ಟವರ್ ಬ್ರಿಡ್ಜ್
51°30′20″N 0°04′32″W / 51.50556°N 0.07556°W
ಟವರ್ ಬ್ರಿಡ್ಜ್ | |
---|---|
ಸಾಗಾಣೆ | A100 Tower Bridge Road – motor vehicles, cyclists, pedestrians |
ದಾಟು | Thames |
ಪ್ರಾದೇಶಿಕ | ಲಂಡನ್ Boroughs: – north side: Tower Hamlets – south side: Southwark |
ಉಸ್ತುವಾರಿ | Bridge House Estates |
ವಿನ್ಯಾಸ | Bascule bridge, suspension bridge |
ಒಟ್ಟು ಉದ್ದ | 244 metres (801 ft) |
Longest span | 61 metres (200 ft) |
ಕೆಳಗಿನ ತೆರವು | 8.6 metres (28 ft) (closed) 42.5 metres (139 ft) (open) (Mean High Water Spring Tide) |
ತೆರವು | ೩೦ June ೧೮೯೪ |
ಪಾರಂಪರಿಕ ಸ್ಥಿತಿ | Grade I listed structure |
ಗೋಪುರ ಸೇತುವೆ (ಟಾವರ್ ಬ್ರಿಡ್ಜ್) ಯುನೈಟೆಡ್ ಕಿಂಗ್ಡಮ್‌ನ ಇಂಗ್ಲೆಂಡ್, ದೇಶದ ರಾಜಧಾನಿ ಲಂಡನ್‌ನಲ್ಲಿದೆ. ಇದು ಥೇಮ್ಸ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸಮತೋಲನದ ತೂಗು ಸೇತುವೆ, ಸಮಸನ್ನೆ ಮತ್ತು ತೂಗುಸೇತುವೆಗಳ ಜಂಟಿ-ವಿನ್ಯಾಸದ ಸೇತುವೆಯಾಗಿದೆ. ಇದು ಲಂಡನ್ ಗೋಪುರಕ್ಕೆ ಬಹಳ ಸನಿಹದಲ್ಲಿರುವ ಕಾರಣ, ಈ ಸೇತುವೆಗೆ ಗೋಪುರ ಸೇತುವೆ ಎನ್ನಲಾಗಿದೆ.ಹೆಸರು[›] ಇಂದು ಈ ಸೇತುವೆಯು ಲಂಡನ್ ಮಹಾನಗರದ ಮೂರ್ತಿವೆತ್ತ ಪ್ರಮುಖ ಲಾಂಛನವಾಗಿದೆ.
ಈ ಸೇತುವೆಯ ಎರಡೂ ತುದಿಗಳಲ್ಲಿ ಎರಡು ಗೋಪುರಗಳಿವೆ. ಈ ಗೋಪುರಗಳ ಮೇಲ್ತುದಿಗಳ ನಡುವೆ ಅಡ್ಡಲಾದ ಕಾಲ್ನಡಿಗೆಗಾಗಿ ಸಾಲು ದಾರಿಗೆ ಜೋಡಿಸಲಾಗಿದೆ. ಈ ಗೋಪುರಗಳ ನೆಲದೆಡೆಗೆ ಬಾಗಿದ ದಿಕ್ಕಿನಲ್ಲಿ ತೂಗುಸೇತುವೆಗಳಿಂದ ಉಂಟಾಗುವ ಅಡ್ಡಲಾದ ಭಾರ ತಡೆದುಕೊಳ್ಳಲು ಈ ಕಾಲ್ನಡಿಗೆ ಪಂಕ್ತಿಯ ದಾರಿಯನ್ನು ನಿರ್ಮಿಸಲಾಗಿದೆ. ಸೇತುವೆಯ ತೂಗು-ಭಾಗಗಳ ಭಾರವಾದ ಉದ್ದದ ಭಾಗ, ಹಾಗೂ, ಎರಡು ಕಾಲ್ನಡಿಗೆ ಪಂಕ್ತಿಗಳ ಉದ್ದದ ಪ್ರತಿ-ಭಾರಗಳನ್ನು ಈ ಎರಡೂ ದೃಢ ಗೋಪುರಗಳು ಹೊಂದಿಸಿಕೊಳ್ಳುತ್ತವೆ. ಪ್ರತಿ ಗೋಪುರದ ತಳದಲ್ಲಿ, ಸಮಸನ್ನೆಯ ಕೇಂದ್ರಬಿಂದುಗಳು ಮತ್ತು ಕಾರ್ಯನಿರ್ವಹಣಾ ಯಂತ್ರಗಳಿವೆ. ಸೇತುವೆಯ ಈಗಿರುವ ಕೆಂಪು, ಬಿಳಿ ಮತ್ತು ನೀಲಿ ಬಣ್ಣವನ್ನು ೧೯೭೭ರಲ್ಲಿ, ಅಂದರೆ, ಮಹಾರಾಣಿಯ ಸಿಂಹಾಸನಾರೋಹಣದ ರಜತ ಮಹೋತ್ಸವದ ದ್ಯೋತಕ ಬಳಿಯಲಾಯಿತು. ಮೂಲತಃ ಇದಕ್ಕೆ ಚಾಕೊಲೆಟ್ ನ ಕಂದು ಬಣ್ಣ ಬಳಿಯಲಾಗಿತ್ತು.[೧]
ಗೋಪುರ ಸೇತುವೆಯನ್ನು ಕೆಲವೊಮ್ಮೆ ಲಂಡನ್ ಸೇತುವೆ ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಧೇಮ್ಸ್ ನದಿಯ ಹರಿವಿನ ವಿರುದ್ಧ ದಿಕ್ಕಿನಲ್ಲಿ ಮುಂದೆ ಸಾಗಿದರೆ ಇಲ್ಲಿಂದ ಅದು ಲಂಡನ್ ಸೇತುವೆ ತಲಪುವುದು.[೨] ಒಂದು ಜನಪ್ರಿಯವಾದ, ಬಹಳಷ್ಟು ಚರ್ಚಿತ ನಗರ ಕಟ್ಟುಕಥೆಯ ಪ್ರಕಾರ, ೧೯೬೮ರಲ್ಲಿ ಹಳೆಯ ಲಂಡನ್ ಸೇತುವೆಯನ್ನು ಕೊಂಡ ರಾಬರ್ಟ್ ಮೆಕಲಾಕ್, ಅದನ್ನು ಅರಿಝೊನಾದ ಲೇಕ್ ಹವಸು ಸಿಟಿಗೆ ರವಾನಿಸಿದರು. ತಾವು ಗೋಪುರ ಸೇತುವೆಯನ್ನೇ ಕೊಂಡುಕೊಳ್ಳುತ್ತಿರುವರೆಂದು ಅವರು ಭಾವಿಸಿದ್ದರು. ಮೆಕಲಾಕ್ ಈ ಕಥೆಯೆಲ್ಲಾ ಸುಳ್ಳು ಎಂದು, ಸ್ವತಃ ಮೆಕಲಾಕ್ ಹಾಗೂ ಸೇತುವೆ ಮಾರಾಟಗಾರ ಇವಾನ್ ಲಕಿನ್ ಹೇಳಿದರು.[೩]
ಗೋಪುರ ಸೇತುವೆಗೆ, ಸರ್ಕಲ್ ಮತ್ತು ಡಿಸ್ಟ್ರಿಕ್ಟ್ ಲೈನ್ಸ್‌ನಲ್ಲಿರುವ ಟಾವರ್ ಹಿಲ್ ಅತಿಸನಿಹದ ಲಂಡನ್ ನೆಲದಡಿ ರೈಲು ನಿಲ್ದಾಣ ಹಾಗೂ ಟಾವರ್ ಗೇಟ್ವೇ ಅತಿಸನಿಹದ ಡಾಕ್ಲೆಂಡ್ಸ್ ಲೈಟ್ ರೈಲು ನಿಲ್ದಾಣವಿದೆ.[೪]
ಇತಿಹಾಸ
[ಬದಲಾಯಿಸಿ]ಹಿನ್ನೆಲೆ
[ಬದಲಾಯಿಸಿ]ಆಗ ೧೯ನೆಯ ಶತಮಾನದ ಅಪರಾರ್ಧದಲ್ಲಿ, ಲಂಡನ್‌ನ ಪೂರ್ವಾಂತ್ಯದಲ್ಲಿ ವಾಣಿಜ್ಯ ಅಭಿವೃದ್ಧಿ ವೇಗಗೊಂಡ ಕಾರಣ, ಆಗಿನ ಲಂಡನ್ ಸೇತುವೆಯಿಂದ ಥೇಮ್ಸ್ ಹರವಿನ ದಿಕ್ಕಿನಲ್ಲಿ ಸ್ವಲ್ಪ ದೂರದಲ್ಲಿ ಇನ್ನೊಂದು ಸೇತುವೆಯ ನಿರ್ಮಾಣಕ್ಕಾಗಿ ಬೇಡಿಕೆ ಹೆಚ್ಚಾಯಿತು. ಲಂಡನ್ ಸೇತುವೆ ಹಾಗೂ ಲಂಡನ್ ಗೋಪುರಗಳ ನಡುವೆ ಸ್ಥಿತವಾಗಿರುವ ಪೂಲ್ ಆಫ್ ಲಂಡನ್‌ನಲ್ಲಿನ ಬಂದರಿಗೆ ಎತ್ತರದ ಪಟಸ್ತಂಭಗಳುಳ್ಳ ಹಡಗುಗಳು ಆಗಮಿಸಲು ಅಡ್ಡಿಯಾಗುವುದೆಂದು ಸಾಂಪ್ರದಾಯಿಕವಾದ ಸ್ಥಿರ ಸೇತುವೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ.
ನದಿ ದಾಟುವ ಸಮಸ್ಯೆಗೆ ಪರಿಹಾರ ಕಾಣಲೆಂದು, ೧೮೭೬ರಲ್ಲಿ, ಸರ್ ಆಲ್ಬರ್ಟ್ ಜೊಸೆಫ್ ಆಲ್ಟ್‌ಮನ್ ಅಧ್ಯಕ್ಷತೆಯುಳ್ಳ ವಿಶೇಷ ಸೇತುವೆ ಮತ್ತು ಸುರಂಗಮಾರ್ಗ ಸಮಿತಿ ರಚಿಸಲಾಯಿತು. ನದಿ ದಾಟಿನ ವಿನ್ಯಾಸ ಸ್ಪರ್ಧೆಯೊಂದನ್ನು ಘೋಷಿಸಿ, ಭಾಗವಹಿಸಿರೆಂದು ಸಾರ್ವಜನಿಕರನ್ನು ಆಮಂತ್ರಿಸಿತು. ನಿರ್ಮಾಣ ತಂತ್ರಜ್ಞಾನಿ,ಎಂಜನಿಯರ್ ಸರ್ ಜೊಸೆಫ್ ಬಝಲ್ಗೆಟ್‌ರದೂ ಸೇರಿದಂತೆ, ಸುಮಾರು ೫೦ಕ್ಕೂ ಹೆಚ್ಚು ವಿನ್ಯಾಸಗಳನ್ನು ಸಲ್ಲಿಸಲಾಯಿತು. ವಿನ್ಯಾಸಗಳ ಮೌಲ್ಯಮಾಪನೆಯ ಸುತ್ತ ವಿವಾದದ ಹೊಗೆ ಸುತ್ತಿಕೊಂಡಿತ್ತು. ಅಂತಿಮವಾಗಿ, ನಗರದ ವಾಸ್ತುಶಿಲ್ಪಿ ಹಾಗೂ ಈ ಸೇತುವೆ ವಿನ್ಯಾಸ ಸ್ಪರ್ಧೆಯ ತೀರ್ಪುಗಾರರಲ್ಲೊಬ್ಬರಾದ[೫] ಸರ್ ಹೊರೇಸ್ ಜೋನ್ಸ್ ೧೮೮೪ರಲ್ಲಿ ಸಲ್ಲಿಸಿದ ವಿನ್ಯಾಸವನ್ನು ಮಂಜೂರು ಮಾಡಲಾಯಿತು.
ಹಡಗುಕಟ್ಟೆಗಳ ಮೇಲೆ ನಿರ್ಮಿಸಲಾದ ಎರಡು ಗೋಪುರಗಳುಳ್ಳ ಸಮಸನ್ನೆ ಸೇತುವೆಯ ವಿನ್ಯಾಸವನ್ನು ಜೋನ್ಸ್‌ರ ಶಿಲ್ಪವಿಜ್ಞಾನಿ ಸರ್ ಜಾನ್ ವುಲ್ಫ್ ಬ್ಯಾರಿ ಕಲ್ಪಿಸಿದರು. ಮಧ್ಯದಲ್ಲಿನ ಕಮಾನನ್ನು ಎರಡು ಸಮನಾದ ಸಮಸನ್ನೆಗಳನ್ನಾಗಿ ಭಾಗಿಸಲಾಯಿತು. ನದಿಯಲ್ಲಿ ಹಡಗು ಹಾದುಹೋಗಲು ಅವುಗಳನ್ನು ಮೇಲೆತ್ತಬಹುದಾಗಿತ್ತು. ಗೋಪುರದ ಬದಿಗಳಲ್ಲಿರುವ ಎರಡು ಕಮಾನುಗಳು ತೂಗುಸೇತುವೆಗಳಾಗಿದ್ದವು. ಈ ತೂಗುಸೇತುವೆಗಳಿಗೆ ನೆಲ-ಆಧಾರಗಳು ಮತ್ತು ಸೇತುವೆಯ ಮೇಲ್ಬಾಗದ ಕಾಲ್ನಡಿಗೆ ಕಮಾನುಗಳು ಆನಿಕೆಗಳಾಗಿದ್ದವು.
