ವಿಷಯಕ್ಕೆ ಹೋಗು

ಗರ್ಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅದ್ದಲ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಭಯ ಲೇಖನಕ್ಕಾಗಿ ಇಲ್ಲಿ ನೋಡಿ.
ಕೆಂಪು ಜಿಂಕೆ ಗರ್ಜಿಸುತ್ತಿರುವುದು

ಗರ್ಜನೆ ತಗ್ಗಿದ ಮೂಲಭೂತ ಆವರ್ತನ (ಶ್ರುತಿ) ಮತ್ತು ತಗ್ಗಿದ ಸ್ಥಾಯಿ ಆವರ್ತನ ಎರಡನ್ನೂ ಒಳಗೊಂಡಿರುವ ಒಂದು ಬಗೆಯ ಪ್ರಾಣಿ ದನಿ.[] ವಿವಿಧ ಪ್ರಜಾತಿಗಳ ಸಸ್ತನಿಗಳು ದೂರದ ಸಂವಹನ ಮತ್ತು ಪ್ರಾದೇಶಿಕ ಅಥವಾ ಸಂಗಾತಿ ರಕ್ಷಣೆಗಾಗಿ ಗರ್ಜನೆಗಳು ಮತ್ತು ಗರ್ಜನೆಯಂಥ ದನಿಗಳನ್ನು ಸೃಷ್ಟಿಸಲು ವಿಕಸನಗೊಂಡಿವೆ. ಇವು ಬೆಕ್ಕು ಕುಟುಂಬದ ದೊಡ್ಡ ಸದಸ್ಯರು, ಕೆಂಪು ಜಿಂಕೆ, ವಿವಿಧ ದನ ಕುಟುಂಬದ ಸದಸ್ಯರು, ಕೆಲವು ಸೀಲ್‍ಗಳು, ಕರಡಿಗಳು, ಊಳಿಡುವ ಕೋತಿಗಳು, ಸುತ್ತಿಗೆ ತಲೆಯ ಬಾವಲಿಗಳು, ಮತ್ತು ಗೊರಿಲಾಗಳನ್ನು ಒಳಗೊಂಡಿವೆ.

ಗರ್ಜಿಸುವ ಸಾಮರ್ಥ್ಯಕ್ಕೆ ಅಂಗರಚನಾ ಆಧಾರವಿದೆ, ಮತ್ತು ಹಲವುವೇಳೆ ಧ್ವನಿಪೆಟ್ಟಿಗೆ ಹಾಗೂ ಹಾಯೋಯ್ಡ್ ಮೂಳೆಗೆ ಮಾರ್ಪಾಡುಗಳು ಮತ್ತು ಕಡಿಮೆ ಆವರ್ತನದ ಶಬ್ದ ಅನುರಣನಕ್ಕಾಗಿ ವಿಸ್ತೃತ ಆಂತರಿಕ ಗಾಳಿ ಪ್ರದೇಶಗಳನ್ನು ಒಳಗೊಂಡಿರುತ್ತದೆ. ಗರ್ಜಿಸುವಾಗ, ಪ್ರಾಣಿಗಳು ತಮ್ಮ ಕತ್ತುಗಳನ್ನು ಹೊರಚಾಚಬಹುದು ಮತ್ತು ಅನುರಣನಕ್ಕಾಗಿ ಸ್ಥಳವನ್ನು ಹೆಚ್ಚಿಸಲು ತಮ್ಮ ತಲೆಗಳನ್ನು ಮೇಲೆತ್ತಬಹುದು. ಸಾಮಾನ್ಯವಾಗಿ ವಾಯುವಾಹಿತವಾದರೂ, ಕೆಲವು ಗರ್ಜನೆಗಳು ನೀರಿನ ಕೆಳಗೆ ಹೊರಹಾಕಲ್ಪಡುತ್ತವೆ, ಉದಾ. ಗಂಡು ಬಂದರು ಸೀಲ್‍ನ ವಿಚಾರದಲ್ಲಿ.

ಗರ್ಜಿಸುವ ಸಸ್ತನಿಗಳು ತಮ್ಮ ದನಿಗಳನ್ನು ಕಾರ್ಯಗತಮಾಡಲು ವಿವಿಧ ವಿಧಾನಗಳನ್ನು ರೂಪಿಸಿಕೊಂಡಿವೆ. ಪ್ರಮಾಣಾನುಗುಣವಾಗಿ ದೊಡ್ಡ ದ್ವನಿಪೆಟ್ಟಿಗೆ ಹೆಚ್ಚು ಆಳದ ಮೂಲಭೂತ ಆವರ್ತನದಲ್ಲಿ ಪಾತ್ರವಹಿಸುತ್ತದೆ. ಗಂಡು ಸುತ್ತಿಗೆ ತಲೆಯ ಬಾವಲಿಯು ಎದೆಗೂಡಿನ ಕುಳಿಯ ಬಹುತೇಕ ಪ್ರದೇಶವನ್ನು ತುಂಬುವಷ್ಟು ದೊಡ್ಡ ಮತ್ತು ಅದರ ಬೆನ್ನುಹುರಿಯ ಅರ್ಧದಷ್ಟು ಗಾತ್ರದ ಧ್ವನಿಪೆಟ್ಟಿಗೆಯನ್ನು ಹೊಂದಿರುತ್ತದೆ. ಬೆಕ್ಕು ಕುಟುಂಬದ ದೊಡ್ಡ ಸದಸ್ಯರು (ಸಿಂಹ, ಹುಲಿ, ಚಿರತೆ ಮತ್ತು ಜ್ಯಾಗ್ಯುವಾರ್) ತ್ರಿಕೋನಾಕಾರದ ಬದಲು ಚೌಕಾಕಾರದ ಧ್ವನಿ ತಂತುಗಳನ್ನು ಹೊಂದಿರುತ್ತವೆ; ಇದು ಅವುಗಳಿಗೆ ಕಡಿಮೆ ಶ್ವಾಸಕೋಶ ಒತ್ತಡದಿಂದ ಹೆಚ್ಚು ಜೋರಾದ ಕರೆಯನ್ನು ಸೃಷ್ಟಿಸಲು ಅವಕಾಶ ನೀಡುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Weissengruber, G. E.; Forstenpointner, G.; Peters, G.; Kübber-Heiss, A.; Fitch, W. T. (2002). "Hyoid apparatus and pharynx in the lion (Panthera leo), jaguar (Panthera onca), tiger (Panthera tigris), cheetah (Acinonyx jubatus) and domestic cat (Felis silvestris f. catus)". Journal of Anatomy. 201 (3): 195–209. doi:10.1046/j.1469-7580.2002.00088.x. PMC 1570911. PMID 12363272.{{cite journal}}: CS1 maint: multiple names: authors list (link)
"https://kn.wikipedia.org/w/index.php?title=ಗರ್ಜನೆ&oldid=755500" ಇಂದ ಪಡೆಯಲ್ಪಟ್ಟಿದೆ