ವಿಷಯಕ್ಕೆ ಹೋಗು

ಗಂಜಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಗಂಜಹಳ್ಳಿ ಗ್ರಾಮ ಜಿಲ್ಲಾ ಕೇಂದ್ರದಿಂದ ಸುಮಾರು 21 ಕಿಲೋಮೀಟರ್ ಅಂತರ ಹೊಂದಿದೆ.ದೇವಸೂಗೂರು ಹೋಬಳಿ , ಪಂಚಾಯತ್ ಯಾದ್ಲಾಪುರ .ತಾಲ್ಲೂಕ ರಾಯಚೂರು, ಜಿಲ್ಲಾ ರಾಯಚೂರು, ರಾಜ್ಯ ಕರ್ನಾಟಕ ದೇಶ ಭಾರತ ಪಿನ್ ಕೋಡ್ 584170.

ಗಂಜಹಳ್ಳಿ ಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಇದೆ. ಗಂಜಹಳ್ಳಿಯಲ್ಲಿ ಸರ್ಕಾರಿ ಬಾಲಕಿಯರ ವಸತಿನಿಲಯ ಇದೆ. ಗಂಜಹಳ್ಳಿ ಅತ್ತಿರ 2ಕಿಲೋ ಮೀಟರ್ ಅಂತರದಲ್ಲಿ ಕೃಷ್ಣಾ ನದಿ ಹರಿಯುತ್ತದೆ. ಗಂಜಹಳ್ಳಿ ಯಿಂದ ದೇವಸುಗೂರು 7ಕಿಲೋಮೀಟರ್ ಅಂತರವನ್ನು ಹೊಂದಿದೆ. ಗಂಜಹಳ್ಳಿ ತೆಲಂಗಾಣ ಗಡಿಯಾಗಿದೆ.ದೇವಸುಗೂರುನಲ್ಲಿ ಪ್ರಸಿದ್ಧ ದೇವಸ್ತಾನ ಸೂಗೂರೇಶ್ವರ ದೇವಸ್ಥಾನವಿದೆ. ಅತ್ತಿರ ನಾಗರ ಯಲ್ಲಮ್ಮ ದೇವಸ್ಥಾನವಿದೆ, ನಾಗರ ಯಲ್ಲಮ್ಮ ಜಾತ್ರೆಯ ವಿಶೇಷ ಮಹಿಳೆಯರು ಮಾತ್ರ ರಥವನ್ನು ಎಳೆಯುತ್ತಾರೆ. ಇಡೀ ರಾಜ್ಯದಲ್ಲಿ ವಿಶೇಷ ವಾಗಿದೆ.ರಾಯಚೂರಿನ ಪ್ರಸಿದ್ಧ ಈ ದೇವಸ್ಥಾನ ಒಂದಾಗಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳು ಜಾತ್ರೆ ಮಹೋತ್ಸವ ನಡೆಯುತ್ತದೆ.

ಪ್ರಸಿದ್ದ ತಿಮ್ಮಪ್ಪ ದೇವಸ್ಥಾನ ಗಂಜಹಳ್ಳಿಯಿಂದ ಸುಮಾರು 6ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ ತಿಮ್ಮಪ್ಪ ಗುಡಿ ಮತ್ತು ಪ್ರತಿ ವರ್ಷ ಫೆಬ್ರವರಿ ತಿಂಗಳು ಜಾತ್ರೆ ನಡಿಯುತ್ತದೆ. ಇಲ್ಲಿ ವಿಶೇಷ ಜೋಡು ರಥಗಳನ್ನು ಎಳೆಯಲಾಗುತ್ತದೆ. ಇನ್ನೊಂದು ವಿಶೇಷ ಹಾಲು ಗಂಬ, ಕಲ್ಲು ಎತ್ತುವ ಸ್ಪರ್ಧೆಯನ್ನು ನಡೆಸಲಾಗುತ್ತದೆ.[[

ಇದೊಂದು ರಾಯಚೂರು ತಾಲ್ಲೂಕಿನ, ರಾಯಚೂರು ಜಿಲ್ಲೆಯ ಗ್ರಾಮವಾಗಿದೆ.ರಾಜ್ಯ ಕರ್ನಾಟಕ. ದೇಶ ಭಾರತ