ನಿರ್ಮಾಣ
[ಬದಲಾಯಿಸಿ]ಈ ನಿರ್ಮಾಣವು ೧೮೮೬ರಲ್ಲಿ ಆರಂಭವಾಗಿ, ಎಂಟು ವರ್ಷಗಳ ಕಾಲ ಮುಂದುವರೆದು, ೧೮೯೪ರಲ್ಲಿ ಸಂಪೂರ್ಣವಾಯಿತು. ಸೇತುವೆ ನಿರ್ಮಾಣದಲ್ಲಿ ಐದು ಪ್ರಮುಖ ಗುತ್ತಿಗೆದಾರರು (ಸರ್ ಜಾನ್ ಜ್ಯಾಕ್ಸನ್ (ಅಡಿಪಾಯಗಳು), ಬೆರೊನ್ ಆರ್ಮ್‌ಸ್ಟ್ರಾಂಗ್ (ದ್ರವೀಯ ತಂತ್ರವಿಜ್ಞಾನ), ವಿಲಿಯಂ ವೆಬ್‌ಸ್ಟರ್, ಸರ್ ಎಚ್ ಎಚ್ ಬಾರ್ಟ್‌ಲೆಟ್ ಮತ್ತು ಸರ್ ವಿಲಿಯಂ ಆರೊಲ್ & ಕಂಪೆನಿ[೬]) ಹಾಗೂ ೪೩೨ ನಿರ್ಮಾಣ ಕಾರ್ಮಿಕರು ಈ ಅದ್ದೂರಿ,ಭವ್ಯ ಸೇತುವೆಯ ನಿರ್ಮಾಣದಲ್ಲಿ ಪಾಲ್ಗೊಂಡರು. ಇ. ಡಬ್ಲ್ಯೂ ಕ್ರಟ್ವೆಲ್ ಈ ನಿರ್ಮಾಣ ಯೋಜನೆಯ ಸ್ಥಾನಿಕ ತಂತ್ರವಿಜ್ಞಾನಿಯಾಗಿದ್ದರು.[೭]
ನಿರ್ಮಾಣಕ್ಕೆ ಸಾಕಷ್ಟು ಸದೃಢ ಆಧಾರ ನೀಡಲೆಂದು, ೭೦,೦೦೦ ಟನ್‌ಗಳಷ್ಟು ಜಲ್ಲಿಗಾರೆಗಳುಳ್ಳ[೫] ಎರಡು ಭಾರೀ ಹಡಗುಕಟ್ಟೆಗಳನ್ನು ಥೇಮ್ಸ್ ನದಿಯ ತಳದಲ್ಲಿ ಸ್ಥಾಪಿಸಲಾಯಿತು. ಗೋಪುರಗಳು ಮತ್ತು ಕಾಲ್ನಡಿಗೆ ಕಮಾನುಗಳಿಗೆ ೧೧,೦೦೦ ಟನ್‌ಗಳಷ್ಟು ಉಕ್ಕು ಚೌಕಟ್ಟು ಆಧಾರವಾಗಿದ್ದವು.[೫] ನಂತರ, ಉಕ್ಕಿನ ನಿರ್ಮಾಣರಚನೆಗೆ ದೃಢ ರಕ್ಷಣೆ ಹಾಗೂ, ಸೇತುವೆಗೆ ಆಕರ್ಷಕ ನೋಟ ನೀಡಲು, ಕಾರ್ನಿಷ್ ಬೆಣಚುಕಲ್ಲು ಮತ್ತು ಪೋರ್ಟ್ಲೆಂಡ್ ಕಲ್ಲಿನ ಮೇಲುಲೇಪನ ಮಾಡಲಾಯಿತು.
ಆದರೆ ಜೋನ್ಸ್ ೧೮೮೭ರಲ್ಲಿ ನಿಧನರಾದರು. ಜಾರ್ಜ್ ಡಿ ಸ್ಟೀವೆನ್ಸನ್ ಈ ನಿರ್ಮಾಣ ಯೋಜನೆಯನ್ನು ವಹಿಸಿಕೊಂಡರು.[೫] ಸ್ಟೀವೆನ್ಸನ್ ಜೋನ್ಸ್ ವಿನ್ಯಾಸಿಸಿದ ಇಟ್ಟಿಗೆಯ ಮುಂಬದಿನೋಟವನ್ನು ಬದಲಾಯಿಸಿ, ಇನ್ನಷ್ಟು ಅಲಂಕಾರಮಯವಾದ ವಿಕ್ಟೋರಿಯನ್ ಗೋಥಿಕ್ ಶೈಲಿಯ ವಿನ್ಯಾಸ ರೂಪಿಸಿದರು. ಇದರಿಂದಾಗಿ ಈ ಸೇತುವೆಯು ಲಂಡನ್ ಮಹಾನಗರದ ಹೆಗ್ಗುರುತಾಯಿತು. ಜೊತೆಗೆ, ಸೇತುವೆಯನ್ನು ಸನಿಹದಲ್ಲಿರುವ ಲಂಡನ್ ಗೋಪುರದೊಂದಿಗೆ ಸಮೀಕರಣಗೊಳಿಸುವುದೂ ಇದರ ಹಿಂದಿನ ಇಂಗಿತವಾಗಿತ್ತು.[೭] ನಿರ್ಮಾಣದ ಒಟ್ಟು ವೆಚ್ಚ ೧,೧೮೪,೦೦೦[೭] ಬ್ರಿಟಿಷ್ ಪೌಂಡ್‌ಗಳಷ್ಟಿತ್ತು. (೨೦೨೪ರಂದು NaNಪೌಂಡ್‌ಗಳು).}}ಪೌಂಡ್‌ಗಳು).ಪೌಂಡ್‌ಗಳು).[೮]
ಸಾರ್ವಜನಿಕರಿಗಾಗಿ ಮುಕ್ತವಾದದ್ದು
[ಬದಲಾಯಿಸಿ]ವೇಲ್ಸ್ ರಾಜಕುಮಾರ (ಭವಿಷ್ಯತ್ ನ ಮಹಾರಾಜ ಏಳನೆಯ ಎಡ್ವರ್ಡ್) ಮತ್ತು ಅವರ ಪತ್ನಿ ವೇಲ್ಸ್ ರಾಜಕುಮಾರಿ (ಡೆನ್ಮಾರ್ಕ್‌ನ ಅಲೆಕ್ಸಾಂಡ್ರಾ) ಈ ಸೇತುವೆಯನ್ನು ಅಧಿಕೃತವಾಗಿ ೧೮೯೪ರ ಜೂನ್ ೩೦ರಂದು ಸಾರ್ವಜನಿಕರಿಗಾಗಿ ಮುಕ್ತಗೊಳಿಸಿದರು.[೯]
ಈ ಸೇತುವೆಯು, ಥೇಮ್ಸ್ ನದಿಯ ಉತ್ತರ ದಂಡೆಯಲ್ಲಿರುವ ಐರನ್ ಗೇಟ್ ಹಾಗೂ ದಕ್ಷಿಣ ದಂಡೆಯಲ್ಲಿರುವ ಹಾರ್ಸ್ಲಿಡೌನ್ ಲೇನ್ ನಡುವೆ ಸಂಪರ್ಕಮಾರ್ಗವಾಗಿದೆ. ಇವೆರಡೂ ಸ್ಥಳಗಳನ್ನು ಕ್ರಮವಾಗಿ ಟಾವರ್ ಬ್ರಿಡ್ಜ್ ಅಪ್ರೋಚ್ ಹಾಗೂ ಟಾವರ್ ಬ್ರಿಡ್ಜ್ ರೋಡ್ ಎನ್ನಲಾಗಿದೆ.[೭] ಈ ಸೇತುವೆ ಉದ್ಘಾಟನೆಯಾಗುವವರೆಗೂ, ಟಾವರ್ ಹಿಲ್ ನಿಂದ ಸೌತ್ವಾರ್ಕ್‌ನಲ್ಲಿರುವ ಟೂಲೆ ಸ್ಟ್ರೀಟ್‌ಗೆ ನದಿ ದಾಟಿ ಹೋಗಬೇಕೆಂದಿದ್ದಲ್ಲಿ, ೪೦೦ ಮೀಟರ್ ಪಶ್ಚಿಮದಲ್ಲಿರುವ ಗೋಪುರ ಸುರಂಗ (ಟಾವರ್ ಸಬ್ವೆ) ಮಾರ್ಗವು ಅತಿ ನೇರ ಮಾರ್ಗವಾಗಿತ್ತು. ಆಗ ೧೮೭೦ರಲ್ಲಿ ಉದ್ಘಾಟಿಸಲಾದ ಟಾವರ್ ಸಬ್ವೇ ವಿಶ್ವದಲ್ಲೇ ಮೊಟ್ಟಮೊದಲ ನೆಲದಡಿ 'ಟ್ಯೂಬ್', ಕೊಳವೆ ರೈಲುಮಾರ್ಗವಾಗಿತ್ತು. ಆದರೆ, ಕೇವಲ ಮೂರು ತಿಂಗಳ ನಂತರ ಇದನ್ನು ಮುಚ್ಚಿ, ಪಾದಚಾರಿ ಸುರಂಗ ಮಾರ್ಗವಾಗಿ ಪುನಃ ತೆರೆಯಲಾಯಿತು. ಗೋಪುರ ಸೇತುವೆ ಮುಕ್ತವಾದೊಡನೆಯೇ, ಎಲ್ಲಾ ಪಾದಚಾರಿ ಸಂಚಾರವು ಈ ಸೇತುವೆಯತ್ತ ತಿರುಗಿತು, ಆ ಸಮಯದಲ್ಲಿ ಸೇತುವೆಯ ಬಳಕೆಗೆ ಯಾವುದೇ ಸುಂಕಪಾವತಿಯ ಅಗತ್ಯವಿರಲಿಲ್ಲ. ಸುಂಕದ ಆದಾಯವಿಲ್ಲದ್ದರಿಂದ, ಈ ಸುರಂಗವನ್ನು ೧೮೯೮ರಲ್ಲಿ ಮುಚ್ಚಲಾಯಿತು.[೧೦]
ಲಂಡನ್ ನಗರ ಪಾಲಿಕೆ, ಸಿಟಿ ಆಫ್ ಲಂಡನ್ ಕಾರ್ಪೊರೇಷನ್ ಅಂಗಸಂಸ್ಥೆಯಾದ ಬ್ರಿಡ್ಜ್ ಹೌಸ್ ಎಸ್ಟೇಟ್ಸ್ ಎಂಬ ದತ್ತಿ ಸಂಸ್ಥೆಯು ಇದರ ಒಡೆತನ ಪಡೆದು ನಿರ್ವಹಿಸುತ್ತಿರುವ ಲಂಡನ್‌ನ ಐದು ಸೇತುವೆಗಳಲ್ಲಿ ಗೋಪುರ ಸೇತುವೆಯೂ ಒಂದು. ಈ ದತ್ತು ನಿರ್ವಹಿಸುವ ಸೇತುವೆಗಳ ಪೈಕಿ, ಲಂಡನ್ ನಗರವನ್ನು ಸೌತ್ವಾರ್ಕ್ ದಂಡೆಗೆ ಸಂಪರ್ಕಿಸದ ಏಕೈಕ ಸೇತುವೆಯಿದು. ಟಾವರ್ ಹ್ಯಾಮ್ಲೆಟ್ಸ್ ಇದರ ಉತ್ತರ ದಂಡೆಯಲ್ಲಿದೆ.
