ವಿಷಯಕ್ಕೆ ಹೋಗು

ಖಾರ್ದಾ ಕದನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖಾರ್ದಾ ಕದನವು ಅಹ್ಮದ್‌ನಗರದ ಆಗ್ನೇಯಕ್ಕೆ 56 ಮೈಲಿಗಳ ದೂರದಲ್ಲಿರುವ ಖಾರ್ದಾ ಅಥವಾ ಕುರ್ದ್ಲಾ ಎಂಬಲ್ಲಿ ಹೈದರಾಬಾದಿನ ನಿಜಾಮ ಮತ್ತು ಮರಾಠಾ ನಾಯಕರ ನಡುವೆ ಮಾರ್ಚ್, 1795ರಲ್ಲಿ ನಡೆದ ಕದನ. ಮೈಸೂರಿನ ಟೀಪು ಸುಲ್ತಾನನ ವಿರುದ್ಧ ಬ್ರಿಟಿಷರು, ನಿಜಾಮ ಮತ್ತು ಮರಾಠರು ಒಕ್ಕೂಟ ರಚಿಸಿಕೊಂಡಿದ್ದರೂ ನಿಜಾಮ ಮತ್ತು ಮರಾಠರ ನಡುವೆ ಹಳೆಯ ದ್ವೇಷ ಹೊಗೆಯಾಡುತ್ತಿತ್ತು. ನಿಜಾಮ ಚೌತಾಯ ಮತ್ತು ಸರ್‌ದೇಶಮುಖಿ ಕಾಣಿಕೆಗಳನ್ನು ಕೊಡಲಿಲ್ಲವೆಂಬ ಕಾರಣವನ್ನೊಡ್ಡಿ ಪೇಷ್ವ ಮಹದಾಜಿ ಸಿಂಧ್ಯನ ನಾಯಕತ್ವದಲ್ಲಿ ಮರಾಠರು ನಿಜಾಮನ ಸೈನ್ಯದ ಮೇಲೆ ಬಿದ್ದರು. ನಿಜಾಮನ ಸೈನ್ಯ ರೇಮಾಂಡ್ ಎಂಬ ಫ್ರೆಂಚ್ ದಳಪತಿಯ ನೇತೃತ್ವದಲ್ಲಿ ತರಬೇತಾಗಿದ್ದರೂ ಖಾರ್ದಾದಲ್ಲಿ ಪೂರ್ಣವಾಗಿ ಸೋತುಹೋಯಿತು.[][][] ಬ್ರಿಟಿಷರು ಅವನ ಸಹಾಯಕ್ಕೆ ಬರಲಿಲ್ಲ. ಆ ಸೋಲಿನ ಫಲವಾಗಿ ನಿಜಾಮ ವಿಧಿಯಿಲ್ಲದೆ ಸಂಧಾನಕ್ಕೆ ಒಪ್ಪಿಕೊಳ್ಳಬೇಕಾಯಿತು. ಯುದ್ಧದ ಖರ್ಚನ್ನು ಕೊಡಲೊಪ್ಪಿದುದಲ್ಲದೆ ತನ್ನ ರಾಜ್ಯದ ಕೆಲಭಾಗಗಳನ್ನು ಮರಾಠರಿಗೆ ಬಿಟ್ಟುಕೊಡಬೇಕಾಯಿತು. ಆ ಸೋಲಿನಿಂದಾಗಿ ನಿಜಾಮ ಬ್ರಿಟಿಷರ ಆಶ್ರಿತ ರಾಜನಾಗುವಂತಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. Naravane, M.S. (2014). Battles of the Honourable East India Company. A.P.H. Publishing Corporation. p. 178. ISBN 9788131300343.
  2. Stewart Gordon (1993). The Marathas - Cambridge History of India (Vol. 2, Part 4). Cambridge: Cambridge University Press. ISBN 9781139055666.
  3. Jaques, Tony (2006-11-30). Dictionary of Battles and Sieges: A Guide to 8,500 Battles from Antiquity through the Twenty-first Century [3 volumes] (in ಇಂಗ್ಲಿಷ್). Bloomsbury Publishing USA. p. 524. ISBN 978-0-313-02799-4.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: