ಕೀರೆಸೊಪ್ಪಿನ ಗಿಡ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
Amaranthus viridis
Amaranthus viridis 25042014 1.jpg
Egg fossil classification
Kingdom:
Plantae
(unranked):
(unranked):
Eudicots
(unranked):
Order:
Family:
Genus:
Species:
A. viridis
Binomial nomenclature
Amaranthus viridis

ಕೀರೆಸೊಪ್ಪಿನ ಗಿಡ ಸೊಪ್ಪು ತರಕಾರಿಯಾಗಿ ಉಪಯೋಗದಲ್ಲಿರುವ ಒಂದು ಜಾತಿಯ ಗಿಡ.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಅಮರಾಂತೇಸಿ ಕುಟುಂಬಕ್ಕೆ ಸೇರಿದ ಅಮರಾಂತಸ್ ವಿರಿಡಿಸ್ ಎಂಬ ವೈಜ್ಞಾನಿಕ ಹೆಸರಿನ ಏಕವಾರ್ಷಿಕ ಪರ್ಣಸಸಿ.ಮಲೆಯಾಳ ಭಾಷೆಯಲ್ಲಿ ಇದಕ್ಕೆ ಕುಪ್ಪಚೀರ ಎಂಬ ಹೆಸರಿದೆ.ಸಂಸ್ಕೃತ ಭಾಷೆಯಲ್ಲಿ ಇದಕ್ಕೆ ತಂಡುಲಿಯ ಎಂದು ಹೆಸರು.[೧]

ಲಕ್ಷಣಗಳು[ಬದಲಾಯಿಸಿ]

ಇದು ಸುಮಾರು ಒಂದು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಎಲೆಗೆ ತೊಟ್ಟು ಇದೆ; ಆಕಾರ ಕರನೆಯಂತೆ; ನಯವಾದ ಅಂಚು ಇದೆ; ತುದಿ ಮೊನಚು. ಎಲೆ ಹಸಿರಾಗಿದ್ದು ನಾಳರಚನೆ ತಳಭಾಗದಲ್ಲಿ ಪ್ರಧಾನವಾಗಿ ಕಾಣುತ್ತಿರುತ್ತದೆ. ಹೂಗಳು ಸ್ಪೈಕ್ ಮಾದರಿಯ ಗೊಂಚಲಿನಲ್ಲಿ ಸಮಾವೇಶಗೊಂಡಿವೆ.

ಉಪಯೋಗಗಳು[ಬದಲಾಯಿಸಿ]

ಇದರ ಸೊಪ್ಪು ಅಗ್ಗವಾದ ತರಕಾರಿಯೆನಿಸಿದೆ. ಆರೋಗ್ಯದೃಷ್ಟಿಯಿಂದ ಇದು ಉತ್ಕ್ರಷ್ಟವಾದ ತರಕಾರಿ.

ಆಯುರ್ವೇದ ಔಷಧವಾಗಿ[ಬದಲಾಯಿಸಿ]

ಈ ಸೊಪ್ಪು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಕೆಯಲ್ಲಿದೆ.[೨]

ಬೇಸಾಯ[ಬದಲಾಯಿಸಿ]

ವರ್ಷದ ಎಲ್ಲ ಕಾಲದಲ್ಲೂ ಬೆಳೆಸಬಹುದಾದ ಕೀರೆಸೊಪ್ಪು ಭಾರತದಲ್ಲಿ ಬಡವಬಲ್ಲಿದರೆನ್ನದೆ ಎಲ್ಲರೂ ಬಳಸುವ ಜನಪ್ರಿಯ ತರಕಾರಿ. ಬೀಜ ಬಿತ್ತಿದ ಒಂದು ತಿಂಗಳಿಗೆ ಸೊಪ್ಪು ಬರುವುದರಿಂದ ಇದನ್ನು ತೋಟಗಳಲ್ಲಿ ಹೇಗೋ ಹಾಗೆ ಮನೆಯ ಕೈತೋಟಗಳಲ್ಲೂ ಹಿತ್ತಿಲಲ್ಲೂ ಬೆಳೆಸುವರು. ಚೆನ್ನಾಗಿ ಹದಮಾಡಿದ ಭೂಮಿಯನ್ನು ಅನುಕೂಲಕ್ಕೆ ತಕ್ಕ ಹಾಗೆ ಪಾತಿ ಮಾಡಿ ಅವುಗಳಲ್ಲಿ ಕೀರೆ ಬೀಜವನ್ನು ಬಿತ್ತಬೇಕು. 5-6 ದಿವಸಗಳಲ್ಲಿ ಅವು ಮೊಳೆಯುತ್ತವೆ. ಆಲೂಗಡ್ಡೆ, ಈರುಳ್ಳಿ ಮುಂತಾದುವುಗಳೊಡನೆ ಮಿಶ್ರ ಬೆಳೆಯಾಗಿ ಬಿತ್ತಿದ ಕೀರೆ ಸಸ್ಯಗಳನ್ನು ಬೇರುಸಮೇತ ಕೀಳುತ್ತಾರೆ. ಪಾತಿಗಳಲ್ಲಿ ಶುದ್ಧ ಬೆಳೆಯಾಗಿ ಬಿತ್ತಿದ ಕೀರೆಸಸ್ಯವನ್ನು ಭೂಮಿಯ ಮೇಲುಭಾಗದಲ್ಲಿ 1" ಬಿಟ್ಟು ಕುಯ್ಯುತ್ತಾರೆ. ಅದು ಮತ್ತೆ ಚಿಗುರಿ ಸೊಪ್ಪಾಗುತ್ತದೆ. ಚಿಗುರನ್ನು ಇದೇ ರೀತಿ ಕುಯ್ಯಬಹುದು. ಕೀರೆಯ ಬೇರುಗಳನ್ನು ಸಹ ತರಕಾರಿಯಾಗಿ ಉಪಯೋಗಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: