ಕುರು (ರಾಜ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುರು ಮಹಾಭಾರತದಲ್ಲಿನ ಕುರು ವಂಶದ ಪ್ರಸಿದ್ಧ ಪೂರ್ವಜನ ಹೆಸರು. ಇವನು ಸಂವರಣ ಮತ್ತು ಸೂರ್ಯನ ಮಗಳಾದ ತಪತಿಯ ಮಗ.[೧] ದಂತಕಥೆಯಲ್ಲಿ, ಕುರು ರಾಜನು ಪಾಂಡು ಹಾಗೂ ಅವನ ವಂಶಸ್ಥರಾದ ಪಾಂಡವರು, ಮತ್ತು ಧೃತರಾಷ್ಟ್ರ ಹಾಗೂ ಅವನ ವಂಶಸ್ಥರಾದ ಕೌರವರು ಇಬ್ಬರ ಪೂರ್ವಜನೂ ಆಗಿದ್ದನು. ಕೌರವ ಎಂಬ ಹೆಸರು "ಕುರು" ಶಬ್ದದಿಂದ ಉತ್ಪನ್ನವಾಗಿದೆ. ಈ ಹೆಸರನ್ನು ಕೇವಲ ಧೃತರಾಷ್ಟ್ರನ ವಂಶಸ್ಥರಿಗೆ ಬಳಸಲಾಗುತ್ತದೆ.[೨] ಕುರು ರಾಜನಿಗೆ ಶುಭಾಂಗಾ ಮತ್ತು ವಾಹಿನಿ ಎಂಬ ಇಬ್ಬರು ಪತ್ನಿಯರು. ಶುಭಾಂಗಾಳಿಂದ ವಿದೂರಥನೆಂಬ ಪುತ್ರನಿದ್ದನು, ಮತ್ತು ವಾಹಿನಿಗೆ ಐದು ಪುತ್ರರು, ಅಶ್ವವತ್, ಅಭಿಷ್ಯತ್, ಚಿತ್ರರಥ, ಮುನಿ ಮತ್ತು ಜನಮೇಜಯ ಅವರ ಹೆಸರುಗಳು.[೩][೪] ಅವನ ಹಿರಿಮೆ ಮತ್ತು ಮಹಾನ್ ತಪಸ್ವಿ ಆಚರಣೆಗಳ ಕಾರಣ "ಕುರುಜಂಗಲ್" ಪ್ರದೇಶಕ್ಕೆ ಅವನಿಂದ ಹೆಸರು ಬಂದಿತು. ಪ್ರಾಚೀನ ವೈದಿಕ ಕಾಲದಿಂದ ಇದು ಕುರುಕ್ಷೇತ್ರವೆಂದೂ ಪರಿಚಿತವಾಗಿದೆ.[೫]

ಉಲ್ಲೇಖಗಳು[ಬದಲಾಯಿಸಿ]

  1. Monier Williams Sanskrit-English Dictionary (Oxford, 1899), p. 294.1
  2. Monier Williams (1899), S. 294.1
  3. Mbhr. 1.89.44 and 1.90.40 (Pune Critical Edition 1971)
  4. J.A.B. van Buitenen, Mahabharata Book 1, Chicago 1973, pp. 212–214
  5. M.M.S. Shastri Chitrao, Bharatavarshiya Prachin Charitrakosha (Dictionary of Ancient Indian Biography, in Hindi) Pune 1964, p. 151