ವಿನ್ಯಾಸ
[ಬದಲಾಯಿಸಿ]ಗೋಪುರ ಸೇತುವೆಯು ೮೦೦ ಅಡಿ (೨೪೪ ಮೀಟರ್ ಉದ್ದವಿದೆ. ಇದರ ಗೋಪುರಗಳು ತಲಾ ೨೧೩ ಅಡಿ (೬೫ ಮೀಟರ್) ಎತ್ತರವಿದ್ದು, ಹಡಗುಗಟ್ಟೆಯ ಮೇಲೆ ನಿರ್ಮಿಸಲಾಗಿದೆ. ಗೋಪುರಗಳ ನಡುವೆ, ಮಧ್ಯದಲ್ಲಿರುವ ೨೦೦ ಅಡಿ (೬೧ ಮೀಟರ್) ಉದ್ದದ ಕಮಾನನ್ನು ಎರಡು ಸಮನಾದ ಸನ್ನೆಗಳಾಗಿ ಅಥವಾ ಸಮ ಜೋಡಿ ಎಲೆಗಳಂತೆ ವಿಭಾಗಿಸಲಾಗಿದೆ. ಈ ಸಮಸನ್ನೆಗಳನ್ನು ೮೩ ಡಿಗ್ರಿಗಳಷ್ಟು ಮೇಲೇರಿಸಿ, ನದಿಯಲ್ಲಿ ಹಡಗು, ದೋಣಿ ಇತ್ಯಾದಿ ಜಲಸಾರಿಗೆ ವಾಹನಗಳು ಸಂಚರಿಸಲು ಅವಕಾಶ ನೀಡಬಹುದು. ಅಗತ್ಯ ಬಲವನ್ನು ಕನಿಷ್ಠಗೊಳಿಸಲು, ೧,೦೦೦ ಟನ್‌ಗಳಿಗಿಂತಲೂ ಹೆಚ್ಚು ತೂಕವುಳ್ಳ ಪ್ರತಿಯೊಂದು ಸಮಸನ್ನೆಯನ್ನು ಸಮಭಾರಗೊಳಿಸಲಾಗಿದೆ. ಇದರಿಂದಾಗಿ, ಐದು ನಿಮಿಷಗಳಲ್ಲಿ ಅವನ್ನು ಎತ್ತಬಹುದಾಗಿದೆ.
ಎರಡೂ ಉಪ-ಕಮಾನುಗಳು ತೂಗುಸೇತುವೆಗಳಾಗಿವೆ. ಪ್ರತಿಯೊಂದು ಸೇತುವೆಯು 270 feet (82 m) ಉದ್ದವಿದೆ. ಇದರ ತೂಗು ಕಂಬಿಗಳು ನೆಲ ಆಧಾರ ಹಾಗೂ ಸೇತುವೆಯ ಮೇಲ್ಭಾಗದಲ್ಲಿರುವ ಕಾಲ್ನಡಿಗೆ ಕಮಾನುಗಳೊಳಗೆ ಇರುವ ಕಂಬಿಗಳ ಮೂಲಕ ಜೋಡಿಸಲಾಗಿವೆ. ಭೋರ್ಗರೆಯುವ ಅಲೆಯುಂಟಾಗುವಾಗ, ಪಾದಚಾರಿ ಕಮಾನುಗಳು ನದಿಯ ಮಟ್ಟಕ್ಕಿಂತ 143 feet (44 m) ಎತ್ತರವಿರುತ್ತವೆ.[೭]
ದ್ರವೀಯ ವ್ಯವಸ್ಥೆ
[ಬದಲಾಯಿಸಿ]ಹಲವು ದ್ರವೀಯ ಸಂಚಾಯಕ ಕೋಶಗಳಲ್ಲಿ ಹೆಚ್ಚು ವಾಯುಭಾರ ಸ್ಥಿತಿಯಲ್ಲಿ ಶೇಖರಿಸಲಾದ ನೀರಿನಿಂದ, ಎತ್ತರದ ಗೇಟ್ ಗಳನ್ನು ಮೂಲತಃ ಮೇಲಕ್ಕೇರುಸುವ ಯಂತ್ರವಿನ್ಯಾಸವನ್ನು ನಿರ್ವಹಿಸುತ್ತಿದ್ದವು.[೧೧]
ನ್ಯೂಕ್ಯಾಸ್ಲ್ ಅಪಾನ್ ಟೈನ್ ಮೂಲದ ಸರ್ ಡಬ್ಲ್ಯೂ. ಜಿ. ಆರ್ಮ್‌ಸ್ಟ್ರಾಂಗ್ ಮಿಚೆಲ್ & ಕಂಪೆನಿ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿ ಸಂಸ್ಥಾಪಿಸಿತು. ಇದರಲ್ಲಿ ೩೬೦ ಎಚ್‌ಪಿ ಸಾಮರ್ಥ್ಯವಿದ್ದ, ತಟಸ್ಥ ಹಬೆ ಯಂತ್ರಗಳು ನೀರನ್ನು ೭೫೦ ಪ್ರತಿ ಚದರ ಅಂಗುಲ ಒತ್ತಡದಲ್ಲಿ ಸಂಚಾಯಕ ಕೋಶದೊಳಗೆ ತಳ್ಳುತ್ತವೆ. ಪ್ರತಿಯೊಂದು ಯಂತ್ರದಲ್ಲಿ ಆಡುಬೆಣೆ ಮತ್ತು ದಂಡದ ವ್ಯವಸ್ಥೆಯುಳ್ಳ ಹೆಚ್ಚಿನ ಸಾಮರ್ಥ್ಯವುಳ್ಳ ಪಂಪ್ ಇದೆ. ಪ್ರತಿಯೊಂದು ಸಂಚಾಯಕ ಕೋಶದಲ್ಲಿ ೨೦-ಅಂಗುಲದ ನೀರೆತ್ತುವ ಸಾಧನವಿದ್ದು, ಇದರ ಮೇಲೆ ಅಗತ್ಯ ಒತ್ತಡ ಕಾಯ್ದುಕೊಳ್ಳಲು ಬಹಳ ಭಾರದ ತೂಕವನ್ನಿಡಲಾಗಿರುತ್ತದೆ.
ಈ ಮೂಲ ಯಂತ್ರದ ಬದಲಿಗೆ ಹೊಸದಾದ ವಿದ್ಯುತ್-ದ್ರವೀಯ ವ್ಯವಸ್ಥೆಯನ್ನು ೧೯೭೪ರಲ್ಲಿ ಸ್ಥಾಪಿಸಲಾಯಿತು. ಬಿಎಚ್‌ಎ ಕ್ರೊಮ್ವೆಲ್ ಹೌಸ್ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿತ್ತು. ಮೂಲ ವ್ಯವಸ್ಥೆಯಲ್ಲಿ ಹಲ್ಲು ಚಕ್ರಗಳನ್ನು ಮಾತ್ರ ಉಳಿಸಿಕೊಳ್ಳಲಾಯಿತು. ಸಮಸನ್ನೆಗಳಿಗೆ ಕೂಡಿಸಲಾದ ಕಚ್ಚುಗಳುಳ್ಳ ಸರಳುಗಳೊಂದಿಗೆ ಇವು ಕೂಡಿಕೊಳ್ಳುತ್ತವೆ. ಈ ದ್ರವೀಯ ವ್ಯವಸ್ಥೆಯ ನಿರ್ವಹಣೆಗಾಗಿ ನೀರಿನ ಬದಲು ತೈಲ ಬಳಸುವ, ಗಿಯರುಗಳುಳ್ಳ ಆಧುನಿಕ ದ್ರವೀಯ ಯಂತ್ರಗಳು ಈ ಸಮಸನ್ನೆಗಳನ್ನು ಏರಿಸುತ್ತವೆ ಹಾಗೂ ಇಳಿಸುತ್ತವೆ.[೧೨]
ಬಳಕೆಯಲ್ಲಿಲ್ಲದಿದ್ದರೂ, ಮೂಲ ದ್ರವೀಯ ಯಂತ್ರ ವ್ಯವಸ್ಥೆಯನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಸಾರ್ವಜನಿಕರಿಗಾಗಿ ಇದು ತೆರೆದಿದ್ದು, ಸೇತುವೆಯ ವಸ್ತುಪ್ರದರ್ಶನಾಲಯದ ಮೂಲವಾಗಿದೆ. ಸೇತುವೆಯ ದಕ್ಷಿಣ ಬದಿಯಲ್ಲಿರುವ ಹಳೆಯ ಯಂತ್ರ ಕೋಣೆಗಳಲ್ಲಿ ಈ ಪ್ರದರ್ಶನಾಲಯವಿದೆ. ಈ ವಸ್ತು ಪ್ರದರ್ಶನಾಲಯದಲ್ಲಿ ಹಬೆಯ ಯಂತ್ರಗಳು, ಎರಡು ಸಂಚಾಯಕ ಕೋಶಗಳು ಹಾಗೂ, ಸಮಸನ್ನೆಯನ್ನು ಚಲಾಯಿಸುವ ದ್ರವೀಯ ಯಂತ್ರಗಳಲ್ಲಿ ಒಂದು ಯಂತ್ರ ಹಾಗೂ ಅದಕ್ಕೆ ಸಂಬಂಧಿತ ಇತರೆ ಭಾಗಗಳೂ ಇವೆ.
ಮೂರನೆಯ ಹಬೆ ಯಂತ್ರ
[ಬದಲಾಯಿಸಿ]ಎರಡನೆಯ ವಿಶ್ವಸಮರದಲ್ಲಿ, ಆಗಿದ್ದ ಯಂತ್ರಗಳ ಮೇಲೆ ದಾಳಿ ನಡೆದಿತ್ತು, ಹೀಗೆ ಇದನ್ನು ನಾಶಗೊಳಿಸುವುದನ್ನು ತಪ್ಪಿಸಲು, ೧೯೪೨ರಲ್ಲಿ ಮೂರನೆಯ ಯಂತ್ರವನ್ನು ಸ್ಥಾಪಿಸಲಾಯಿತು.[೧೩] ನ್ಯೂಕ್ಯಾಸ್ಲ್ ಅಪಾನ್ ಟೈನ್ ಮೂಲದ ವಿಕರ್ಸ್ ಆರ್ಮ್‌ಸ್ಟ್ರಾಂಗ್ ಲಿಮಿಟೆಡ್ ಉದ್ದಿಮೆಯು ತಮ್ಮ ಎಲ್ಸ್‌ವಿಕ್ ಘಟಕದಲ್ಲಿ, ೧೫೦ ಎಚ್‌ಪಿ ಸಾಮರ್ಥ್ಯದ, ಅಡ್ಡಲಾದ, ಮಿಶ್ರಿತ ಸಂಕೀರ್ಣ ಯಂತ್ರ ಇದಾಗಿತ್ತು. ಇದಕ್ಕೆ 9-foot (2.7 m) ವ್ಯಾಸದ, ೯ ಟನ್ ತೂಕದ ನಿಯಂತ್ರಕ ಚಕ್ರವಿದ್ದು, ಅದರ ತಿರುಗುವ ವೇಗವನ್ನು ನಿಮಿಷಕ್ಕೆ ೩೦ ಸುತ್ತುಗಳಂತೆ ನಿಗದಿಪಡಿಸಲಾಯಿತು.[೧೩] ಇಡೀ ವ್ಯವಸ್ಥೆಯು ಅಧುನೀಕರಿಸುವುದರೊಂದಿಗೆ, ೧೯೭೪ರಲ್ಲಿ ಈ ಯಂತ್ರದ ಅಗತ್ಯವಿಲ್ಲದ್ದಾಯಿತು. ಲಂಡನ್ ನಗರ ಪಾಲಿಕೆಯು ಈ ಯಂತ್ರವನ್ನು ಫಾರ್ನ್‌ಸೆಟ್ ಇಂಡಸ್ಟ್ರಿಯಲ್ ಸ್ಟೀಮ್ ಮ್ಯೂಸಿಯಮ್‌ಗೆ ದಾನವಾಗಿ ನೀಡಿತು.[೧೩]
ಜಲಯಾನ ನಿಯಂತ್ರಣ
[ಬದಲಾಯಿಸಿ]ಸೇತುವೆಯ ಮೂಲಕ ಹಾದು ಹೋಗುವ ಥೇಮ್ಸ್ ನದಿಯಲ್ಲಿನ ಜಲಸಾರಿಗೆ ಸಂಚಾರ ನಿಯಂತ್ರಿಸಲು, ಹಲವು ವಿಭಿನ್ನ ನಿಯಮಾವಳಿ ಮತ್ತು ಸಂಕೇತಗಳನ್ನು ಬಳಸಲಾಯಿತು. ಹಗಲಿನ ವೇಳೆ, ಸೇತುವೆಯ ಎರಡೂ ಹಡಗುಕಟ್ಟೆಗಳ ತುದಿಗಳಲ್ಲಿರುವ ಸಣ್ಣ ನಿಯಂತ್ರಣಾ ಕೋಶಗಳಲ್ಲಿ ಸ್ಥಾಪಿಸಲಾಗಿರುವ ಕೆಂಪು ಬಣ್ಣದ ಸಂಕೇತ ಕಂಬಗಳು ಸಂಚಾರ ನಿಯಂತ್ರಣಗಳಲ್ಲಿ ನೆರವಾಗುತ್ತವೆ. ಇರುಳಿನ ವೇಳೆ, ಎರಡೂ ಹಡಗುಕಟ್ಟೆಗಳಲ್ಲಿ, ಪ್ರತಿ ದಿಕ್ಕಿನಲ್ಲಿ ಬಣ್ಣದ ದೀಪಗಳನ್ನು ಬಳಸಲಾಯಿತು. ಸೇತುವೆ ಮುಚ್ಚಿದೆಯೆಂದು ಸೂಚಿಸಲು ಎರಡು ಕೆಂಪು ದೀಪಗಳು ಹಾಗೂ ತೆರೆದಿದೆ ಎಂದು ಸೂಚಿಸಲು ಎರಡು ಹಸಿರು ದೀಪಗಳನ್ನು ಬೆಳಗಿಸಲಾಗುತ್ತದೆ. ಮಬ್ಬಿನ ವಾತಾವರಣದಲ್ಲಿ, ಎಚ್ಚರಿಕೆಗಾಗಿ ಜಾಗಟೆ ಸದ್ದು ಮಾಡಲಾಗುತ್ತಿತ್ತು.[೭]
