ಗುಳ್ಟು (ಚಲನಚಿತ್ರ)
ಗುಳ್ಟು | |
---|---|
ನಿರ್ದೇಶನ | ಜನಾರ್ಧನ್ ಚಿಕ್ಕಣ್ಣ |
ನಿರ್ಮಾಪಕ | ಪ್ರಶಾಂತ್ ರೆಡ್ಡಿ ದೇವರಾಜ ಅರ್ |
ಚಿತ್ರಕಥೆ | ಜನಾರ್ಧನ್ ಚಿಕ್ಕಣ್ಣ |
ಕಥೆ | ಜನಾರ್ಧನ್ ಚಿಕ್ಕಣ್ಣ |
ಪಾತ್ರವರ್ಗ | ನವೀನ್ ಶಂಕರ್ ಸೋನು ಗೌಡ ಅವಿನಾಶ್ ರಂಗಾಯಣ ರಘು ಪವನ್ ಕುಮಾರ್ |
ಸಂಗೀತ | ಅಮಿತ್ ಆನಂದ್ |
ಛಾಯಾಗ್ರಹಣ | ಶಾಂತಿ ಸಾಗರ್ |
ಸಂಕಲನ | ಭರತ್ ಎಚ್. ಸಿ |
ಸ್ಟುಡಿಯೋ | ವಿವಿಧ್ ಫ಼ಿಲಂಸ್ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ಕನ್ನಡ |
ಗುಳ್ಟು ಇದು 2018 ರ ಭಾರತೀಯ ಕನ್ನಡ ಭಾಷೆಯ ಚಿತ್ರವಾಗಿದ್ದು, ಜನಾರ್ಧನ್ ಚಿಕಣ್ಣರವರು ಬರೆದು ನಿರ್ದೇಶಿಸಿದ್ದಾರೆ. ಪ್ರಶಾಂತ್ ರೆಡ್ಡಿ ಮತ್ತು ದೇವರಾಜ್ ಆರ್ ನಿರ್ಮಿಸಿದ ಈ ಚಿತ್ರಕ್ಕೆ ಸಂಗೀತವನ್ನು ಅಮಿತ್ ಆನಂದ್ ಅವರು ನೀಡಿದ್ದಾರೆ. ನವೀನ್ ಶಂಕರ್ , ಸೋನು ಗೌಡ, ರಂಗಾಯಣ ರಘು, ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾಂತಿ ಸಾಗರ್ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ.[೧]
ಪಾತ್ರಗಳು
[ಬದಲಾಯಿಸಿ]- ನವೀನ್ ಶಂಕರ್ - ಅಲೋಕ್ ಆಗಿ
- ಸೋನು ಗೌಡ - ಪೂಜಾ ರಮೇಶ್ / ಅನಘ ಆಗಿ
- ಅವಿನಾಶ್ - ಸರ್ಕಲ್ ಇನ್ಸ್ಪೆಕ್ಟರ್ ಅವಿನಾಶ್ ಆಗಿ
- ರಂಗಾಯಣ ರಘು - ಮುಖ್ಯಮಂತ್ರಿ ಅನಂತರಾಮಯ್ಯರಾಗಿ
- ಪವನ್ ಕುಮಾರ್ - ಟೆಕೀ ಫನೇಶ್ ಪಾತ್ರದಲ್ಲಿ
- ರಾಮ್ ಧನುಷ್ - ಅರಸು ತಿಮ್ಮಯ್ಯ ಅಲಿಯಾಸ್ "ಆಸ್ತಿ" ಆಗಿ
ಸಾರಾಂಶ
[ಬದಲಾಯಿಸಿ]ಆಶ್ರಮದಲ್ಲಿ ಬೆಳೆದ ಬಡ ಇಂಜಿನಿಯರಿಂಗ್ ವಿದ್ಯಾರ್ಥಿ ಅಲೋಕ್ (ನವೀನ್ ಶಂಕರ್)ಗೆ ರ‍್ಯಾಗಿಂಗ್ ಮಾಡುತ್ತಾರೆ. ಆಗ ಆತ ಹಿರಿಯ ವಿದ್ಯಾರ್ಥಿಗಳು ಹೇಳಿದಂತೆ ನಡೆದುಕೊಳ್ಳದ ತಪ್ಪಿಗೆ ಸಿನಿಮಾ ಟಿಕೇಟ್ ಬುಕ್ ಮಾಡಿಕೊಡುವಂತಹ ಶಿಕ್ಷೆಯನ್ನು ಪಡೆಯುತ್ತಾನೆ. ಕೈಯಲ್ಲಿ ದುಡ್ಡಿಲ್ಲದ ಅಲೋಕ್ ಆಗ ಆನ್ಲೈನಿನಲ್ಲಿ ಸಿನಿಮಾ ಟಿಕೇಟ್ ಬುಕ್ ಮಾಡುವ ಜಾಲತಾಣವೊಂದಕ್ಕೆ ಹೋಗಿ ಹ್ಯಾಕ್ ಮಾಡಿ ಕಾಲೇಜಿನಲ್ಲಿ ಪ್ರಸಿದ್ಧನಾಗುತ್ತಾನೆ. ಇಂಜಿನಿಯರಿಂಗ್ ಓದಿನ ನಂತರ ಅವನು ಮತ್ತು ಅವನ ಸ್ನೇಹಿತ ಆಸ್ತಿ (ರಾಮ್ ಧನುಷ್) ಒಟ್ಟಿಗೆ ತಮ್ಮದೇ ಒಂದು ಸ್ವಂತ ಕಂಪನಿ ಪ್ರಾರಂಭಿಸಲು ಹೊರಡುತ್ತಾರೆ. ಆದರೆ ಹಣದ ಅಭಾವದಿಂದ ಅಲೋಕ್ ಪುಟ್ಟ ಇನ್ಸ್ಟಿಟ್ಯೂಟೊಂದರಲ್ಲಿ ಕಂಪ್ಯೂಟರ್ ಸೈನ್ಸ್ ಟ್ರೇನಿಯಾಗಿ ಕೆಲಸ ಮಾಡುತ್ತಿದ್ದಾಗ, ಅಲ್ಲಿಗೆ ಹೆಸರು, ಹುದ್ದೆಯನ್ನೆಲ್ಲ ಮರೆ ಮಾಚಿಕೊಂಡು ಬರುವ ಇಂಡಿಯನ್ ಸೈಬರ್ ಸೆಕ್ಯುರಿಟಿಯ ಗುಪ್ತ ಏಜೆಂಟ್ ಪೂಜಾ (ಸೋನು ಗೌಡ) ಅವರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಪನೇಶ್(ಪವನ್ ಕುಮಾರ್) ಸಹಾಯದಿಂದ ಆಕೆ 'ಸುಧಾರ್' ಶೇಖರಣಾ ಕೇಂದ್ರದ ಪ್ರಮುಖ ದತ್ತಾಂಶ ಸೋರಿಕೆಗೆ ಕಾರಣವಾದ ಹ್ಯಾಕರ್ ಅನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾಳೆ. ಆ ಸಂದರ್ಭದಲ್ಲಿ ಈ ಕೇಸ್ ಅಲೋಕ್ ಕಡೆಗೆ ತಿರುಗುತ್ತದೆ. ಮತ್ತು ತಾನು ಇಷ್ಟು ದಿನ ಪ್ರೀತಿಸಿದ್ದು ಸೈಬರ್ ಸೆಕ್ಯುರಿಟಿಯ ಗುಪ್ತ ಏಜೆಂಟ್ ಎಂದೂ ತಿಳಿಯುತ್ತದೆ. ಆದರೆ ಮುಖ್ಯಮಂತ್ರಿ ಅನಂತರಾಮಯ್ಯ (ರಂಗಾಯಣ ರಘು) ಅವರನ್ನು ಬ್ಲ್ಯಾಕ್ಮೇಲ್ ಮಾಡುವುದರ ಮೂಲಕ ಬುದ್ಧಿವಂತಿಕೆಯಿಂದ ಅವನು ಈ ಪ್ರಕರಣವನ್ನು ಪರಿಹರಿಸಿಕೊಳ್ಳುತ್ತಾನೆ ಮತ್ತು ನ್ಯಾಯಾಲಯದಿಂದ ನಿರ್ದೋಷಿ ಎಂದು ಘೋಷಿಸಲ್ಪಡುತ್ತಾನೆ. [೨]
ಧ್ವನಿಸುರುಳಿ
[ಬದಲಾಯಿಸಿ]Untitled | |
---|---|
ಅಮಿತ್ ಆನಂದ್ ಚಿತ್ರಕ್ಕಾಗಿ ಸ್ಕೋರ್ ಮತ್ತು ಹಾಡುಗಳನ್ನು ಸಂಯೋಜಿಸಲು ಸಹಿ ಮಾಡಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ, ಕಿರಣ್ ಕಾವೇರಪ್ಪ ಮತ್ತು ಅನುಪ್ ರಾಮಸ್ವಾಮಿ ಕಶ್ಯಪ್ ಅವರು ಬರೆದಿದ್ದಾರೆ.
