ವಿಷಯಕ್ಕೆ ಹೋಗು

ಕುಕ್ಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐತಿಹ್ಯ

[ಬದಲಾಯಿಸಿ]

ಹಿಂದೆ ಕಾಡು ಬೆಟ್ಟಗಳಿಂದ ಕೂಡಿದ 'ಪೊಸರ' ಎಂಬ ಸ್ಥಳದಲ್ಲಿ ಕುಕ್ಕ ಮತ್ತು ಲಿಂಗ ಎಂಬ ಸೋದರ ಮಲೆಕುಡಿಯರು ವಾಸವಾಗಿದ್ದರು. ಇವರು ಗೆಡ್ಧೆ ಗೆಣಸು ಸಂಗ್ರಹ ,ಪ್ರಾಣಿ ಬೇಟೆಯಿಂದ ಜೀವನ ನಡೆಸುತ್ತಿದ್ದರು . ಬಿಲ್ಲು,ಪಗರಿ(ಬಾಣ)ಯಲ್ಲಿ ಪರಿಣಿತರಾದ ಇವರು ತಮ‍್ಮ ಪರಿವಾರದ ನಾಯಕರಾಗಿದ್ದರು. ಒಂದೊಮ್ಮೆ ಈ ಮಲೆಕುಡಿಯ ನಾಯಕರು ಬೇಟೆಯಾಡುವ ಸಲುವಾಗಿ ಪೂರ್ವಭಾಗದ ಮಲೆಗೆ ಹೋಗಿದ್ದರು. ಆಯಾಸ ಪರಿಹಾರಕ್ಕಾಗಿ ಕಲ್ಲಮೇಲೆ ಕುಳಿತಿರುವಾಗ ಸಂಜೆಯಾಗುತ್ತಿರುವ ಆ ಹೊತ್ತಿನಲ್ಲಿಕಾಡಿನ ಮಧ್ಯೆ ಭೀಕರ ಬೆಂಕಿಯ ಉರಿ ಆವರಿಸುತ್ತಿರುವುದು ಕಂಡಿತು. ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿರುವಾಗ ಇವರಿಗೊಂದು ಆರ್ತ ಧ್ವನಿ ಕೇಳಿಸಿತು. ಅತ್ತ ಕಡೆ ನೋಡಿದಾಗ ಒಂದು ಬಿದಿರಿನ ಹಿಂಡಿಲು ಉರಿಯುತ್ತಿರುವುದು ಗೋಚರಿಸಿತು. 'ಭಯ ಪಡಬೇಡಿ ನನ‍್ನನ್ನು ರಕ್ಷಿಸಿ ' ಎಂದು ಕೇಳಿ ಬರುತ‍್ತಿದ್ದ ಮನುಷ್ಯ ಸ್ವರದ ಕಡೆಗೆ ನೋಡಿದಾಗ ಉರಿಯುತ್ತಿರುವ ಬಿದಿರಿನ ಹಿಂಡಿನಲ್ಲಿ ಉರಿಯದೆ ಇದ್ದ ಒಂದು ಬಿದಿರಿನ ತುದಿಯಲ್ಲಿ ಸುರುಳಿಯಾಗಿ ಸುತ್ತಿ ಜೀವ ರಕ್ಷಣೆಗಾಗಿ ಒದ್ಧಾಡುವ ಸರ್ಪ ವೊಂದು ಗೋಚರಿಸಿತ್ತು. ಭಯ ಭೀತರಾದ ಕುಕ್ಕ-ಲಿಂಗರು ಅದನ್ನು ನೋಡಿದಾಗ ಸರ್ಪ ಮನುಷ್ಯ ಸ್ವರದಲ್ಲಿ ಗಂಭೀರವಾಗಿ "ನೀವು ನನ್ನನ್ನು ರಕ್ಷಿಸಿದೆ ಆದರೆ ಮುಂದೆ ನಿಮಗೆ ಒಳ್ಳೆದಾಗುವುದು" ಎಂದು ದಿವ್ಯವಾಣಿಯಲ್ಲಿ ಹೇಳಿತು. ಆಗ ಕುಲದೇವರಾದ ಲಿಂಗರೂಪಿ ಶಿವನ ಮೇಲೆ ಭಾರ ಹಾಕಿ ಕುಕ್ಕೆಲಿಂಗರು ತಮ್ಮ ಬೇಟೆಯ ಬಿಲ್ಲನ್ನು ಅದರ ಕಡೆಗೆ ನೀಡಿದರು. ಮಹಾಸರ್ಪವು ನೀಡಿದ ಬಿಲ್ಲಿಗೆ ಸುರುಳಿಯಾಗಿ ಸುತ್ತಿಕೊಂಡಿತು. ಸುತ್ತಿಕೊಂಡ ಹಾವು ನೀವು ಎಲ್ಲಿಯೂ ನೆಲಕ್ಕಿಡದೆ ಎತ್ತಿಕೊಂಡು ಪರ್ವತದ ತಪ್ಪಲಿಗೆ ಕೊಂಡೊಯ್ಯುವಂತೆ ಹೇಳಿತು . ಇಡಲೂ ಆಗದ ಎತ್ತಲೂ ಆಗದ ಮಹಾ ಗಾತ್ರದ ಸರ್ಪವನ್ನು ಕುಕ್ಕಲಿಂಗರು ತಮ್ಮ ಹೆಗಲಿನಲ್ಲಿಟ್ಟು ಕೊಂಡು ಇಳಿಜಾರಿನ ಪರ್ವತಗಳಲ್ಲಿ ಇಳಿದು ಬಂದರು. ಇಳಿಯುವಾಗ ಕಾಲು ಜಾರುವುದು ಸಹಜ ,ಹಾಗಾಗಿ ಆಧಾರಕ್ಕಾಗಿ 'ಕಾಡುಕುವೆ' ಎನ್ನುವ ಸಸ್ಯದ ದಂಡುಗಳನ್ನು ಊರಿಕೊಂಡು ಇಳಿದುಬರುತ್ತಾರೆ. ಬಿದಿರಿನ ಹಿಂಡಿಲಿನಿಂದ ಬಿಲ್ಲಿಗೆ ಸರ್ಪ ಸುತ್ತಿಕೊಂಡಾಗ ಆದ ಅಶರೀರವಾಣಿಯಂತೆ ಆಯಾಸಗೊಂಡ ಕುಕ್ಕ-ಲಿಂಗರು ಬೆಟ್ಟದ ತಪ್ಪಲಿಗೆ ಬಂದಾಗ ತಂಪಾದ ಸಮತಟ್ಟು ಸ್ಥಳ ಸಿಕ್ಕಿತ್ತು. ದೂರದ ಬೆಟ್ಟದಿಂದ ಇಳಿದು ಬಂದ ಇವರಿಗೆ ಆಯಾಸವೂ ಬಾಯರಿಕೆಯೂ ಆಗಿತ್ತು. ಈ ಸ್ಥಳದಲಿ ಕುಕ್ಕ-ಲಿಂಗರಿಗೆ ಏನೋ ವಿಶೇಷವಿದ್ದಂತೆ ಮನಸ್ಸಿನಲ್ಲಿ ಅನ್ನಿಸಿತ್ತು. ಹಿಂದೆ ಆಗಿರುವ ಅಶರೀರವಾಣಿಯಂತೆ ಕುಕ್ಕ ಹಾವನ್ನು ನೆಲದಲ್ಲಿ ಇಡಬಾರದೆನ್ನುವ ಕಾರಣಕ್ಕಾಗಿ ಎರಡು ಕೈಗಳಿಂದ ಬಿಲ್ಲನ್ನು ತಾನು ಹಿಡಿದು ನಿಂತು ತಮ್ಮ ಲಿಂಗನನ್ನು ನೀರು ತರಲು ಕಳುಹಿಸಿದ. ತಮ್ಮ ಲಿಂಗನು ಮಣ್ಣಿನ ಸಣ್ಣ ಕುಡಿಕೆ ಹಿಡಿದು ನೀರಿಗಾಗಿ ಹೊರಟಾಗ " ಇಲ್ಲಿಂದ ಮುಂದೆ ತೆಂಕಿಗೆ ಹೋಗು ಅಲ್ಲಿ ಅಮ್ರತ ಸುರಿವ ಬೈನೆ ಮರವಿದೆ, ನೀನು ಹತ್ತಿರ ಹೋದರೆ ಅದು ಬಾಗಿ ನಿನ್ನ ಗಡಿಗೆ ತುಂಬಿ ಬರುತ್ತದೆ. " ಎಂದು ಧ್ವನಿ ಕೇಳಿ ಬಂತು. ಕೇಳಿ ಬಂದ ಧ್ವನಿಯಂತೆ ತೆಂಕಿಗೆ ಹೋರಟು ಹೋದಾಗ ಅಲ್ಲಿ ಬೈನೆ ಮರ ಬಿಟ್ಟರೆ ಬೇರೇನು ಲಿಂಗನಿಗೆ ಕಾಣಲಿಲ್ಲ. ನೋಡುತ್ತಾ ನಿಂತ ಲಿಂಗನಿಗೆ ತಾನಾಗಿಯೇ ಬಾಗಿದ ಬೈನೆ ಮರ ಹಿಡಿದ ಗಡಿಗೆಗೆ ತುಂಬಿ ಬರುತ್ತದೆ ." ಎಂದು ಧ್ವನಿಯಂತೆ ತೆಂಕಿಗೆ ಹೊರಟು ಹೋದಾಗ ಅಲ್ಲಿ ಬೈನೆ ಮರ ಬಿಟ್ಟರೆ ಬೇರೇನು ಲಿಂಗನಿಗೆ ಕಾಣಲಿಲ್ಲ. ನೋಡುತ್ತಾ ನಿಂತ ಲಿಂಗನಿಗೆ ತಾನಾಗಿಯೇ ಬಾಗಿದ ಬೈನೆ ಮರ ಹಿಡಿದ ಗಡಿಗೆಗೆ ಹಾಲಿನಂತಹ ನೀರನ್ನು ಸುರಿದು ಹಿಂದಿನ ಸ್ಥಿತಿಗೆ ನಿಂತಿತು . ಇದರಿಂದ ಲಿಂಗನಿಗೆ ಇನ್ನಷ್ಟು ಭಯವಾಯಿತು. ಏನೇ ಆಗಲೀ ಇದೆಲ್ಲವನ್ನು ಅಣ್ಣ ಕುಕ್ಕೆಗೆ ತಿಳಿಸಬೇಕೆಂದು ಆತುರದಿಂದ ಹಿಂದಿರುಗಿ ಬರುತ್ತಿದ್ದಾಗ ಕಾಲು ಎಡವಿದ. ಗಡಿಗೆ ಕೈ ಜಾರಿತು, ಅದರಲ್ಲಿ ಅಮ್ರತದಂತಹ ನೀರು ಒಂದಷ್ಟುಚೆಲ್ಲಿತ್ತುಉಳಿದದ್ದು ಇಬ್ಬರಿಗೆ ಕುಡಿಯಲು ಸಾಲದೆಂದು ಹತ್ತಿರದಲ್ಲಿದ್ದ ನೀರನ್ನು ತುಂಬಿಸಿಕೊಂಡ. ಆಗ ಅದು ಶೇಂದಿಯಾಗಿ ಪರಿವರ್ತನೆಯಾಯಿತು. ಲಿಂಗ ಗಡಿಯ ನೀರನ್ನು ಮೊದಲು ಕುಡಿದ. ಅವನು ಅಮಲಿನ ಮತ್ತಲ್ಲಿ ಅಣ್ಣ ಕುಕ್ಕನಿಗೆ ಕುಡಿಸುವ ಬದಲಿಗೆ ತಲೆಗೆ ಸುರಿದು ಬಿಟ್ಟ, ಆಗ ಹುತ್ತ ಅವನನ್ನು ಪೂರ್ಣನವಾಗಿ ಮುಚ್ಚಿಬಿಟ್ಟಿತ್ತು. 'ಇನ್ನು ಮುಂದೆ ನೀನು ನಿನ್ನ ಪರಿವಾರದೊಂದಿಗೆ ನನ್ನನ್ನು ಆರಾಧಿಸಿಕೊಂಡು ಬಾ' ಎನ್ನುವ ಸ್ವರ ಕೇಳಿಬಂತು. ಆದರೆ ಪೂಜೆ , ಆರಾಧನೆ ಏನೂ ಅರಿಯದ ಲಿಂಗ ಹುತ್ತದ ಬಳಿಯೇ ಮಲಗಿದ ಅವನಿಗೆ"ನೀನು ಚಿಂತಿಸಬೇಡ ನನ್ನ ಸೇವೆಗಾಗೆ ಉತ್ತಮ ಬ್ರಾಹ್ಮಣ ಸಮುದಾಯವನ್ನು ನಿಯಮಿಸು" ಎಂಬ ಸ್ವರ ಕೇಳಿತು. ಪೂಜೆಗಾಗಿ ಬ್ರಾಹ್ಮಣನನ್ನು ಹುಡುಕುತ್ತಾ ಬಂದವನಿಗೆ ಒಂದು ಬ್ರಾಹ್ಮಣ ಕುಟುಂಬ ಸಿಕ್ಕಿತು. ರಾತ್ರಿ ಅಲ್ಲಿಯೇ ನಿದ್ದೆ ಹೋದ. ಆ ಮನೆಯ ಎಳೆಯ ಪ್ರಾಯದ ಮಗುವೊಂದನ್ನು ರಾತ್ರಿಯೇ ಹೊತ್ತುಕೊಂಡು ಕುಕ್ಕೆಗೆ ಬಂದ. ಬ್ರಾಹ್ಮಣ ವಿಧಿಗಳನ್ನು ನಡೆಸಲು ಕುಕ್ಕೆಯಲ್ಲಿ ಯಾರು ಇಲ್ಲದ ಕಾರಣ ತಾನೆ ಬ್ರಾಹ್ಮಣ ಮಾಣಿಗೆ ನೂಲನ್ನು ಹಾಕಿದ ಅಲ್ಲದೆ ತನ್ನ ಮಗಳನ್ನೆ ಮದುವೆ ಮಾಡಿದ. ಕುಕ್ಕ ಸರ್ಪಸಮೇತ ನೆಲೆಯಾದ ಸ್ಥಳವೇ ಆದಿಕುಕ್ಕೆ ಸುಬ್ರಾಯ ತಳವಾಯಿತು. ಮುಂದೆ ಕೊಕ್ಕಡದ ಯಡಪ್ಪಾಡಿತ್ತಾಯ ಕುಟುಂಬದಿಂದ ತಂದು ನೆಲೆಗೊಳಸಿದ. ಪುರೋಹಿತ ಮೂಲದಿಂದಲೇ ಪೂಜೆ ವಿಧಾನ ನಡೆದು ಬಂತು. ಅಲ್ಲದೆ ಕೊಕ್ಕಡದ ನುರಿತ್ತಾಯ ಕುಟುಂಬವೂ ಸಹಾಯಕವಾಗಿ ನೆಲೆಯಾಯಿತು.[][][][]

