ಕ್ನಟ್ ಹ್ಯಾಮ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ನಟ್ ಹ್ಯಾಮ್ಸನ್
ಕ್ನಟ್ ಹ್ಯಾಮ್ಸನ್ ಜುಲೈ 1939 ರಲ್ಲಿ, ೭೯ನೆಯ ವಯಸ್ಸು
ಜನನಕ್ನಡ್ ಪೆಡೆರ್ಸನ್
(೧೮೫೯-೦೮-೦೪)೪ ಆಗಸ್ಟ್ ೧೮೫೯
Lom, Gudbrandsdal, Norway
ಮರಣFebruary 19, 1952(1952-02-19) (aged 92)
Grimstad, Nørholm, Norway
ವೃತ್ತಿಬರಹಗಾರ,ಕವಿ,ನಾಟಕಕಾರ,ಸಾಮಾಜಿಕ ಚಿಂತಕ
ರಾಷ್ಟ್ರೀಯತೆನಾರ್ವೆ
ಕಾಲ1877–1949
ಸಾಹಿತ್ಯ ಚಳುವಳಿNeo-romanticism
Neo-realism
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1920


ಕ್ನಟ್ ಹ್ಯಾಮ್ಸನ್ (ಆಗಸ್ಟ್ 4, 1859 – ಫೆಬ್ರವರಿ 19, 1952)ನಾರ್ವೆ ದೇಶದ ಬರಹಗಾರರು.ಇವರಿಗೆ ೧೯೨೦ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಇವರು ಸುಮಾರು ಎಪ್ಪತ್ತು ವರುಷಗಳ ದೀರ್ಘ ಕಾಲ ಸಾಹಿತ್ಯ ರಚನೆ ಮಾಡಿ ೨೦ಕ್ಕಿಂತಲೂ ಹೆಚ್ಚು ಕಾದಂಬರಿಗಳು,ಕವನ ಸಂಕಲನ,ಸಣ್ಣ ಕತೆಗಳು ಮತ್ತು ಪ್ರವಾಸ ಕಥನಗಳು ಮತ್ತು ಕೆಲವು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ತರುಣ ಕ್ನಟ್ ಹ್ಯಾಮ್ಸನ್ ನಂಬಿಕೆ ಮತ್ತು ವಾಸ್ತವಿಕತೆಯ ವಿರೋಧಿಯಾಗಿದ್ದರು.ಅವರು ನವ್ಯ ಸಾಹಿತ್ಯವು ಮನುಷ್ಯನ ಮನಸ್ಸಿನ ಕ್ಲಿಷ್ಟತೆಯ ಬಗೆಗಿದ್ದು,ಬರಹಗಾರ "ರಕ್ತದ ಪಿಸುಗುಡುವಿಕೆ ಮತ್ತು ಅಸ್ತಿಮಜ್ಜೆಯ ಪ್ರರ್ಥನೆಯನ್ನು"ವಿವರಿಸುವಂತದ್ದಾಗಿರಬೇಕೆಂದು ಪ್ರತಿಪಾದಿಸಿದರು[೧] .ಇವರು ಇಪ್ಪತ್ತನೆಯ ಶತಮಾನದ ಸಾಹಿತ್ಯದಲ್ಲಿ ಕಂಡು ಬಂದ ನವ ರಮ್ಯತೆಯ ಕ್ರಾಂತಿಯ ನಾಯಕನೆಂದು ಪರಿಗಣಿಸಲ್ಪಟ್ಟಿದ್ದರು.ಅವರ ಹಂಗರ್ (೧೮೯೦),ಮೈಸ್ಟಿರೀಸ್ (೧೮೯೨), ಪಾನ್ (೧೮೯೪)ಮುಂತಾದ ಕೃತಿಗಳು ಇದನ್ನು ಸಮರ್ಥಿಸುತ್ತವೆ.[೨] ಇವರ ನಂತರದ ಬರಹಗಳು ಅದರಲ್ಲೂ "ನಾರ್ಡ್‍ಲ್ಯಾಂಡ್" ಕಾದಂಬರಿಗಳು ನಾರ್ವೆಯ ಹಳ್ಳಿಗಾಡಿನ ಜನಜೀವನ ಮತ್ತು ನಾರ್ವೆಯ ಸಾಹಿತ್ಯದಲ್ಲಿ ಕಂಡುಬಂದ ಹೊಸ ವಾಸ್ತವಿಕತೆಯ ಚಳುವಳಿಗಳಿಂದ ಪ್ರಭಾವಿತವಾಗಿದ್ದವು. ಇದರಲ್ಲಿ ಸ್ಥಳೀಯ ಆಡು ಭಾಷೆಯ ಸೊಗಡು,ವ್ಯಂಗ್ಯ ಮತ್ತು ಹಾಸ್ಯವು ಹಾಸುಹೊಕ್ಕಾಗಿದೆ.[೩]

