ಗೀತಾ.ಎಸ್. ಅಯ್ಯಂಗಾರ್

ವಿಕಿಪೀಡಿಯ ಇಂದ
Jump to navigation Jump to search
ಗೀತಾ.ಎಸ್. ಅಯ್ಯಂಗಾರ್
ಚಿತ್ರ:Geeta Iyengar.jpg
Born(೧೯೪೪-೧೨-೦೭)೭ ಡಿಸೆಂಬರ್ ೧೯೪೪
DiedDid not recognize date. Try slightly modifying the date in the first parameter. (aged Error: Need valid year, month, day)
Nationalityಭಾರತೀಯ
Occupationಯೋಗ ಲೇಖಕಿ ಮತ್ತು ಶಿಕ್ಷಕಿ
Known forಮಹಿಳೆಯರಿಗೆ ಯೋಗ

ಗೀತಾ.ಎಸ್.ಅಯ್ಯಂಗಾರ್, (೭ ಡಿಸೆಂಬರ್ ೧೯೪೪ – ೧೬ ಡಿಸೆಂಬರ್ ೨೦೧೮) ೧೯೪೪ ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. ಗೀತಾರವರು ಪ್ರಸಿದ್ಧ ಯೋಗ ತರಬೇತುದಾರರಾದ ಬಿ. ಕೆ. ಎಸ್. ಐಯ್ಯಂಗಾರ್ ರವರ ಹಿರಿಯ ಪುತ್ರಿ. ಮಹಿಳೆಯರ ಆರೋಗ್ಯ ಸಂಬಂಧಿ ಯೋಗ ತರಬೇತಿ ನೀಡುವುದು ಇವರ ವೈಶಿಷ್ಟ್ಯ.

ವೃತ್ತಿ ಮತ್ತು ಬದುಕು[ಬದಲಾಯಿಸಿ]

ಅಯ್ಯಂಗಾರ್ ಯೋಗ ಪದ್ಧತಿಯನ್ನು ಜಗತ್ತಿಗೆ ಮೊದಲ ಬಾರಿ ಪರಿಚಯಿಸಿದ ಯೊಗಾಚಾರ್ಯ ಬಿ.ಕೆ.ಎಸ್ ಅಯ್ಯಂಗಾರ್ ಗೀತಾರವರ ತಂದೆ.[೧] ಇವರು ತಮ್ಮ ಮಗಳಾದ ಗೀತಾರನ್ನು 'ಜಗತ್ತಿನ ಪ್ರಮುಖ ಮಹಿಳ ಯೋಗ ಶಿಕ್ಷಕಿ' ಎಂದು ಕರೆದಿದ್ದಾರೆ. ಗೀತಾರವರು ಬಾಲ್ಯದಿಂದಲೇ ತಮ್ಮ ತಂದೆಯೊಂದಿಗೆ ಯೋಗವನ್ನು ಕಲಿಯುತ್ತಿದ್ದರು. ಪ್ರೌಢ ಶಿಕ್ಷಣವನ್ನು ೧೯೬೧ರಲ್ಲಿ ಮುಗಿಸಿ, ತಮ್ಮ ತಂದೆಯೊಂದಿಗೆ ಅಂತಾರಾಷ್ಟ್ರೀಯ ಯೋಗ ತರಬೇತಿಯಲ್ಲಿ ಭಾಗವಹಿಸುತ್ತಿದ್ದರು. ೧೯೮೪ರಲ್ಲಿ ತಂದೆಯ ನಿವೃತ್ತಿಯ ನಂತರ ತಮ್ಮ ಸಹೋದರನಾದ ಪ್ರಶಾಂತ್ ಅಯ್ಯಂಗಾರ್ ಅವರ Ramamani Iyengar Memorial Yoga Institute (RIMYI) ಇದರ ಸಹ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದರು. ಇದರ ಜೊತಗೆ ಹಲವಾರು ಯೋಗ ತರಬೇತಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ತರಬೇತಿ[ಬದಲಾಯಿಸಿ]

ಮಹಿಳೆಯರ ಆರೊಗ್ಯ ಸಂಬಂಧಿ ಯೋಗ ತರಬೇತಿಯನ್ನು ಗೀತಾರವರು ಅಳವಡಿಸಿಕೊಂಡಿದ್ದಾರೆ. ನಿರ್ದಿಷ್ಟ ಆಸನ ಹಾಗೂ ಪ್ರಾಣಾಯಾಮದ ಮೂಲಕ ಮಹಿಳೆಯರಿಗೆ ತಮ್ಮ ಗರ್ಭಧಾರಣೆ, ಋತು ಚಕ್ರ, ಗರ್ಭಧಾರಣ ನಂತರದ ಸಮಯದಲ್ಲಿ ಉಪಯುಕ್ತವಾಗುವಂತೆ ಯೋಗ ತರಬೇತಿಯನ್ನು ನೀಡುತ್ತಾರೆ. ಗೀತಾರವರು 'ಯೋಗವು ದೇಹ ಮತ್ತು ಮಾನಸಿಕ ಅರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ' ಎಂದು ಹೇಳಿದ್ದಾರೆ.