ಹಾಡುಗಳು | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಗಾಯಕ(ರು) | ಸಮಯ |
1. | "ಸಾಲಾಗಿ" | ಅನುಪ್ ರಾಮಸ್ವಾಮಿ ಕಶ್ಯಪ್ | ಸೈಂಧವಿ, ದೀಪಕ್ ದೊಡ್ಡೇರ | 04:03 |
2. | "VTU ವೀ ಲವ್ ಯೂ" | ಕಿರಣ್ ಕಾವೇರಪ್ಪ | ರಘು ದೀಕ್ಷಿತ್, ಅಂಕನ ಅರೋಕಿಯಮ್ | 05:32 |
3. | "ನೀನೊಂದು ಆಶ್ಚರ್ಯ" | ಜಯಂತ್ ಕಾಯ್ಕಿಣಿ | ಈಶ ಸುಚಿ, ದೀಪಕ್ ದೊಡ್ಡೇರ | 04:05 |
4. | "ಕಡಲಾಚೆ" | ಅನುಪ್ ರಾಮಸ್ವಾಮಿ ಕಶ್ಯಪ್ | ಸುಪ್ರಿಯ ಲೋಹಿತ್, ರಘುರಾಮ್ | 03:51 |
5. | "ಕಾಣದ ಪ್ರೀತಿ" | ಅನುಪ್ ರಾಮಸ್ವಾಮಿ ಕಶ್ಯಪ್ | ಜಾಸ್ಮಿನ್ ಮಾನ್ಸ್, ಅಮಿತ್ ಆನಂದ್ | 01:01 |
ಉಲ್ಲೇಖಗಳು
[ಬದಲಾಯಿಸಿ]- ↑ "TOI on Gultoo Trailer".
{{cite web}}
: Cite has empty unknown parameter:|dead-url=
(help) - ↑ "Gultoo promises a new face of crime".
{{cite web}}
: Cite has empty unknown parameter:|dead-url=
(help)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಗುಳ್ಟು @ ಐ ಎಮ್ ಡಿ ಬಿ
- Gultoo Official Film Website Archived 20 May 2018[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- Gultoo Facebook Page
- CS1 errors: empty unknown parameters
- Use dmy dates from April 2018
- Articles with invalid date parameter in template
- Template film date with 1 release date
- Music infoboxes with unknown value for type
- Articles using infobox templates with no data rows
- Album articles with non-standard infoboxes
- Articles with hAudio microformats
- Album articles lacking alt text for covers
- Pages using infobox album with empty type parameter
- Pages using infobox album with unknown parameters
- ಇನ್ಪುಟ್ ದೋಷಗಳನ್ನು ಹೊಂದಿರುವ ಟ್ರ್ಯಾಕ್ ಪಟ್ಟಿ
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- 2018 films
- Indian films
- Kannada-language films
- 2010s Kannada-language films
- Indian satirical films