ಗಂಗರಾಂ ಚಂಡಾಳ
ಈ ಲೇಖನದ ವಿಷಯ ವಿಕಿಪೀಡಿಯ ಸಾಮಾನ್ಯ ಗಮನಾರ್ಹತೆ ಮಾರ್ಗದರ್ಶಿ ಹೊಂದಿಲ್ಲ. ವಿಷಯದ ಬಗ್ಗೆ ವಿಶ್ವಾಸಾರ್ಹ, ಮಾಧ್ಯಮಿಕ ಮೂಲಗಳನ್ನು ಸೇರಿಸುವ ಮೂಲಕ ಗಮನವನ್ನು ಸ್ಥಾಪಿಸಲು ದಯವಿಟ್ಟು ಸಹಾಯ ಮಾಡಿ. ಮಹತ್ವವನ್ನು ಸ್ಥಾಪಿಸಲಾಗದಿದ್ದರೆ, ಲೇಖನವನ್ನು ವಿಲೀನಗೊಳಿಸಬಹುದು, ಮರುನಿರ್ದೇಶಿಸಲಾಗುತ್ತದೆ, ಅಥವಾ ಅಳಿಸಬಹುದು. general notability guideline. |
ಗಂಗರಾಂ ಚಂಡಾಳ ಕನ್ನಡದ ಕವಿ, ವಿಮರ್ಶಕ, ಸಂಶೋಧಕ, ಅನುವಾದಕ, ಚತುರ್ಭಾಷಾ ಪರಿಣತ, ಕಲಾವಿದ, ಬಂಡಾಯ ಸಾಹಿತಿ-ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಇವರ ಕವನಗಳು ಹಿಂದಿ ಹಾಗೂ ಬಂಗಾಲಿ ಭಾಷೆಗೆ ಅನುವಾದಗೊಂಡಿವೆ.
ಜನನ/ಜೀವನ
[ಬದಲಾಯಿಸಿ]ಗಂಗರಾಂ ಚಂಡಾಳರು ೧೮ ಜೂನ್ ೧೯೬೧ರಂದು ಯಡಹಳ್ಳಿ, ಕೋಲಾರ ಜಿಲ್ಲೆಯಲ್ಲಿ ಜನಿಸಿದರು. ತಂದೆ ವೆಂಕಟಪ್ಪ, ತಾಯಿ ವೆಂಕಟಗಿರಿಯಮ್ಮ. ೧೯೮೫ರಲ್ಲಿ ಮಂಡ್ಯದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ, ೧೯೯೪ರಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರ ಎಂ.ಎ ಮಾಡಿ, ೨೦೦೫ ರಲ್ಲಿ ಯು.ಆರ್.ಪಿ ವತಿಯಿಂದ ಎಂ.ಟೆಕ್ ವ್ಯಾಸಂಗ ಪೂರೈಸಿದ್ದಾರೆ. ಇವರು ಕನ್ನಡ, ತೆಲುಗು, ಇಂಗ್ಲೀಷ್, ಹಿಂದಿ ಭಾಷೆಗಳನ್ನು ಬಲ್ಲವರಾಗಿದ್ದಾರೆ.
ಪತ್ನಿ ಶ್ರೀಮತಿ ರತ್ನಮ್ಮ ವಿ, ಬಿ.ಎ, ಎಂ.ಎ, ಬಿ.ಎಡ್ ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಮಕ್ಕಳು; ಡಾ. ಚೈತ್ರ ಜಿ. MBBS, MD, ರಶ್ಮಿ ಜಿ B.E (CIVIL), INDIAN FOREST SERVICE (ಒಡಿಶಾ ರಾಜ್ಯ ಕಾಡರ್ ನಲ್ಲಿ ಡಿಎಫ್ಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ), ಡಾ. ಸೌಮ್ಯ ಜಿ MBBS, MS (OPHTHALMOLOGY).
ಸಾಮಾಜಿಕ ಸೇವೆಗಳು
[ಬದಲಾಯಿಸಿ]ಕರ್ನಾಟಕ ಅಂಬೇಡ್ಕರ್ ಗ್ರಾಮ ಸಮಾಜ(ರಿ)ವತಿಯಿಂದ ಹಲವಾರು ಸಾಮಾಜಿಕ ಸೇವೆಯಲ್ಲಿ ನಿರತ. ಗೋಕಾಕ್ ಚಳುವಳಿ, ಬಂಡಾಯ ಸಾಹಿತ್ಯ ಚಳುವಳಿ, ದಲಿತ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ನ ಆಜೀವ ಸದಸ್ಯರು. ೬೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಶೀಲ ವಿಷಯ ಮಂಡನೆ. ಅಲ್ಲದೆ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಮೈಸೂರು ದಸರಾ ಕವಿಗೋಷ್ಠಿಯಲ್ಲಿ, ಪಟ್ಟದ ಕಲ್ಲು ಉತ್ಸವ ಮತ್ತು ಬಂಡಾಯ ಸಾಹಿತ್ಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.
ಕೃತಿಗಳು
[ಬದಲಾಯಿಸಿ]ಕವನ ಸಂಕಲನ[ಬದಲಾಯಿಸಿ]
ಕಾವ್ಯ[ಬದಲಾಯಿಸಿ]
ಸಂಪಾದಕತ್ವ[ಬದಲಾಯಿಸಿ]
ಸಂಪಾದನೆ[ಬದಲಾಯಿಸಿ]
|
ವ್ಯಕ್ತಿ ಚಿತ್ರ[ಬದಲಾಯಿಸಿ]
ವಿಚಾರ ಕೃತಿ[ಬದಲಾಯಿಸಿ]
|
ಬಿರುದು/ಪ್ರಶಸ್ತಿ/ಗೌರವ/ಪುರಸ್ಕಾರಗಳು
[ಬದಲಾಯಿಸಿ]- ಜೀವಸೆಲೆ ಕವನ ಸಂಕಲಕ್ಕೆ ಪ್ರಥಮ ಬಹುಮಾನ - ಕೋಲಾರ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಜಿಲ್ಲಾ ಕಾವ್ಯ ಸ್ಪರ್ಧೆಯಲ್ಲಿ.
- ೧೯೯೮ ರಲ್ಲಿ ನಾಡಚೇತನ ಎಂಬ ಬಿರುದು - ಬೆಂಗಳೂರಿನ ರಂಗಚೇತನ ಕಲಾವಿದರು ಮತ್ತು ಸಾಹಿತ್ಯ ಚಟುವಟಿಕೆಗಳಿಗಾಗಿ.
- ೧೯೯೯ ರಲ್ಲಿ ಡಾ.ಅಂಬೇಡ್ಕರ್ ಫೆಲೋಶಿಫ್ ರಾಷ್ಟ್ರೀಯ ಪುರಸ್ಕಾರ - ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ.
- ಕುವೆಂಪು ವಿ.ವಿ.ಯ ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ಕವನವೊಂದನ್ನು ಪಠ್ಯವಾಗಿ ಆಯ್ಕೆ ಮಾಡಿದೆ.
- ಕರ್ನಾಟಕ ಸರ್ಕಾರದ ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ (೨೦೨೫) ಗೆ ಭಾಜನರಾಗಿದ್ದಾರೆ.