ವಿಷಯಕ್ಕೆ ಹೋಗು

ಕ್ಯಾಂಡಿಯ ದಂತ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೌತಮ ಬುದ್ಧರ ‘ದಂತ’ವನ್ನು ದೇವಾಲಯದ ಗರ್ಭಗುಡಿಯಲ್ಲಿರುವ ಪವಿತ್ರ ಪೆಟ್ಟಿಗೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಮುತ್ತುಗಳು, ರತ್ನಗಳು ಹಾಗೂ ವಜ್ರಗಳಿಂದ ಅಲಂಕರಿಸಲ್ಪಟ್ಟಿರುವ ಈ ದಂತವು ಎಲ್ಲರ ಗಮನವನ್ನೂ ಸೆಳೆಯುತ್ತದೆ.

ಸಾಮಾನ್ಯವಾಗಿ ಪವಿತ್ರ ದಂತ ದೇವಾಲಯ (ಕನ್ನಡದಲ್ಲಿ ಕ್ಯಾಂಡಿಯ ದಂತ ದೇವಾಲಯ) ಎಂದು ಕರೆಯಲ್ಪಡುವ "ಶ್ರೀ ದಳದಾ ಮಾಳಿಗಾವ", ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಒಂದು ಬೌದ್ಧ ದೇವಾಲಯವಾಗಿದೆ. ಇದು ಗೌತಮ ಬುದ್ಧನ ಪವಿತ್ರ ದಂತ ಧಾತುವನ್ನು (ಹಲ್ಲಿನ ಅವಶೇಷ) ಹೊಂದಿರುವ, ಹಿಂದಿನ ಕ್ಯಾಂಡಿ ಸಾಮ್ರಾಜ್ಯದ ರಾಜಮನೆತನದ ಅರಮನೆ ಸಂಕೀರ್ಣದಲ್ಲಿ ನೆಲೆಗೊಂಡಿದೆ. ಪ್ರಾಚೀನ ಕಾಲದಿಂದಲೂ ಈ ದಂತ ಧಾತುವು ಸ್ಥಳೀಯ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದೆ; ಏಕೆಂದರೆ, ಈ ಅವಶೇಷವನ್ನು ಯಾರು ಹೊಂದಿರುತ್ತಾರೋ ಅವರ ಬಳಿಯೇ ದೇಶದ ಆಡಳಿತಾಧಿಕಾರವಿರುತ್ತದೆ ಎಂದು ನಂಬಲಾಗಿದೆ. ಐತಿಹಾಸಿಕವಾಗಿ ಈ ಅವಶೇಷವು ಸಿಂಹಳೀಯ ರಾಜರ ವಶದಲ್ಲಿತ್ತು. ಮುಖ್ಯವಾಗಿ ಈ ದೇವಾಲಯ ಮತ್ತು ಪವಿತ್ರ ದಂತ ಧಾತುವಿನ ಕಾರಣದಿಂದಾಗಿ, 'ದಂತ ದೇವಾಲಯ'ವು ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ.

ಮಲ್‌ವತು ಮತ್ತು ಅಸ್‌ಗಿರಿ ಎಂಬ ಎರಡು ನಿರ್ದಿಷ್ಟ ಪಂಥಗಳ ಬೌದ್ಧ ಭಿಕ್ಷುಗಳು ದೇವಾಲಯದ ಗರ್ಭಗುಡಿಯಲ್ಲಿ ದಿನನಿತ್ಯದ ಆರಾಧನೆಯನ್ನು ನಡೆಸುತ್ತಾರೆ. ಧಾರ್ಮಿಕ ವಿಧಿಗಳನ್ನು ದಿನಕ್ಕೆ ಮೂರು ಬಾರಿ ನೆರವೇರಿಸಲಾಗುತ್ತದೆ: ಮುಂಜಾನೆ, ಮಧ್ಯಾಹ್ನ ಮತ್ತು ಸಂಜೆಯ ಸಮಯದಲ್ಲಿ. ಬುಧವಾರಗಳಂದು 'ನಾನುಮುರ ಮಂಗಲ್ಯಯ' ಎಂದು ಕರೆಯಲ್ಪಡುವ, ಸುಗಂಧಿತ ನೀರು ಹಾಗೂ ಸುವಾಸನಾಯುಕ್ತ ಹೂವುಗಳಿಂದ ಸಿದ್ಧಪಡಿಸಿದ ಮೂಲಿಕೆಗಳ ಮಿಶ್ರಣದಿಂದ ದಂತ ಧಾತುವಿಗೆ ಸಾಂಕೇತಿಕ ಅಭಿಷೇಕವನ್ನು ಮಾಡಿಸಲಾಗುತ್ತದೆ; ಈ ಪವಿತ್ರ ತೀರ್ಥವು ರೋಗಶಮನಕಾರಿ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದ್ದು, ಅಲ್ಲಿ ಉಪಸ್ಥಿತರಿರುವ ಭಕ್ತರಿಗೆ ಹಂಚಲಾಗುತ್ತದೆ. ಪವಿತ್ರ ದಂತ ಧಾತುವಿಗೆ ಗೌರವ ಸಲ್ಲಿಸಲು ಪ್ರತಿವರ್ಷ 'ಕ್ಯಾಂಡಿ ಎಸಳ ಪೆರಹೆರ' ಉತ್ಸವವನ್ನು ನಡೆಸಲಾಗುತ್ತದೆ.


