ವಿಷಯಕ್ಕೆ ಹೋಗು

ಗಿನ್ನಿ ಮಹಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಿನ್ನಿ ಮಹಿ (ಜನನ ೧೯೯೯) ಭಾರತೀಯ ಪಂಜಾಬಿ ಜಾನಪದ, ದಲಿತ ಸಂಗೀತ, ರಾಪ್ ಮತ್ತು ಹಿಪ್-ಹಾಪ್ ಹಾಡುಗಾರ್ತಿ.[] ಭಾರತದ ಜಲಂಧರ್, ಪಂಜಾಬ್ ಮೂಲದ ಗಾಯಕಿ. ಫಾನ್ ಬಾಬಾ ಸಾಹಿಬ್ ದಿ ಮತ್ತು ಡೇಂಜರ್ ಚಮ್ಮಾರ ಎಂಬ ತನ್ನ ಹಾಡುಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(ಕ್ಷಿಪ್ರ ಜನಪ್ರಿಯತೆ) ಖ್ಯಾತಿ-ಜನಪ್ರಿಯತೆ ಅನ್ನು ಗಳಿಸಿದ್ದಾರೆ. ಆಕೆ ಜರ್ಮನಿಯಲ್ಲಿ ಗ್ಲೋಬಲ್ ಮೀಡಿಯಾ ಫೋರಂ (ಜಿಎಂಎಫ್ ೨೦೧೮) ಗೆ ಹಾಜರಿದ್ದಳು, ಅಲ್ಲಿ ಫ್ಲಾಗ್ಗಿಂಗ್(ಛಡಿ ಏಟು ಶಿಕ್ಷೆ) ವಿರುದ್ಧ ಮಾತನಾಡಿದ್ದಕ್ಕೆ, ಸಮಾನತೆ ಮತ್ತು ಸ್ವಾತಂತ್ರ್ಯದ ವಿಷಯವಾಗಿ ಯುವ ಧ್ವನಿಯಾಗಿ ಹೆಸರು ವಾಸಿ ಆದರು.[]

ಗಿನ್ನಿ ಮಹಿ

ಹೆಚ್ಚುಗಾರಿಕೆ

[ಬದಲಾಯಿಸಿ]

ಬಿ. ಆರ್. ಅಂಬೇಡ್ಕರ್ ಅವರ ಸಂದೇಶಗಳನ್ನು ತನ್ನ ಗೀತಸಂಪುಟಗಳಲ್ಲಿ ತಲುಪಿಸಲು ಪ್ರಯತ್ನಿಸುತ್ತಲಿರುವ ಗಿನ್ನಿ ಮಹಿ, ತಮ್ಮ ಬಾಲ್ಯದಿಂದಲೂ ಲತಾ_ಮಂಗೇಶ್ಕರ್ ಮತ್ತು ಶ್ರೇಯಾ_ಘೋಷಾಲ್, ರ ಅಭಿಮಾನಿ . ಮಾಹಿ ಭಾರತದ ಹೊರಗೆ, ಕೆನಡಾ, ಗ್ರೀಸ್, ಇಟಲಿ, ಜರ್ಮನಿ ಮತ್ತು ಬ್ರಿಟನ್ ನಲ್ಲಿ ಪ್ರದರ್ಶನ ನೀಡಿದ್ದಾರೆ. ದೆಹಲಿಯಲ್ಲಿ ಬರ್ಖಾ ದತ್ ಜೊತೆ ಎನ್ ಡಿಟಿವಿಯಲ್ಲಿ ೨೦೧೬ ರಲ್ಲಿ ಸಂದರ್ಶನದಲ್ಲಿ ಪಾಲ್ಗೊಂಡ ಗಿನ್ನಿ ಮಹಿ, ತದ-ನಂತರ ೨೦೧೮ ರಲ್ಲಿ ನವದೆಹಲಿಯಲ್ಲಿ ಆಜ್-ತಕ್ ಟಿವಿ ವಾಹಿನಿ ಆಯೋಜಿಸಿದ ' ಸಾಹಿತ್ಯ ' ಲೈವ್ ಸಂಭಾಷಣೆ ಪ್ರದರ್ಶನಕ್ಕೆ ಹಾಜರಾದರು. ಭಾರತೀಯ ಸಮಾಜದಲ್ಲಿ ಮಹಿಳೆಯರ ಸಮಾನತೆ ಬಗ್ಗೆ ಮಾತನಾಡಿದ ಕುಮಾರಿ ಮಹಿ, ಆ ವೇದಿಕೆಯ ಮೂಲಕ ಸಾಮಾಜಿಕ ಕಳಕಳಿ ಉಳ್ಳ ಕೆಲವೇ ಯುವ ಕಲಾವಿದೆಯರಲ್ಲಿ ಅಗ್ರ ಶ್ರೇಣಿಗೆ ಸೇರಿದರು.

