ಗಂಗಾಸತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಂಗಾಸತಿ ಅವರು ಗುಜರಾತಿ ಭಾಷೆಯಲ್ಲಿ ಹಲವಾರು ಭಕ್ತಿಗೀತೆಗಳನ್ನು ರಚಿಸಿರುವ ಪಶ್ಚಿಮ ಭಾರತದ ಭಕ್ತಿ ಸಂಪ್ರದಾಯದ ಮಧ್ಯಕಾಲೀನ ಸಂತ ಕವಿ. [೧] [೨] [೩]

ಜೀವನಚರಿತ್ರೆ[ಬದಲಾಯಿಸಿ]

ಆಕೆಯ ಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ ಏಕೆಂದರೆ ಆಕೆಯ ಹಾಡುಗಳು ಮತ್ತು ಜೀವನ ಕಥೆಯನ್ನು ಮುಖ್ಯವಾಗಿ ಮೌಖಿಕ ಸಂಪ್ರದಾಯಗಳಿಂದ ರವಾನಿಸಲಾಗಿದೆ. ಸಾಂಪ್ರದಾಯಿಕ ಮಾಹಿತಿಗಳ ಪ್ರಕಾರ, ಈಕೆ ಸುಮಾರು ೧೨ ರಿಂದ ೧೪ ನೇ ಶತಮಾನದಲ್ಲಿ, ಭಾರತದ ರಾಜ್‌ಪಾರಾ ಗುಜರಾತ್ ರಾಜ್ಯದ ಸೌರಾಷ್ಟ್ರ ಜಿಲ್ಲೆಯ ಭಾವನಗರ ತಾಲೂಕಿನ ಪಲಿತಾನ ಗ್ರಾಮದಲ್ಲಿರುವ ಸರ್ವಯ್ಯ (ದಕ್ಷಿಣ ಸೌರಾಷ್ಟ್ರದ ಕ್ಷತ್ರಿಯ ಯಾದವ್ ಕುಲ) ರಜಪೂತ ಕುಟುಂಬದಲ್ಲಿ ಜನಿಸಿದರು. ಅವರು ಇಂದಿನ ಭಾವನಗರ ಸಮೀಪದ ಸಂಧಿಯಾಲಾ ಗ್ರಾಮದ ಕಹಲ್‌ಸಾಂಗ್ ಗೋಹಿಲ್ ಅಥವಾ ಕಲುಭಾ ಗೋಹಿಲ್ ಅವರನ್ನು ವಿವಾಹವಾದರು. ಅವರು ಭಕ್ತಿ ಚಳುವಳಿಯ ನಿಜಿಯ ಸಂಪ್ರದಾಯದ ಅನುಯಾಯಿಯಾಗಿದ್ದರು. ದಂಪತಿಗಳು ಧಾರ್ಮಿಕರಾಗಿದ್ದರು ಮತ್ತು ಅವರ ಮನೆಯು ಭಕ್ತಿ ಚಟುವಟಿಕೆಗಳ ಕೇಂದ್ರವಾಗಿತ್ತು. ಅವರು ಕೃಷಿಕ್ಷೇತ್ರಕ್ಕೆ ತೆರಳಿ ಗುಡಿಸಲನ್ನು ನಿರ್ಮಿಸಿ, ಅಲ್ಲಿ ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ಮುಂದುವರೆಸಿದರು. ಸಾಂಪ್ರದಾಯಿಕ ಮಾಹಿತಿಗಳ ಪ್ರಕಾರ, ತನ್ನ ಆಧ್ಯಾತ್ಮಿಕ ಶಕ್ತಿಯನ್ನು ಸಾಬೀತುಪಡಿಸಲು, ಕಲುಭನು ಒಮ್ಮೆ ಹಸುವನ್ನು ಪುನರುತ್ಥಾನಗೊಳಿಸಿದನು, ಆದರೆ ನಂತರ ಅವನು ವಿಷಾದಿಸಿ ಸಮಾಧಿಯನ್ನು ತೆಗೆದುಕೊಂಡು ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದನು. ಗಂಗಾಸತಿಯು ತನಗೂ ಸಮಾಧಿಯನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದಳು. ಆದರೆ ಅವನು ಅದನ್ನು ನಿರಾಕರಿಸಿ, ಅವಳು ಪನ್‌ಬೈಯನ್ನು ಭಕ್ತಿ ಮಾರ್ಗದಲ್ಲಿ ಪರಿಪೂರ್ಣಗೊಳಿಸುವವರೆಗೆ ಕಾಯುವಂತೆ ಸೂಚಿಸಿದನು. ಅವಳು ಅದಕ್ಕೆ ಒಪ್ಪಿ ಐವತ್ತೆರಡು ದಿನಗಳವರೆಗೆ ದಿನಕ್ಕೆ ಒಂದರಂತೆ ಭಕ್ತಿಗೀತೆಗಳು, ಭಜನೆಗಳನ್ನು ರಚಿಸಿದಳು. ನಂತರ ಅವಳು ಸಮಾಧಿಯನ್ನು ಹೊಂದಿದಳು. [೪] [೫] [೬]

ಭಜನೆಗಳು[ಬದಲಾಯಿಸಿ]