ಹಿನ್ನೆಲೆ: ಈ ದಂತದ ಕಥೆಯೂ 'ದಂತ ಕಥೆ' ಯಂತೆಯೆ ಇದೆ! ಗೌತಮ ಬುದ್ಧ ಕುಸಿನಾರದಲ್ಲಿ (ಉತ್ತರ ಪ್ರದೇಶದ ಕುಶಾನಗರ) ತನ್ನ ದೇಹತ್ಯಾಗ ಮಾಡಿದ ನಂತರ, ಆತನ ಇಚ್ಛೆಯಂತೆ ಎಡಬದಿಯ ದವಡೆ ಹಲ್ಲನ್ನು ಅಂದಿನ ಕಳಿಂಗ ಚಕ್ರವರ್ತಿಗೆ ಕೊಡುಗೆಯಾಗಿ ನೀಡಲಾಯಿತಂತೆ. ಅದನ್ನು ಪ್ರೀತಿ, ಗೌರವದಿಂದ ಸ್ವೀಕರಿಸಿದ ಚಕ್ರವರ್ತಿ ಆ ದಂತಕಾಗಿ ಹೊಸದೊಂದು ದೇವಾಲಯವನ್ನೆ ನಿರ್ಮಿಸಿದನಂತೆ. 'ಥಿಘನಿಖಿಯಾ' ಎಂಬ ಗ್ರಂಥದಲ್ಲಿ ಈ ಬಗ್ಗೆ ಉಲ್ಲೇಖವಿದೆ ಎನ್ನಲಾಗುತ್ತದೆ. ಉಲೇಖದ ಪ್ರಕಾರ, ಕ್ರಿ.ಶ.೩೦೧-೩೨೮ ಅವದಿಯಲ್ಲಿ ಕಳಿಂಗ ಸಂಸ್ಥಾನವನು ಆಳುತ್ತಿದ್ದ ಚಕ್ರವರ್ತಿ ಗುಹಸೈವನ ಮಗಳು ಹೀಮಾಮಾಲಿ ಹಾಗೂ ಆಕೆಯ ಪತಿ, ಗೌತಮ ಬುದ್ದನ ದಂತವನ್ನು ಮೋದಿಂದ ಸಮುದ್ರ ಮಾರ್ಗಾವಾಗಿ ಸಾಗಿಸಿ 'ಸೆಂಕಿದಾಗಲ'ಕ್ಕೆ ಕೊಂಡೊಯ್ದೂ ಚಕ್ರವವರ್ತಿ ಕೀರ್ತಿಶ್ರೀ ಮೇಘಗಿರಿ ವಿಹಾರದಲ್ಲಿ ಪ್ರತಿಷ್ಟಾಪಿಸಲಾಯಿತು. ಅಂದಿನಿಂದ ಇದು ಸಿಂಹಳೀಯರ ಪವತ್ರ ಪೂಜನೀಯ ವಸ್ತುವಾಗಿ ಉಳಿದಿದೆ.ಕ್ರಿ.ಶ. ೧೨೫೯೫ ರಲ್ಲಿ ಸೆಂಖದಾಗಲವನ್ನು ಆಳುತ್ತಿದ್ದ ಸಿಂಹಳ ವಂಶಸ್ಥರ ಕೊನೆಯ ದೊರೆ ವಿಮಲಧರ್ಮ ಸೂರಿಯು ಈ ದಂತದ ಪವಿತ್ರ್ಯ, ಹಾಗೂ ಮಹತ್ವವನ್ನು ಅರಿತು ಬೆಟ್ಟಗುಡ್ಡಗಳಿಂದ ಸುತ್ತುವರೆದ 'ಸಂಖದಾಗಲ'ದ ಹೃದಯ ಭಾಗದಲ್ಲಿಯೇ ಮಂದಿರವೊಂದನ್ನು ನಿರ್ಮಿಸಿದ. ದೇವೇಂದ್ರ ಮಾಲಚೂರಿನ್ ಎಂಬ ಕಲಾಕಾರನ ಕಲಾವಂತಿಕೆಯಿಂದ ನಿರ್ಮಾಣವಾದ ಈ ಮಂದಿರ ಅಮೋಘ ಕಾಲ ವಿನ್ಯಾಸದಿಂದ ಕೂಡಿದ್ದು ಕೋಟೆಯಂತೆಯೇ ಭದ್ರವಾದ ದೇಗುಲವಾಗಿದೆ. ಶ್ರೀಲಂಕಾ ಸರ್ಕಾರ ದೇಗುಲವನ್ನು ಸುರಕ್ಷಿತ ಸ್ಮಾರಕ ಎಂದು ಘೋಷಿಸಿತು. ಎರಡು ಬಾರಿ ಕ್ರಿ.ಶ.೧೯೮೯ಹಾಗೂ ೧೯೯೮ ರಲ್ಲಿ ಎಲ್ ಟಿ ಟಿ ಇ ಉಗ್ರಗಾಮಿಗಳ ಆಕ್ರಮಣದಿಂದ ಈ ದೇವಾಲಯ ಭಗ್ನಗೊಂಡಿತು. ಈಗ ಜೀರ್ಣೊಧ್ಹಾರಗೊಂಡಿದೆ.

