ವಿಷಯಕ್ಕೆ ಹೋಗು

ಕ್ರಿಸ್ಟಲ್ ಡಿಸೋಜಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರಿಸ್ಟಲ್ ಡಿಸೋಜಾ
೨೦೧೭ ರಲ್ಲಿ ಕ್ರಿಸ್ಟಲ್.
Born (1990-03-01) ೧ ಮಾರ್ಚ್ ೧೯೯೦ (ವಯಸ್ಸು ೩೪)
Nationalityಭಾರತೀಯ
Occupationನಟಿ
Years active೨೦೦೭–ಪ್ರಸ್ತುತ
Known forಏಕ್ ಹಜಾರೋಂ ಮೇ ಮೇರಿ ಬೆಹೆನಾ ಹೇ,ಬ್ರಹ್ಮರಾಕ್ಷಸ್

ಕ್ರಿಸ್ಟಲ್ ಡಿಸೋಜಾ ರವರು ಭಾರತೀಯ ದೂರದರ್ಶನ ನಟಿ.'ಏಕ್ ಹಜಾರೋಂ ಮೇ ಮೇರಿ ಬೆಹೆನಾ ಹೇ'ನಲ್ಲಿ ಜೀವಿಕಾ ವಧೇರ ಎಂಬ ಪಾತ್ರದಲ್ಲಿ,[]'ಏಕ್ ನಯೀ ಪೆಹೆಚಾನ್'ನಲ್ಲಿ ಸಾಕ್ಷಿ ಎಂಬ ಪಾತ್ರದಲ್ಲಿ,[][] ೨೦೧೬ ರಲ್ಲಿ ಝೀ ಟಿವಿಯ 'ಬ್ರಹ್ಮರಾಕ್ಷಸ್' ಧಾರವಾಹಿಯಲ್ಲಿ ರೈನಾ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕ್ರಿಸ್ಟಲ್ ಡಿಸೋಜಾ ರವರು ಮಾರ್ಚ್ ೧,೧೯೯೦ ರಲ್ಲಿ ಮುಂಬೈ ಯಲ್ಲಿ ಜನಿಸಿದರು.

ವೃತ್ತಿ ಜೀವನ

[ಬದಲಾಯಿಸಿ]

ಕ್ರಿಸ್ಟಲ್ ಡಿಸೋಜಾ ಅವರು ತಮ್ಮ ವೃತ್ತಿ ಜೀವನವನ್ನು ೨೦೦೭ ರಲ್ಲಿ ಬಾಲಾಜಿ ಟೆಲಿಫಿಲ್ಮ್ಸ್ ನ 'ಕಹೆ ನಾ ಕಹೆ' ಧಾರವಾಹಿಯ ಮೂಲಕ ಪ್ರಾರಂಭಿಸಿದರು.ಇದರಲ್ಲಿ ಅವರು ಕಿಂಜಲ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು[].ನಂತರ 'ಕ್ಯಾ ದಿಲ್ ಮೆ ಹೇ'ನಲ್ಲಿ ತಮನ್ನಾ ಎಂಬ ಪಾತ್ರದಲ್ಲಿ ಅಭಿನಯಿಸಿದರು.೨೦೦೮ ರಲ್ಲಿ ಸ್ಟಾರ್ ಪ್ಲಸ್ ನ 'ಕಸ್ತೂರಿ'ಯಲ್ಲಿ ನವ್ನೀತ್ ಮತ್ತು 'ಕಿಸ್ ದೇಶ್ ಮೆ ಹೇ ಮೇರಾ ದಿಲ್'ನಲ್ಲಿ ವೀರಾ ಪಾತ್ರದಲ್ಲಿ ಕಾಣಿಸಿಕೊಂಡರು.೨೦೧೦ ರಲ್ಲಿ ಸೋನಿ ಟಿವಿಯ 'ಬಾತ್ ಹಮಾರಿ ಪಕ್ಕೀ ಹೇ'ನಲ್ಲಿ ತಾರಾ ಪಾತ್ರದಲ್ಲಿ ಕಾಣಿಸಿಕೊಂಡರು.ಸೋನಿ ಟಿವಿಯ 'ಆಹಾತ್'ನಲ್ಲಿ ಕಿರು ಪಾತ್ರವನ್ನು ಮಾಡಿದ್ದಾರೆ.೨೦೧೧ ರಲ್ಲಿ 'ಏಕ್ ಹಜಾರೋಂ ಮೇ ಮೇರಿ ಬೆಹೆನಾ ಹೇ'ನಲ್ಲಿ ಜೀವಿಕಾ ವಧೇರ ಪಾತ್ರದಲ್ಲಿ, ಡಿಸೆಂಬರ್ ೨೦೧೩ ರಲ್ಲಿ 'ಏಕ್ ನಯೀ ಪೆಹೆಚಾನ್'ನಲ್ಲಿ ಸಾಕ್ಷಿ ಪಾತ್ರ,೨೦೧೬ ರಲ್ಲಿ 'ಬ್ರಹ್ಮರಾಕ್ಷಸ್'ನಲ್ಲಿ ರೈನಾ ಪಾತ್ರದಲ್ಲಿ ಅಭಿನಯಿಸಿದ್ದಾರೆ.೨೦೧೮ ರಲ್ಲಿ ಕಲರ್ಸ್ ಟಿವಿಯ 'ಬೇಲನ್ ವಾಲಿ ಬಹು'ನಲ್ಲಿ ರೂಪಾ ಪಾತ್ರದಲ್ಲಿ, ಅವರ ಅಭಿನಯಕ್ಕೆ, ಅತ್ಯುತ್ತಮ ನಟಿಗಾಗಿ ಗೋಲ್ಡ್ ಅವಾರ್ಡ್ಸ್ ಅನ್ನೂ ಗೆದ್ದರು[].

