ವಿಷಯಕ್ಕೆ ಹೋಗು

ಕೋಶ ಚಿಕಿತ್ಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋಶ ಚಿಕಿತ್ಸೆ

[ಬದಲಾಯಿಸಿ]

ಕೋಶ ಚಿಕಿತ್ಸೆ ಇದನ್ನು ಸೆಲ್ಯುಲರ್ ಥೆರಪಿ ಅಥವಾ 'ಸೈಟೋ' ಥೆರಪಿ ಎಂದು ಕರೆಯಲಾಗುತ್ತದೆ. ಕೋಶ ಚಿಕಿತ್ಸೆ ಎಂದರೆ ಸೆಲ್ಯುಲರ್ ವಸ್ತುವನ್ನು ರೋಗಿಗೆ ಚುಚ್ಚಲಾಗುವುದು, ಅಂದರೆ ಸಜೀವ ಜೀವಕೋಶಗಳು ಎಂದು ಅರ್ಥ. ಉದಾಹರಣಗೆ ಕೋಶ-ಮಧ್ಯವರ್ತಿ ಪ್ರತಿರಕ್ಷಕ ಮೂಲಕ ಕ್ಯಾನ್ಸರ್ ಕೋಶಗಳು ಹೋರಾಟ ಸಾಮಥ್ಯವನ್ನು T-ಜೀವಕೋಶಗಳನ್ನು ಇಮ್ಯನೋ ಹಾದಿಯಲ್ಲಿ ಚುಚ್ಚುಮದ್ದು ಮಾಡಬಹುದು.

ಇತಿಹಾಸ

[ಬದಲಾಯಿಸಿ]

ಕೋಶ ಚಿಕಿತ್ಸೆ 19 ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಎಡ್ವರ್ಡ ಬ್ರೌನ್ ಸಿಕ್ವರ್ಡ್ ಎಂಬ ವಿಜ್ಞಾನಿಯು ವಯಸ್ಸಾಗುವ ಪರಿಣಾಮವನ್ನು ನಲ್ಲಿಸಲು ಪ್ರಾಣಿಗಳ ವೃಷಣ ಸಾರಗಳನ್ನು ಚುಚ್ಚುಮದ್ದಾಗಿ ಉಪಯೋಗಿಸಿದರು. ಪೌಲ್ ನಿಹಾನ್ಸ್ ಇವರನ್ನು ಕೋಶ ಚಿಕಿತ್ಸೆಯ ಸಂಶೋಧಕರೆಂದು ಕರೆಯುತ್ತಾರೆ. ಇವರು ಕರು ಭ್ರೂಣದಿಂದ ತೆಗೆಯಲಾದ ವಸ್ತುವಿನಿಂದ ಅನೇಕ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಿ ಗುಣಪಡಿಸಿದ್ದಾರೆ.

ಹೆಚ್ಚಿನ ಸಂಶೋಧನೆಯನ್ನು ಗಮನಿಸಿದಾಗ ಮಾನವ ಜೀವಕೋಶಗಳು ಮಾನವ ದೇಹದ ಕಸಿ ಅಂಗಾಗಗಳನ್ನು ತಿರಸ್ಕರಿಸುವುದನ್ನು ತಡೆಯಲು ಬಳಸಲಗುತ್ತದೆ ಎಂದು 20 ನೇ ಶತಮಾನದಲ್ಲಿ ಕಂಡುಬಂದಿದೆ. ಇಂದು ಕೋಶ ಚಿಕಿತ್ಸೆ ಎರಡು ವಿಭಿನ್ನ ವರ್ಗಗಳಿಗೆ ಗುರುತಿಸಲ್ಪಡುತ್ತದೆ. ಮೊದಲ ವರ್ಗದಲ್ಲಿ ಮುಖ್ಯವಾಹಿನಿಯು ಔಷಧ ಹಾಗೂ ಕಾಯಿಲೆಯನ್ನು ಗುಣ ಪಡಿಸುವ ಪ್ರಯತ್ನದಲ್ಲಿ ಪ್ರಾಣಿ ವಸ್ತುಗಳನ್ನು ಬಳಸಿ ಹೋಗಿಸುವ ಅಭ್ಯಾಸ ಚಿರಸ್ಮರಣೆಯವನ್ನಾಗಿಸಿದೆ. ಈ ಪದ್ದತಿಯು ಅಮೆರಿಕಾ ಕ್ಯಾನ್ಸರ್ ಸೊಸೈಟಿ ಪ್ರಕಾರ ಮಾರಣಾಂತಿಕ ಪರಿಣಾಮಗಳನ್ನು ಒಳಗೊಂಡಿದೆ. ಯಾವುದೇ ವೈದ್ಯಕೀಯ ಪುರಾವೆಗಳಿಂದ ಬಂದಿರುವುದಿಲ್ಲ.

ಕೋಶ ಚಿಕಿತ್ಸೆಯಲ್ಲಿನ ಎರಡು ಶಾಖೆಗಳು

[ಬದಲಾಯಿಸಿ]
  • ಒಂದು ಮಾನವ ಜೀವಕೋಶಗಳನ್ನು ದಾನಿಗಳಿಂದ ರೋಗಿಗಳಿಗೆ ಸ್ಥಳಾಂತರಿಸಲಾಗುತ್ತದೆ. ಇದು ನ್ಯಾಯ ಸಮ್ಮತವಾಗಿರುತ್ತದೆ.
  • ಮತ್ತೊಂದು ಪ್ರಾಣಿಜೀವಕೋಶಗಳನ್ನು ಅನಾರೋಗ್ಯ ಸರಿಪಡಿಸಲು ಚುಚ್ಚಲಾಗುತ್ತದೆ.