ಮನಮೋಹಕ ಕೆತ್ತನೆ

ನಾವು ಪ್ರವೇಶ ಶುಲ್ಕ ತೆತ್ತು ಪಾವಟಿಗೆಗಳನ್ನು ಏರಿ ಸೇತುವೆ ಮೇಲೆ ನಡೆದು ಮಹಾದ್ವಾರದ ಮೂಲಕ ಮಂದಿರ ಪ್ರವೇಶಿಸಿದೆವು. ದ್ವಾರದ ಇಕ್ಕೆಲಗಳಲ್ಲಿ ಇರುವ ಗಜರಾಜನ ಕೆತ್ತನೆಗಳು ಮನಮೋಹಕವಾಗಿದ್ದು ಇದನ್ನು ಮಕರ ತೋರಣ ಎಂದು ಕರೆಯುತ್ತಾರೆ. ಶ್ವೇತವಸ್ತ್ರ ಧರಿಸಿದ ಭಕ್ತಾಧಿಗಳ ಸಾಲು ನಮ್ಮ ನಡಿಗೆಯನ್ನು ನಿಯಂತ್ರಿಸುತ್ತಿತ್ತು. ನೇರಳೆ ಬಣ್ಣದ ಕಮಲದ ಹೂವು ಹಾಗೂ ದೇವಗಣಗಳು ಹೂವಿನ ಬುಟ್ಟಿಗಳು ಆಕರ್ಷಕವಾಗಿ ಕಂಡವು. ಗೋಡೆಯ ಮೇಲಿನ ಹಾಗೂ ಮೇಲ್ಛಾವಣಿಯಲ್ಲಿನ ಆನೆ, ಕುದುರೆ, ಸಿಂಹ, ಒಂಟೆ ಹಾಗೂ ಕಾಳಾಲುಗಳ ಚಿತ್ರಗಳು ಗಮನ ಸೆಳೆದವು. ಪಾವಟಿಕೆಗಳನ್ನು ಏರಿ ಹಾಗೆಯೇ ನಡೆದು ದೇವಾಲಯದ ಮುಖ ಮಂಟಪ ಪಿಲ್ಲೆ ಮಾಲೀವಾ ತಲುಪಿದೆವು. ಇದನ್ನು ಡಚ್ಚರು ಕ್ರಿ.ಶ.೧೭೬೫ ರಲ್ಲಿ ವಿನ್ಯಾಸ ಮಾಡಿದ್ದರು ಎನ್ನುತ್ತಾರೆ.