ಕುಂಚಿಕಲ್ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಜಲಪಾತ ‌ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಡಿಭಾಗದಲ್ಲಿ ಹೊಸನಗರ ತಾಲೂಕಿನ‌ಲ್ಲಿದೆ. 1,493 ಅಡಿ ಎತ್ತರದಿಂದ ಧುಮುಕುವ ಈ ಜಲಪಾತ ಸೃಷ್ಟಿಸಿರೋದು ವಾರಾಹಿ‌ ನದಿ. ಮಾಣಿ ಡ್ಯಾಮ್‌ನಿಂದ ಸುಮಾರು 3 ಕಿಲೋಮೀಟರ್ ಕಾಡಿನ ಮಧ್ಯ ದುರ್ಗಮ ದಾರಿಯಲ್ಲಿ ಹೋದರೆ ಈ ಜಲಪಾತದ ಸೊಬಗನ್ನ ಕಣ್ತುಂಬಿಕೊಳ್ಳಬಹುದು.

ಜಲವಿದ್ಯುತ್ ಯೋಜನೆಗಾಗಿ ವಾರಾಹಿ ನದಿಗೆ ಅಣೆಕಟ್ಟು ಕಟ್ಟಿರುವುದರಿಂದ ಮುಂಗಾರಿನ ಸಮಯದಲ್ಲಿ ಮಾತ್ರ ( ಜೂನ್ – ಸೆಪ್ಟೆಂಬರ್ ) ಈ ಜಲಪಾತ ನೀರಿನಿಂದ ಭೋರ್ಗರೆಯುತ್ತದೆ. ಇದು ಕೆಪಿಸಿಎಲ್ ವ್ಯಾಪ್ತಿಗೆ ಸೇರುವುದರಿಂದ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಇಲ್ಲಿಗೆ ಕೆಪಿಸಿಎಲ್‌ನಿಂದ ‌ಅನುಮತಿ ಪಡೆದವರಿಗೆ ಮಾತ್ರ ಪ್ರವೇಶವಿದೆ.

Reference: http://kannada.nativeplanet.com/agumbe/attractions/kunchikal-falls/