ಮಾಧ್ಯಮ

[ಬದಲಾಯಿಸಿ]

೨೦೧೭ ರಲ್ಲಿ ಟಾಪ್ ೨೦ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ಕ್ರಿಸ್ಟಲ್ ರವರು ೫ನೇ ಸ್ಥಾನ ಪಡೆದಿದ್ದಾರೆ[].

ನಟಿಸಿದ ಧಾರವಾಹಿಗಳು

[ಬದಲಾಯಿಸಿ]
ವರ್ಷ ಹೆಸರು ಪಾತ್ರ ಚಾನೆಲ್ Ref(s)
೨೦೦೭ ಕಹೆ ನಾ ಕಹೆ ಕಿಂಜಲ್ ಪಾಂಡೆ ನೈನೆಕ್ಸ್
೨೦೦೭–೨೦೦೮ ಕ್ಯಾ ದಿಲ್ ಮೆ ಹೇ ತಮನ್ನಾ ಪುಂಜ್
೨೦೦೮ ಕಸ್ತೂರಿ ನವ್ನೀತ್ ಚಾವ್ಲಾ ಸ್ಟಾರ್ ಪ್ಲಸ್
೨೦೦೮–೨೦೦೯ ಕಿಸ್ ದೇಶ್ ಮೆ ಹೇ ಮೇರಾ ದಿಲ್ ವೀರಾ ಜುನೇಜಾ
೨೦೧೦ ಬಾತ್ ಹಮಾರಿ ಪಕ್ಕೀ ಹೇ ತಾರಾ ಸೋನಿ ಟಿವಿ []
ಆಹತ್ ಯಾಮಿನಿ/ಮಲ್ಲಿಕಾ
೨೦೧೧–೨೦೧೩ ಏಕ್ ಹಜಾರೋಂ ಮೇ ಮೇರಿ ಬೆಹೆನಾ ಹೇ ಜೀವಿಕಾ ಚೌದರಿ ಸ್ಟಾರ್ ಪ್ಲಸ್ []
೨೦೧೩–೨೦೧೪ ಏಕ್ ನಯೀ ಪೆಹೆಚಾನ್ ಸಾಕ್ಷಿ ಸೋನಿ ಟಿವಿ []
೨೦೧೬–೨೦೧೭ ಬ್ರಹ್ಮರಾಕ್ಷಸ್-ಜಾಗ್ ಉಟಾ ಶೆಯ್ತಾನ್ ರೈನಾ ಶರ್ಮಾ ಝೀ ಟಿವಿ
೨೦೧೮ ಬೇಲನ್ ವಾಲಿ ಬಹು ರೂಪಾ ಕಲರ್ಸ್ ಟಿವಿ