ಸಮುದಾಯ

[ಬದಲಾಯಿಸಿ]
  1. ಬ್ರಾಹ್ಮಣ
  2. ಮಲೆಕುಡಿಯರು

ಆಚರಣೆ

[ಬದಲಾಯಿಸಿ]
  1. ಆರಾಧನಾ ಪರಂಪರೆಯ ಮೂಲ

ಉಲ್ಲೇಖಗಳು

[ಬದಲಾಯಿಸಿ]
  1. #ಸ್ಥಳ ನಾಮಗಳು ಮತ್ತು ಐತಿಹ್ಯಗಳು ೨೦೧೬ ಸಂಪಾದಕರು:-ಪೂವಪ್ಪ ಕಣಿಯೂರು ,ಕನ್ನಡ ಸಂಘ ನೆಹರು ಮೆಮೋರಿಯಲ್ ಕಾಲೇಜು,ಸುಳ್ಯ .ಪುಟ ಸಂಖ್ಯೆ:-೭-೯
  2. ಕುಕ್ಕೆ ಶ್ರೀ ಸುಬ್ರಮಣ್ಯ ಕ್ಷೇತ್ರ ಪುರಾಣ ;ಆಡಳಿತ ಮಂಡಳಿ ಸುಬ್ರಮಣ್ಯ
  3. ತುಳುನಾಡಿನ ಸ್ಥಳನಾಮಾಧ್ಯಯನ ೨೦೧೭, ಸಂಪಾದಕರು:-ಡಾ. ರಘುಪತಿ ಕೆಮ್ತೂರು,ಪುಟ ಸಂಖ್ಯೆ;-೨೫೬
  4. ಕುಕ್ಕೆಯಲ್ಲಿ ನಾಗರ ಮಡಿಕೆ, ಲೇಖಕರು :-ಡಾ. ಪೂವಪ್ಪಕಣಿಯೂರು ೨೦೧೭, ತರಂಗಿಣಿ ಪ್ರಕಾಶನ ,ಸುಳ್ಯ
"https://kn.wikipedia.org/w/index.php?title=ಕುಕ್ಕೆ&oldid=1017933" ಇಂದ ಪಡೆಯಲ್ಪಟ್ಟಿದೆ