ವಿಷಯಕ್ಕೆ ಹೋಗು

ಕುಸುಮಾಕರ ದೇವರಗೆಣ್ಣೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಸುಮಾಕರ ದೇವರಗೆಣ್ಣೂರು ( ೧೯೩೦-೨೦೧೨) ಕಾವ್ಯನಾಮದಲ್ಲಿ ಕನ್ನಡ ಸಾಹಿತ್ಯಕೃಷಿ ಮಾಡುತ್ತಿರುವ ವಸಂತ ಅನಂತ ದಿವಾಣಜಿ ಇವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದಲ್ಲಿ ಜನಿಸಿದರು. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ, ಪುಣೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು.

೧೯೫೬ರಲ್ಲಿ ಸೊಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಭಾಷೆಯ ಪ್ರಾಧ್ಯಾಪಕರಾಗಿ ೩೫ ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು.

ಇವರು ೨೦೧೨ರಲ್ಲಿ ತೀರಿಕೊಂಡರು.

ಕಾದಂಬರಿಗಳು

[ಬದಲಾಯಿಸಿ]

ಕುಸುಮಾಕರ ದೇವರಗೆಣ್ಣೂರು ಇವರು ಅನೇಕ ಕಾದಂಬರಿಗಳನ್ನು ರಚಿಸಿದ್ದಾರೆ.

  • ಮುಗಿಯದ ಕಥೆ,(೧೯೬೫)
  • ನಾಲ್ಕನೆಯ ಆಯಾಮ,(೧೯೬೬)
  • ನಿರಿಂದ್ರಿಯ,(೧೯೯೩)
  • ಪರಿಘ (೧೯೯೫)
  • ಬಯಲು-ಬಸಿರು,(೨೦೦೫)

ಕವನ ಸಂಕಲನಗಳು

[ಬದಲಾಯಿಸಿ]
  • ಸ್ವಪ್ನನೌಕೆ

ಸಾಹಿತ್ಯ ವಿಮರ್ಶೆ

[ಬದಲಾಯಿಸಿ]
  • ಗಾಳಿ ಹೆಜ್ಜೆ ಹಿಡಿದ ಸುಗಂಧ,
  • ನಕ್ಷೆಗೆ ಎಟುಕದ ಕಡಲು
  • ಕ್ರಾಂತ ದರ್ಶನ

ಅನುವಾದ

[ಬದಲಾಯಿಸಿ]
  • ಬಯಲು-ಬಸಿರು,( ಇಂಗ್ಲೀಷ್ ಮತ್ತು ಮರಾಠಿಗೆ‌)
  • ದುರ್ದಮ್ಯ,(ಕನ್ನಡ ಭಾಷೆಗೆ ಮರಾಠಿಯಿಂದ )

ಅಭಿನಂದನಾ ಗ್ರಂಥ

[ಬದಲಾಯಿಸಿ]
  • ಅವಗಾಹ.

ಪಿಎಚ್ ಡಿ ಪ್ರಬಂಧ

[ಬದಲಾಯಿಸಿ]
  • ಪುರಂದರದಾಸರು ಜೀವನ ಹಾಗೂ ಕೃತಿಗಳು : ಒಂದು ಅಧ್ಯಯನ - ಎಂಬ ಪ್ರೌಢ ಪ್ರಬಂಧವನ್ನು ೧೯೬೬ ರಲ್ಲಿ ರಂ.ಶ್ರೀ.ಮುಗಳಿಯವರ ಮಾರ್ಗ ದರ್ಶನದಲ್ಲಿ ಪುಣೆ ವಿಶ್ವವಿದ್ಯಾಲಯದಲ್ಲಿ ಮಂಡಿಸಿ ಪಿಎಚ್.ಡಿ ಪದವಿಯನ್ನು ಪಡೆದರು. ಈ ಕೃತಿಯನ್ನು ಪ್ರಸಾದ ಯೋಗ ಎಂಬ ಹೆಸರಿನಿಂದ ೧೯೭೨ ರಿಂದ ಮಂತ್ರಾಲಯದ ರಾಘವೇಂದ್ರ ಮಠದಿಂದ ಹಲವು ಮರು ಮುದ್ರಣಗೊಂಡಿದೆ.

ಪ್ರಶಸ್ತಿ

[ಬದಲಾಯಿಸಿ]
  • ೨೦೦೬ರಲ್ಲಿ ಸತ್ಯಕಾಮ ಪ್ರಶಸ್ತಿ ಪ್ರದಾನವಾಗಿದೆ.
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ೨೦೦೩
  • ಮುಂಬೈನ ಗುರುನಾರಾಯಣ ಪ್ರಶಸ್ತಿ ಲಭಿಸಿದೆ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.

ಉಲ್ಲೇಖಗಳು

[ಬದಲಾಯಿಸಿ]