ಗೊಮ್ಮಟ ಗಿರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೊಮ್ಮಟ ಗಿರಿಯು ಅಥವಾ ಶ್ರವಣ ಗುಡ್ದವು ಮೈಸೂರಿನಿಂದ ಸುಮಾರು ೨೫ ಕಿ.ಮೀ ದೂರದಲ್ಲಿದೆ. ಇದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯಲ್ಲಿದೆ. ಶ್ರವಣ ಗುಡ್ದವು ಸುಮಾರು ೨೦೦ ಅಡಿ ಎತ್ತರವಿದೆ ಹಾಗು ಬೃಹತ್ ಬಂಡೆಯ ಮೇಲೆ ಸುಮಾರು ೧೭ ಅಡಿ ಎತ್ತರದ ಏಕ ಶಿಲಾ ಗೊಮ್ಮಟ ಮೂರ್ತಿಯಿದೆ. ಈ ಗೊಮ್ಮಟನಿಗೆ ಪ್ರತಿ ವರ್ಷ ಮಸ್ತಕಾಭಿಷೇಕ ನಡೆಯುತ್ತ್ತದೆ. ಗೊಮ್ಮಟನ ದರ್ಶನ ಪಡೆಯಲು ಸುಮಾರು ೯೦ ಮೆಟ್ಟಿಲುಗಳನ್ನು ಹತ್ತಬೇಕು. ಶ್ರವಣ ಗುಡ್ದದ ತಪ್ಪಲಿನಲ್ಲಿ ೨೪ ಜೈನ ತೀರ್ಥಂಕರರ ಪುಟ್ಟ ಬಸದಿಗಳಿವೆ.

ಮೈಸೂರಿನಿಂದ ಹುಣಸೂರಿನ ಕಡೆ ಹೋಗುವಾಗ ಇಲವಾಲದ ನಂತರ ಬರುವ ಮನುಗನಹಳ್ಳಿ ಚೆಕ್ ಪೋಸ್ಟ್ ಬಳಿ ಬಲಕ್ಕೆ ತಿರುಗಿ ಬರಬೇಕು.