ಖುಸ್ರಾವ್
ಖುಸ್ರಾವ್ (1587-1622) ಮೊಗಲ್ ಚಕ್ರವರ್ತಿ ಜಹಾಂಗೀರನ ಹಿರಿಯ ಮಗ ಮತ್ತು ರಾಜಾ ಮಾನ್‌ಸಿಂಗನ ಸೋದರಳಿಯ. ಅಕ್ಬರನ ಕಾಲದಲ್ಲೇ ಅವನನ್ನು ಸಿಂಹಾಸನಕ್ಕೆ ಆರಿಸಲು ಸನ್ನಾಹ ನಡೆದಿತ್ತು. ಜಹಾಂಗೀರ್ ಸಿಂಹಾಸನವನ್ನೇರಿದ ಮೇಲೆ, ಅವನ ವಿಶ್ವಾಸ ಕಳೆದುಕೊಂಡಿದ್ದ ಖುಸ್ರಾವ್ ದಂಗೆ ಎದ್ದು ಲಾಹೋರನ್ನು ಹಿಡಿದುಕೊಳ್ಳಲು ಜಹಾಂಗೀರ್ ಅವನೊಡನೆ ಯುದ್ಧ ನಡೆಸಿ, ಅವನನ್ನು ಸೆರೆಹಿಡಿದ.[೧] ಅವನಿಗೆ ಕಾರಾಗೃಹವಾಸದ ಶಿಕ್ಷೆ ವಿಧಿಸಲಾಯಿತು. ಅವನೊಂದಿಗೆ ದಂಗೆಯಲ್ಲಿ ಭಾಗವಹಿಸಿದ್ದ ಅನುಯಾಯಿಗಳು ಕ್ರೂರ ಶಿಕ್ಷೆಯನ್ನು ಅನುಭವಿಸಿದರು. ಅವನಿಗೆ ಆಶ್ರಯ ಕೊಟ್ಟ ತಪ್ಪಿಗಾಗಿ ಸಿಕ್ಖರ ಗುರು ಅರ್ಜುನಸಿಂಗನನ್ನು ಕೊಲ್ಲಲಾಯಿತು.[೨][೩] ಜಹಾಂಗೀರನ ಮರಣಾನಂತರ ತನ್ನ ಸೋದರ ಷಹಜಹಾನನ ಬಂದಿಯಾಗಿ ಖುಸ್ರಾವ್ 1662ರ ವರೆಗೆ ಜೀವಿಸಿದ್ದು, ಅನುಮಾನಾಸ್ಪದ ರೀತಿಯಲ್ಲಿ ಮರಣ ಹೊಂದಿದ ಎಂದು ಹೇಳಲಾಗುತ್ತದೆ. ಆದರೆ ಇದರ ಸಂಭವನೀಯತೆ ಬಹಳ ಕಡಿಮೆ. ಸಿಂಹಾಸನಕ್ಕೆ ಈತನ ಸ್ಪರ್ಧೆಯನ್ನು ಕೊನೆಗೊಳಿಸುವ ಸಲುವಾಗಿ ಬಹುಶಃ ಷಹಜಹಾನನೇ ಇವನ ಕೊಲೆ ಮಾಡಿರಬೇಕೆಂಬ ಅಭಿಪ್ರಾಯವಿದೆ.[೪]
ಉಲ್ಲೇಖಗಳು
[ಬದಲಾಯಿಸಿ]- ↑ "The Flight of Khusrau", The Tuzk-e-Jahangiri Or Memoirs Of Jahangir, Alexander Rogers, and Henry Beveridge. Royal Asiatic Society, 1909–1914. Vol. I, Chapter 3. p 51, 62–72., Volume 1, chapter 20
- ↑ Pashaura Singh (2005), Understanding the Martyrdom of Guru Arjan Archived 20 June 2010 ವೇಬ್ಯಾಕ್ ಮೆಷಿನ್ ನಲ್ಲಿ., Journal of Philosophical Society, 12(1), pages 29-62
- ↑ Jahangir, Emperor of Hindustan (1999). The Jahangirnama: Memoirs of Jahangir, Emperor of India. Translated by Thackston, Wheeler M. Oxford University Press. p. 59. ISBN 978-0-19-512718-8.
- ↑ Mahajan V.D. (1991, reprint 2007) History of Medieval India, Part II, New Delhi: S. Chand, ISBN 81-219-0364-5, pp.126-7