ವಿಷಯಕ್ಕೆ ಹೋಗು

ಕೆಂಪುಬಸಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆಂಪುಬಸಲೆ

[ಬದಲಾಯಿಸಿ]

ವೈಜ್ಞಾನಿಕ ಹೆಸರು

[ಬದಲಾಯಿಸಿ]

ಬಸೆಲ್ಲ ರುಬ್ರ

ಸಸ್ಯದ ಕುಟುಂಬ

[ಬದಲಾಯಿಸಿ]

ಬಸಲ್ಲೇಸಿ

ಕನ್ನಡದ ಇತರ ಹೆಸರುಗಳು

[ಬದಲಾಯಿಸಿ]
  1. ಕೆಂಪುಬಾಯಿ ಬಸಳೆ
  2. ದೊಡ್ಡಬಸಳೆ
  3. ಪೋತಕಿ
  4. ಬಾಯಿಬಸಳೆ
  5. ಮಂದಕಾಲಿ
  6. ಹಿರೀಬಸಳೆ

ಇತರ ಭಾಷೆಯ ಹೆಸರುಗಳು

[ಬದಲಾಯಿಸಿ]
  • ಸಂಸ್ಕ್ರತ-ಅಪೊದಿಕ,ಪೊತಿಕ
  • ಹಿಂದಿ-ಲಾಲ್ ಬಚ್ಲು
  • ತಮಿಳು-ಶಿವಪ್ಪು ವಸ್ಲಕೀರೈ,ಸಿಗಪ್ಪುಪಸಲೈ
  • ಇಂಗ್ಲೀಷ್-ಇಂಡಿಯನ್ ಸ್ಪಿನಾಚ್

ಪರಿಚಯ

[ಬದಲಾಯಿಸಿ]

ಕೆಂಪು ಬಸಲೆ ಪ್ರಾಕೃತಿಕವಾಗಿ ಕಂಡುಬರುವುದಿಲ್ಲ,ಆದರೆ ತೋಟಗಳಲ್ಲಿ,ಕೈತೋಟಗಳಲ್ಲಿ ಸೊಪ್ಪು ತರಕಾರಿ ಬಳ್ಳಿಯಾಗಿ ಬೆಳೆಯುತ್ತಿರುವುದನ್ನು ಕಾಣಬಹುದು.ಬಸಲೆ ಆಸರೆ ಗಿಡ-ಚಪ್ಪರದ ಮೇಲೆ ಹಬ್ಬಿ ಬೆಳೆಯುತ್ತದೆ.ರಸಭರಿತ ಹಸಿರುಗೆಂಪಿನ ಬಳ್ಳಿಕಾಂಡದ ಮೇಲೆ ಸರಳವಾದ ಎಲೆಗಳು ಪರ್ಯಾಯವಾಗಿ ಜೋಡಣೆಯಾಗಿರುತ್ತವೆ.ಎಲೆಗಳ ಅಂಚು ನಯವಾಗಿರುತ್ತದೆ ಮತ್ತು ಬುಡವು ನೀಟಾಗಿ ಇಲ್ಲವೆ ಗುಂಡಾಗಿರುತ್ತದೆ.ಗುಲಾಬಿಗೆಂಪಿನ ಹೂಗಳು ಎಲೆಯ ಕಂಕುಳಲ್ಲಿರುವ ರಸಭರಿತ ಅಂತ್ಯಾರಾಭಿ ಪುಷ್ಪಮಂಜರಿಯಲ್ಲಿರುತ್ತವೆ.ಹೂವಿನಲ್ಲಿ ೫ ಕೇಸರಗಳಿರುತ್ತವೆ.ದುಂಡಾದ ಕಪ್ಪನೆಯ ಹಣ್ಣಿನಲ್ಲಿ ನೇರಳೆ ಬಣ್ಣದ ರಸತುಂಬಿರುತ್ತದೆ.

   ಮೇಲಿನ ಎಲ್ಲಾ ಹೋಲಿಕೆಯಿರುವ ಕೆಲವು ಜಾತಿಯ ಬಸಲೆ ಗಿಡದ ಕಾಂಡ ಮತ್ತು ಎಲೆ ತಿಳಿಹಸಿರಾಗಿರುತ್ತದೆ ಅಂತಹವುಗಳನ್ನು ಬಿಳಿ ಬಸಲೆ ಎಂದು ಕರೆಯುತ್ತಾರೆ.ಎರಡರಲ್ಲೂ ಒಂದೇ ತರಹದ ಔಷಧಿಯ ಗುಣವಿರುವುದರಿಂದ ಎರಡರಲ್ಲಿ ಯಾವುದನ್ನು ಬೇಕಾದರೂ ಉಪಯೋಗಿಸಬಹುದು.

ಉಪಯೋಗಗಳು

[ಬದಲಾಯಿಸಿ]
  1. ಇದರ ಬೇರಿನ ಕಷಾಯ ಕುಡಿಯುವುದರಿಂದ ಪಿತ್ತಾಧಿಕ್ಯದಿಂದ ಬರುವ ವಾಂತಿ ಕಡಿಮೆಯಾಗುತ್ತದೆ.
  2. ಎಲೆಗಳನ್ನು ಹಾಲಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಎಲೆಗಳನ್ನು ಹೊರತೆಗೆದು ಅರೆದು ಕುರು ಮತ್ತು ಬಾವಿನ ಮೇಲೆ ಲೇಪಿಸಿದರೆ ಬೇಗ ವಾಸಿಯಾಗುತ್ತದೆ.
  3. ಎಲೆಯನ್ನು ಅರೆದು ಹಣೆಗೆ ಪಟ್ಟುಹಾಕುವುದರಿಂದ ತಲೆನೋವು ವಾಸಿಯಾಗುತ್ತದೆ.ಇದನ್ನೇ ನೆತ್ತಿಗೆ ಲೇಪ ಹಾಕುವುದರಿಂದ ನೆತ್ತಿ ತಂಪಾಗಿ ಚೆನ್ನಾಗಿ ನಿದ್ದೆ ಬರುತ್ತದೆ.
  4. ಎಲೆಯನ್ನು ಪಲ್ಯ ಮಾಡಿ ತಿನ್ನುವುದರಿಂದ ಮೂತ್ರತಡೆ,ಮೂತ್ರದಲ್ಲಿ ಕೀವು,ವೀರ್ಯದೋಷಗಳು,ದಾಹ,ಬಲಹೀನತೆ ಮುಂತಾದವುಗಳು ಗುಣವಾಗುತ್ತವೆ,ಅಲ್ಲದೆ ಪಿತ್ತಸಂಬಂಧದ ಶ್ವಾಸರೋಗಗಳೂ ನಿವಾರಣೆಯಾಗುತ್ತವೆ.[]

ಉಲ್ಲೇಖ

[ಬದಲಾಯಿಸಿ]
  1. ಕರ್ನಾಟಕದ ಔಷಧಿಯ ಸಸ್ಯಗಳು ಡಾ.ಮಾಗಡಿ ಆರ್.ಗುರುದೇವ.ಮುದ್ರಣ ೨೦೧೦,ಪುಟ ಸಂಖ್ಯೆ ೯೯


<Reference/>