RIMYI ಬೋಧಿಸುವುದರ ಜೊತೆಗೆ, ಅಯ್ಯಂಗಾರ್ ನಿಯತಕಾಲಿಕವಾಗಿ ಅಯ್ಯಂಗಾರ್ ಯೋಗ ವಂಶಾವಳಿಯನ್ನು ಮುಂದುವರಿಸಲು ವಿಶ್ವದಾದ್ಯಂತ ಪ್ರವಾಸ ಮಾಡಿದರು. ಅವರು ವಿಶ್ವದಾದ್ಯಂತ, ಉತ್ತರ ಅಮೆರಿಕಾ, ಆಸ್ಟ್ರೇಲಿಯಾ, ದಕ್ಷಿಣಆಫ್ರಿಕಾ, ಮತ್ತು ಯುರೋಪ್ನಲ್ಲಿ ಯೋಗದಲ್ಲಿ ಪ್ರಸಿದ್ಧ ವ್ಯಕ್ತಿ.[೨]

ಅವರು ವಿಶ್ವದಾದ್ಯಂತ ಯೋಗ ಶಿಕ್ಷಕರಿಗೆ ತರಬೇತಿ ನೀಡಿದರು, ಉದಾಹರಣೆಗೆ ಇಟಲಿಯಲ್ಲಿ. ೭೪ ವರ್ಷದ ವಯಸ್ಸಿನಲ್ಲಿ ತನ್ನ ತಂದೆಯ ಜನ್ಮ ಶತಮಾನೋತ್ಸವದ ಎರಡು ದಿನಗಳ ನಂತರ ಅವರು ೧೬ ಡಿಸೆಂಬರ್ ೨೦೧೮ ರಂದು ನಿಧನರಾದರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ಗಾಲಿಕುರ್ಚಿಯನ್ನು ಬಳಸುತ್ತಿದ್ದರು. ತನ್ನ ತಂದೆಯ ೧೦೦ ನೇ ಜನ್ಮ ವಾರ್ಷಿಕೋತ್ಸವದ ಆಚರಣೆಯನ್ನು ಪೂರ್ಣಗೊಳಿಸುವ ತನಕ ಅವಳು ನಿರ್ಗಮಿಸುವುದಿಲ್ಲ ಎಂದು ಅವಳು ಹೇಳುತ್ತಿದ್ದಳು.

RIMYI ಸಂಸ್ಥೆ[ಬದಲಾಯಿಸಿ]

RIMYI ಯಲ್ಲಿ ಯೋಗ ತರಬೇತಿಯೊಂದಿಗೆ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರವಾಸ ಮಾಡಿ ಯೋಗ ತರಬೇತಿಯನ್ನು ನೀಡಿದ್ದಾರೆ. ಉತ್ತರ ಅಮೇರಿಕ, ಆಸ್ಟ್ರೇಲಿಯ, ದಕ್ಷಿಣಆ‍ಫ್ರಿಕಾ, ಯುರೋಪ್.

ನಿಧನ[ಬದಲಾಯಿಸಿ]

ಡಾ. ಗೀತಾ ಎಸ್.ಅಯ್ಯಂಗಾರ್ (೭೪) ತಮ್ಮ ಪುಣೆಯ ಮನೆಯಲ್ಲಿ ೧೬ ನೆಯ ತಾರೀಖು,ನಿಧನರಾದರು. [೩]

ಪ್ರಕಟಣೆಗಳು[ಬದಲಾಯಿಸಿ]

 • Iyengar, Geeta. Yoga: A Gem for Women,[೪]
 • Iyengar, Geeta. Yoga in Action – Preliminary, Course[೫],
 • Clennell, Bobby; Iyengar, Geeta. The Women's Yoga Book: Asana and Pranayama for All Phases of the Menstrual Cycle[೬],
 • Iyengar, Geeta. Iyengar Yoga for Motherhood: Safe Practice for Expectant & New Mothers[೭],

ಉಲ್ಲೇಖಗಳು[ಬದಲಾಯಿಸಿ]

 1. https://www.yogajournal.com/yoga-101/types-of-yoga/iyengar
 2. "Wayback Machine" (PDF). web.archive.org. 16 April 2015. Retrieved 21 March 2020.
 3. Yoga exponent Geeta iyengar, daughter of B.K.S.Iyengar passes away, Hindu news paper, Dec,16, 2018
 4. https://www.goodreads.com/book/show/318954.Yoga
 5. https://iynaus.org/store/books/yoga-action-preliminary-course-book
 6. https://www.goodreads.com/book/show/1213933.The_Woman_s_Yoga_Book
 7. https://www.goodreads.com/book/show/354705.Iyengar_Yoga_for_Motherhood