ಹ್ಯಾಮ್ಸನ್‍ರನ್ನು ಕಳೆದ ನೂರು ವರ್ಷಗಳ (೧೮೯೦-೧೯೯೦)ಕಾಲದ ಅತ್ಯಂತ ಪ್ರಭಾವೀ ಮತ್ತು ನವೀನ ಶೈಲಿಯನ್ನು ಅಳವಡಿಸಿಕೊಂಡ ಸಾಹಿತಿಗಳಲ್ಲಿ ಒಬ್ಬರೆಂದು ಗುರುತಿಸಲಾಗಿದೆ[೪] .ಇವರು ಸ್ವಗತ ಮತ್ತು ಪ್ರಜ್ಞೆಯನ್ನು ಬಳಸಿಕೊಂಡು ಮನಶಾಸ್ತ್ರೀಯ ಸಾಹಿತ್ಯದ ರಚನೆಯ ಅಧ್ವರ್ಯುವಾಗಿದ್ದರು. ಇವರಿಂದ ಪ್ರಭಾವಿತರಾಗಿದ್ದ ಬರಹಗಾರರಲ್ಲಿ ಪ್ರಾಂಜ್ ಕಾಫ್ಕಾ, ಮ್ಯಾಕ್ಸಿಂ ಗಾರ್ಕಿ,ಹೆನ್ರಿ ಮಿಲ್ಲರ್, ಹರ್ಮನ್ ಹೆಸ್ಸ್ ಮತ್ತು ಎರ್ನೆಸ್ಟ್ ಹೆಮಿಂಗ್‍ವೇ ಮುಂತಾದವರು ಪ್ರಮುಖರು[೫] . ಐಸಾಕ್ ಬಾಷೆವಿಸ್ ಸಿಂಗರ್ ಹೇಳಿದಂತೆ ವಸ್ತುನಿಷ್ಟತೆ,ಹಿನ್ನೋಟದ ಉಪಯೋಗ,ಪದಗಳ ಬಳಕೆ ಮುಂತಾದ ಸಾಹಿತ್ಯ ರಚನೆಯ ಎಲ್ಲಾ ವಿಷಯಗಳಲ್ಲಿ ತನ್ನದೇ ಛಾಪು ಹೊಂದಿದ್ದ ಹ್ಯಾಮ್ಸನ್ ನವೋದಯ ಸಾಹಿತ್ಯದ ಪಿತಾಮಹ.೨೦ನೆಯ ಶತಮಾನದ ಕಥಾಸಾಹಿತ್ಯವು ಹ್ಯಾಮ್ಸನ್‍ನಿಂದ ಬಹಳವಾಗಿ ಪ್ರಭಾವಿತವಾಗಿದೆ.[೬]

ನಿಧನ[ಬದಲಾಯಿಸಿ]

ಕ್ನಟ್ ಹ್ಯಾಮ್ಸನ್ ತಮ್ಮ ೯೨ನೆಯ ವರ್ಷದಲ್ಲಿ ಗ್ರಿಮ್‍ಸ್ಟಡ್‍ನಲ್ಲಿ ನಿಧನ ಹೊಂದಿದರು.[೭]

ಉಲ್ಲೇಖಗಳು[ಬದಲಾಯಿಸಿ]

  1. Knut Hamsun (1890). "Fra det ubevidste Sjæleliv", Samtiden, September 1890
  2. The new encyclopædia Britannica: Volum 5
  3. Hal May, Contemporary Authors, Volum 119, Gale, 1986
  4. Robert Ferguson (1987). Enigma: the life of Knut Hamsun, New York, N.Y. : Farra, Straus & Giroux, ISBN 978-0-374-52093-9
  5. "The St. Petersburg Times - A complex legacy". Sptimes.ru. 2009-11-06. Archived from the original on 2012-03-29. Retrieved 2011-06-27.
  6. Isaac Bashevis Singer (1967). Introduction to Hunger
  7. "ಆರ್ಕೈವ್ ನಕಲು". Archived from the original on 2016-03-03. Retrieved 2015-08-22.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Works[ಬದಲಾಯಿಸಿ]

Other[ಬದಲಾಯಿಸಿ]