ಗುರುವಿನ ಮಹತ್ವ ಮತ್ತು ಅನುಗ್ರಹ, ಭಕ್ತನ ಜೀವನ, ಸ್ವಭಾವ ಮತ್ತು ಭಕ್ತಿಯ ಪದಗಳಂತಹ, ವಿಷಯ ಮತ್ತು ಆಧ್ಯಾತ್ಮಿಕ ಬೋಧನೆಗಳೊಂದಿಗೆ ಅವಳು ಈ ಭಜನೆಗಳನ್ನು ರಚಿಸಿದಳು. ಈ ಭಜನೆಗಳು ಯಾವುದೇ ಸಾಂಪ್ರದಾಯಿಕ ಹಿಂದೂ ದೇವತೆಗಳನ್ನು ಉಲ್ಲೇಖಿಸುವುದಿಲ್ಲ ಆದರೆ ಸಾಮಾನ್ಯವಾಗಿ ದೇವರನ್ನು ಯಾವುದೇ ರೂಪ ಅಥವಾ ಗುಣಲಕ್ಷಣಗಳಿಲ್ಲದೆ ಉಲ್ಲೇಖಿಸುತ್ತವೆ. ಆಕೆಯ ಭಜನೆಗಳು ಸೌರಾಷ್ಟ್ರದಲ್ಲಿ ಇನ್ನೂ ಜನಪ್ರಿಯವಾಗಿವೆ ಮತ್ತು ಸಾಂಪ್ರದಾಯಿಕವಾಗಿ ಆ ಭಜನೆಗಳನ್ನು ಭಕ್ತಿಗೀತೆ ಗಾಯಕರು ಹಾಡುತ್ತಾರೆ. [೪] [೫] [೭] [೮]

ಜನಪ್ರಿಯ ಸಂಸ್ಕೃತಿ[ಬದಲಾಯಿಸಿ]

೧೯೭೯ ರಲ್ಲಿ, ದಿನೇಶ್ ರಾವಲ್ ನಿರ್ದೇಶಿಸಿದ ಗಂಗಾಸತಿ ಚಲನಚಿತ್ರವು ಆಕೆಯ ಜೀವನದ ಸಾಂಪ್ರದಾಯಿಕ ಮಾಹಿತಿಗಳನ್ನು ಆಧರಿಸಿ ಗುಜರಾತಿಯಲ್ಲಿ ನಿರ್ಮಿಸಲಾಯಿತು. [೯]

ಹೆಚ್ಚಿನ ಓದುವಿಕೆ[ಬದಲಾಯಿಸಿ]

  • Majbutsinhji Jadeja (1993). Shree Kahalsang Bhagat: Gangasati Ane Panbaini Sanshodhan Parak Sankshipt Jeevankatha (in ಗುಜರಾತಿ). Majbutsinh Jadeja.
  • Gangasati; Dhairyachandra R. Buddha (1996). Gangasatini bhajanganga (in ಗುಜರಾತಿ). R.R. Sheth and Co.

ಉಲ್ಲೇಖಗಳು[ಬದಲಾಯಿಸಿ]

  1. Susie J. Tharu; Ke Lalita (1991). Women Writing in India: 600 B.C. to the early twentieth century. Feminist Press at CUNY. pp. 87–88. ISBN 978-1-55861-027-9. Retrieved 5 August 2014.
  2. Suthar, Babu (2004). "Gangasati (Gangabai)". In Jestice, Phyllis G. (ed.). Holy People of the World: A Cross-cultural Encyclopedia. Vol. 1. ABC-CLIO. pp. 292–293. ISBN 978-1-57607-355-1.
  3. Shrivastava, Meenal (2017-01-02). "Invisible Women in History and Global Studies: Reflections from an Archival Research Project". Globalizations. 14 (1): 1–16. doi:10.1080/14747731.2016.1158905. ISSN 1474-7731.
  4. ೪.೦ ೪.೧ Susie J. Tharu; Ke Lalita (1991). Women Writing in India: 600 B.C. to the early twentieth century. Feminist Press at CUNY. pp. 87–88. ISBN 978-1-55861-027-9. Retrieved 5 August 2014.Susie J. Tharu; Ke Lalita (1991). Women Writing in India: 600 B.C. to the early twentieth century. Feminist Press at CUNY. pp. 87–88. ISBN 978-1-55861-027-9. Retrieved 5 August 2014.
  5. ೫.೦ ೫.೧ Suthar, Babu (2004). "Gangasati (Gangabai)". In Jestice, Phyllis G. (ed.). Holy People of the World: A Cross-cultural Encyclopedia. Vol. 1. ABC-CLIO. pp. 292–293. ISBN 978-1-57607-355-1.Suthar, Babu (2004). "Gangasati (Gangabai)". In Jestice, Phyllis G. (ed.). Holy People of the World: A Cross-cultural Encyclopedia. Vol. 1. ABC-CLIO. pp. 292–293. ISBN 978-1-57607-355-1.
  6. Pande, Rekha (December 2012). "Women's voice in Bhakti literature". Research in World Literature, ( A Refereed Journal in Literature Studies) (in ಇಂಗ್ಲಿಷ್): 70–71. ISSN 2319-5266.
  7. Manushi. Samta. 1988. pp. 67–72. Retrieved 5 August 2014.
  8. Kalani, K.L. (September–October 1976). "Saint Literature in Gujarati". Indian Literature. Sahitya Akademi. 19 (5): 36–48. JSTOR 24157339.
  9. Ashish Rajadhyaksha; Paul Willemen (10 July 2014). Encyclopedia of Indian Cinema. Taylor & Francis. p. 26. ISBN 978-1-135-94325-7. Retrieved 5 August 2014.

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಗಂಗಾಸತಿ&oldid=1132178" ಇಂದ ಪಡೆಯಲ್ಪಟ್ಟಿದೆ