ಸೇತುವೆಯ ಮೂಲಕ ಹಾದುಹೋಗುವ ಹಡಗುಗಳು ಸಹ ಸಂಕೇತಗಳನ್ನು ಸೂಚಿಸಬೇಕಿತ್ತು. ಹಗಲಿನ ವೇಳೆ,2 feet (0.61 m) ವ್ಯಾಸ ಅಳತೆಯುಳ್ಳ ಕಪ್ಪುಬಣ್ಣದ ಚೆಂಡನ್ನು ಎಲ್ಲೆಡೆಯೂ ಕಾಣುವುಷ್ಟು ಎತ್ತರಕ್ಕೆ ಕಟ್ಟಲಾಗುತ್ತಿತ್ತು. ರಾತ್ರಿಯ ವೇಳೆ, ಅದೇ ಎತ್ತರದಲ್ಲಿ ಎರಡು ಕೆಂಪು ದೀಪಗಳನ್ನು ಬೆಳಗಿಸಲಾಗುತ್ತಿತ್ತು. ಮಬ್ಬು ವಾತಾವರಣದಲ್ಲಿ ದೋಣಿ-ಹಡಗುಗಳ ಹಬೆ ಶಿಳ್ಳೆಯಿಂದ ಪದೇ-ಪದೇ ವಿಸ್ಫೋಟಕ ಸದ್ದು ಹೊರಡಿಸಬೇಕಾಯಿತು.[೭]
ಪ್ರತಿಯೊಂದು ಕಾಲ್ನಡಿಗೆ ಕಮಾನಿನ ಮಧ್ಯದಲ್ಲಿ, ಹಗಲಿನ ವೇಳೆ ಕಪ್ಪು ಚೆಂಡು, ಅಥವಾ, ರಾತ್ರಿಯ ವೇಳೆ ಕೆಂಪು ದೀಪ ತೂಗು ಹಾಕಿದ್ದಲ್ಲಿ, ಇದರ ಅರ್ಥ ಸೇತುವೆಯನ್ನು ತೆರೆಯಲಾಗದು ಎಂಬುದಾಗಿದೆ. ನದಿ ಹರಿವಿನ ದಿಕ್ಕಿನಲ್ಲಿ 1,000 yards (910 m) ಮುಂದೆ ಸಾಗಿ ಚೆರಿ ಗಾರ್ಡನ್ ಪಯರ್‌ನಲ್ಲಿ ಇದೇ ರೀತಿ ಸಂಕೇತಗಳನ್ನು ಪುನರಾವರ್ತಿಸಬೇಕಿತ್ತು. ಅಲ್ಲಿ ಸೇತುವೆಯ ಕೆಳಗೆ ಹಾದುಹೋಗುವ ದೋಣಿ-ಹಡಗುಗಳು, ಸೇತುವೆ ಸಂಚಾರ ಮೇಲ್ವಿಚಾರಕರನ್ನು ಎಚ್ಚರಿಸಲು, ತಮ್ಮ ಸಂಕೇತಗಳು/ದೀಪಗಳನ್ನು ಎತ್ತಿ ಪ್ರದರ್ಶಿಸಿ, ಸದ್ದು ಮಾಡಬೇಕಿತ್ತು.[೭]
ಸಂಕೇತ ಪ್ರದರ್ಶನಾ ಯಂತ್ರಗಳ ನಿಯಂತ್ರಣಾ ವ್ಯವಸ್ಥೆಯನ್ನು ಹಾಗೆಯೇ ಉಳಿಸಿ, ಸೇತುವೆಯ ವಸ್ತು ಪ್ರದರ್ಶನಾಲಯದಲ್ಲಿ ಚಾಲನಾ ಸ್ಥಿತಿಯಲ್ಲಿಯೇ ಇಡಲಾಗಿದೆ.
ಪ್ರತಿಕ್ರಿಯೆ
[ಬದಲಾಯಿಸಿ]ಈ ಸೇತುವೆಯು ಲಂಡನ್ ಮಹಾನಗರದ ಪ್ರಮುಖ ಹೆಗ್ಗುರುತು ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೂ ೨೦ನೆಯ ಶತಮಾನದ ಆರಂಭದಲ್ಲಿ ವಿಮರ್ಶಕರು ಈ ಸೇತುವೆಯ ಸೌಂದರ್ಯ ಕಲಾಸೃಷ್ಟಿಯನ್ನು ಟೀಕಿಸಿದ್ದರು. 'ಇದು ಅತ್ಯಾಡಂಬರ ಮತ್ತು ಡಾಂಭಿಕತೆಯ ಪ್ರತೀಕ, ಇದರಲ್ಲಿ ರಚನೆಯ ನೈಜ ವಿಚಾರಗಳ ಮರೆಮಾಚುವಿಕೆ ಬಹಳಷ್ಟಿದೆ ಎಂದು ಎಚ್.ಎಚ್. ಸ್ಟೇಟ್‌ಹ್ಯಾಮ್[೧೪] ಬರೆದರು. 'ಬಹಳ ಮಹತ್ವವಾದ ನದಿಗೆ ಅಡ್ಡಲಾಗಿರುವ ಗೋಪುರ ಸೇತುವೆಯಷ್ಟು ವಿಚಿತ್ರ ನಿರ್ಮಾಣ ಎಲ್ಲೂ, ಯಾವುದೂ ಇಲ್ಲ' ಎಂದು ಫ್ರ್ಯಾಂಕ್ ಬ್ರಾಂಗ್ವಿನ್ ಅಭಿಪ್ರಾಯ ತಿಳಿಸಿದರು.[೧೫]
ಅದಾದ ನಂತರ ೨೦೦೨ರ ಬಿಬಿಸಿ ಕಿರುತೆರೆ ಸಾಕ್ಷ್ಯಚಿತ್ರ ಸರಣಿ ಬ್ರಿಟನ್ಸ್ ಬಿಲ್ಡಿಂಗ್ಸ್ ಗಾಗಿ ತಮ್ಮ ನಾಲ್ಕು ಆಯ್ಕೆಗಳ ಪೈಕಿ ಗೋಪುರ ಸೇತುವೆಯೂ ಒಂದು ಎಂದು ವಾಸ್ತುಶೈಲಿಯ ಇತಿಹಾಸಜ್ಞ ಡ್ಯಾನ್ ಕ್ರುಯಿಕ್ಷಾಂಕ್ ಅಭಿಪ್ರಾಯಪಟ್ಟಿದ್ದರು.[೧೬]
ಗೋಪುರ ಸೇತುವೆ ಇಂದು
[ಬದಲಾಯಿಸಿ]ರಸ್ತೆ ಸಂಚಾರ
[ಬದಲಾಯಿಸಿ]ಗೋಪುರ ಸೇತುವೆಯು ಇಂದಿಗೂ ಸಹ ಥೇಮ್ಸ್ ನದಿಯಲ್ಲಿ ಅತಿ ನಿಬಿಡ ಮತ್ತು ಮಹತ್ವವಾದ ಹಾದಿಯಾಗಿದೆ. ಪ್ರತಿದಿನವೂ ಸುಮಾರು ೪೦,೦೦೦ ಜನರು (ವಾಹನ ಚಾಲಕರು, ಸೈಕಲ್ ಸವಾರರು ಮತ್ತು ಪಾದಚಾರಿಗಳು ಈ ಸೇತುವೆಯ ಮೂಲಕ ಸಂಚರಿಸುವರು.[೧೭] ಸೇತುವೆಯು ಲಂಡನ್ ಒಳ-ವರ್ತುಲ ರಸ್ತೆಯಲ್ಲಿದೆ. ಇದು ಲಂಡನ್ ನಿಬಿಡತಾ ಶುಲ್ಕ ವಲಯದ ಪೂರ್ವ ಗಡಿಯಲ್ಲಿದೆ. (ಈ ಸೇತುವೆ ಮೂಲಕ ಸಾಗಬಯಸುವ ಚಾಲಕರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.)
ಈ ಐತಿಹಾಸಿಕ ರಚನೆಯ ದೃಢತೆ ಕಾಪಾಡಲು, ಲಂಡನ್ ನಗರ ಪಾಲಿಕೆಯು ಈ ಸೇತುವೆಯ ಮೇಲೆ ಓಡಾಡುವ ವಾಹನಳ ಮೇಲೆ 20 miles per hour (32 km/h)ರಷ್ಟು ವೇಗ ನಿರ್ಬಂಧ ಹಾಗೂ ೧೮ ಟನ್‌ಗಳಷ್ಟು ತೂಕದ ನಿರ್ಬಂಧ ಹೇರಿದೆ. ಸೇತುವೆಯ ಮೂಲಕ ಹಾದುಹೋಗುವ ಸಂಚಾರವನ್ನು ಪರಿವೀಕ್ಷಿಸಲು, ಅಳೆಯಲು ಅತ್ಯಾಧುನಿಕ ಕ್ಯಾಮೆರಾ ವ್ಯವಸ್ಥೆಯಿದೆ. ಇದರಲ್ಲಿ ವಾಹನ ಸಂಖ್ಯಾ ಫಲಕ ಗುರುತಿಸುವ ವ್ಯವಸ್ಥೆಯಿದ್ದು, ಅತಿವೇಗವಾಗಿ ವಾಹನ ಚಲಾಯಿಸುತ್ತಿರುವ ಚಾಲಕರಿಗೆ ನಿರ್ದಿಷ್ಟ ದಂಡದ ನೋಟಿಸನ್ನು ರವಾನಿಸಲಾಗುವುದು.[೧೮]
ಎರಡನೆಯ ವಿಧಾನದ ವ್ಯವಸ್ಥೆಯು ವಾಹನದ ಇತರೆ ಪ್ರಮಿತಿಗಳ,ಸಂಚಾರ ವ್ಯತ್ಯಾಸಗಳ ಮೇಲೆ ನಿಗಾ ವಹಿಸುತ್ತದೆ. ಸೇತುವೆಯ ಮೇಲೆ ಹಾದುಹೋಗುವ ಪ್ರತಿಯೊಂದು ವಾಹನದ ತೂಕ, ನೆಲ ಮಟ್ಟದಿಂದ ವಾಹನ ಅಡಿಗಟ್ಟಿನ ಎತ್ತರ, ಹಾಗೂ ಆ ವಾಹನದ ಅಕ್ಷದಂಡಗಳೆಷ್ಟಿವೆ ಎಂಬುದನ್ನು ಗುರುತಿಸಿ ದಾಖಲಿಸಲು ಚೋದನಾ ಕುಣಿಕೆಗಳು ಮತ್ತು ಸಂಪೀಡನಾ ವಿದ್ಯುತ್ ಪರಿಶೋಧಕಗಳನ್ನು ಬಳಸಲಾಗುತ್ತದೆ.[೧೮]
ನದಿ ಸಂಚಾರ
[ಬದಲಾಯಿಸಿ]ವರ್ಷದಲ್ಲಿ ಸಮಸನ್ನೆಗಳನ್ನು ಸುಮಾರು ೧೦೦೦ ಬಾರಿ ಎತ್ತರಿಸಲಾಗುತ್ತದೆ.[೧೯] ನದಿಯಲ್ಲಿನ ಸಂಚಾರದ ದಟ್ಟಣೆ ಕಡಿಮೆಯಾಗಿದ್ದರೂ, ರಸ್ತೆ ಸಂಚಾರಕ್ಕಿಂತಲೂ ಇದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಇಂದು, ಸೇತುವೆ ತೆರೆಯುವ ಮುಂಚೆ ೨೪ ಗಂಟೆಗಳ ಮುನ್ಸೂಚನೆ ನೀಡಬೇಕಾಗುತ್ತದೆ. ನದಿಯಲ್ಲಿ ಹಾದುಹೋಗುವ ದೋಣಿ-ಹಡಗುಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.
