ಖುಷ್ವಂತ್ ಸಿಂಗ್ (ಪಂಜಾಬಿ:ਖ਼ੁਸ਼ਵੰਤ ਸਿੰਘ ಜನನ:ಫೆಬ್ರವರಿ ೨,೧೯೧೫) ಸ್ವತಂತ್ರ ಭಾರತದ ಅಗ್ರಗಣ್ಯ ಸಾಹಿತಿ ಹಾಗೂ ಪತ್ರಕರ್ತರಾಗಿದ್ದಾರೆ. ಪಂಜಾಬ್ನ ಹದಲಿ ಗ್ರಾಮ(ಈಗ ಪಾಕಿಸ್ತಾನದಲ್ಲಿದೆ)ದಲ್ಲಿ ಜನಿಸಿದ 'ಖುಷ್ವಂತ್ ಸಿಂಗ್', ಭಾರತದ ಬಹುತೇಕ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿದವರಾಗಿದ್ದಾರೆ. ಸತ್ಯ, ಸಾಮಾಜಿಕ ಕಳಕಳಿ, ಮೊನಚಾದ ಹಾಸ್ಯ, ಜೀವನಪ್ರೀತಿ ಮತ್ತು ಕಾಮ-ಇವೇ ಮುಂತಾದ ರೂಪಗಳನ್ನು ಅವರ ಬಹುತೇಕ ಬರಹಗಳಲ್ಲಿ ಕಾಣಬಹುದಾಗಿದೆ. ಇದಲ್ಲದೆ, ಭಾರತದ ಜನಪ್ರಿಯ ಹಾಗೂ, ಅತಿ ಹೆಚ್ಚು ಪ್ರಸಾರದ 'ಟೈಮ್ಸ್ ಆಫ್ ಇಂಡಿಯ' ಪತ್ರಿಕೆಯ ವಾರ ಪತ್ರಿಕೆ, 'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕೆಲಸಮಾಡಿದ್ದಾರೆ. ಪದ್ಮವಿಭೂಷಣ ಗೌರವವೂ ಸಹ ದೊರೆತಿದೆ.[೧]
೨೦೧೪ ರ, ಮಾರ್ಚ್, ೨೦ ರ ಮದ್ಯಾನ್ಹ, [೪]೯೯ ವರ್ಷ ಪ್ರಾಯದ ಖುಷ್ವಂತ್ ಸಿಂಗ್,[೫] ನಿಧನರಾದರು. ಮೃತರು, ಓರ್ವ ಪುತ್ರ, ರಾಹುಲ್, ಮತ್ತು ಪುತ್ರಿ, ಮಾಲಾರನ್ನು ಅಗಲಿ ಹೋಗಿದ್ದಾರೆ. ಅವರ ಅಂತ್ಯ ಸಂಸ್ಕಾರ, ೨೦ ರ ಸಂಜೆ, ದಯಾನಂದ ಮುಕ್ತಿಧಾಮ ಚಿತಾಗಾರದಲ್ಲಿ ನಡೆಯಿತು.