ಕುತ್ಯಾಳ ಶ್ರೀಗೋಪಾಲಕೃಷ್ಣ ದೇವಸ್ಥಾನ ಕೂಡ್ಲು
thumb|ಗೋಪಾಲಕೃಷ್ಣ ಕುತ್ಯಾಳ ಶ್ರೀಗೋಪಾಲಕೃಷ್ಣ ದೇವಸ್ಥಾನ ಕೂಡ್ಲು ಇದು ದೇವರನಾಡು ಎಂದು ಕರೆಯಲ್ಪಡುವ ಕೇರಳದ ಕಾಸರಗೋಡು ಜಿಲ್ಲೆಯ ಕೂಡ್ಲು ಎಂಬ ಗ್ರಾಮದಲ್ಲಿ ಕಂಡುಬರುತ್ತದೆ. ಹಲವಾರು ದೇವಾಲಯಗಳನ್ನು ಒಳಗೊಂಡಿರುವ ಕೂಡ್ಲು ಗ್ರಾಮದಲ್ಲಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನವು ನೆಲೆಗೊಂಡಿದೆ. ಕೂಡ್ಲು ಪ್ರದೇಶವನ್ನು ಮೊದಲು ಕುತ್ಯಾಳ ಎಂದು ಕರೆಯುತ್ತಿದ್ದರು.ಆದ್ದರಿಂದಲೇ ಈ ಹೆಸರು ಬಂದಿದೆ.
ಇತಿಹಾಸ
[ಬದಲಾಯಿಸಿ]ಸುಮಾರು ೨೦೦ ವರ್ಷಗಳ ಹಿಂದೆ ಕೂಡ್ಲು ಶ್ರೀ ಈಶ್ವರ ಶಾನುಭೋಗರು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಶ್ರೀ ಗೋಪಾಲಕೃಷ್ಣನನ್ನು ಅತ್ಯಂತ ನಂಬಿಕೆಯಿಂದ ಮತ್ತು ಭಕ್ತಿಯಿಂದ ಪ್ರಾರ್ಥಿಸಿ ಪೂಜಿಸುವ ಭಕ್ತರನ್ನು ಕೃಷ್ಣನು ಎಂದಿಗೂ ಬಿಡಲಾರನು ಎಂಬ ನಂಬಿಕೆಯು ಇಲ್ಲಿನ ಜನರಿಗಿದೆ. ಇಲ್ಲಿ ಹಲವಾರು ಪವಾಡಗಳು ಸಂಭವಿಸುತ್ತದೆ.[೧]
ಸಾಮಾನ್ಯವಾಗಿ ಮಕ್ಕಳಾಗದ ದಂಪತಿಗಳು ಸಂತಾನ ಭಾಗ್ಯಕ್ಕಾಗಿ ಇಲ್ಲಿನ ದೇವರ ಮೊರೆಹೋಗುತ್ತಾರೆ. ಯಾವುದೇ ಧರ್ಮಭೇದವಿಲ್ಲದೆ ಮಕ್ಕಳಾಗದ ದಂಪತಿಗಳಿಗೆ ಸಂತಾನ ಭಾಗ್ಯವನ್ನು ಕರುಣಿಸುವ ಶ್ರೀ ಗೋಪಾಲಕೃಷ್ಣನನ್ನು ಸಂತಾನ ಗೋಪಾಲಕೃಷ್ಣ ಎಂದೂ ಕರೆಯುತ್ತಾರೆ. ಹೀಗೆ ಸಂತಾನಭಾಗ್ಯ ಪ್ರಾಪ್ತಿಯಾದ ದಂಪತಿಗಳು ಅಲ್ಲೊಂದು ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುತ್ತಾರೆ. ಅದಲ್ಲದೆ ಬೆಳ್ಳಿಯ ಅಥವಾ ಚಿನ್ನದ ತೊಟ್ಟಿಲುಗಳನ್ನು ಸಹ ದೇವರಿಗೆ ಕಾಣಿಕೆಯಾಗಿ ನೀಡಲಾಗುತ್ತದೆ.[೨]
