ಕುಶನಾಭ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಶನಾಭ
ಮಕ್ಕಳುಗಾಧಿ (ಮಗ), ಹೆಣ್ಣು ಮಕ್ಕಳು
ಗ್ರಂಥಗಳುರಾಮಾಯಣ, ಪುರಾಣಗಳು
ತಂದೆತಾಯಿಯರು
  • ಕುಶ (ತಂದೆ)

ಕುಶನಾಭ (ಸಂಸ್ಕೃತ: कुशनाभ) ಹಿಂದೂ ಗ್ರಂಥಗಳಲ್ಲಿ ಕಾಣಿಸಿಕೊಂಡಿರುವ ರಾಜ. ಇವನು ಅಮವಾಸು ವಂಶದ ರಾಜನಾಗಿ ಚಂದ್ರವಂಶದ ಸಾಲಿಗೆ ಸೇರಿದವನೆಂದು ವರ್ಣಿಸಲಾಗಿದೆ. ಇವನು ಕುಶನ ಮಗ ಎಂದು ಹೇಳಲಾಗುತ್ತದೆ.[೧] ಕುಶನಾಭ ಇತನು ಮಹೋದಯ ನಗರದ ಸ್ಥಾಪಕನೆಂದು ನಂಬಲಾಗಿದೆ.[೨]

ದಂತಕಥೆ[ಬದಲಾಯಿಸಿ]

ಮದುವೆ[ಬದಲಾಯಿಸಿ]

ಗ್ರಿಟಾಚಿ ಒಬ್ಬಳು ನಿಪುಣ ನರ್ತಕಿಯಾಗಿದ್ದಳು. ಕುಶನಾಭನು ಅವಳ ನೃತ್ಯವನ್ನು ನೋಡಿ ಅವಳ ಮೇಲೆ ವ್ಯಾಮೋಹಗೊಂಡು ಅವಳನ್ನು ಮದುವೆಯಾದನು.[೩][೪] ಅವನು ೧೦೦ ಜನ ಸಹೋದರಿಯರನ್ನು ಪುರು ಮತ್ತು ಯದು ರಾಜವಂಶದ, ಕಂಪಿಲ್ಯ ಸ್ಥಾಪಕ ಚೂಲಿ ಋಷಿಯ ಮಗ ಮತ್ತು ಅಪ್ಸರ ಸೋಮದ ಮಗನಿಗೆ ಮದುವೆ ಮಾಡಿದರು.

ಗಾಧಿಯ ಜನನ[ಬದಲಾಯಿಸಿ]

ಕುಶನಾಭನಿಗೆ ೧೦೦ ಹೆಣ್ಣು ಮಕ್ಕಳಿದ್ದರು ಆದರೆ ಅವನ ಸಿಂಹಾಸನಕ್ಕೆ ಪುರುಷ ಉತ್ತರಾಧಿಕಾರಿ ಇರಲಿಲ್ಲ. ಆದ್ದರಿಂದ, ಅವನು ಇಂದ್ರ ದೇವತೆಯನ್ನು ಪೂಜಿಸಲು ಪ್ರಾರಂಭಿಸಿದನು ಮತ್ತು ಇಂದ್ರ ನಂತಹ ಮಗನನ್ನು ಹೊಂದಬೇಕೆಂದು ತಪಸ್ಸನ್ನು ಮಾಡಿದನು. ಕೊನೆಗೆ, ಇಂದ್ರ ಸಮ್ಮತಿಸಿ ಅವತಾರದಿಂದ ಅವನ ಮಗ ಗಾಧಿ ಆಗಿ ಜನಿಸಿದನು.[೫]

ಉಲ್ಲೇಖಗಳು[ಬದಲಾಯಿಸಿ]

  1. Bibek Debroy (November 2017). The Valmiki Ramayana: Set of 3 Volumes. Penguin Random House India. p. 154. ISBN 9789387326941. Retrieved 1 November 2017. Kusha's son was the powerful Kushanabha, who was extremely devoted
  2. Bibek Debroy (25 October 2017). The Valmiki Ramayana, Volume 1. Penguin Random House India. p. 94. ISBN 9789387326262. Retrieved 25 October 2017.
  3. Vishwanath S. Naravane (1987). A Companion to Indian Mythology: Hindu, Buddhist & Jaina. Thinker's Library, Technical Publishing House. p. 106.
  4. Vishwanath S. Naravane (1997). Sages, Nymphs, and Deities: Excursions in Indian Mythology. The Author. p. 99.
  5. Jan Knappert (1991). Indian Mythology: An Encyclopedia of Myth and Legend. Aquarian Press. p. 147. ISBN 9781855380400. Kushamba Son of Kusha who worshipped Indra. He performed austerities wishing to have a son like Indra. At last Indra consented and became his son, by incarnation, being born as Gadhi.
"https://kn.wikipedia.org/w/index.php?title=ಕುಶನಾಭ&oldid=1203028" ಇಂದ ಪಡೆಯಲ್ಪಟ್ಟಿದೆ