ಕುಫಿ ಲಿಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಫಿ ಲಿಪಿಒಂದು ವಿಶೇಷ ರೀತಿಯ ಅರಬ್ಬೀ ಲಿಪಿ. ಇದು ಹಳೆಯ ನಬತೀಯ ಲಿಪಿಯಿಂದ, ಪಶ್ಚಿಮ ಏಷ್ಯದಲ್ಲಿ ಇಸ್ಲಾಂ ಸಂಸ್ಕ್ರತಿಯ ಕೇಂದ್ರಗಳಾಗಿದ್ದ ಕುಫ ಮತ್ತು ಬಸ್ರಾಗಳಲ್ಲಿ ಸು. 7ನೆಯ ಶತಮಾನದ ಕೊನೆಯಲ್ಲಿ ಬೆಳೆಯಿತು. ಇದರ ಮುಖ್ಯ ಕೇಂದ್ರ ಕುಫ ಆದ್ದರಿಂದ ಈ ಲಿಪಿಗೆ ಕುಫಿ ಎಂಬ ಹೆಸರು ಬಂದಿದೆ.

ಲಕ್ಷಣಗಳು[ಬದಲಾಯಿಸಿ]

ಅಕ್ಷರಗಳು ಗುಚ್ಚಾಗಿ ನೇರ ದಪ್ಪ ಗೆರೆಗಳಿಂದ ಕೂಡಿರುತ್ತವೆ. ಇವು ಸುಂದರವಾಗಿದ್ದು, ಕಲ್ಲು ಮತ್ತು ಲೋಹಗಳ ಮೇಲೆ ಇವನ್ನು ಅಲಂಕಾರವಾಗಿ ಮೂಡಿಸುವುದು ಸುಲಭವಾದ್ದರಿಂದ, ಕುಫಿ ಲೇಖಗಳು ಹೆಚ್ಚಾಗಿ ಇಸ್ಲಾಮೀ ನಾಣ್ಯಗಳ ಮತ್ತು ಸ್ಮಾರಕಗಳ ಮೇಲೆ ಕಂಡುಬರುತ್ತವೆ. ಕಾಲಕ್ರಮೇಣ ಈ ಲಿಪಿ ಪವಿತ್ರವೆಂಬ ಭಾವನೆ ಬೆಳೆದದ್ದರಿಂದ ಕುರಾನ್ ಕೊರಾನಿನ ಅನೇಕ ಹಸ್ತಪ್ರತಿಗಳಲ್ಲಿ ಈ ಲಿಪಿಯನ್ನೇ ಬಳಸಿರುವುದು ಕಂಡುಬರುತ್ತದೆ. ಭಾರತದಲ್ಲಿ ದೆಹಲಿ ಮುಂತಾದೆಡೆಗಳಲ್ಲಿದ್ದ ಗುಲಾಮೀ, ಖಿಲ್ಜಿ ಮತ್ತು ಅನಂತರದ ಇಸ್ಲಾಮೀ ಅರಸರ ಕಾಲದ ಸ್ಮಾರಕಗಳಲ್ಲಿ ಈ ಲಿಪಿಯಲ್ಲಿ ಬರೆದ ಶಾಸನಗಳು ದೊರಕಿವೆ.

ಉಲ್ಲೇಖಗಳು[ಬದಲಾಯಿಸಿ]