ಕೃಷ್ಣನಿಗೆ ಪ್ರಿಯವಾದ ಕಾರ್ತಿಕ ಪೂಜೆಯನ್ನು ಇಲ್ಲಿ ಮಾಡಲಾಗುತ್ತದೆ. ಅದಲ್ಲದೆ ಹಲವಾರು ಪೂಜೆಗಳು,ನಡೆಯುವ ಈ ದೇವಸ್ಥಾನಕ್ಕೆ ಬೇರೆ ಬೇರೆ ಪ್ರದೇಶಗಳಿಂದ ಭಕ್ತರು ಬರುತ್ತಾರೆ.ಫೆಬ್ರವರಿ ಮಾಸದಲ್ಲಿ ಇಲ್ಲಿ ಜಾತ್ರಾ ಮಹೋತ್ಸವವು ನಡೆಯುತ್ತದೆ. ಈ ಸಂದರ್ಭದಲ್ಲಿ ಭಕ್ತರೆಲ್ಲರು ಸೇರಿ ರಥೋತ್ಸವವನ್ನು ಮಾಡುತ್ತಾರೆ. ಎರಡು ವರ್ಷಗಳಿಗೊಮ್ಮೆ ಇಲ್ಲಿ ಒತ್ತೆಕೋಲ ನಡೆಯುತ್ತದೆ. ಈ ದೇವಾಲಯದ ಮುಂಭಾಗದಲ್ಲಿ ಗದ್ದೆ ಇದೆ. ಅಲ್ಲಿ ಭತ್ತದ ಕೃಷಿಯನ್ನು ಮಾಡುತ್ತಾರೆ. ಇಲ್ಲಿ ಹೊಸಕ್ಕಿ ಊಟವನ್ನು ಮಾಡುತ್ತಾರೆ. ಅನ್ನ ಸಂತರ್ಪಣೆ ಕಾರ್ಯಕ್ರಮವೂ ಇಲ್ಲಿ ಜರಗುತ್ತದೆ. ಈ ದೇವಾಲಯದಲ್ಲಿ ಅನ್ನಪೂರ್ಣೇಶ್ವರಿ ದೇವಿಯೂ ನೆಲೆಸಿದ್ದಾಳೆ.
ಯಕ್ಷಗಾನ
[ಬದಲಾಯಿಸಿ]ಗೋಪಾಲಕೃಷ್ಣನಿಗೆ ಯಕ್ಷಗಾನವೆಂದರೆ ಬಹಳ ಪ್ರಿಯವಾದದು. ಆದುದ್ದರಿಂದಲೇ ಇಲ್ಲಿ ಹಲವಾರು ಯಕ್ಷಗಾನ ಪ್ರದರ್ಶನವಾಗುತ್ತದೆ. ಕುತ್ಯಾಳ ಮೇಳ ಎಂಬ ಮೇಳವು ಇಲ್ಲಿ ಸಕ್ರಿಯವಾಗಿದೆ. ಯಕ್ಷಗಾನ ತರಬೇತಿ ಕೇಂದ್ರವೂ ಇಲ್ಲಿದೆ. ಹರಕೆ ಹೊತ್ತ ಭಕ್ತಾದಿಗಳು ಯಕ್ಷಗಾನವನ್ನು ಏರ್ಪಡಿಸಿ ಜೋಡಾಟವನ್ನು ಆಡಿಸುತ್ತಾರೆ. ಪ್ರತಿಯೊಂದು ಯಕ್ಷಗಾನ ಪ್ರಸಂಗವನ್ನು ಆರಂಭಿಸುವುದಕ್ಕಿಂತ ಮೊದಲು ಪೂಜೆಯನ್ನು ಮಾಡಿ ನಂತರ ಪ್ರಸಂಗವನ್ನು ಆರಂಭಿಸುತ್ತಾರೆ. ಯಕ್ಷಗಾನ ವೇಷಧಾರಿಗಳು, ಸಂಗೀತಗಾರರು, ಚಂಡೆ, ಮೇಳದವರು ಹಿಂದೂ ಪುರಾಣದ ದೃಶ್ಯಗಳನ್ನು ಚಿತ್ರಿಸುತ್ತಾರೆ. ಯಕ್ಷಗಾನ ತಾಳ ಮದ್ದಳೆ ಕೂಡ ಇಲ್ಲಿ ಸಕ್ರಿಯವಾಗಿದೆ. ಪ್ರತಿಯೊಂದು ಯಕ್ಷಗಾನ ಕಲಾವಿದರು ಮೊದಲ ಬಾರಿಗೆ ವೇದಿಕೆಯನ್ನು ಪ್ರವೇಶಿಸುವುದಾದರೆ ಗೆಜ್ಜೆ ಪೂಜೆಯನ್ನು ಮಾಡಿ ನಂತರ ವೇದಿಕೆಯನ್ನು ಏರುತ್ತಾರೆ. ಭಾಗವತರ ಭಾಗವತಿಕೆಯಿಂದ ಯಕ್ಷಗಾನ ನೆರವೇರುತ್ತದೆ.
ಸ್ಥಳ
[ಬದಲಾಯಿಸಿ]ಕಾಸರಗೋಡು ಜಿಲ್ಲೆಯ ಕೂಡ್ಲು ಗ್ರಾಮದಲ್ಲಿ ಈ ದೇವಾಲಯ ನೆಲೆಸಿದೆ.
ಉಲ್ಲೇಖಗಳು
[ಬದಲಾಯಿಸಿ]