ಕೈಮೊಟ್ರಿಪ್ಸಿನ್
ಕೈಮೊಟ್ರಿಪ್ಸಿನ್ ಜಠರ ಮತ್ತು ಕರುಳಲ್ಲಿ ಆಹಾರದ ಪ್ರೋಟೀನನ್ನು ಜಲವಿಶ್ಲೇಷಣೆ ಮಾಡಿ ಪೆಪ್ಪೈಡು ಮತ್ತು ಅಮೈನೋ ಆಮ್ಲಗಳಿಗೆ ಪರಿವರ್ತಿಸುವ ಪ್ರೋಟೀನ್ ವಿಶ್ಲೇಷಕ ಎನ್‍ಜೈಮು(ಕಿಣ್ವ)ಗಳಲ್ಲಿ ಒಂದು. ಇದರಲ್ಲಿ ಪ್ರೋಸ್ತೆಟಿಕ್ ಗುಂಪು ಇರುವುದಿಲ್ಲ ಮತ್ತು ಇದರ ಕಾರ್ಯನಿರ್ವಹಣೆಗೆ ಕೋಎನ್‍ಜೈಮು (ಸಹಕಿಣ್ವ) ಯಾವುದೂ ಬೇಕಾಗಿಲ್ಲ.
ಕೆಲಸ
[ಬದಲಾಯಿಸಿ]ಇದು ಟ್ರಿಪ್ಪೊಫೇನ್, ಫೀನೈಲ್ ಅಲನಿನ್ ಮತ್ತು ಟೈರೊಸಿಲ್ ಗುಂಪುಗಳಿರುವ ಪೆಪ್ಪೈಡ್ ಬಂಧಗಳನ್ನು ಬಹು ಚುರುಕಾಗಿಯೂ ಲ್ಯೂಸೈನ್, ಮೀಥಿಯೊನ್ ಮತ್ತು ಅಸ್ಪರಾಜಿನಿಲ್ ಪೆಪ್ಪೈಡ್ ಬಂಧಗಳನ್ನು ತಕ್ಕಮಟ್ಟಿಗೂ ಜಲವಿಶ್ಲೇಷಣೆಗೆ ಒಳಪಡಿಸುತ್ತದೆ. ಅಲ್ಲದೆ ಪೆಪ್ಪೈಡ್ ಉತ್ಪನ್ನಗಳನ್ನು ಹೋಲುವ ಅಸೈಟಿಲ್-ಎಲ್-ಟೈರೋಸಿನ್ ಈಥೈಲ್ ಎಸ್ಟರ್ ಮತ್ತು ಅಸೆಟಿಲ್-ಎಲ್-ಟೈರೋಸಿನ್ ಅಮೈಡ್ ಇಂಥ ಸಬ್‍ಸ್ಟ್ರೇಟುಗಳೊಡನೆ ಪ್ರಬಲ ಜಲವಿಶ್ಲೇಷಣ ಕ್ರಿಯೆಯನ್ನು ತೋರ್ಪಡಿಸುತ್ತದೆ. ಟ್ರಿಪ್ಸಿನ್ನಿನಂತೆಯೇ ಇದು ಸಹ ಮೇದೋಜೀರಕ ಗ್ರಂಥಿಯಲ್ಲಿ ಸಂಶ್ಲೇಷಿತವಾಗುತ್ತದೆ. ಮೊದಲು ಅಲ್ಲಿ ಇದರ ಪ್ರೊಎನ್‍ಜೈಮು ಅಥವಾ ಜೈóಮೊಜೆನ್ ಆದ ಕೈಮೊಟ್ರಿಪ್ಸಿನೊಜೆನ್ ಉತ್ಪತ್ತಿಯಾಗುತ್ತದೆ. ಇದಕ್ಕೆ ಕ್ರಿಯಾಶಕ್ತಿ ಇರುವುದಿಲ್ಲ. ಇದರಲ್ಲಿ 249 ಅಮೈನೋ ಆಮ್ಲ ಅವಶೇಷಗಳಿಂದಾದ ಒಂದೇ ಒಂದು ಪಾಲಿ ಪೆಪ್ಟೈಡ್ ಸರಣಿ ಇದೆ. ಈ ಸರಣಿಯಲ್ಲಿಯೇ ಐದು ಅಡ್ಡವಾದ ಡೈಸಲ್ಫೈಡ್ ಬಂಧಗಳಿವೆ. ಟ್ರಿಪ್ಸಿನ್ ಅಥವಾ ಕೈಮೊಟ್ರಿಪ್ಸಿನಿಂದ ಕರುಳಿನಲ್ಲಿ ಪರಿಮಿತ ಮೊತ್ತದಲ್ಲಿ ನಿರ್ದಿಷ್ಟ ರೀತಿಯಲ್ಲಿ ಕೈಮೊಟ್ರಿಪ್ಸಿನೊಜೆನ್ನಿನ ಜಲವಿಶ್ಲೇಷಣೆಯಾದಾಗ ಕ್ರಿಯಾಶಕ್ತ ಕೈಮೊಟ್ರಿಪ್ಸಿನ್ ಉತ್ಪತ್ತಿಯಾಗುತ್ತದೆ. ಈ ಪರಿವರ್ತನೆಯಲ್ಲಿ ಮೂರು ಹಂತಗಳಿವೆ. ಕೈಮೊಟ್ರಿಪ್ಸಿನೊಜೆನ್ನಿನ ಒಂದು ನಿರ್ದಿಷ್ಟ ಪೆಪ್ಟೈಡು (ಅರ್ಜಿನಿನ್-ಐಸೋಲ್ಯೂಸಿನ್) ಬಂಧದ ಜಲವಿಶ್ಲೇಷಣೆಯಿಂದ (-ಕೈಮೊಟ್ರಿಪ್ಸಿನ್ ಬರುತ್ತದೆ. ಇದರಿಂದ ಸೆರೀಲ್-ಅರ್ಜಿನೀನ್, ಈ ಡೈಪೆಪ್ಟೈಡು ಬಿಡಿಸಿ ಹೋದಾಗ (-ಕೈಮೊಟ್ರಿಪ್ಸಿನ್ನೂ ಈ (-ಎನ್‍ಜೈóಮಿನಿಂದ ಥ್ರಿಯೊನೀನ್-ಆಸ್ಪರಾಜೀನ್ ಈ ಡೈಪೆಪ್ಟೈಡು ಕಳಚಿಹೋದಾಗ ಚಿ-ಕೈಮೊಟ್ರಿಪ್ಸಿನ್ನೂ ಬರುತ್ತವೆ. ಒಂದೇ ಸರಣಿಯ ಕೈಮೊಟ್ರಿಪ್ಸಿನೋಜೆನ್ನಿನಿಂದ ಮೂರು ಸರಣಿಗಳ ಚಿ-ಕೈಮೊಟ್ರಿಪ್ಸಿನ್ನು ಬರುತ್ತದೆ. ಇದು ಇವುಗಳಲ್ಲೆಲ್ಲ ಸ್ಥಿರತಮವಾದದ್ದು. ಡೈಐಸೊಪ್ರೊಪೈಲ್ ಫಾಸ್ಫೊ ಫ್ಲೋರಿಡೇಟು ಕೈಮೊಟ್ರಿಪ್ಸಿನ್ನನ್ನು ಕ್ರಿಯಾಹೀನವನ್ನಾಗಿ ಮಾಡುತ್ತದೆ. ಎನ್‍ಜೈóಮಿನಲ್ಲಿ 28 ಸೆರೀನ್ ಅವಶೇಷಗಳಿದ್ದರೂ ಇದು ಅವುಗಳಲ್ಲಿ ನಿರ್ದಿಷ್ಟವಾದ ಒಂದು ಸೆರೀನ್ ಗುಂಪಿನೊಡನೆ ಮಾತ್ರ ಡೈಐಸೊ ಪ್ರೊಪೈಲ್ ಫಾಸ್ಫಾರಿಕ್ ಉತ್ಪನ್ನವನ್ನು ಉಂಟು ಮಾಡುತ್ತದೆ. ಕೈಮೊಟ್ರಿಪ್ಸಿನ್ನಿನ ಕ್ರಿಯಾಕೇಂದ್ರದಲ್ಲಿರುವ ಸೆರೀನಿನ ಸುತ್ತಲಿನ ಅಮೈನೋ ಆಮ್ಲ ಅನುಕ್ರಮವಾಗಿ ಟ್ರಿಪ್ಸಿನ್, ಕೈಮೊಟ್ರಿಪ್ಸಿನ್ ಮತ್ತು ಎಲಾಸ್ಟೇಸ್‍ಗಳೆಲ್ಲದರಲ್ಲೂ ಗ್ಲೈಸೀನ್-ಅಸ್ಪಾರಜೀನ್-ಸೆರೀನ್-ಗ್ಲೈಸೀನ್ ಆಗಿರುತ್ತದೆ. ಈ ಎನ್‍ಜೈóಮುಗಳೆಲ್ಲದಕ್ಕೂ ಅನುವಂಶಿಕ ಮೂಲ ಒಂದೇ ಆಗಿರಬೇಕೆಂದು ಇದು ತೋರಿಸುತ್ತದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The MEROPS online database for peptidases and their inhibitors: S01.001 Archived 2019-09-15 ವೇಬ್ಯಾಕ್ ಮೆಷಿನ್ ನಲ್ಲಿ.