ಗಸ್ಟಾವ್ ರಾಬರ್ಟ್ ಕಿರ್ಖಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಸ್ಟಾವ್ ರಾಬರ್ಟ್ ಕಿರ್ಖಫ್
Gustav Kirchhoff
ಜನನಗಸ್ಟಾವ್ ರಾಬರ್ಟ್ ಕಿರ್ಖಫ್
(೧೮೨೪-೦೩-೧೨)೧೨ ಮಾರ್ಚ್ ೧೮೨೪
Königsberg, Kingdom of Prussia
(present-day Russia)
ಮರಣ17 October 1887(1887-10-17) (aged 63)
Berlin, Prussia, German Empire
(present-day ಜರ್ಮನಿ)
ವಾಸಸ್ಥಳPrussia/German Empire
ರಾಷ್ಟ್ರೀಯತೆPrussian
ಕಾರ್ಯಕ್ಷೇತ್ರPhysics
Chemistry
ಸಂಸ್ಥೆಗಳುUniversity of Berlin
University of Breslau
University of Heidelberg
ಅಭ್ಯಸಿಸಿದ ವಿದ್ಯಾಪೀಠUniversity of Königsberg
ಡಾಕ್ಟರೇಟ್ ಸಲಹೆಗಾರರುFranz Ernst Neumann
Otto Hesse
ಗಮನಾರ್ಹ ವಿದ್ಯಾರ್ಥಿಗಳುLoránd Eötvös
Edward Nichols
Gabriel Lippmann[೧]
Dmitri Ivanovich Mendeleev
Max Planck
Jules Piccard
Max Noether
Heike Kamerlingh Onnes
Ernst Schröder
ಪ್ರಸಿದ್ಧಿಗೆ ಕಾರಣKirchhoff's circuit laws
Kirchhoff's law of thermal radiation
Kirchhoff's laws of spectroscopy
Kirchhoff's law of thermochemistry
ಗಮನಾರ್ಹ ಪ್ರಶಸ್ತಿಗಳುRumford medal (1862)
Davy Medal (1877)
Matteucci Medal (1877)
Janssen Medal (1887)

ಗಸ್ಟಾವ್ ರಾಬರ್ಟ್ ಕಿರ್ಖಫ್ (12 ಮಾರ್ಚ್ 1824 – 17 ಒಕ್ಟೋಬರ್ 1887) ಜರ್ಮನಿಭೌತಶಾಸ್ತ್ರಜ್ಞ.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಜನನ ಅಂದಿನ ಜರ್ಮನಿಯ ಕೋನಿಗ್ಸ್‍ಬರ್ಗಿನಲ್ಲಿ (ಇಂದಿನ ರಷ್ಯದ ಕಾಲಿನಿನ್‍ಗ್ರಾಡ್) ಮಾರ್ಚ್ 12, 1824ರಂದು, ವಿದ್ಯಾಭ್ಯಾಸ ಕೊನಿಗ್ಸ್‍ಬರ್ಗ್ ವಿಶ್ವವಿದ್ಯಾಲದಲ್ಲಿಯೇ ವಿದ್ಯಾಭ್ಯಾಸಾನಂತರ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ 1847ರಿಂದ 1850ರವರೆಗೆ ಯಾವ ಸಂಭಾವನೆಯೂ ಇಲ್ಲದೆ ಅಧ್ಯಾಪಕ ವೃತ್ತಿ ನಡೆಸಿ ಅನಂತರ ನಾಲ್ಕು ವರ್ಷಗಳು ಬ್ರೆಸ್‍ಲೊ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ.

ವೃತ್ತಿ ಜೀವನ[ಬದಲಾಯಿಸಿ]

ಈ ಸಂದರ್ಭದಲ್ಲೇ ಈತನಿಗೆ ಜರ್ಮನಿಯ ವಿಖ್ಯಾತ ರಸಾಯನಶಾಸ್ತ್ರಜ್ಞ ರಾಬರ್ಟ್ ಬುನ್‍ಸೆನ್‍ನೊಡನೆ (1811-1899) ಸಂಪರ್ಕ ಒದಗಿದ್ದು. ಆತನೊಡನೆ ಕಿರ್ಖಫ್ ಹೈಡಲ್‍ಬರ್ಗ್ ವಿಶ್ವವಿದ್ಯಾಲಯಕ್ಕೆ ಭೌತಶಾಸ್ತ್ರ ಪ್ರಾಧ್ಯಾಪಕನಾಗಿ ತೆರಳಿದ. 1874ರಿಂದ 1887ರ ವರೆಗೆ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ. ಈ ಕಾಲಾವಧಿಯಲ್ಲಿ ಜರ್ಮನಿಯ ಭೌತ ಹಾಗೂ ದೇಹಶಾಸ್ತ್ರಜ್ಞ ಹರ್‍ಮಾನ್ ವಾನ್ ಹೆಲ್‍ಮ್ಹೋಲ್ಟ್ಸ್‍ನೊಡನೆ (1821-1894) ಸಂಪರ್ಕ ಬೆಳೆಸಿಕೊಂಡ. ಬುನ್‍ಸೆನ್‍ನೊಡನೆ ಕೆಲಸಮಾಡಿ ರೋಹಿತ ಗ್ರಾಹಿಯನ್ನು (ಸ್ಪೆಕ್ಟ್ರೊಸ್ಕೋಪ್) ರಚಿಸಿದ ಇದರಿಂದ ಸೀಸಿಯಂ (1860) ಮತ್ತು ರುಬಿಡಿಯಂ (1861) ಎಂಬ ಧಾತುಗಳ ಇರುವಿಕೆಯನ್ನು ಕಂಡು ಹಿಡಿಯಲು ಸಾಧ್ಯವಾಯಿತು.

