ವಿಷಯಕ್ಕೆ ಹೋಗು

ಕುದುರೆ ಲಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಗೆಬಗೆಯ ಕುದುರೆ ಲಾಳಗಳು

ಕುದುರೆ ಲಾಳವು ಕುದುರೆಯ ಗೊರಸನ್ನು ಸವೆತದಿಂದ ರಕ್ಷಿಸಲು ವಿನ್ಯಾಸಗೊಳಿಸಲಾದ ಒಂದು ಉತ್ಪಾದಿಸಿದ ಉತ್ಪನ್ನ. ಸಾಮಾನ್ಯವಾಗಿ ಇದನ್ನು ಲೋಹದಿಂದ ತಯಾರಿಸಲಾಗುತ್ತದೆ, ಆದರೆ ಕೆಲವೊಮ್ಮೆ ಭಾಗಶಃ ಅಥವಾ ಪೂರ್ತಿಯಾಗಿ ಆಧುನಿಕ ಕೃತಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಲಾಳಗಳನ್ನು ಗೊರಸುಗಳ ಕೆಳಭಾಗದ (ಭೂಮಿಗೆ ಮುಖವಾದ ಪಾರ್ಶ್ವ) ಮೇಲೆ ಜೋಡಿಸಲಾಗುತ್ತದೆ. ಲಾಳವನ್ನು ಸಾಮಾನ್ಯವಾಗಿ ಅಸಂವೇದಿಯಾದ ಗೊರಸಿನ ಗೋಡೆಯ ಮೂಲಕ ಮೊಳೆ ಹೊಡೆದು ಭದ್ರಪಡಿಸಲಾಗುತ್ತದೆ. ಈ ಗೋಡೆಯು ರಚನೆಯಲ್ಲಿ ಮಾನವರ ಕಾಲ್ಬೆರಳಿನ ಉಗುರನ್ನು ಹೋಲುತ್ತದೆ, ಆದರೆ ಹೆಚ್ಚು ದೊಡ್ಡ ಮತ್ತು ದಪ್ಪವಾಗಿರುತ್ತದೆ. ಆದರೆ, ಲಾಳಗಳನ್ನು ಅಂಟಿಸುವ ಸಂದರ್ಭಗಳೂ ಇವೆ.

ಕುದುರೆ ಲಾಳಗಳು ವ್ಯಾಪಕ ಬಗೆಗಳ ವಸ್ತುಗಳು ಮತ್ತು ಶೈಲಿಗಳಲ್ಲಿ ಲಭ್ಯವಿವೆ. ಇವನ್ನು ವಿಭಿನ್ನ ಬಗೆಯ ಕುದುರೆಗಳಿಗಾಗಿ ಮತ್ತು ಅವುಗಳು ಮಾಡುವ ಕೆಲಸವನ್ನು ಆಧರಿಸಿ ಅಭಿವೃದ್ಧಿಪಡಿಸಲಾಗಿರುತ್ತದೆ. ಅತ್ಯಂತ ಸಾಮಾನ್ಯ ವಸ್ತುಗಳೆಂದರೆ ಉಕ್ಕು ಹಾಗೂ ಅಲ್ಯೂಮಿನಿಯಮ್, ಆದರೆ ವಿಶೇಷೀಕೃತ ಲಾಳಗಳು ರಬ್ಬರು, ಪ್ಲಾಸ್ಟಿಕ್, ಮೆಗ್ನೀಸಿಯಮ್, ಟೈಟೇನಿಯಮ್, ಅಥವಾ ತಾಮ್ರದ ಬಳಕೆಯನ್ನು ಒಳಗೊಂಡಿರಬಹುದು.[೧]

ಉಲ್ಲೇಖಗಳು[ಬದಲಾಯಿಸಿ]

  1. Price, Steven D. (ed.) The Whole Horse Catalog: Revised and Updated New York:Fireside 1998