ್ವಾಹಕ ಲಿಯೋಪೋಲ್ಡ್ ಸ್ಟೋಕೋವ್ಸ್ ಕಿ ಯವರನ್ನು ವಿವಾಹವಾದರು; ಈ ಎರಡನೆಯ ವಿವಾಹದಿಂದ ಅವರಿಗೆ ಲೊಯೋಪೋಲ್ಡ್ ಸ್ಟಾನಿಸ್ಲಾಸ್ "ಸ್ಟಾನ್" ಸ್ಟೋಕೋವ್ಸ್ ಕಿ ಎಂಬ ಮಗನು ೨೨ ಆಗಸ್ಟ್ ೧೯೫೦ ರಂದು, ಮತ್ತು ಕ್ರಿಸ್ತೋಫರ್ ಸ್ಟೋಕೋವ್ಸ್ ಕಿ ಎಂಬ ಎರಡನೆಯ ಮಗನು ೩೧ ಜನವರಿ ೧೯೫೨ ರಂದೂ ಜನಿಸಿದರು; ಸತಿ ಪತಿಯರು ಅಕ್ಟೋಬರ್ ೧೯೫೫ ರಲ್ಲಿ ವಿಚ್ಛೇದಿತರಾದರು.
ಆಗಸ್ಟ್ ೨೮, ೧೯೫೬ ರಂದು ವಾಂಡರ್ಬಿಲ್ಟ್ ನಿರ್ದೇಶಕ ಸಿಡ್ನಿ ಲ್ಯುಮೆಟ್ ರನ್ನು ಮದುವೆಯಾದರು; ಆಗಸ್ಟ್ ೧೯೬೩ ರಲ್ಲಿ ಇವರ ವಿಚ್ಛೇದನವಾಯಿತು.
ವಾಂಡರ್ಬಿಲ್ಟ್ ತಮ್ಮ ನಾಲ್ಕನೆಯ ಪತಿ, ಲೇಖಕ ವ್ಯಾಟ್ ಎಮೋರಿ ಕೂಪರ್ ರನ್ನು ಡಿಸೆಂಬರ್ ೨೪, ೧೯೬೩ ರಂದು ವಿವಾಹವಾದರು. ಅವರಿಗೆ ಎರಡು ಮಕ್ಕಳಾದವು, ಕಾರ್ಟರ್ ವಾಂಡರ್ಬಿಲ್ಟ್ ಕೂಪರ್, ಜನನ ಜನವರಿ ೨೭, ೧೯೬೫ ಮತ್ತು CNN ವರದಿಗಾರ ಆಂಡರ್ಸನ್ ಕೂಪರ್, ಜನನ ಜೂನ್ ೩, ೧೯೬೭. ವ್ಯಾಟ್ ಕೂಪರ್ ನ್ಯೂ ಯಾರ್ಕ್ ನಗರದಲ್ಲಿ ತೆರೆದೆದೆಯ ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗ, ೧೯೭೮ ರಲ್ಲಿ, ಕೊನೆಯುಸಿರೆಳೆದರು. ಕಾರ್ಟರ್ ಕೂಪರ್ ಜುಲೈ ೨೨, ೧೯೮೮ ರಂದು ಕುಟುಂಬದ ಅಪಾರ್ಟ್ ಮೆಂಟಿನ ೧೪ ನೆಯ ಮಹಡಿಯಿಂದ, ವಾಂಡರ್ಬಿಲ್ಟ್ ಅವನನ್ನು ತಡೆಯಲು ಶತಪ್ರಯತ್ನ ಮಾಡಿದರೂ ಕೇಳದೆ, ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡನು. ಆಸ್ತಮಾ ನಿವಾರಣೆಗಾಗಿ ವೈದ್ಯರು ಬರೆದುಕೊಟ್ಟ ಪ್ರೊವೆಂಟಿಲ್ ಎಂಬ ಔಷಧಿಯನ್ನು ಸೇವಿಸುವುದರಿಂದ ಸಂಭವಿಸಿದ ಅಲರ್ಜಿಯಿಂದ ಉಂಟಾದ ಮನೋಕ್ಷೋಭೆಯ ಕಾರಣ ಕಾರ್ಟರ್ ಆತ್ಮಹತ್ಯೆಗೆ ಒಳಗಾದನೆಂದು ವಾಂಡರ್ಬಿಲ್ಟ್ ನಂಬಿದರು.