ಸಮಸನ್ನೆಗಳ ಪರೋಕ್ಷ ಏರಿಸುವಿಕೆ ಮತ್ತು ಇಳಿಸುವಿಕೆಗಾಗಿ, ೨೦೦೦ನೆಯ ಇಸವಿಯಲ್ಲಿ ಕಂಪ್ಯೂಟರ್ ವ್ಯವಸ್ಥೆಯೊಂದನ್ನು ಸ್ಥಾಪಿಸಲಾಯಿತು. ಆದರೆ ಅದು ನಿರೀಕ್ಷಿತ ಮಟ್ಟಕ್ಕೆ ಉಪಯುಕ್ತವಾಗದೇ, ೨೦೦೫ರಲ್ಲಿ ಸೇತುವೆಯು ಹಲವು ಬಾರಿ ತೆರೆದುಕೊಂಡ ಅಥವಾ ಮುಚ್ಚಿದ ಸ್ಥಿತಿಯಲ್ಲೇ ಇತ್ತು. ಇದರ ಪರಿಣಾಮವಾಗಿ ಅದರ ಸಂವೇದಕಗಳನ್ನು ಬದಲಾಯಿಸಲಾಯಿತು.[೧೭]
ಗೋಪುರ ಸೇತುವೆ ಪ್ರದರ್ಶನ
[ಬದಲಾಯಿಸಿ]ಗೋಪುರಗಳ ನಡುವಿನ ಎತ್ತರದ ಕಾಲ್ನಡಿಗೆ ಕಮಾನುಗಳು ವೇಶ್ಯೆಯರು ಮತ್ತು ಜೇಬುಗಳ್ಳರ ತಾಣವಾಗಿ ಕುಖ್ಯಾತಿ ಗಳಿಸಿದ ಕಾರಣ, ೧೯೧೦ರಲ್ಲಿ ಅವನ್ನು ಮುಚ್ಚಲಾಯಿತು. ಗೋಪುರ ಸೇತುವೆ ಪ್ರದರ್ಶನದ ಅಂಗವಾಗಿ ಕಾಲ್ನಡಿಗೆ ಕಮಾನುಗಳನ್ನು ೧೯೮೨ರಲ್ಲಿ ತೆರೆಯಲಾಯಿತು. ಈ ಪ್ರದರ್ಶನವನ್ನು ಇಂದು ಸೇತುವೆಯ ಅವಳಿ ಗೋಪುರಗಳು, ಅತ್ಯೆತ್ತರದ ಕಾಲ್ನಡಿಗೆ ಕಮಾನುಗಳು ಹಾಗೂ ವಿಕ್ಟೋರಿಯನ್ ಯಂತ್ರ ಕೋಣೆಗಳಲ್ಲಿ ನಡೆಸಲಾಗುತ್ತದೆ. ಕಾಲ್ನಡಿಗೆ ಕಮಾನುಗಳಿಂದ ಥೇಮ್ಸ್ ನದಿ ಹಾಗೂ ಲಂಡನ್‌ನ ಇತರೆ ಖ್ಯಾತ ತಾಣಗಳ ಭವ್ಯ ನೋಟ ನೋಡಬಹುದು. ಪ್ರತಿ ವರ್ಷ ಆಗಮಿಸುವ ಸುಮಾರು ೩೮೦,೦೦೦ಕ್ಕೂ ಹೆಚ್ಚು ಪ್ರವಾಸಿಗಳಿಗೆ[ಸೂಕ್ತ ಉಲ್ಲೇಖನ ಬೇಕು] ಈ ಕಮಾನುಗಳು ವೀಕ್ಷಣಾ ಪಂಕ್ತಿಗಳಂತಿವೆ. ಈ ಪ್ರದರ್ಶನದಲ್ಲಿ ಚಲನಚಿತ್ರಗಳು, ಸ್ಥಬ್ದಚಿತ್ರಗಳು ಹಾಗೂ, ಗೋಪುರ ಸೇತುವೆಯನ್ನು ಏಕೆ ಹಾಗೂ ಹೇಗೆ ನಿರ್ಮಾಣವಾಯಿತು ಎಂಬುದನ್ನು ವಿವರಿಸಲು, ಅಂತರಸಂಪರ್ಕವುಳ್ಳ ಪ್ರದರ್ಶನ ಫಲಕಗಳಿವೆ. ಸೇತುವೆಯ ದಕ್ಷಿಣ ಕೊನೆಯಲ್ಲಿನ ಹತ್ತಿರದ ಕಟ್ಟಡವೊಂದರಲ್ಲಿ, ಹಿಂದೆ ಸೇತುವೆಯ ಮೂಲ ಸಮಸನ್ನೆ, ಹಬೆ ಯಂತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.
೨೦೦೮–೨೦೧೨ ಅವಧಿಯಲ್ಲಿನ ನವೀಕರಣ
[ಬದಲಾಯಿಸಿ]ಸುಮಾರು ನಾಲ್ಕು ದಶಲಕ್ಷ ಪೌಂಡ್ ವೆಚ್ಚದಲ್ಲಿ ೨೦೦೮ರ ಏಪ್ರಿಲ್ ತಿಂಗಳಲ್ಲಿ ಸೇತುವೆಗಾಗಿ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ, ಈ ಕಾರ್ಯವು ನಾಲ್ಕು ವರ್ಷಗಳ ಕಾಲ ನಡೆಯುವುದೆಂದು ಪ್ರಕಟಿಸಲಾಗಿದೆ. ಈ ನವೀಕರಣ ಕಾರ್ಯದಲ್ಲಿ ಇರುವ ಬಣ್ಣಲೇಪನವನ್ನು ಮೂಲ ಲೋಹ ಕಟ್ಟುಗಳ ವರೆಗೆ ಕಿತ್ತುಹಾಕಿ, ಅವನ್ನು ಪುನಃ ನೀಲಿ ಮತ್ತು ಬಿಳಿ ಬಣ್ಣಗಳ ಮರುಲೇಪನ ಮಾಡುವುದಾಗಿತ್ತು. ಹಳೆಯ ರಂಗು ಥೇಮ್ಸ್ ನದಿ ನೀರಿನಲ್ಲಿ ಬಿದ್ದು ಮಲಿನಗೊಳಿಸುವುದನ್ನು ತಡೆಗಟ್ಟಲು, ಪ್ರತಿ ವಿಭಾಗವನ್ನು ಸಾರುವೆಗಳು ಮತ್ತು ಪ್ಲ್ಯಾಸ್ಟಿಕ್ ಹಾಳೆಗಳಲ್ಲಿ ಮುಚ್ಚಲಾಯಿತು. ಹೀಗೆ ೨೦೦೮ರ ಮಧ್ಯಾವಧಿಯಿಂದ ಆರಂಭಗೊಂಡು, ಅಡಚಣೆಯನ್ನು ಕನಿಷ್ಠಗೊಳಿಸಲು, ಗುತ್ತಿಗೆದಾರರು ಒಂದು ಹೊತ್ತಿಗೆ ಸೇತುವೆಯ ನಾಲ್ಕನೆಯ ಒಂದು ಭಾಗದಲ್ಲಿ ತಮ್ಮ ಕೆಲಸ ಆರಂಭಿಸಿದರು. ಆದರೂ ಕೆಲವು ಕೆಲವು ಬಾರಿ ರಸ್ತೆಯನ್ನು ಅನಿವಾರ್ಯವಾಗಿ ಮುಚ್ಚಲಾಯಿತು. ಸಂಪೂರ್ಣಗೊಂಡ ಈ ಸುಸಜ್ಜಿಕೆಯ ನವೀಕರಣವು ೨೫ ವರ್ಷಗಳ ತನಕ ತಾಳಿಕೊಳ್ಳುವುದೆಂಬ ನಿರೀಕ್ಷೆಯಿದೆ.[೨೦]
ಕಾಲ್ನಡಿಗೆ ಕಮಾನಿನ ಒಳಭಾಗವನ್ನು ೨೦೦೯ರ ಮಧ್ಯಾವಧಿಯಲ್ಲಿ ಸಂಪೂರ್ಣಗೊಳಿಸಲಾಯಿತು. ಕಾಲ್ನಡಿಗೆ ಕಮಾನುಗಳೊಳಗೆ, ಎಲೆನಿ ಷಿಯರ್ಲಿಸ್ ವಿನ್ಯಾಸ ಮಾಡಿ, ಸ್ಥಾಪಿಸಿದ ಬಹು-ಉಪಯೋಗಿ ನೂತನ ದೀಪವ್ಯವಸ್ಥೆಗಳಿವೆ. ಪ್ರದರ್ಶನಗಳು ಅಥವಾ ಸಮಾರಂಭಗಳು ನಡೆಯುವಾಗ ಈ ಕಾಲ್ನಡಿಗೆ ಕಮಾನುಗಳಲ್ಲಿನ ದೀಪಗಳನ್ನು ಬೆಳಗಿಸಲಾಗುವುದು. ಹೊಸ ವ್ಯವಸ್ಥೆಯಲ್ಲಿ ಲಕ್ಷಣದ ಮತ್ತು ವಾತಾವರಣದ ಬೆಳಕು ವ್ಯವಸ್ಥೆಗಳಿವೆ. ವಾತಾವರಣದ ಬೆಳಕು ವ್ಯವಸ್ಥೆಯಲ್ಲಿ ಆರ್‌ಜಿಬಿ ಎಲ್‌ಇಡಿ ಸಾಧನಗಳಿವೆ. ಇವುಗಳನ್ನು ಸೇತುವೆಯ ಮೇಲುರಚನೆಗಳಲ್ಲಿ ಮರೆಮಾಚುವಂತೆ ವಿನ್ಯಾಸಿಸಲಾಗಿವೆ. ಜೊತೆಗೆ ಸೇತುವೆಯಲ್ಲಿ ತೂತು ಮಾಡದೇ ಈ ದೀಪಗಳನ್ನು ಸ್ಥಾಪಿಸಬಹುದು. (ಸೇತುವೆಯು ಗ್ರೇಡ್ ೧ ಸ್ಥಾನಮಾನ ಹೊಂದಿರುವ ಕಾರಣ ತೂತು ಮಾಡಬಾರದೆಂಬ ಕಟ್ಟುಪಾಡುಗಳಿವೆ).[೨೧]
ಆರು ಪದರಗಳ 'ರಂಗು ಲೇಪನ' ಅಗತ್ಯವಿದ್ದ ಅತ್ಯಾಧುನಿಕ ಲೇಪನಾ ವ್ಯವಸ್ಥೆ ಬಳಸಿ, ನಾಲ್ಕು ತೂಗು ಸರಪಳಿಗಳ ನವೀಕರಣ ಕಾರ್ಯವನ್ನು ೨೦೧೦ರ ಮಾರ್ಚ್ ತಿಂಗಳಲ್ಲಿ ಸಂಪೂರ್ಣಗೊಳಿಸಲಾಯಿತು.[೨೨]
ಘಟನಾವಳಿಗಳು
[ಬದಲಾಯಿಸಿ]ಆಗ ೧೯೫೨ರ ಡಿಸೆಂಬರ್ ತಿಂಗಳಲ್ಲಿ, ಸೇತುವೆಯ ಮೇಲೆ ೭೮ ಸಂಖ್ಯೆಯ ಮಹಡಿ ಬಸ್ಸು (ಸ್ಟಾಕ್ ಸಂಖ್ಯೆ ಆರ್‌ಟಿ ೭೯೩) ಹಾದು ಹೋಗುತ್ತಿದ್ದಾಗ, ಸೇತುವೆ ತೆರೆದುಕೊಂಡಿತು. ಆ ಸಮಯ, ಸೇತುವೆಯಲ್ಲಿ ಯಾವ ವಾಹನವೂ ಚಲಿಸುತ್ತಿಲ್ಲ ಎಂಬುದನ್ನು ಖಚಿತ ಪಡಿಸಿ, ದ್ವಾರ ನಿರ್ವಾಹಕ ಎಚ್ಚರಿಕೆಯ ಗಂಟೆ ಬಾರಿಸಿ, ದ್ವಾರಗಳನ್ನು ಮುಚ್ಚಿದ ನಂತರ ಕಾವಲುಗಾರನು ಸಮಸನ್ನೆಗಳನ್ನು ಏರಿಸಿದ್ದನು. ಬದಲಿ ಕಾವಲುಗಾರನು ಕಾರ್ಯಸ್ಥಳದಲ್ಲಿದ್ದ ಕಾರಣ ಈ ಪ್ರಕ್ರಿಯೆಯಲ್ಲಿ ಎಡವಟ್ಟಾಯಿತು. ಬಸ್ಸು ಏರುತ್ತಿದ್ದ ದಕ್ಷಿಣ ಸಮಸನ್ನೆಯ ತುದಿಯ ಬಹು ಸನಿಹವಿತ್ತು. ಬಸ್ ಚಾಲಕ ಆಲ್ಬರ್ಟ್ ಗಂಟರ್ ತಕ್ಷಣ ಬಸ್ಸಿನ ವೇಗವನ್ನು ಹೆಚ್ಚಿಸಲು ನಿರ್ಧರಿಸಿದರು. ಇದರಿಂದಾಗಿ ಬಸ್ ಹಾರಿ, ಮೂರು ಅಡಿ ಕೆಳಗಿದ್ದ, ಇನ್ನೂ ಏರದಿದ್ದ ಉತ್ತರ ಭಾಗದ ಸಮಸನ್ನೆಯ ಮೇಲೆ ಬಿದ್ದಿತು. ಬಸ್ಸಿನಲ್ಲಿದ್ದವರೆಲ್ಲರ ಗ್ರಹಾಚಾರ ಚೆನ್ನಾಗಿತ್ತು. ಯಾರಿಗೂ ಗಂಭೀರ ಗಾಯಗಳಾಗಿರಲಿಲ್ಲ.[೨೩]
ಹಾಕರ್ ಹಂಟರ್ ಸೇತುವೆ ಘಟನೆ ೧೯೬೮ರ ಏಪ್ರಿಲ್ ೫ರಂದು ಸಂಭವಿಸಿತು. ಫ್ಲೈಟ್ ಲೆಫ್ಟಿನೆಂಟ್ ಅಲ್ಯಾನ್ ಪೊಲಕ್ ಹಾರಿಸುತ್ತಿದ್ದ, ನಂಬರ್ ೧ ಸ್ಕ್ವಾಡ್ರಾನ್‌ಗೆ ಸೇರಿದ್ದ ರಾಯಲ್ ಏರ್ ಫೋರ್ಸ್ ಹಾಕರ್ ಹಂಟರ್ ಎಫ್‌ಜಿಎ.೯ ಜೆಟ್ ಯುದ್ಧವಿಮಾನವು ಗೋಪುರ ಸೇತುವೆಯ ಕೆಳಗೆ ಹಾರಿ ಹೋಯಿತು. ಆರ್‌ಎಫ್‌ನ ೫೦ನೆಯ ವಾರ್ಷಿಕೋತ್ಸವದ ಅಂಗವಾಗಿ ವರಿಷ್ಠ ಸಿಬ್ಬಂದಿಯು ವಿಮಾನ ಹಾರಿಸದಿರುವ ವಿಚಾರದಿಂದ ಅಸಮಾಧಾನಗೊಂಡ ಪೊಲಕ್ ಅವರೇ ಏನಾದರೂ ಸಾಹಸ ಮಾಡೋಣವೆಂದಿದ್ದರು. ಯಾವುದೇ ಅನುಮತಿ ಪಡೆಯದೇ, ಪೊಲಕ್ ತಮ್ಮ ಹಂಟರ್ ವಿಮಾನವನ್ನು ಥೇಮ್ಸ್ ನದಿಯ ಮೇಲೆ ಅತಿ ಕೆಳ ಮಟ್ಟದಲ್ಲಿ ಹಾರಿಸಿಕೊಂಡು, ಸಂಸತ್ ಭವನ (ಹೌಸ್ ಆಫ್ ಪಾರ್ಲಿಮೆಂಟ್) ದಾಟಿ, ಗೋಪುರ ಸೇತುವೆಯತ್ತ ಮುಂದುವರೆದರು. ಸೇತುವೆಯ ಕಾಲ್ನಡಿಗೆ ಕಮಾನಿನ ಕೆಳಗೆ ಹಾರಿಸಿಕೊಂಡು ಹೋದರು. ನಂತರ ಪೊಲಕ್ ಹೇಳಿದ ಪ್ರಕಾರ, ತಮ್ಮೆದುರಿಗೆ ಸೇತುವೆ ಕಾಣಿಸಿದಾಗ ಆ ರೀತಿ ಮಧ್ಯಭಾಗದಲ್ಲಿ ಹೋಗುವುದು ಕೊನೆಯ ಘಳಿಗೆಯ ನಿರ್ಧಾರವಾಗಿತ್ತು. ಅವರು ವಿಮಾನ ಹಾರಿಸುವುದನ್ನು ಮುಗಿಸಿ ನೆಲ ಮುಟ್ಟಿದೊಡನೆ ಅವರನ್ನು ಬಂಧಿಸಲಾಯಿತು. ಸೈನಿಕ ನ್ಯಾಯಾಲಯದಲ್ಲಿ ವಿಚಾರಣೆ ಹಾಗೂ ತಮ್ಮ ವಾದ ಮಂಡಿಸಲು ಯಾವುದೇ ಅವಕಾಶ ನೀಡದೇ, ವೈದ್ಯಕೀಯ ಕಾರಣಗಳಿಗಾಗಿ ಅವರನ್ನು ಆರ್‌ಎಫ್ ಸೇವೆಯಿಂದ ಹೊರಕಳಿಸಲಾಯಿತು.[೨೪][೨೫]
ನಂತರ ೧೯೭೩ರ ಬೇಸಿಗೆಯಲ್ಲಿ, ೨೯ ವರ್ಷ ವಯಸ್ಸಿನ ಸ್ಟಾಕ್ ದಳ್ಳಾಳಿ ಪಾಲ್ ಮಾರ್ಟಿನ್ ಏಕೈಕ ಇಂಜಿನ್ನಿನ ಬೀಗಲ್ ಪಪ್ ವಿಮಾನವನ್ನು ಗೋಪುರ ಸೇತುವೆಯ ಕಾಲ್ನಡಿಗೆ ಕಮಾನಿನ ಕೆಳಗೆ ಎರಡು ಸಲ ಹಾರಿಸಿಕೊಂಡು ಹೋದರು. ಸ್ಟಾಕ್ ಮಾರುಕಟ್ಟೆ ಹಗರಣದ ಆರೋಪ ಎದುರಿಸುತ್ತಿದ್ದ ಪಾಲ್ ಮಾರ್ಟಿನ್ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಅವರು 'ನಗರ'ದಲ್ಲಿನ ಕಟ್ಟಡಗಳ ಬಹು ಸನಿಹ 'ದುಂಬಿ'ಯಂತೆ ವಿಮಾನ ಹಾರಿಸಿದರು. ಉತ್ತರ ದಿಕ್ಕಿನಲ್ಲಿ ಲೇಕ್ ಡಿಸ್ಟ್ರಿಕ್ಟ್‌ನತ್ತ ಹಾರಿದರು. ಎರಡು ಗಂಟೆಗಳ ನಂತರ ಅವರ ವಿಮಾನ ಅಪಘಾತಕ್ಕೀಡಾಗಿ ಪಾಲ್ ಸ್ಥಳದಲ್ಲೇ ಮೃತರಾದರು.[೨೬]
ಈ ಹಿಂದೆ ೧೯೯೭ ರ ಮೇ ತಿಂಗಳಲ್ಲಿ,[೨೭] ಅಮೆರಿಕಾ ಸಂಯುಕ್ತ ಸಂಸ್ಥಾನದ ಅಂದಿನ ರಾಷ್ಟ್ರಾಧ್ಯಕ್ಷ ಬಿಲ್ ಕ್ಲಿಂಟನ್‌ರ ರಕ್ಷಣಾ ವಾಹನ ಸಾಲು, ಸೇತುವೆಯ ತೆರವಿನ ಬಳಿ ಇಬ್ಭಾಗವಾಯಿತು. ಗ್ಲ್ಯಾಡಿಸ್ ಎಂಬ ಥೇಮ್ಸ್ ನದಿಯ ತೇಲುವ ಚಪ್ಪಟೆ ದೋಣಿ ಸೇಂಟ್ ಕ್ಯಾತರೀನ್ ಡಾಕ್ಸ್‌ನತ್ತ ಸಾಗುತ್ತಿದ್ದು, ನಿಗದಿತ ಸಮಯಕ್ಕೆ ಆಗಮಿಸಿದ್ದ ಕಾರಣ, ಸೇತುವೆಯನ್ನು ತೆರೆಯಲಾಯಿತು. ಯುನೈಟೆಡ್ ಕಿಂಗ್ಡಮ್‌ನ ಅಂದಿನ ಪ್ರಧಾನಿ ಟೊನಿ ಬ್ಲೇರ್‌ರೊಂದಿಗೆ, ಥೇಮ್ಸ್ ನದಿಯ ಪಕ್ಕದಲ್ಲಿರುವ ಲೆ ಪಾಂಟ್ ಡಿ ಲ್ಯಾ ಟೂರ್ ಭೋಜನಾ ಕೇಂದ್ರದಲ್ಲಿ ಊಟ ಮುಗಿಸಿ ವಾಪಸಾಗುತ್ತಿದ್ದ ಬಿಲ್ ಕ್ಲಿಂಟನ್ ಸೂಕ್ತ ಸಮಯಕ್ಕೆ ಆಗಮಿಸಿರಲಿಲ್ಲ. ಸೇತುವೆ ಬಾಗಿಲು ಮೇಲೆಕ್ಕೇರುತ್ತಿದ್ದಾಗ ಅವರು ಅಲ್ಲಿ ಆಗಮಿಸಿದ್ದರು. ಸೇತುವೆಯ ತೆರೆಯುವಿಕೆಯಿಂದಾಗಿ ವಾಹನಗಳ ಸಾಲು ಇಬ್ಭಾಗವಾಗಿ, ರಕ್ಷಣಾ ಸಿಬ್ಬಂದಿಯವರು ಸಿಡಿಮಿಡಿಗೊಂಡರು. ಗೋಪುರ ಸೇತುವೆಯ ವಕ್ತಾರರು ಹೇಳಿದಂತೆ, 'ನಾವು ಅಮೆರಿಕನ್ ದೂತಾವಾಸ ಕಾರ್ಯಾಲಯವನ್ನು ದೂರವಾಣಿಯ ಮೂಲಕ ಸಂಪರ್ಕಿಸಲು ಯತ್ನಿಸಿದೆವು, ಆದರೆ ಅವರು ಕರೆಯನ್ನು ಸ್ವೀಕರಿಸುತ್ತಿಲ್ಲ ಎಂಬುದು ಅವರ ಉತ್ತರವಾಗಿತ್ತು.[೨೮]
ಹೀಗೆ ೧೯೯೯ರ ಆಗಸ್ಟ್ ೧೯ರಂದು, ಲಂಡನ್ ನಗರದ ಮುಕ್ತ ಪ್ರಜೆ ಜೆಫ್ ಸ್ಮಿತ್ ಕುರಿಗಳ ಎರಡು ಹಿಂಡುಗಳನ್ನು ಸೇತುವೆಯತ್ತ ನಡೆಸಿಕೊಂಡು ಹೋದರು. ಪುರಾತನ ಕಾಲದಲ್ಲಿ, ಫ್ರೀಮೆನ್‌ಗಳಿಗೆ ನೀಡಲಾಯಿತು ಎನ್ನಲಾದ ಹಳೆಯ ಅನುಮತಿಯೊಂದನ್ನು ಅವರು ಸಮರ್ಥಿಸುತ್ತಿದ್ದರು. ವಯೋವೃದ್ಧ ನಾಗರಿಕರ ಹಕ್ಕುಗಳು ಹಾಗೂ ಅವುಗಳನ್ನು ಹೇಗೆ ಮರೆಮಾಚಲಾಗುತ್ತಿದೆ ಎಂಬುದರ ಕುರಿತು ಅವರು ವಿಷಯ ಪ್ರಸ್ಥಾಪಿಸುತ್ತಿದ್ದರು.[೨೯]
ಬೆಳಗಿನ ಜಾವದ ೨೦೦೩ರ ಅಕ್ಟೋಬರ್ ೩೧ರಂದು, ಫಾದರ್ಸ್ ೪ ಜಸ್ಟಿಸ್ ಕಾರ್ಯಕರ್ತ ಡೇವಿಡ್ ಕ್ರಿಕ್ ಸ್ಪೈಡರ್‌ಮ್ಯಾನ್ ವೇಷ ಧರಿಸಿ, ಗೋಪುರ ಸೇತುವೆಯ ಬಳಿ 100 ft (30 m) ಗೋಪುರ ಕ್ರೇನುಯಂತ್ರವನ್ನು ಏರಿ, ತಮ್ಮ ಆರು ದಿನಗಳ ಕಾಲದ ಧರಣಿ ಆರಂಭಿಸಿದ್ದರು.[೩೦] ಅವರು ಒಂದು ವೇಳೆ ಕೆಳಗೆ ಬಿದ್ದಲ್ಲಿ, ಅವರ ಹಾಗೂ ಕೆಳಗೆ ಓಡಾಡುತ್ತಿರುವ ವಾಹನ ಸವಾರರ ಸುರಕ್ಷತೆಯ ಬಗ್ಗೆ ತಳಮಳಗೊಂಡ ಪೊಲೀಸರು ಆ ಸ್ಥಳವನ್ನು ಸುತ್ತುವರೆದು, ಸೇತುವೆ ಹಾಗೂ ಸುತ್ತಮುತ್ತಲ ರಸ್ತೆಗಳನ್ನು ಮುಚ್ಚಿದರು. ಇದರಿಂದಾಗಿ ನಗರದೆಲ್ಲೆಡೆ ಹಾಗೂ ಲಂಡನ್‌ನ ಪೂರ್ವ ಭಾಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಆ ಸಮಯ, ಕಟ್ಟಡದ ನಿರ್ಮಾಣ ಗುತ್ತಿಗೆದಾರ ಕಂಪನಿಯು, ಟೇಯ್ಲರ್ ವುಡ್ರೊ ಕನ್ ಸ್ಟ್ರಕ್ಷನ್ ಲಿಮಿಟೆಡ್ ಕೆ೨ ಎಂಬ ಹೊಸ ಕಾರ್ಯಾಲಯ ಕಟ್ಟಡ ನಿರ್ಮಾಣದಲ್ಲಿ ತೊಡಗಿತ್ತು. ನಂತರ, ನಾಗರಿಕರ ಹಿತದೃಷ್ಟಿಯಿಂದ ಹಲವು ದಿನಗಳ ಕಾಲ ರಸ್ತೆಗಳನ್ನು ಮುಚ್ಚುವ ಅಗತ್ಯವಿಲ್ಲದಿದ್ದರೂ, ಮಹಾನಗರ ಪೊಲೀಸರು, ರಸ್ತೆಗಳನ್ನು ಹಲವು ದಿನಗಳ ಕಾಲ ಮುಚ್ಚುವ ನಿರ್ಧಾರವನ್ನು ಟೀಕಿಸಲಾಯಿತು.[೩೧][೩೨]
ಆಗ ೨೦೦೯ರ ಮೇ ೧೧ರಂದು, ಸೇತುವೆಯ ಉತ್ತರ ಭಾಗದ ಗೋಪುರದೊಳಗಿನ ಲಿಫ್ಟ್ 10 ft (3 m) ಕೆಳಬಿದ್ದು, ಆರು ಜನರು ಒಳಗೆ ಸಿಕ್ಕಿಹಾಕಿಕೊಂಡು ಗಾಯಗೊಂಡರು.[೩೩][೩೪]
ಜನಪ್ರಿಯ ಸಂಸ್ಕೃತಿ
[ಬದಲಾಯಿಸಿ]Lego retail model kit of Tower Bridge: the designer describes the near-scale model (over 1m long with 4287 pieces).[೩೫] |
ಆದರೆ ೨೦೦೯ರ ಚಲನಚಿತ್ರ ಷರ್ಲಾಕ್ ಹೋಮ್ಸ್ ನಲ್ಲಿ ಸಿಜಿಐನ ಮಾಹಿತಿಯಂತೆ ಗೋಪುರ ಸೇತುವೆಯನ್ನು ಇನ್ನೂ ನಿರ್ಮಾಣ ಹಂತದಲ್ಲಿದೆಯೆಂದು ನಿರೂಪಿಸಲಾಗಿದೆ. ಚಲನಚಿತ್ರದ ಅಂತಿಮ ಹಂತಗಳಲ್ಲಿ ಒಂದನ್ನು ಸೇತುವೆಯ ಮೇಲೆ ಚಿತ್ರೀಕರಿಸಲಾಗಿದೆ. ದಿ ಮಮ್ಮಿ ರಿಟರ್ನ್ಸ್ ಎಂಬ ಚಲನಚಿತ್ರದಲ್ಲಿಯೂ ಸಹ, ದೊಡ್ಡ ಪ್ರಮಾಣದ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಈ ಸೇತುವೆಯು ಕೇಂದ್ರಬಿಂದುವಾಗಿದೆ. ಸೇತುವೆ ೧೮೯೪ರಲ್ಲಿ ತೆರೆದರೂ ಸಹ, ೨೦೧೦ರಲ್ಲಿ ಬಿಡುಗಡೆಯಾದ, ೧೮೯೧ರ ಇಸವಿಯ ಸನ್ನಿವೇಶಗಳುಳ್ಳ ಚಲನಚಿತ್ರ ದಿ ವುಲ್ಫ್‌ಮ್ಯಾನ್ ನಲ್ಲಿ ಕಲ್ಪನಾತೀತ ಸೇತುವೆ ಕಾಣಸಿಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಅಲ್ಲದೇ, ಅನಿಮ್ ಚಿತ್ರ ಬ್ಲ್ಯಾಕ್ ಬಟ್ಲರ್‌ನ ಹಲವು ಕಂತುಗಳಲ್ಲಿ ಈ ಸೇತುವೆಯು ನಿರ್ಮಾಣ ಹಂತದಲ್ಲಿರುವಂತೆ ನಿರೂಪಿಸಲಾಗಿದೆ. ದೇವದೂತ ಆಶ್ ಮತ್ತು ರಾಕ್ಷಸ ಸೆಬಸ್ಟೀನ್ ನಡುವಿನ ಅಂತಿಮ ಯುದ್ಧದ ಸ್ಥಳವೆಂದೂ ನಿರೂಪಿಸಲಾಗಿದೆ.
ಆಗ ೧೯೮೬ರಲ್ಲಿ ಬಿಡುಗಡೆಯಾದ ಬಿಗಲ್ಸ್ ಅಡ್ವೆಂಚರ್ಸ್ ಇನ್ ಟೈಮ್ (1986) ಚಲನಚಿತ್ರದಲ್ಲಿ ಪೀಟರ್ ಕುಷಿಂಗ್ ನಿರ್ವಹಿಸಿದ ಏರ್ ಕಮೊಡೊರ್ ಕರ್ನಲ್ ವಿಲಿಯಮ್ ರೇಮಂಡ್ ಪಾತ್ರದ ವಾಸಸ್ಥಳವೆಂದು ನಿರೂಪಿಸಲಾಗಿದೆ.
