ಗುಜಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಜಿಯಾ

ಗುಜಿಯಾ ಭಾರತೀಯ ಉಪಖಂಡಕ್ಕೆ ಸ್ಥಳೀಯವಾದ ಕರಿದ ಸಿಹಿ ಖಾದ್ಯವಾಗಿದೆ. ಇದನ್ನು ರವೆ ಅಥವಾ ಮೈದಾದಿಂದ ತಯಾರಿಸಲಾಗುತ್ತದೆ. ಒಳಗೆ ಸಿಹಿಯಾಗಿಸಿದ ಖೋವಾ (ಗಟ್ಟಿಯಾಗಿಸಿದ ಹಾಲು) ಮತ್ತು ಒಣಫಲಗಳ ಮಿಶ್ರಣವನ್ನು ತುಂಬಲಾಗುತ್ತದೆ ಮತ್ತು ತುಪ್ಪದಲ್ಲಿ ಕರಿಯಲಾಗುತ್ತದೆ.

ಸಾಮಾನ್ಯವಾದ ಗುಜಿಯಾವನ್ನು ತಯಾರಿಸುವ ವಿಧಾನವು ಸ್ವಲ್ಪಮಟ್ಟಿಗೆ ಸಮೋಸಾದ ತಯಾರಿಕೆಯನ್ನು ಹೋಲುತ್ತದೆ, ಆದರೆ ಗುಜಿಯಾ ನೋಡಲು ಎಂಪನಾಡಾದಂತೆ ಕಾಣುತ್ತದೆ. ಅರ್ಧಚಂದ್ರದ ಆಕಾರವಿರುವ ಗುಜಿಯಾದ ಒಳಗೆ ತುರಿದ ಹಾಗೂ ಹುರಿದ ಒಣ ಹಣ್ಣುಗಳು, ಖೋವಾ, ತುರಿದ ಕೊಬ್ಬರಿ, ಮತ್ತು ಹರಳು ಹರಳಾದ ರಚನೆ ನೀಡಲು ಸ್ವಲ್ಪ ರವೆ ಸೇರಿಸಿದ ಸಿಹಿ ಮಿಶ್ರಣವನ್ನು ತುಂಬಲಾಗುತ್ತದೆ. ಇದನ್ನು ವಿಶೇಷವಾಗಿ ಹೋಳಿ ಹಬ್ಬದ ವೇಳೆಯಲ್ಲಿ ತಯಾರಿಸಿ ತಿನ್ನಲಾಗುತ್ತದೆ.

ಕನ್ನಡದಲ್ಲಿ ಇದನ್ನು ಕಡುಬು ಎಂದು, ಮರಾಠಿಯಲ್ಲಿ ಕರಂಜಿ ಎಂದು ಕರೆಯಲಾಗುತ್ತದೆ. ಎಲ್ಲವೂ ಗೋಧಿ ಹಿಟ್ಟಿನಿಂದ ತಯಾರಿಸಿದ, ಒಣ ಅಥವಾ ಆರ್ದ್ರ ಕೊಬ್ಬರಿ ಅಥವಾ ಬೇಳೆಯ ಹೂರಣ ತುಂಬಿ ಕರಿದ ಸಿಹಿ ಖಾದ್ಯಗಳೇ ಆಗಿವೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಗುಜಿಯಾ&oldid=1025614" ಇಂದ ಪಡೆಯಲ್ಪಟ್ಟಿದೆ