ತನ್ನ ಹಿರಿಯ ಪುತ್ರನಾದ ಸ್ಟಾನ್ ನಿಂದ ವಾಂಡರ್ಬಿಲ್ಟ್ ಗೆ ಮೂವರು ಮೊಮ್ಮಕ್ಕಳಿದ್ದಾರೆ: ಆರೋರಾ, ಜನನ ಮಾರ್ಚ್ ೧೯೮೩ ಮತ್ತು ಆರ್ಬಾ, ಜನನ ಫೆಬ್ರವರಿ ೧೯೮೫, ಇಬ್ಬರೂ ಲೇಖಕಿ ಐವಿ ಸ್ಟ್ರಿಕ್ ರ ಮಕ್ಕಳಾದರೆ. ೧೯೮೮ ರಲ್ಲಿ ಜನಿಸಿದ ಮೈಲ್ಸ್ ಎಮಿಲಿ ಗೋಲ್ಡ್ ಸ್ಟೀನ್ ಳ ಮಗ.[೧೯]
ಛಾಯಾಗ್ರಾಹಕ ಮತ್ತು ಚಲನಚಿತ್ರಕಾರ ಗಾರ್ಡನ್ ಪಾರ್ಕ್ಸ್ ೨೦೦೬ ರಲ್ಲಿ ಗತಿಸುವವರೆಗೆ, ಹಲವಾರು ವರ್ಷಗಳ ಕಾಲ ವಾಂಡರ್ಬಿಲ್ಟ್ ಅವರ ಪ್ರೇಯಸಿಯಾಗಿದ್ದರು.[೨೦]
ಕೃತಿಗಳು
[ಬದಲಾಯಿಸಿ]- ಒನ್ಸ್ ಅಪಾನ್ ಎ ಟೈಂ; ಎ ಟ್ರೂ ಸ್ಟೋರಿ [೨೧]
- ಬ್ಲ್ಯಾಕ್ ನೈಟ್; ವೈಟ್ ನೈಟ್ [೨೨]
- ಎ ಮದರ್ಸ್ ಸ್ಟೋರಿ [೨೩]
- ಇಟ್ ಸೀಮ್ಸ್ ಇಂಪಾರ್ಟೆಂಟ್ ಎಟ್ ದ ಮೊಮೆಂಟ್: ಒಂದು ರೋಮಾಂಚನದ ಸ್ಮರಣೆ
ಕಾದಂಬರಿಗಳು
ಮೂಲಗಳು
[ಬದಲಾಯಿಸಿ]- ಟ್ರಯೋ: ಊನಾ ಚಾಪ್ಲಿನ್, ಕೆರೋಲ್ ಮಥಾವ್, ಗ್ಲೋರಿಯಾ ವಾಂಡರ್ಬಿಲ್ಟ್: ಪೋರ್ಟ್ರೈಟ್ ಆಫ್ ಎನ್ ಇಂಟಿಮೇಟ್ ಫ್ರೆಂಡ್ ಶಿಪ್ ಲೇಖಕರು ಆರಾಮ್ ಸರೋಯನ್
- ಲಿಟಲ್ ಗ್ಲೋರಿಯಾ... ಹ್ಯಾಪಿ ಎಟ್ ಲಾಸ್ಟ್ ಲೇಖಕಿ ಬಾರ್ಬರಾ ಗೋಲ್ಡ್ ಸ್ಮಿತ್
- ತದಟ್ ವಾಂಡರ್ಬಿಲ್ಟ್ ವುಮನ್ ಲೇಖಕ ಫಿಲಿಪ್ ವಾನ್ ರೆನ್ಸೆಲಯೆರ್
- ಗ್ಲೋರಿಯಾ ಮಾರ್ಗನ್ ವಾಂಡರ್ಬಿಲ್ಟ್, ಪಾಲ್ಮಾ ವೇಯ್ನ್ ರೊಂದಿಗೆ, ವಿತೌಟ್ ಪ್ರಿಜುಡೀಸ್ (ಇ.ಪಿ. ದತ್ತನ್, ೧೯೩೬)
ಉಲ್ಲೇಖಗಳು
[ಬದಲಾಯಿಸಿ]- ↑ Vanderbilt, Gloria. "2". A mother's story (first edition ed.). New York: Alfred A. Knopf. p. 5. ISBN 0-679-45052-1.
{{cite book}}
:|access-date=
requires|url=
(help);|edition=
has extra text (help) - ↑ "Vanderbilt Dead After Hemorrhage Last Night". The Evening Independent. 4 September 1925. Retrieved 15 March 2011.
- ↑ Vanderbilt, Gloria. "3". A mother's story (first edition ed.). New York: Alfred A. Knopf. p. 7. ISBN 0-679-45052-1.
{{cite book}}
:|access-date=
requires|url=
(help);|edition=
has extra text (help) - ↑ "Reginald C. Vanderbilt and Gloria Morgan To Wed Tomorrow". Providence News. 5 March 1923. Retrieved 15 March 2011.
- ↑ "ರೆಗ್ಗಿಗೆ ತನ್ನ ನಗಳು ಪ್ರೊಟೆಸ್ಟೆಂಟ್ ವಿಧಿಯಲ್ಲಿ ನಾಮಕರಣಗೊಳ್ಳಬೇಕೆಂಬ ಕಾತುರವಿತ್ತು. [ಅವರ ಹಿರಿಯ ಪುತ್ರಿ] ಕ್ಯಾಥ್ಲೀನ್ ಗೆ ಕ್ಯಾಥೊಲಿಕ್ ವಿಧಿಯಲ್ಲಿ ನಾಮಕರಣ ಮಾಡಲಾಗಿತ್ತು, ಅವರಿಗೆ ತನ್ನ ಪುತ್ರಿ ತಾನು ನಂಬಿದ ಧಾರ್ಮಿಕವಿಧಿಯಲ್ಲೇ ನಾಮಕರಣಗೊಳ್ಳಬೇಕೆಂಬ ಆಸೆ ಇದ್ದಿತು, ನಾನು ಅದಕ್ಕೆ ಸಮ್ಮತಿಸಿದೆ. ಈ ವಿಧಿಯನ್ನು ಬಿಷಪ್ ಹರ್ಬರ್ಟ್ ಶಿಪ್ ಮನ್ ನಮ್ಮ ವಿಶಾಲವಾದ, ಔಪಚಾರಿಕವಾದ ಹಾಗೂ ಅಪರೂಪಕ್ಕೆ ಬಳಸುತ್ತಿದ್ದ ಡ್ರಾಯಿಂಗ್ ರೂಂನಲ್ಲಿಯೇ ನಡೆಸಿಕೊಟ್ಟರು. ... ಮಗುವಿಗೆ ನನ್ನದೇ ಹೆಸರಾದ ಗ್ಲೋರಿಯಾ ಮತ್ತು ನನ್ನ ತಾಯಿಯ ಹೆಸರಾದ ಲಾರಾ ಎರಡನ್ನೂ ಸೇರಿಸಿ ಹೆಸರಿಸಲಾಯಿತು. ... ಜೇನ್ಸ್ ಡೀರಿಂಗ್ ಮಗುವಿನ ಗಾಡ್ ಫಾದರ್ ಆದರು ಮತ್ತು ಗೆರ್ಟ್ರೂಡ್ ವಿಟ್ನೀ ಮಗುವಿನ ಗಾಡ್ ಮದರ್ ಆದರು ...." ಗ್ಲೋರಿಯಾ ಮಾರ್ಗನ್ ವಾಂಡರ್ಬಿಲ್ಟ್, ಪಾಲ್ಮಾ ವೇಯ್ನ್ ರೊಂದಿಗೆ, ವಿತೌಟ್ ಪ್ರಿಜುಡೀಸ್ (ಇ.ಪಿ. ದತ್ತನ್, ೧೯೩೬), ಪುಟ ೧೧೮.
- ↑ "Reginald Vanderbilt Dies Suddenly Today". The Meridien Daily Journal. 4 September 1925. Retrieved 15 March 2011.
- ↑ Vanderbilt, Gloria. "2". A Mother's Story (first edition ed.). New York: Alfred A. Knopf, INC. p. 5. ISBN 0-679-45052-1.
{{cite book}}
:|access-date=
requires|url=
(help);|edition=
has extra text (help) - ↑ "Mrs. Vanderbilt's Paris Life Exposed". Lewiston Daily Sun. 2 October 1934. Retrieved 13 August 2010.
- ↑ ೯.೦ ೯.೧ Goldsmith, Barbara, ed. (1982), Little Gloria...Happy at Last, Dell, ISBN 0440151201, retrieved 13 August 2010
- ↑ Vanderbilt, Gloria. ""The Scarlet Sting Of Scandal" (2)". It Seemed Important At The Time: A Romance Memoir. New York, NY: Simon & Schuster. p. 9. ISBN 0-7432-6480-0.
{{cite book}}
:|access-date=
requires|url=
(help) - ↑ "Gloria Vanderbilt Is Ward Of Court". Lewiston Daily Sun. 21 November 1934. Retrieved 13 August 2010.
- ↑ Maroni, Gloria (May 26, 1985). "SOCIAL SIDE Vanderbilt at home at Wheeler, her happy place". Providence Journal. Archived from the original on ಜುಲೈ 25, 2012. Retrieved ಮೇ 4, 2011.
- ↑ "Vanderbilt Chooses Work Instead of Being Idle Rich". Times Daily. 1 October 1979.