ಕೊಡುಗೆಗಳು[ಬದಲಾಯಿಸಿ]

ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಭೌತಶಾಸ್ತ್ರಗಳಲ್ಲಿ ಕಿರ್ಖಫ್‍ನ ಕೊಡುಗೆಗಳು ಅಪಾರ. ದ್ಯುತಿಶಾಸ್ತ್ರದಲ್ಲಿ ಬುನ್‍ಸೆನ್ನನ ಸಂಪರ್ಕ ಈತನಿಗೆ ಎಷ್ಟು ಸಹಾಯಕವಾಯಿತೋ ವಿದ್ಯುತ್ ವಿಭಾಗದಲ್ಲಿ ವಿಲ್ ಹೆಲ್ಮ್ ವೇಬರನ (ಜರ್ಮನಿಯ ಭೌತ ಶಾಸ್ತ್ರಜ್ಞ; 1804-1891) ಸಂಪರ್ಕ ಅಷ್ಟೇ ಪರಿಣಾಮಕಾರಿಯಾಯಿತು. ಸರ್ ಚಾಲ್ರ್ಸ್ ವ್ಹೀಟ್‍ಸ್ಟನ್ (ಇಂಗ್ಲಿಷ್ ಭೌತಶಾಸ್ತ್ರಜ್ಞ: 1802-1875) ರೂಪಿಸಿದ ವಿದ್ಯುನ್ಮಂಡಲವನ್ನು ಮಾರ್ಪಡಿಸಿ ಯಾವ ವಿದ್ಯುನ್ಮಂಡಲದಲ್ಲೇ ಆಗಲಿ ವಿವಿಧ ಭಾಗಗಳಲ್ಲಿ ಹರಿಯುವ ವಿದ್ಯುತ್ಪ್ರಮಾಣವನ್ನು ಲೆಕ್ಕಾಚಾರ ಹಾಕಲು ಸಹಾಯವಾಗುವಂತೆ ತನ್ನದೇ ಹೆಸರಿನ ಒಂದು ಪ್ರಮೇಯವನ್ನು ಕಿರ್ಖಫ್ ನಿರೂಪಿಸಿದ್ದಾನೆ. ಓಮನ ನಿಯಮಗಳನ್ನು ಮೂರು ಆಯಾಮಗಳ ವಿದ್ಯುತ್ ಗತಿಶಾಸ್ತ್ರಗಳಿಗೆ ಸಂಬಂಧವನ್ನು ಕಲ್ಪಿಸಲು ಪ್ರಯತ್ನಿಸಿದ. ಈತನ ಪ್ರಯೋಗಗಳಲ್ಲಿ ಬಹು ಮುಖ್ಯವಾದುದೆಂದರೆ ಒಂದು ತಂತಿಯಲ್ಲಿ ಪ್ರಸರಿತವಾಗುವ ವಿದ್ಯುತ್ ಸಂಕೇತದ ವೇಗ ಬೆಳಕಿನ ವೇಗಕ್ಕೆ ಸಮವೆಂದು ತೋರಿಸಿದುದು.[೨]

ಕಿರ್ಖಫ್‍ನ ಇತರ ಆಸಕ್ತ ವಿಭಾಗಗಳೆಂದರೆ ಕಬ್ಬಿಣದಲ್ಲಿ ಉಷ್ಣವಹನ, ಸ್ಫಟಿಕಗಳಲ್ಲಿ ಪ್ರತಿಫಲನ ಮತ್ತು ವಕ್ರೀಭವನ. ದ್ರಾವಣ, ಬಾಷ್ಪೀಕರಣ ಮತ್ತು ರಾಸಾಯನಿಕ ಕ್ರಿಯೆಗಳಿಗೆ ಅನ್ವಯಿಸುವ ಉಷ್ಣಗತಿಶಾಸ್ತ್ರದ ಕೆಲವು ಪ್ರಮೇಯಗಳನ್ನು ಸಹ ಈತ ಮಂಡಿಸಿದ್ದಾನೆ. ರೋಹಿತ ವಿಶ್ಲೇಷಣೆಯನ್ನು (ಬುನ್‍ಸೆನ್ನನ ಜೊತೆಯಲ್ಲಿ) ನೀಡಿದುದರ ಪರಿಣಾಮವಾಗಿ ಆಕಾಶಕಾಯಗಳ ರಚನೆಯನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಯಿತು. ಕಿರ್ಖಫ್‍ನ ಲೇಖನಗಳೆಲ್ಲವನ್ನೂ ಒಗ್ಗೂಡಿಸಿ 1882ರಲ್ಲಿ ಪ್ರಕಟಿಸಲಾಯಿತು.

ನಿಧನ[ಬದಲಾಯಿಸಿ]

ಕಿರ್ಖಫ್ ಗತಿಸಿದ್ದು 64ನೇ ವಯಸ್ಸಿನಲ್ಲಿ, ಅಂದರೆ 1887ನೇ ಅಕ್ಟೋಬರ್ 17ರಂದು.

ಉಲ್ಲೇಖಗಳು[ಬದಲಾಯಿಸಿ]

  1. Physics Tree profile Gustav Robert Kirchhoff
  2. Graneau, P; Assis, AKT (1994). "Kirchhoff on the motion of electricity in conductors" (PDF). Apeiron. 19: 19–25.