ಬಾಲ್ಯ

[ಬದಲಾಯಿಸಿ]

ಗಿನ್ನಿ ಮಹಿ ಹುಟ್ಟಿದ್ದು ಬಹಾಪುರ, ಜಲಂಧರ್, ಪಂಜಾಬ್ ನಲ್ಲಿ ರಾಕೇಶ್ ಚಂದರ್ ಮಾಹಿ ಮತ್ತು ಪರ್ಮಜಿತ್ ಕೌರ್ ಮಾಹಿ ದಂಪತಿಗಳ ಮಗಳಾಗಿ. ಏಳು ವಯಸ್ಸಿನ ಎಳೆ ವಯಸ್ಸಿನಲ್ಲೇ ತನ್ನ ತಂದೆಯ ಜೊತೆಗೆ ಹಾಡುಗಳನ್ನು ಹಾಡತೊಡಗಿದಳು. ಎಲ್ಲಕ್ಕಿಂತ ಮಿಗಿಲಾಗಿ ತಾವು ಭಾರತೀಯಳು ಎಂಬುದನ್ನು ಜ್ಞಾಪಿಸಿಕೊಳ್ಳಲು ಆಕೆಯ ಪೋಷಕರು ತಮ್ಮ ಎಲ್ಲ ಮಕ್ಕಳ ಕೊನೆಯ ಹೆಸರನ್ನು ಭಾರತಿ ಎಂದು ಬದಲಾಯಿಸಿದರು. ಇದರಿಂದ ಆಕೆಯ ಸ್ಟೇಜ್ ಹೆಸರು ಗುರುಕನ್ವಲ್ ಭಾರ್ತಿ. ೨೦೧೯೨ ಹೊತ್ತಿಗೆ ಹನ್ಸ್ ರಾಜ್ ಮಹಿಳಾ ಮಹಾ ವಿದ್ಯಾಲಯ ಕಾಲೇಜಿನಲ್ಲಿ ಸಂಗೀತದಲ್ಲಿ ಪದವಿ ಓದುತ್ತಿರುವ ಗಿನ್ನಿ ಮಹಿ, ತನ್ನ ೧೩ನೇ ವಯಸ್ಸಿನಲ್ಲಿಯೇ ಧಾರ್ಮಿಕ ಗೀತೆಗಳನ್ನು ಹಾಡಲು ಶುರು ಮಾಡಿದ್ದರು. ಸಂಗೀತದಲ್ಲಿ ಪಿಎಚ್ ಡಿ ಅಧ್ಯಯನ ಮಾಡಿ, ಸಂಶೋಧನೆ ಮಾಡುವುದು, ಗಿನ್ನಿ ಮಹಿ ರವರ ಅಪೇಕ್ಷೆ. ಮುಂಬೈಗೆ ತೆರಳಿ ಬಾಲಿವುಡ್ ನಲ್ಲಿ, ತನ್ನ ನೆಚ್ಚಿನ ಲತಾ_ಮಂಗೇಶ್ಕರ್ ಮತ್ತು ಶ್ರೇಯಾ_ಘೋಷಾಲ್ರಂತೆಯೇ ಹಿನ್ನೆಲೆ ಗಾಯಕಿ ಆಗುವ ಕನಸನ್ನೂ ಸಹ ಗಿನ್ನಿ ಹೊತ್ತಿದ್ದಾರೆ.[]

ಗಾಯನ ಶೈಲಿ

[ಬದಲಾಯಿಸಿ]