ಇತರ ಕೆಲಸಗಳು

[ಬದಲಾಯಿಸಿ]

ಥಿಯೇಟರ್ ಕೆಲಸ ಮತ್ತು ಕಾರ್ಯಕ್ರಮ ಪ್ರದರ್ಶನಗಳು

[ಬದಲಾಯಿಸಿ]

ಕ್ರಿಸ್ಟಲ್ ರವರು ಕಾಲೇಜಿಗೆ ಹೋಗಿ ಅನೇಕ ರಂಗ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುತ್ತಿದ್ದರು.ಇದರಿಂದ ಅವರಿಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಲು ಸಾಧ್ಯವಾಯಿತು[೧೦].ಫೆಬ್ರವರಿ ೨೦೧೭ ರಲ್ಲಿ ಅವರು ಲಾಕ್ಮೇ ಫ್ಯಾಷನ್ ವೀಕ್ ನಲ್ಲಿ ಕಾಣಿಸಿಕೊಂಡರು[೧೧].೨೦೧೫, ೨೦೧೬ ಮತ್ತು ೨೦೧೭ ರಲ್ಲಿ ಕರಣ್ ಟಕರ್ ವಿರುದ್ಧ ಕಲರ್ಸ್ ಟಿವಿಯ ಮಿರ್ಚಿ ಟಾಪ್ ೨೦ ರಲ್ಲಿ ಕಾಣಿಸಿಕೊಂಡರು.

ಎಸ್ಕೇಪೆಕ್ಸ್ ಅಪ್ಲಿಕೇಶನ್ ಬಿಡುಗಡೆ

[ಬದಲಾಯಿಸಿ]

ಏಪ್ರಿಲ್ ೨೦೧೭ ರಲ್ಲಿ ಕ್ರಿಸ್ಟಲ್ ರವರು ತಮ್ಮದೇ ಆದ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು.ಈ ಅಪ್ಲಿಕೇಶನ್ ನಲ್ಲಿ, ಅವರ ಅಭಿಮಾನಿಗಳು ಮತ್ತು ಅನುಯಾಯಿಗಳು ಅವರೊಂದಿಗೆ ಸಂವಹನ ನಡೆಸಬಹುದಿತ್ತು ಹಾಗೂ ಅವರನ್ನು ಭೇಟಿಯಾಗಲು ಮತ್ತು ಸ್ವಾಗತಿಸಲು ಸಾಧ್ಯವಿತ್ತು[೧೨].

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]
ಬಾಕ್ಸ್ ಕ್ರಿಕೆಟ್ ಲೀಗ್ ನಲ್ಲಿ ಡಿಸೋಜಾ
ವರ್ಷ ಪ್ರಶಸ್ತಿ ವರ್ಗ ಪ್ರದರ್ಶನ ಫಲಿತಾಂಶ Reference
೨೦೧೨ ಗೋಲ್ಡ್ ಪ್ರಶಸ್ತಿ ಅತ್ಯಂತ ಫಿಟ್ ನಟಿ ಗೆಲುವು [೧೩]
ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ ಅತ್ಯುತ್ತಮ ಡ್ರಾಮಾ ನಟಿ (ಜ್ಯೂರಿ) ಏಕ್ ಹಜಾರೋಂ ಮೇ ಮೇರಿ ಬೆಹೆನಾ ಹೇ Nominated [೧೪]
೨೦೧೩ ಕಲಾಕಾರ್ ಪ್ರಶಸ್ತಿ ನೆಚ್ಚಿನ ಜೋಡಿ

(ಕರಣ್ ಟಕರ್ ಜೊತೆ)