ಅಲ್ಲದೇ ೧೯೭೫ರ ಚಲನಚಿತ್ರ ಬ್ರ್ಯಾನಿಗನ್‌ನಲ್ಲಿ ಕಾರ್ ಚಲಾಯಿಸುವ ಸನ್ನಿವೇಶದಲ್ಲಿ, ಅರ್ಧ ತೆರೆದಿರುವ ಸೇತುವೆಯ ಮೇಲೆ ಜಾನ್ ವೇಯ್ನ್ ತಮ್ಮ ವಾಹನ ಓಡಿಸುವ ಸನ್ನಿವೇಶವಿದೆ. ಹೀಗೆ ೧೯೯೭ರಲ್ಲಿ ತೆರೆಕಂಡ ಚಲನಚಿತ್ರ ಸ್ಪೈಸ್‌ವರ್ಲ್ಡ್ ನಲ್ಲಿ ಸ್ಪೈಸ್ ಗರ್ಲ್ಸ್ ಬಸ್ ಚಲಾಯಿಸಿ ಇದೇ ರೀತಿಯ ಸಾಹಸ ಮಾಡುವ ದೃಶ್ಯವಿದೆ.
ಚಿತ್ರಸಂಪುಟ
[ಬದಲಾಯಿಸಿ]-
ಗೋಪುರ ಸೇತುವೆಯ ಹಗಲಿನ ವೇಳೆಯ ದೃಶ್ಯ
-
ಗೋಪುರ ಸೇತುವೆ ಇರುಳಿನ ವೇಳೆಯ ದೃಶ್ಯ
-
ಗೋಪುರ ಸೇತುವೆ ಪ್ರದೇಶದ ಪಕ್ಷಿನೋಟ
-
ಥೇಮ್ಸ್ ನದಿಯ ಉತ್ತರ ದಂಡೆಯಿಂದ ಗೋಪುರ ಸೇತುವೆಯ ದೃಶ್ಯ
-
ಮುಸ್ಸಂಜೆಯ ಹೊತ್ತಿನಲ್ಲಿ ದಕ್ಷಿಣ ಭಾಗದ ದೃಶ್ಯ
-
ಮುಸ್ಸೆಂಜೆ ಹೊತ್ತಿನಲ್ಲಿ ಹೊನಲು ಬೆಳಕಿನಲ್ಲಿ ಕಾಲ್ನಡಿಗೆ ಕಮಾನುಗಳ ಹತ್ತಿರದ ದೃಶ್ಯ
-
ತೆರೆದ ಸಮಸನ್ನೆಗಳ ಸನಿಹ ದೃಶ್ಯ
-
ನದಿ ಮಟ್ಟದ ಹಡಗುಕಟ್ಟೆಯ ದಕ್ಷಿಣ ಗೋಪುರ ಭಾಗದ ದೃಶ್ಯ
Gallery
[ಬದಲಾಯಿಸಿ]Tower Bridge,London Getting Opened
[ಬದಲಾಯಿಸಿ]-
Tower_Bridge,London_Getting_Opened_1
-
Tower_Bridge,London_Getting_Opened_2
-
Tower_Bridge,London_Getting_Opened_3
-
Tower_Bridge,London_Getting_Opened_4
-
Tower_Bridge,London_Getting_Opened_5
-
Tower_Bridge,London_Getting_Opened_6
-
The Tower Bridge, London completely opened
Tower Bridge Photo
[ಬದಲಾಯಿಸಿ]-
Tower_Bridge,London_Construction_photo_1
-
Tower_Bridge,London_Construction_photo_2
-
Tower Bridge, London Under Construction 1
-
Tower Bridge, London Under Construction 2
-
Tower Bridge, London Old photo
-
The invitation of opening of Tower Bridge, London
-
The Tower Bridge, London in the night 1
-
The Tower Bridge, London in the night 2
-
The Tower Bridge, London in the night 3
-
The Tower Bridge, London
-
Tower Bridge during day
-
Tower Bridge at night
-
Tower Bridge area from the air
-
Tower Bridge seen from the north bank of the Thames
-
South view at dusk
-
Close-up of walkways, illuminated at dusk
-
Close-up of opened bascules
-
The south tower, showing pier at river level
ಇವನ್ನೂ ಗಮನಿಸಿ
[ಬದಲಾಯಿಸಿ]- ಸೇತುವೆಯ ಸಮನ್ನೆ ತೆರೆಯುವ ಸರಣಿ
- ಥೇಮ್ಸ್ ನದಿಯ ದಾಟುಗಳು
- ಪೂಲ್ ಆಫ್ ಲಂಡನ್
- ಗೋಪುರ ಸೇತುವೆ ಸನಿಹದಲ್ಲಿರುವ ಐತಿಹಾಸಿಕ ಸ್ಥಳಗಳು
- ಲಂಡನ್ ಗೋಪುರ
- ಸೇಂಟ್ ಕ್ಯಾತರೀನ್ ಡಾಕ್ಸ್
- ಷಾಡ್ ಥೇಮ್ಸ್
ಟಿಪ್ಪಣಿಗಳು
[ಬದಲಾಯಿಸಿ]^ Name: The bridge takes its name from its location, not its design: the name Tower Bridge was in use before the towered design was decided upon. An article in The Engineer, from March 1878, refers to it as "Tower Bridge" while discussions were still underway as to whether it should be a high-level bridge, or a low-level bridge with a means of opening.[೩೬] This usage pre-dates the Horace Jones design of ೧೮೮೪, from which the current 'towered' structure was built, by at least six years.
^ Hydraulics: Sources disagree on the number of hydraulic accumulators installed. The exhibition allows the visitor to see two accumulators preserved in their original, purpose-designed building on the south side of the river, adjacent to the steam engines. Considering their size, it is difficult to see where any other accumulators might have been sited. This is all part of the ingenious design. The other four accumulators are hidden within (and under) the towers themselves and are still in situ.[೩೭]
ಉಲ್ಲೇಖಗಳು
[ಬದಲಾಯಿಸಿ]- ↑ ಬ್ರಯಾನ್ ಕುಕ್ಸನ್ ಕ್ರಾಸಿಂಗ್ ದಿ ರಿವರ್. ಮೇನ್‌ಸ್ಟ್ರೀಮ್ ಪಬ್ಲಿಷಿಂಗ್. ಎಡಿನ್‌ಬರ್ಗ್ ಮತ್ತು ಲಂಡನ್. ೨೦೦೬. ಪು.೩೦೪.
- ↑ "Image Search for 'London Bridge'". Google. Retrieved March 30, 2007.
- ↑ http://www.thisislocallondon.co.uk/news/169982.how_london_bridge_was_sold_to_the_states/
- ↑ "Tower Bridge Exhibition website". Corporation of The City of London. Archived from the original on ನವೆಂಬರ್ 12, 2010. Retrieved November 18, 2010.
- ↑ ೫.೦ ೫.೧ ೫.೨ ೫.೩ ರಾಬರ್ಟ್ಸ್, ಕ್ರಿಸ್, "ಕ್ರಾಸ್ ರಿವರ್ ಟ್ರಾಫಿಕ್", ಗ್ರ್ಯಾಂಟಾ, ೨೦೦೫
- ↑ ದಿ ಟೈಮ್ಸ್, ೨ ಜುಲೈ ೧೮೯೪
- ↑ ೭.೦ ೭.೧ ೭.೨ ೭.೩ ೭.೪ ೭.೫ ೭.೬ ೭.೭ "Tower Bridge". Archive – The Quarterly Journal for British Industrial and Transport History (3). Lightmoor Press: p47. 1994. ISSN 1352-7991.
{{cite journal}}
:|pages=
has extra text (help) - ↑ UK CPI inflation numbers based on data available from Gregory Clark (2013), "What Were the British Earnings and Prices Then? (New Series)" MeasuringWorth.