- ↑ Vanderbilt, Gloria. ""Wedded Bliss..." (5)". It seemed important at the time: a romance memoir. New York: Simon & Schuster. ISBN 0-7432-6480-0.
{{cite book}}
:|access-date=
requires|url=
(help) - ↑ Vanderbilt, Gloria. It seemed important at the time: a romance memoir.
- ↑ ಗ್ಲೋರಿಯಾ ವಾಂಡರ್ಬಿಲ್ಟ್ ಸುಗಂಧಗಳು
- ↑ Vanderbilt, Gloria (2004). ""The Great Thing" (4)". It Seemed Important at the Time: A Romance Memoir. Rockefeller Center, 1230 Avenue of the Americas, New York, NY 10020: Simon & Schuster. p. 31. ISBN 0-7432-6480-0.
{{cite book}}
:|access-date=
requires|url=
(help)CS1 maint: location (link) - ↑ Vanderbilt, Gloria. ""Happy Birthday" (6)". It Seemed Important at the Time: A Romance Memoir. New York, NY: Simon & Schuster. p. 36. ISBN 0-7432-6480-0.
{{cite book}}
:|access-date=
requires|url=
(help) - ↑ "ಲಿವಿಂಗ್ ವಿತ್ ಲಾಸ್" ಲೇಖಕಿಯರು ನ್ಯೂ ಯಾರ್ಕ್ ನ ಕಿಮ್ ಹಬ್ಬರ್ಡ್ ಮತ್ತು ಅನ್ನೆ ಲಾಂಗ್ಲೇ, ಪೀಪಲ್ , ಮೇ ೧೯೯೬, ಪ್ರವೇಶಿಸಿದ ದಿನಾಂಕ=೨೦೦೮-೧೨-೧೫.
- ↑ VanMeter, Jonathan (16 July 2000). "Gloria Vanderbilt + Gordon Parks". The New York Times. Archived from the original on 18 ಮಾರ್ಚ್ 2011. Retrieved April 2, 2010.
- ↑ "Barnes & Noble website for the book". Retrieved 2008-12-09.
- ↑ Vanderbilt, Gloria (1987). Black Khight, White Knight (first edition ed.). New York: Alfred A. Knopf. pp. Cover. ISBN 0-394-54412-9.
{{cite book}}
:|access-date=
requires|url=
(help);|edition=
has extra text (help) - ↑ Vanderbilt, Gloria (1996). A Mother's Story. New York: Alfred A. Knopf. pp. Cover. ISBN 0-679-45052-1.
{{cite book}}
:|access-date=
requires|url=
(help) - ↑ Vanderbilt, Gloria (2004). New York: Simon & Schuster. pp. Cover. ISBN 0-7432-6480-0.
{{cite book}}
:|access-date=
requires|url=
(help); Missing or empty|title=
(help) - ↑ [The Memory Book of Starr Faithfull "Barnes & Noble website"]. Retrieved 2008-12-09.
{{cite web}}
: Check|url=
value (help) - ↑ "Barnes & Noble website". Retrieved 2008-12-09.
- ↑ ಸೋಷಿಯಲೈಟ್, 85, ಷಾಕ್ಸ್ ನ್ಯೂ ಯಾರ್ಕ್ ವಿತ್ ಸೆಕ್ಸ್ ನಾವೆಲ್ ದ ಗಾರ್ಡಿಯನ್. ೧೮ ಏಪ್ರಿಲ್ ೧೯೩೧
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- CS1 errors: access-date without URL
- CS1 errors: extra text: edition
- CS1 maint: location
- CS1 errors: missing title
- CS1 errors: URL
- Articles with hCards
- Commons link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Persondata templates without short description parameter
- 1924ರಲ್ಲಿ ಜನಿಸಿದವರು
- ಪ್ರಸ್ತುತದಲ್ಲಿರುವ ಜನರು
- ಅಮೆರಿಕದ ವಿನ್ಯಾಸಕಾರರು
- ಡಚ್ ಮೂಲದ ಅಮೇರಿಕನ್ ಜನರು
- ಸ್ಪ್ಯಾನಿಶ್ ಮೂಲದ ಅಮೇರಿಕನ್ ಜನರು
- ಅಮೇರಿಕಾದ ಸಮಾಜ -ಮುಖಂಡರು
- ಬಟ್ಟೆಯ ಬ್ರ್ಯಾಂಡ್ಗಳು
- ನ್ಯೂಯಾರ್ಕ್ ನಗರದ ಜನರು
- ವಾಂಡರ್ಬಿಲ್ಟ್ ಕುಟುಂಬ
- ಕಲಾವಿದರು
- ಚಲನಚಿತ್ರ ನಟಿಯರು