ಗೆಲುವು
೨೦೧೪ ಇಂಡಿಯನ್ ಟೆಲ್ಲಿ ಪ್ರಶಸ್ತಿ ಅತ್ಯುತ್ತಮ ನಟಿ ಏಕ್ ನಯೀ ಪೆಹೆಚಾನ್ Nominated
ಗೋಲ್ಡ್ ಪ್ರಶಸ್ತಿ ಅತ್ಯಂತ ಫಿಟ್ ನಟಿ Nominated
೨೦೧೫ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ ಅತ್ಯಂತ ಸ್ಟೈಲಿಶ್ ನಟಿ ಗೆಲುವು
೨೦೧೮ ಗೋಲ್ಡ್ ಪ್ರಶಸ್ತಿ ಸ್ಟೈಲ್ ದಿವಾ Nominated
ಅತ್ಯಂತ ಫಿಟ್ ನಟಿ Nominated
ಕಾಮಿಕ್ ಪಾತ್ರದಲ್ಲಿ ಅತ್ಯುತ್ತಮ ನಟಿ ಬೇಲನ್ ವಾಲಿ ಬಹು ಗೆಲುವು [೧೫]
೨೦೧೯ ಲಯನ್ಸ್ ಗೋಲ್ಡ್ ಪ್ರಶಸ್ತಿ ಅತ್ಯಂತ ಸ್ಟೈಲಿಶ್ ವ್ಯಕ್ತಿತ್ವ Nominated

ಉಲ್ಲೇಖಗಳು

[ಬದಲಾಯಿಸಿ]
  1. "A free Sunday for Krystle D'souza". Times of India. Retrieved 5 January 2015.
  2. Maheshwri, Neha (28 July 2014). "Ekk Nayi Pahchaan to end in September?". Retrieved 5 January 2015.
  3. "Ekk Nayi Pehchaan recreates Salman-Bhagyshree moment!". Times of India. 2 April 2014. Retrieved 5 January 2015.
  4. Sundar, Mrinalini (21 February 2014). "TV actress Krystle D'Souza on her new show". The New Indian Express. Archived from the original on 7 ಜನವರಿ 2019. Retrieved 15 July 2016.
  5. "Zee Gold Awards 2018 | Full Winners List". DNA India (in ಇಂಗ್ಲಿಷ್). {{cite web}}: Cite has empty unknown parameter: |dead-url= (help)
  6. "Meet The Times 20 Most Desirable Women on TV - Times of India". The Times of India (in ಇಂಗ್ಲಿಷ್). Retrieved 2018-08-07.
  7. "Krystle D'Souza Tipped To Enter 'Baat Hamari Pakki Hai'". 9 June 2010. Archived from the original on 11 ಸೆಪ್ಟೆಂಬರ್ 2018. Retrieved 31 ಮಾರ್ಚ್ 2019.
  8. "Krystle and Nia Sharma to play leads in Cinevistaas' next". Metro Masti. Archived from the original on 30 ನವೆಂಬರ್ 2011. Retrieved 27 September 2011.
  9. "Krystle D'Souza in 'Ek Nayi Pehchaan'". Archived from the original on 2013-12-03. Retrieved 2019-03-31.
  10. Super Admin (2007-11-13). ""Glamour has always been my ambitions"- Krystle D'Souza". Entertainment.oneindia.in. Archived from the original on 2020-10-12. Retrieved 2012-07-15.
  11. "Karan Singh Grover, Sanjeeda Sheikh, Krystle D'souza: TV stars spotted at Lakme Fashion Week 2017!". 4 February 2017.
  12. "Krystle D'Souza joins Poonam Pandey, Disha Patani & other actresses in launching her own official mobile app". 21 April 2017.
  13. "Winners & Nominees of 5th Boroplus Gold Awards, 2012". 16 July 2012. Retrieved 26 July 2016.
  14. "The Indian Television Academy Awards, 2012". IndianTelevisionAcademy.com. Archived from the original on 21 October 2013. Retrieved 18 March 2016. {{cite web}}: Unknown parameter |deadurl= ignored (help)
  15. Zee Gold Awards 2018 Full Winners List