ಗಿನ್ನಿ ಮಹಿ ತಮ್ಮ ಹಾಡು ಡೇಂಜರ್ ಚಮ್ಮಾರರಲ್ಲಿ, ತನ್ನ ಜಾತಿಯ ಹೆಸರಾದ ಚಮ್ಮಾರ ಅನ್ನು ಬಳಸಿ, ಅದನ್ನು ಹೆಚ್ಚು ಸಶಕ್ತವಾಗಿ ಮತ್ತು ಹೆಮ್ಮೆಯ ವಿಷಯಕ್ಕಾಗಿ ಪರಿವರ್ತಿಸಿದ ಸಾಧನೆ ಅನ್ನು ಮಾಡಿದರು. ಆಕೆಯ ಮೊದಲ ಎರಡು ಆಲ್ಬಂಗಳಾದ ಗುರ್ನಾನ್ ಡಿ ದಿವಾನಿ ಮತ್ತು ಗುರುಪುರಬ್ ಹೈ ಕಾಂಶಿ ವಾಲೆ ದಾ, ಇವು ಎರಡೂ, ಗಿನ್ನಿ ಮಹಿರವರ ನೆಚ್ಚಿನ ರವಿದಾಸಿಯಾ ಸಮುದಾಯಕ್ಕೆ ಸೇರಿದ ಭಕ್ತಿಗೀತೆಗಳು. ಆಕೆಯ ಹಾಡುಗಳು ಯಾರನ್ನೂ ನೋಯಿಸಬಾರದು ಎಂದು ಖಚಿತಪಡಿಸಿಕೊಳ್ಳಲು ಆಕೆಯ ಹಾಡುಗಳ ಸಾಹಿತ್ಯವನ್ನು ಆಕೆಯ ತಂದೆ-ತಾಯಿ, ಸಂಗೀತ ನಿರ್ದೇಶಕ ಅಮರಜಿತ್ ಸಿಂಗ್, ವಿಡಿಯೋ ನಿರ್ದೇಶಕ ರಮಣ್ ರಜತ್ ಒಳಗೊಂಡ ತಂಡ ವಿಶ್ಲೇಷಿಸುತ್ತದೆ.

ಆಲ್ಬಂಗಳು

[ಬದಲಾಯಿಸಿ]

ಗಿನ್ನಿ ಮಹಿ ಈಗ ಹಾಡುವ ರಾಜಕೀಯ ಮತ್ತು ಜಾತಿ-ವಿರೋಧಿ ಚಳುವಳಿಗೆ ಸೇರುವ ಮೊದಲು, ಪಂಜಾಬಿ ಭಾಷೆ ಮತ್ತು ಜನಮನದಲ್ಲಿ ಮಾನ್ಯತೆಯನ್ನು ಗಳಿಸಲು ಮೊದಲು ಭಕ್ತಿಗೀತೆಗಳನ್ನು ಹಾಡಲು ಆಯ್ಕೆ ಮಾಡಿದಳು.


ಗುರನ್ ದೀ ದಿವಾನಿ (2015).
ಗುರುಪುರಬ್ ಹೈ ಕಾಂಶಿ ವಾಲೆ ಡ (2016).
ಜಾನಪದ ಸಮ್ಮಿಳನ (2019).
ಸಿಂಗಲ್ಸ್ ಆಲ್ಬಂಗಳು
ಡೇಂಜರ್ ಚಮ್ಮಾರ (2016).
ಹಕ್ (2016).
ಅಭಿಮಾನಿ ಬಾಬಾ ಸಾಹಿಬ್ ಡಿ (2016).
1932 (ಹಕ್ 2) (2017).
ಸೂಟ್ ಪಟಿಯಾಲ (2017).
ಸಲಾದಾನ್ (2018).
ರಾಜ್ ಬಾಬಾ ಸಾಹಿಬ್ ಡಾ (2018).
ಮರ್ದ್ ದಲೇರ್ (2019).
ಕಮರ್ಷಿಯಲ್ ಹಾಡುಗಳು
ಧೀ ಹನ್ (ಕಿ ಹೋಯಾ ಜೆ ಇಕ್ ಧೆ ಹನ್). ಸೂಟ್ ಪಟಿಯಾಲ ಹಾಲಿಡೇ (ಕವರ್ ಸಾಂಗ್). ದೌನ್ ಟು ಅರ್ಥ್

ಉಲ್ಲೇಖಗಳು

[ಬದಲಾಯಿಸಿ]