ಗರ್ಭಾಧಾನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗರ್ಭಾಧಾನ (ಅಕ್ಷರಶಃ: ಗರ್ಭದಲ್ಲಿ ಬೀಜವನ್ನು ಇರಿಸುವುದು) ಹಿಂದೂಗಳಿಂದ ಆಚರಿಸಲಾಗುವ ೧೬ ಸಂಸ್ಕಾರಗಳಲ್ಲಿ ಮೊದಲನೆಯದು. ಗೃಹ್ಯ ಸೂತ್ರಗಳ ಪ್ರಕಾರ, ಈ ಸಂಸ್ಕಾರದ ಆಚರಣೆಯ ಆರಂಭದಲ್ಲಿ, ಪತ್ನಿಯನ್ನು ಯೋಗ್ಯವಾಗಿ ಅಲಂಕರಿಸಲಾಗುತ್ತದೆ ಮತ್ತು ಪತಿಯು ನೈಸರ್ಗಿಕ ಸೃಷ್ಟಿಗಳ ಉಪಮೆಗಳು ಮತ್ತು ತನ್ನ ಪತ್ನಿಗೆ ಗರ್ಭಧಾರಣೆಯಲ್ಲಿ ಸಹಾಯಮಾಡಲು ದೇವತೆಗಳಿಗೆ ಆಮಂತ್ರಣಗಳಿರುವ ವೈದಿಕ ಶ್ಲೋಕಗಳನ್ನು ಪಠಿಸುತ್ತಾನೆ. ನಂತರ ಪುರುಷ ಹಾಗು ಸ್ತ್ರೀ ಬಲಗಳ ಜಂಟಿ ಕ್ರಿಯೆಗಳ ರೂಪಕಗಳಿರುವ ಶ್ಲೋಕಗಳ ಜೊತೆಗೆ ಆಲಿಂಗನ ಆರಂಭವಾಗುತ್ತದೆ ಮತ್ತು ಪತಿಯು ತನ್ನ ಫಲೀಕರಣ ಸಾಮರ್ಥ್ಯವನ್ನು ವ್ಯಕ್ತಪಡಿಸುವ ಶ್ಲೋಕಗಳೊಂದಿಗೆ ತನ್ನ ಶರೀರವನ್ನು ಉಜ್ಜುತ್ತಾನೆ. ಗರ್ಭಾ ಎಂದರೆ ಬಸಿರು ಹಾಗು ಧಾನ ಎಂದರೆ ಕೊಡುವುದು ಎಂದರ್ಥ.ಅಕ್ಷರಶಃ ಗರ್ಭ ಸಂಪತ್ತು ಗಳಿಸುವುದು ಎಂದರ್ಥ.

ಸಾಹಿತ್ಯ[ಬದಲಾಯಿಸಿ]

ವಿದ್ವಾಂಸರು ಗರ್ಭಾಧಾನದ ವಿಧಿಯ ಪತ್ತೆಹಚ್ಚಲು ವೇದಗಳ ಸ್ತೋತ್ರಪಠಣ ಮಾಡುತ್ತಿದ್ದರು.ಪುನರಾವರ್ತಿತ ಪ್ರಾರ್ಥನೆಯನ್ನು ವಂಶಸ್ಥರು ಮತ್ತು ಸಮೃದ್ಧಿಗಾಗಿ ಶಾಸ್ತ್ರೋಕ್ತವಾಗಿ ಮಾಡಲಾಗುತ್ತದೆ.

"https://kn.wikipedia.org/w/index.php?title=ಗರ್ಭಾಧಾನ&oldid=718499" ಇಂದ ಪಡೆಯಲ್ಪಟ್ಟಿದೆ