ವಿಷಯಕ್ಕೆ ಹೋಗು

ಕ್ವೆಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ವೆಟ್ಟ

ಪಾಕಿಸ್ತಾನದ ಒಂದು ನಗರ: ಕ್ವೆಟ್ಟ-ಪಿಷಿನ್ ಜಿಲ್ಲೆಯ ಆಡಳಿತ ಕೇಂದ್ರ. ಹಿಂದೆ ಬಲೂಚಿಸ್ತಾನದ ಮುಖ್ಯ ಪಟ್ಟಣವಾಗಿತ್ತು. ಉ.ಅ.30012' ಮತ್ತು ಪೂ.ರೇ.670 ಮೇಲಿದೆ. ಸಮುದ್ರ ಮಟ್ಟದಿಂದ 5,500' ಎತ್ತರದ ಬಯಲಿನಲ್ಲಿ ಇದೆ. ಜನಸಂಖ್ಯೆ 1,06,633 (1961). ಇದರ ಸುತ್ತಲೂ 11,000' ಎತ್ತರದ ಪರ್ವತಶ್ರೇಣಿಗಳುಂಟು. ವಾಯವ್ಯದಲ್ಲಿರುವ ಖೋಜಾಕ್ ಕಣಿವೆ ಮತ್ತು ಆಗ್ನೇಯದಲ್ಲಿರುವ ಬೋಲನ್ ಕಣಿವೆ ಇವೆರಡನ್ನೂ ಇಲ್ಲಿಂದ ನಿಯಂತ್ರಿಸಬಹುದಾದ್ದರಿಂದ ಕ್ವೆಟ್ಟದ ಮಹತ್ತ್ವ ಹೆಚ್ಚಿದೆ. ಕ್ವೆಟ್ಟದಲ್ಲಿ ಬೇಸಗೆಯಲ್ಲಿ ಹಗಲು ಸೆಕೆ ಹೆಚ್ಚು, ರಾತ್ರಿ ಚಳಿ ಹೆಚ್ಚು. ಚಳಿಗಾಲದಲ್ಲಿ ಉಷ್ಣತೆ-180 ಸೆಂ.ಗಿಂತ ಕೆಳಕ್ಕೆ ಇಳಿಯುವುದುಂಟು. ಸರಾಸರಿ ಮಳೆ 10". ಕ್ವೆಟ್ಟಕ್ಕೆ ಹತ್ತಿರದಲ್ಲಿ ಕಲ್ಲದ್ದಲು ಸಿಕ್ಕುತ್ತದೆ. ಕರೆಜ್ ಕಾಲುವೆಯ ನೀರಿನಿಂದ ಇದರ ಸುತ್ತ ವ್ಯವಸಾಯ ಸಾಗುತ್ತದೆ. ಈ ಪಟ್ಟಣದಲ್ಲಿ ಶಾಲೆ, ಆಸ್ಪತ್ರೆ, ಗ್ರಂಥಾಲಯ ಮುಂತಾದ ಸೌಕರ್ಯಗಳುಂಟು. ಇಲ್ಲಿ ಪಾಕಿಸ್ತಾನದ ಅತ್ಯಂತ ದೊಡ್ಡ ಸೈನ್ಯ ಠಾಣೆ ಮತ್ತು ಸೈನಿಕ ಶಿಕ್ಷಣಶಾಲೆ ಇವೆ. ಪಶ್ಚಿಮ ಆಘ್ಘಾನಿಸ್ತಾನ, ಪೂರ್ವ ಇರಾನ್‍ಒಂದಿಗೆ ಇಲ್ಲಿಂದ ವ್ಯಾಪಾರ ನಡೆಯುತ್ತದೆ. ಶುದ್ಧ ಮತ್ತು ಒಣಗಿದ ಹಣ್ಣುಗಳು, ವನೌಷಧಿಗಳು, ಹದಮಾಡಿದ ಚರ್ಮ-ಇವು ವ್ಯಾಪಾರ ಸರಕುಗಳು. ಆಫ್ಘಾನಿಸ್ತಾನ ಮತ್ತು ಇರಾನ್‍ಒಂದಿಗೂ ಪಶ್ಚಿಮ ಪಾಕಿಸ್ತಾನದ ಇತರ ಪಟ್ಟಣಗಳೊಂದಿಗೂ ರಸ್ತೆ-ರೈಲು ಸಂಪರ್ಕವಿದೆ.

1877ರಲ್ಲಿ ಈ ವಿಭಾಗ ಬ್ರಿಟಿಷ್ ಸತ್ತೆಗೆ ಒಳಪಟ್ಟಿತು. 1907ರಲ್ಲಿ ಕ್ವೆಟ್ಟದಲ್ಲಿ ಸೈನಿಕ ಶಿಕ್ಷಣಶಾಲೆ ಸ್ಥಾಪಿತವಾಯಿತು. 1935ರ ಮತ್ತು 1955ರ ಭೂಕಂಪಗಳ ಪರಿಣಾಮವಾಗಿ ಕ್ವೆಟ್ಟ ತುಂಬ ನಷ್ಟಕ್ಕೊಳಗಾಗಿತ್ತು. ಪಾಕಿಸ್ತಾನದ ನಿರ್ಮಾಣವಾದ ಮೇಲೆ ಇದನ್ನು ಬೇಸಗೆ ನಿವಾಸಸ್ಥಾನವೆಂದು ಕರೆದುದರಿಂದ ಕ್ವೆಟ್ಟದ ಮಹತ್ತ್ವ ವಿಶೇಷವಾಗಿ ಅಧಿಕವಾಗಿದೆ. *

"https://kn.wikipedia.org/w/index.php?title=ಕ್ವೆಟ್ಟ&oldid=1152090" ಇಂದ ಪಡೆಯಲ್ಪಟ್ಟಿದೆ