ವಿಷಯಕ್ಕೆ ಹೋಗು

ಕೂಡ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತುಂಗಾ ನದಿ ಸಂಗಮಕ್ಕೆ ಹರಿದುಬರುತ್ತಿರುವ ಒಂದು ನೋಟ

ಕೂಡ್ಲಿ (ಕೂಡಲಿ) ಶಿವಮೊಗ್ಗ ಜಿಲ್ಲೆಯ ಒಂದು ಪುಟ್ಟ ಊರು. ಈ ಊರು ಭಾರತ ದೇಶದ ಕರ್ನಾಟಕ ರಾಜ್ಯಕ್ಕೆ ಸೇರುತ್ತದೆ.

ತುಂಗಾ ಮತ್ತು ಭದ್ರಾ - ನದಿಗಳು, ಬೇರೆ ಬೇರೆಯಾಗಿ ಉಗಮಿಸಿ, ಕೂಡ್ಲಿ (ಕೂಡಲಿ) ಎಂಬಲ್ಲಿ ಈ ಜೀವನದಿಗಳ ಸಂಗಮವಾಗುತ್ತವೆ. ಈ ಊರು ತುಂಗಭದ್ರಾ ನದಿಗೆ ಜನ್ಮ ನೀಡುವ ಸ್ಥಳ.

ಸಂಗಮೇಶ್ವರ ದೇವಾಲಯ, ಕೂಡ್ಲಿ

ಪ್ರಾಮುಖ್ಯತೆ

[ಬದಲಾಯಿಸಿ]

ಆದಿ ಕಾಲದ ಸಂಗಮೇಶ್ವರ ದೇವಾಲಯ, ಸಂಗಮ ಹಾಗೂ ಪರಿಸರದ ವಿಹಂಗಮ ನೋಟ ಈ ಪ್ರದೇಶವನ್ನು ಸುಂದರಗೊಳಿಸಿದೆ. ಮಗದೊಂದು ಪ್ರವಾಸಿ ತಾಣವೆಂದೂ ಹೇಳಿದರೆ ತಪ್ಪಾಗದು. ಇಲ್ಲಿಯ ರಂಗನಾಥ ಸ್ವಾಮಿ ದೇವಾಲಯವೂ ಜನಪ್ರಿಯ. ಸಂಗಮ ಸ್ಥಳದಲ್ಲಿ ಸಂಗಮೇಶ್ವರನ ಗುಡಿ ಇದೆ. ಈ ಪುಟ್ಟ ಗುಡಿ ಸಂಗಮ ಸ್ಥಳವನ್ನು ಸೂಚಿಸುತ್ತದೆ. ಸಂಗಮೇಶ್ವರ ದೇವಾಲಯಕ್ಕೆ ಮಹತ್ತರ ಇತಿಹಾಸವಿರುವುದು. ಈ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಪ್ರಾಚೀನ ಶಿಲ್ಪಕಲೆಗಳಿಂದ ರಾರಾಜಿಸುವ ಈ ದೇವಾಲಯ ಕೂಡ್ಲಿಯ ಪ್ರಮುಖ ಆಕರ್ಷಣೆಗಳಲ್ಲೊಂದು.

ಇತಿಹಾಸ

[ಬದಲಾಯಿಸಿ]
ಸಂಗಮ ಸ್ಥಳದಲ್ಲಿ ನಂದಿಯ ಗುಡಿ ಇದೆ. ಈ ಪುಟ್ಟ ಗುಡಿ ಸಂಗಮ ಸ್ಥಳವನ್ನು ಸೂಚಿಸುತ್ತದೆ.

ಇಲ್ಲಿಯ ಪ್ರಾಚೀನ ಸಂಗಮೇಶ್ವರ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಇಲ್ಲಿ ಕೆಲವು ಪ್ರಾಚೀನ ಶಾಸನಗಳಿರುವುದುಂಟು. ದೇವಾಲಯದ ಸುಂದರ ಶಿಲ್ಪಕಲೆ ಜನರ ಮನ ಸೂರೆಗೊಳಿಸುತ್ತದೆ. ಇದಲ್ಲದೆ ಇನ್ನೂ ಕೆಲವು ಚಿಕ್ಕ ಪುಟ್ಟ ಪ್ರಾಚೀನ ದೇವಾಲಯಗಳು ಇಲ್ಲಿ ಇರುವುದುಂಟು. ಕೂಡಲಿಯಲ್ಲಿ ಶಾರದ ಪೀಠವಾದ ಕೂಡಲಿ ಶೃಂಗೇರಿ ಮಠ.

ಕೂಡ್ಲಿಯಲ್ಲಿ ಆರ್ಯ ಅಕ್ಷೋಭ್ಯ ತೀರ್ಥರ ಮಠವಿದೆ.

ಕೂಡ್ಲಿ ಜಾತ್ರೆ

[ಬದಲಾಯಿಸಿ]

ಪ್ರತಿ ವರ್ಷ ಯುಗಾದಿ ಹಬ್ಬದ ಸಂದರ್ಭ ಕೂಡ್ಲಿಯಲ್ಲಿ ಶ್ರೀ ಸಂಗಮೇಶ್ವರ ಜಾತ್ರೆ Archived 2022-04-03 ವೇಬ್ಯಾಕ್ ಮೆಷಿನ್ ನಲ್ಲಿ. ನಡೆಯಲಿದೆ. ಸುಮಾರು 200 ಗ್ರಾಮದ ಜನರು ಜಾತ್ರೆಯಲ್ಲಿ ಪಾಲ್ಗುಳ್ಳುತ್ತಾರೆ. ನೂರಕ್ಕು ಹೆಚ್ಚು ದೇವರುಗಳು ಕೂಡ ಜಾತ್ರೆಗೆ ಬರುತ್ತವೆ. ತುಂಗಾ, ಭದ್ರಾ ಸಂಗಮ ಸ್ಥಳದಲ್ಲಿ ದೇವರುಗಳನ್ನು ಶುಚಿಗೊಳಿಸಿ, ಪೂಜೆ ಸಲ್ಲಿಸಲಾಗುತ್ತದೆ. ಸಹಸ್ರಾರು ಭಕ್ತರು ಇಲ್ಲಿ ಬಂದು ಪುಣ್ಯ ಸ್ನಾನ ಮಾಡಿ, ಶ್ರೀ ಸಂಗಮೇಶ್ವರ ಸ್ವಾಮಿ ಪೂಜೆ ಸಲ್ಲಿಸುತ್ತಾರೆ. ಹೊಳೆಯ ನಡುಗಡ್ಡೆಯ ಮೇಲೆ ಜಾತ್ರೆಯ ಅಂಗಡಿಗಳನ್ನು ತೆಗೆಯಲಾಗುತ್ತದೆ. ತೆಪ್ಪದ ಮೂಲಕ ನಡುಗಡ್ಡೆಗೆ ಹೋಗಬೇಕಾಗುತ್ತದೆ.

"https://kn.wikipedia.org/w/index.php?title=ಕೂಡ್ಲಿ&oldid=1245278" ಇಂದ ಪಡೆಯಲ್ಪಟ್ಟಿದೆ