- ↑ ವ್ಹೇರ್ ಥೇಮ್ಸ್ ಸ್ಮೂತ್ ವಾಟರ್ಸ್ ಗ್ಲೈಡ್
- ↑ Smith, Denis (2001). Civil Engineering Heritage: London and the Thames Valley. Thomas Telford. pp. 22–23. ISBN 0-7277-2876-8.
- ↑ http://www.towerbridge.org.uk/TBE/EN/BridgeHistory/
- ↑ Hartwell, Geoffrey. "Tower Bridge, London". Archived from the original on 2011-06-20. Retrieved 2007-02-27.
- ↑ ೧೩.೦ ೧೩.೧ ೧೩.೨ "The Tower Bridge Engine". Forncett Industrial Steam Museum. Archived from the original on 2010-02-25. Retrieved 2007-02-27.
- ↑ ಸ್ಟೇಟ್‌ಹ್ಯಾಮ್, ಎಚ್.ಎಚ್., "ಬ್ರಿಡ್ಜ್ ಇಂಜಿನಿಯರಿಂಗ್", ವೈಲಿ, ೧೯೧೬.
- ↑ ಬ್ರ್ಯಾಂಗ್ವಿನ್, ಎಫ್., ಮತ್ತು ಸ್ಪ್ಯಾರೊಸ್, ಡಬ್ಲ್ಯೂ. ಎಸ್., "ಎ ಬುಕ್ ಆಫ್ ಬ್ರಿಡ್ಜಸ್", ಜಾನ್ ಲೇನ್, ೧೯೨೦.
- ↑ Cruickshank, Dan. "Choosing Britain's Best Buildings". BBC History. Archived from the original on May 13, 2007. Retrieved June 3, 2008.
{{cite web}}
: Cite has empty unknown parameters:|month=
and|coauthors=
(help) - ↑ ೧೭.೦ ೧೭.೧ "Fix to stop bridge getting stuck". BBC News. 17 January 2006. Retrieved 2007-09-25.
- ↑ ೧೮.೦ ೧೮.೧ Speed Check Services. "Bridge Protection Scheme" (PDF). Archived from the original (pdf) on ಮಾರ್ಚ್ 31, 2012. Retrieved November 18, 2010.
- ↑ "Bridge Lifts". Tower Bridge Official Website. Retrieved 2007-09-25.
- ↑ "Tower Bridge to get £4m facelift". BBC News Online. 7 April 2008. Retrieved 2008-04-08.
- ↑ "Tower Bridge lighting". Interior Event & Exhibition Lighting Design scheme. ES Lighting Design. 29 April 2009. Retrieved 2009-08-27.
- ↑ "Tower Bridge restored to true colours". Tower Bridge Restoration Website. 10 March 2010. Archived from the original on 4 ಏಪ್ರಿಲ್ 2010. Retrieved 24 May 2010.
- ↑ "Tower Bridge, London, UK". www.bbc.co.uk. Retrieved 2008-11-11.
- ↑ ಪು.೧೫೭, ಷಾ, ಮೈಕಲ್ 'ನಂಬರ್ ವನ್ ಸ್ಕ್ವಾಡ್ರನ್', ಇಯಾನ್ ಅಲ್ಯಾನ್ ೧೯೮೬
- ↑ "Hawker Hunter History". (scroll down half-way). Thunder & Lightnings. 29 February 2004. Retrieved 2008-04-08.
- ↑ "Gives Suicide Plan To Crash Plane Into Tower Of London, Dies In Crash 240 Miles Away". Lundington Daily News (1 August 1973). Retrieved 2010-02-14.
{{cite web}}
: Cite has empty unknown parameter:|coauthors=
(help); Italic or bold markup not allowed in:|publisher=
(help) - ↑ "Presidential visits abroad". (William J. Clinton III). US Department of State. Archived from the original on 2003-01-03. Retrieved 2007-09-25.
- ↑ Shore, John. "Gladys takes the rise out of Bill". Regatta Online (Issue 100, July 1997). Retrieved 2007-09-25.
{{cite web}}
: Cite has empty unknown parameter:|coauthors=
(help); Italic or bold markup not allowed in:|publisher=
(help) - ↑ "Protest Freeman herds sheep over Tower Bridge". BBC News. 19 August 1999. Retrieved 2009-11-06.
- ↑ "Spiderman protest closes Tower Bridge". BBC News. 31 October 2003. Retrieved 2008-10-31.
- ↑ "Spiderman cordon criticised". BBC News. 3 November 2003. Retrieved 2008-10-31.
- ↑ "'Spiderman' cleared over protest". BBC News. 14 May 2004. Retrieved 2008-10-31.
- ↑ ಸಿಕ್ಸ್ ಇಂಜರ್ಡ್ ಆಫ್ಟರ್ ಟಾವರ್ ಬ್ರಿಡ್ಜ್ ಲಿಫ್ಟ್ ಪ್ಲಮೆಟ್ಸ್ 30 ಫೀಟ್ Archived 2009-05-14 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಟೈಮ್ಸ್, ಮೇ ೧೧, ೨೦೦೯.
- ↑ ಸಿಕ್ಸ್ ಇಂಜರ್ಡ್ ಇನ್ ಟಾವರ್ ಬ್ರಿಡ್ಜ್ ಲಿಫ್ಟ್, ಬಿಬಿಸಿ ನ್ಯೂಸ್, ೧೧ ಮೇ ೨೦೦೯.
- ↑ "Lego Tower Bridge model kit". Lego. Retrieved 26 October 2010.
- ↑ "Tower Bridge" (PDF). The Engineer (p224+). 29 March 1878. Archived from the original (PDF) on 2012-01-18. Retrieved 2011-01-01.
{{cite web}}
: Italic or bold markup not allowed in:|publisher=
(help) - ↑ The 'missing' accumulators were shown on the television programme "Richard Hammond's Engineering Connections" about HMS Illustrious (Series 2, Episode 3).
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official website
- ಸೇತುವೆ ಸಮಸನ್ನೆ ಏರಿಸುವಿಕೆ/ ತೆರೆಯುವ ದಿನಾಂಕ ಮತ್ತು ಸಮಯಗಳು
- ತೆರೆಯುವ/ಮುಚ್ಚುವ ಕ್ರಮಗಳ ಕುರಿತು ಅಧಿಕೃತ ಟ್ವಿಟರ್ ಮಾಹಿತಿ
- ಗೋಪುರ ಸೇತುವೆಯ ನೇರ ವೀಡಿಯೊ ಪ್ರಸರಣ Archived 2011-06-29 ವೇಬ್ಯಾಕ್ ಮೆಷಿನ್ ನಲ್ಲಿ.
- ಗೋಪುರ ಸೇತುವೆ ನಿರ್ಮಾಣ ಕುರಿತು ತಾಂತ್ರಿಕ ಲೇಖನ Archived 2011-06-20 ವೇಬ್ಯಾಕ್ ಮೆಷಿನ್ ನಲ್ಲಿ.
- ಮೂರನೆಯ ಹಬೆ ಯಂತ್ರ (ಸಚಿತ್ರ) Archived 2010-02-25 ವೇಬ್ಯಾಕ್ ಮೆಷಿನ್ ನಲ್ಲಿ. – ಇಂದು ಫೊರ್ನ್ಸೆಟ್ ಇಂಡಸ್ಟ್ರಿಯಲ್ ಸ್ಟೀಮ್ ಮ್ಯೂಸಿಯ್, ನಾರ್ಫೊಲ್ಕ್
- ಗೋಪುರ ಸೇತುವೆ ಕುರಿತು 1878ರಲ್ಲಿ ಪ್ರಕಟಿಸಲಾದ ಲೇಖನ Archived 2008-08-20 ವೇಬ್ಯಾಕ್ ಮೆಷಿನ್ ನಲ್ಲಿ.
- ಗೋಪುರ ಸೇತುವೆ ಮಾಹಿತಿ ಮತ್ತು ಛಾಯಾಚಿತ್ರಗಳು
- ಗೋಪುರ ಸೇತುವೆ ಸಚಿತ್ರಪ್ರಬಂಧ
- ಗೋಪುರ ಸೇತುವೆ ಬಗ್ಗೆ ಲಂಡನ್ ಲ್ಯಾಂಡ್ಸ್ಕೇಪ್ ಟಿವಿ ಪ್ರಸ್ತುತಪಡಿಸಿದ ಐದು ನಿಮಿಷಗಳ ಕಂತು Archived 2011-07-13 ವೇಬ್ಯಾಕ್ ಮೆಷಿನ್ ನಲ್ಲಿ.
- ಸಂಕಲನ ಛಾಯಾಚಿತ್ರಗಳು
- ಇಂಗ್ಲಿಷ್ ಹೆರಿಟೇಜ್: ಗೋಪುರ ಸೇತುವೆಯ ಸಂಕಲನ ಛಾಯಾಚಿತ್ರಗಳು Archived 2013-08-01 ವೇಬ್ಯಾಕ್ ಮೆಷಿನ್ ನಲ್ಲಿ.
- ಲಂಡನ್ ಸಾರಿಗೆ ವಸ್ತುಪ್ರದರ್ಶನಾಲಯದ ಸಂಗ್ರಹದಿಂದ ಗೋಪುರ ಸೇತುವೆ ಛಾಯಾಚಿತ್ರಗಳು Archived 2012-09-20 ವೇಬ್ಯಾಕ್ ಮೆಷಿನ್ ನಲ್ಲಿ.
- ಗೋಪುರ ಸೇತುವೆ, ದೃಶ್ಯಗಳ ಹಿಂದೆ, 1963 Archived 2016-03-09 ವೇಬ್ಯಾಕ್ ಮೆಷಿನ್ ನಲ್ಲಿ.
- ಗೋಪುರ ಸೇತುವೆಯ ವಿಕ್ಟೋರಿಯಾ ಯುಗೀಯ ಅಂಚೆಕಾಗದ Archived 2010-03-14 ವೇಬ್ಯಾಕ್ ಮೆಷಿನ್ ನಲ್ಲಿ.
- Pages using gadget WikiMiniAtlas
- Pages using the JsonConfig extension
- CS1 errors: extra text: pages
- CS1 errors: empty unknown parameters
- CS1 errors: markup
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Coordinates on Wikidata
- Articles with unsourced statements from November 2008
- Articles with unsourced statements from February 2010
- Official website different in Wikidata and Wikipedia
- 1894ರಲ್ಲಿ ಸಂಪೂರ್ಣಗೊಂಡ ಸೇತುವೆಗಳು
- ಸಮಸನ್ನೆ ಸೇತುವೆಗಳು
- ಯುನೈಟೆಡ್ ಕಿಂಗ್ಡಮ್ನಲ್ಲಿರುವ ತೂಗುಸೇತುವೆಗಳು
- ಲಂಡನ್ನಲ್ಲಿರುವ ಪ್ರಮುಖ ಆಕರ್ಷಣೆಗಳು
- ಟಾವರ್ ಹ್ಯಾಮ್ಲೆಟ್ಗಳಲ್ಲಿ ಸಾರಿಗೆ
- ಸೌತ್ವಾರ್ಕ್ನಲ್ಲಿ ಸಾರಿಗೆ
- ಥೇಮ್ಸ್ ನದಿಯ ಸೇತುವೆಗಳು
- ಲಂಡನ್ನಲ್ಲಿರುವ ಗ್ರೇಡ್1 ಪಟ್ಟಿಯಲ್ಲಿರುವ ಕಟ್ಟಡಗಳು
- ಗ್ರೇಡ್1 ಪಟ್ಟಿಯಲ್ಲಿರುವ ಸೇತುವೆಗಳು
- ಲಂಡನ್ ಗೋಪುರ
- ಥೇಮ್ಸ್ ಪಥ
- ಸಂದರ್ಶಕರಿಗಾಗಿ ಟಾವರ್ ಹ್ಯಾಮ್ಲೆಟ್ಗಳಲ್ಲಿರುವ ಆಕರ್ಷಕ ಸ್ಥಳಗಳು
- ಸೌತ್ವಾರ್ಕ್ನಲ್ಲಿನ ವಸ್ತು ಪ್ರದರ್ಶನಾಲಯಗಳು
- ಟಾವರ್ ಹ್ಯಾಮ್ಲೆಟ್ಗಳಲ್ಲಿರುವ ವಸ್ತು ಸಂಗ್ರಹಾಲಯಗಳು
- ಯುನೈಟೆಡ್ ಕಿಂಗ್ಡಮ್ನಲ್ಲಿರುವ ತಾಂತ್ರಿಕ ವಸ್ತು ಪ್ರದರ್ಶನಾಲಯಗಳು
- ಯುನೈಟೆಡ್ ಕಿಂಗ್ಡಮ್ನಲ್ಲಿರುವ ಹಬೆ ವಸ್ತು ಪ್ರದರ್ಶನಾಲಯಗಳು
- ವಾಸ್ತುಶಿಲ್ಪ
- ಲಂಡನ್